Home Archive by category ಕರಾವಳಿ (Page 243)

ವಾರಂಬಳ್ಳಿ ಗ್ರಾಮ ಪಂಚಾಯತಿ – ಗ್ರಾಮೀಣ ಮಕ್ಕಳಿಗಾಗಿ ಬೇಸಿಗೆ ಶಿಬಿರ

ವಾರಂಬಳ್ಳಿ ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೂಲಕ 7 ದಿನಗಳ ಕಾಲ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಗ್ರಾಮಪಂಚಾಯತಿ ಸಭಾಂಗಣದಲ್ಲಿ ಜರುಗಿತು.ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಿಕ್ಷಣದ 8 ವರ್ಷದಿಂದ 13 ವರ್ಷದ 50 ಮಕ್ಕಳಿಗೆ ಪ್ರತೀ ದಿನ ಬೆಳಿಗ್ಗೆ 10 ಗಂಟೆಯಿಂದ 1-30 ರ ತನಕ ನಾನಾ ಸಂಪನ್ಮೂಲ ವ್ಯಕ್ತಿಗಳಿಂದ ವಿಜ್ಞಾನ , ಗಣಿತ , ನಾಯಕತ್ವ

ಮೇ 27. ಉಳ್ಳಾಲ ಕಪ್-2023 – ವಾಲಿಬಾಲ್ ಪಂದ್ಯಾಟ

ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ ವತಿಯಿಂದ ಉಳ್ಳಾಲ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಅಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪುರುಷರ ಮತ್ತು ಮಹಿಳೆಯರ ಹಗಲಿರುಳು ವಾಲಿಬಾಲ್ ಪಂದ್ಯಾಟ ಜಿಲ್ಲಾ ಚಾಂಪಿಯನ್ ಶಿಪ್ ಉಳ್ಳಾಲ ಕಪ್-2023 ಮೇ 27ರಂದು ಮುಡಿಪುವಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಈ ಬಗ್ಗೆ ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್

ಫೇಸ್ಬುಕ್‍ನಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರ ನಿಂದನೆ -ಪರಸ್ಪರ ವಾಗ್ವಾದ

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಪೇಸ್ಬುಕ್‍ನಲ್ಲಿ ನಿಂದಿಸಿದ ವಿಚಾರಕ್ಕೆ ಸಂಬಂಧಿಸಿ ರೈ ಅಭಿಮಾನಿಗಳು ಹಾಗೂ ಯುವಕನ ನಡುವೆ ಪರಸ್ಪರ ವಾಗ್ವಾದ ನಡೆದಿದೆ. ಸುಳ್ಯ ತಾಲೂಕಿನ ಜಯನಗರ ನಿವಾಸಿ ಪ್ರಮೀತ್ ಎಂಬಾತ ಶಾಸಕರನ್ನು ಫೇಸ್ಬುಕ್‍ನಲ್ಲಿ ನಿಂದಿಸಿರುವ ಹಿನ್ನೆಲೆಯಲ್ಲಿ ರಾತ್ರಿ ಅವರ ಮನೆಗೆ ರೈ ಅಭಿಮಾನಿಗಳ ತಂಡ ಭೇಟಿ ನೀಡಿ ಮಾತುಕತೆ ನಡೆಸುವ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ವಾಗ್ವಾದ ನಡೆದಿದೆ. ಪುತ್ತೂರು ಪೋಲಿಸ್ ದೌರ್ಜನ್ಯ

ರಸ್ತೆ ಕಾಮಗಾರಿ ಅವ್ಯವಸ್ಥೆ – ಪುತ್ತೂರು ಶಾಸಕರಿಂದ ಅಧಿಕಾರಿಗಳಿಗೆ ತರಾಟೆ

ಪುತ್ತೂರು: ಉಪ್ಪಿನಂಗಡಿ-ಪುತ್ತೂರು ರಸ್ತೆ ಕಾಮಗಾರಿ ವಿಳಂಬವಾದ ಕಾರಣಕ್ಕೆ ಪುತ್ತೂರು ಶಾಸಕ ಅಶೋಕ ಕುಮಾರ್ ರೈ ಅಧಿಕಾರಿ ಮತ್ತು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ಸಮಸ್ಯೆ ಆಲಿಸಿದ ಶಾಸಕ ಅಶೋಕ್ ಕುಮಾರ್ ರೈ, ಡ್ರೈನೇಜ್ ಮತ್ತು ಡಿವೈಡರ್ ಕಾಮಗಾರಿ ಅವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಮಳೆಗಾಲ ಆರಂಭವಾದರೂ ಡ್ರೈನೇಜ್ ಸಮಸ್ಯೆ ಪರಿಹಾರ ಆಗದಿರುವುದು ಮತ್ತು ಮೂರು ವರ್ಷದಿಂದ ಕಾಮಗಾರಿ

ಮೇ 28ರಂದು ಯಕ್ಷಧ್ರುವ ಪಟ್ಲ ಸಂಭ್ರಮ-2023

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಆಶ್ರಯದಲ್ಲಿ ಮೇ 27ರಂದು ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳ ಯಕ್ಷಗಾನ ಸ್ಪರ್ಧೆ ಮೇ 28ರಂದು ಯಕ್ಷಧ್ರುವ ಪಟ್ಲ ಸಂಭ್ರಮವು ಅಡ್ಯಾರ್ ಗಾರ್ಡ್‍ನಲ್ಲಿ ನಡೆಯಲಿದೆ ಎಂದು ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಹೇಳಿದರು. ಅವರು ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಪಟ್ಲ ಫೌಂಡೇಶನ್ ವತಿಯಿಂದ ವಿನೂತನ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಅಕ್ಕಿ ಮುಹೂರ್ತ : 2024 ರ ಪರ್ಯಾಯಕ್ಕೆ ಸಜ್ಜು

ದಿನ ಕಳೆದಂತೆ ಹತ್ತಿರವಾಗುತ್ತಿದೆ ಉಡುಪಿಯ ಭವ್ಯ ಆಚರಣೆ. ಇಡೀ ಜಗತ್ತಿನಲ್ಲೇ ವಿಶಿಷ್ಟವಾದ ಸಂಪ್ರದಾಯಗಳಲ್ಲಿ ಒಂದು, ಶತಮಾನಗಳಿಂದ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಚಾಚೂ ತಪ್ಪದೇ ಆಚರಿಸಿಕೊಂಡು ಬರುತ್ತಿರುವ “ಪರ್ಯಾಯ”ಮಹೋತ್ಸವ. ಉಡುಪಿಯ 8 ಮಠಗಳ ನಡುವೆ ಶ್ರೀ ಕೃಷ್ಣ ದೇವಾಲಯದ ಜವಾಬ್ದಾರಿಗಳ ಹಸ್ತಾಂತರವನ್ನೇ ಪರ್ಯಾಯ ಮಹೋತ್ಸವ ಎನ್ನುತ್ತಾರೆ. ಪ್ರಸ್ತುತ ಕೃಷ್ಣಪುರ ಮಠದ ವಿದ್ಯಾಸಾಗರ ತೀರ್ಥರು ಶ್ರೀ ಕೃಷ್ಣನ ಆರಾಧನೆಯಲ್ಲಿ ತೊಡಗಿದ್ದರೆ, ಮುಂದಿನ ಸರದಿಯಲ್ಲಿ

ಕರಾವಳಿಯಾದ್ಯಂತ ಪಿರ್ಕಿಲು ಸಿನಿಮಾ ಮೇ 26ರಂದು ಬಿಡುಗಡೆ

ಕರಾವಳಿ ಸಿನಿಮಾಸ್ ಲಾಂಛನದಲ್ಲಿ ಎಚ್.ಡಿ .ಆರ್ಯ ನಿರ್ದೇಶನದಲ್ಲಿ ತಯಾರಾದ `ಪಿರ್ಕಿಲು’ ತುಳು ಸಿನಿಮಾ ಮೇ 26 ರಂದು ಕರಾವಳಿಯಾದ್ಯಂತ ಬಿಡುಗಡೆಯಾಗಲಿದೆ. ಸಿನಿಮಾದ ಪ್ರೀಮಿಯರ್ ಶೋ ನಗರದ ಭಾರತ್ ಸಿನಿಮಾಸ್‍ನಲ್ಲಿ ನಡೆಯಿತು. ಸತೀಶ್ ಪೆರ್ನೆ ಹಾಗೂ ಶಿವಪ್ರಸಾದ್ ಇಜ್ಜಾವು ನಿರ್ಮಾಣದಲ್ಲಿ ತಯಾರಾದ ಈ ಸಿನಿಮಾ ಹಾಸ್ಯಭರಿತ ಕೌಟುಂಬಿಕ ಕತೆಯ ಎಳೆಯನ್ನು ಹೊಂದಿದೆ. ಊರಿನ ಜನರಿಂದ ಪಿರ್ಕಿಲು ಕರೆಸಿಕೊಳ್ಳುವ ಹುಡುಗರು ಏನೆಲ್ಲ ಅವಾಂತರ ಸೃಷ್ಟಿಸುತ್ತಾರೆ

ಭಕ್ತಿಗೀತೆಯ ಮೂಲಕ ಉಚ್ಚಿಲ ದೇವಿಯ ದರುಶನ ಪಡೆದ ಶ್ರೀ ವಿದ್ಯಾಭೂಷಣ್

ಕರಾವಳಿ ತಡಿಯ ಪ್ರಸಿದ್ಧ ಲಕ್ಷ್ಮೀ ದೇವಿಯ ದೇವಸ್ಥಾನ ಹಾಗೂ ಮೊಗವೀರ ಸಮಾಜದ ಕುಲದೇವತೆಯಾದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ವಿದ್ವಾನ್ ಶ್ರೀ ವಿದ್ಯಾಭೂಷಣರು ಭೇಟಿ ನೀಡಿದರು. ಇದೇ ವೇಳೆ ಅವರು ಭಾಗ್ಯದ ಲಕ್ಷ್ಮೀ ಬಾರಮ್ಮ ಹಾಡನ್ನು ಹಾಡಿ ಶ್ರೀ ದೇವಿಯ ದರ್ಶನವನ್ನು ಪಡೆದರು.

ಮಂಗಳೂರು ; ಟೇಕಾಫ್ ಗೆ ಸಿದ್ದವಾಗಿದ್ದ ವಿಮಾನಕ್ಕೆ ಹಕ್ಕಿ ಢಿಕ್ಕಿ

ಮಂಗಳೂರು : ಟೇಕಾಫ್ ಗೆ ಸಿದ್ದವಾಗಿದ್ದ ವಿಮಾನಕ್ಕೆ ಹಕ್ಕಿಯೊಂದು ಢಿಕ್ಕಿ ಹೊಡೆದಿರುವ ಘಟನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.ಇಂಡಿಗೋ ವಿಮಾನವು ಮಂಗಳೂರಿನಿಂದ ದುಬೈಗೆ ಹೊರಟಿತ್ತು. ಟ್ಯಾಕ್ಸಿ ವೇ ದಾಟಿ ರನ್ ವೇನಲ್ಲಿ ಸಾಗುತ್ತಿದ್ದ ವೇಳೆ ರನ್ ವೇನಲ್ಲಿ ವಿಮಾನದ ರೆಕ್ಕೆಗೆ ಹಕ್ಕಿ ಢಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.  ತಕ್ಷಣ ಅಪಾಯದ ಸೂಚನೆ ಅರಿತು ಎಟಿಸಿಗೆ ಮಾಹಿತಿ ನೀಡಿದ ಪೈಲಟ್, ಟೇಕಾಫ್ ಕ್ಯಾನ್ಸಲ್ ಮಾಡಿ ರನ್ ವೇನಿಂದಲೇ

ಬೋಂದೆಲ್‍ ; ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜು – ಪ್ರವೇಶಾತಿ ಆರಂಭ

ಮಂಗಳೂರಿನ ಬೋಂದೆಲ್‍ನಲ್ಲಿರುವ ಕರ್ನಾಟಕ ಸರ್ಕಾರ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಮಹಿಳಾ ಪಾಲಿಟೆಕ್ನಿಕ್‍ನಲ್ಲಿ 2023-24ನೇ ಪ್ರವೇಶಾತಿ ಆರಂಭಗೊಂಡಿದೆ.ಕಾಲೇಜಿನಲ್ಲಿ ಇಂಜಿನಿಯರಿಂಗ್ ಕೋರ್ಸ್‍ಗಳು, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ನಾನ್ ಇಂಜಿನಿಯರಿಂಗ್, ಕಮರ್ಶಿಯಲ್ ಪ್ರಾಕ್ಟೀಸ್, ಆಂಗ್ಲ ಮತ್ತು ಕನ್ನಡ ಭಾಷೆಗಳಲ್ಲಿ ಬೋಧನೆಯನ್ನು ಮಾಡುತ್ತಿದ್ದಾರೆ.