ಸಂಶೋಧನೆ ಎಂಬ ಜಟಿಲ ಮತ್ತು ಸಂಕೀರ್ಣವಾದ ಪರಿಕಲ್ಪನೆಯನ್ನು ಸರಳವಾಗಿ ವಿವರಿಸುವ ಪ್ರಯತ್ನ ಮಾಡುವ ಮತ್ತು ಸಂಶೋಧನೆ ಅಂದರೆ ಏನು, ಸಂಶೋಧನೆಯನ್ನು ಉನ್ನತ ಶಿಕ್ಷಣವೆಂದು ಯಾಕೆ ಕರೆಯುತ್ತಾರೆ ಎಂಬುದನ್ನು ತಾತ್ವಿಕವಾಗಿ ವಿವೇಚನೆಗೆ ಒಳಪಡಿಸುವ ‘ಮಾರ್ಗಾನ್ವೇಷಣೆ’ ಪುಸ್ತಕವು ಒಂದು ಸಾಹಸೀ ಪ್ರಯೋಗವಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ನೆಹರು ಚಿಂತನ ಕೇಂದ್ರದ
ಮಂಗಳೂರಿನ ಬೊಕ್ಕಪಟ್ಣದ ಯುವ ಜನ ಅಕ್ಷಯ ವತಿಯಿಂದ 53ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆ ಮಾಡಲಾಗುತ್ತಿದೆ. ಬೊಕ್ಕಪಟ್ಣ ಶ್ರೀ ವೀರವಿನಾಯಕ ಜನಸೇವಾ ಟ್ರಸ್ಟಿನ ಸಭಾಭವನದಲ್ಲಿ ಗಣಪನ ವಿಗ್ರಹವನ್ನ ಪ್ರತಿಷ್ಠಿಸಲಾಗಿದೆ. ಮೂರು ದಿನಗಳ ಕಾಲ ಪರ್ಯಂತ ಗಪಣನಿಗೆ ವಿಶೇಷ ಪೂಜೆ ನಡೆಯಲಿದೆ.ಆದಿತ್ಯವಾರದಂದು ವಿವಿಧ ಪೂಜೆ ಹಾಗೂ ಮಹಪೂಜೆಯೊಂದಿಗೆ ಮೆರವಣಿಗೆ ಮೂಲಕ ಶ್ರೀ ಬಹ್ಮ ಬೊಬ್ಬರ್ಯ ದೇವಸ್ಥಾನದ ಹಿಂದುಗಡೆಯಿರುವ ನದಿ ಕಿನಾರೆಯಲ್ಲಿ ಜಲಸ್ತಂಭನಗೊಳ್ಳಲಿದೆ. ಈ ವೇಳೆ
ಮಂಗಳೂರಿನ ಬೊಕ್ಕಪಟ್ಣ ದೋಸ್ತ್ ಕ್ರಿಕೆಟ್ ಟೀಮ್ ವತಿಯಿಂದ 45ನೇ ಸಾರ್ವಜನಿಕ ಗಣೇಶೋತ್ಸವವನ್ನ ಸರ್ಕಾರದ ಕೋವಿಡ್ – 19 ನಿಯಯಾವಳಿಯನ್ನ ಪಾಲಿಸಿಕೊಂಡು ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಬೊಕ್ಕಪಟ್ಣದ ಯನ್.ಯಂ. ಸುವರ್ಣರ ವ್ಯಾಯಾಮ ಶಾಲಾ ಮುಂಭಾಗದಲ್ಲಿ ಗಣಪತಿ ವಿಗ್ರಹವನ್ನ ಪ್ರತಿಷ್ಠಾಪನೆ ಮಾಡಲಾಗಿದ್ದು, ಇಂದು ಮುಂಜಾನೆ ನಂದಾದೀಪ ಬೆಳಗಿಸುವೊಂದರೊಂದಿಗೆ ದೇವರ ಪ್ರತಿಷ್ಟಾಪನೆ ಮಾಡಲಾಯ್ತು. ಇಂದು ಸಂಜೆ ರಂಗಪೂಜೆ, ಮಹಾಪೂಜೆಯೊಂದಿಗೆ ಗಣಪನ ವಿಗ್ರಹವನ್ನು
ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ,ಸಾಹಿತಿ,ಸಮಾಜ ಸೇವಕಿ ಡಾ.ಮಾಲತಿ ಶೆಟ್ಟಿ ಮಾಣೂರುರವರು ಬೆಂಗಳೂರಿನ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ನೀಡುವ ” ರಾಷ್ಟ್ರೀಯ ಕಣ್ಮಣಿ” ರಾಷ್ಟ್ರ ಪ್ರಶಸ್ತಿಗೆ ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರಧಾನ ಸಮಾರಂಭವು ಸೆಪ್ಟೆಂಬರ್ 25 ರಂದು ಬೆಂಗಳೂರಿನಲ್ಲಿ ಸಂಸ್ಥೆಯ 29 ನೇ ವಾರ್ಷಿಕೋತ್ಸವದ ಸಮಾರಂಭದ ವೇಳೆ ಗಣ್ಯರ ಸಮ್ಮುಖದಲ್ಲಿ
ಪುತ್ತೂರು: 19 ವರ್ಷಗಳ ಹಿಂದೆ ಖೋಟಾ ನೋಟು ಸಾಗಾಟದ ವೇಳೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಸೆಂಟ್ಯಾರ್‌ನಲ್ಲಿ ಸಂಪ್ಯ ಪೊಲೀಸರಿಂದ ಬಂಧಿತರಾಗಿದ್ದ ನಾಲ್ವರು ಆರೋಪಿಗಳ ಪೈಕಿ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕೇರಳ ಮೂಲದ ಆರೋಪಿಯನ್ನು ಕುಂಬ್ಳೆಯಲ್ಲಿ ಸಂಪ್ಯ ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಮುಳಿಯಾರ್ ಬೋವಿಕ್ಕಾನ ಪರಪಿಡಕ ನಿವಾಸಿ ಸಿದ್ದಿಕ್ ಯಾನೆ ಕಲಂದರ್ ಸಿದ್ದಿಕ್(41 ವ)ರವರು ಬಂಧಿತ ಆರೋಪಿ. 2002ರಲ್ಲಿ ಕಲಂದರ್
ದ.ಕ ಜಿಲ್ಲೆಯಲ್ಲಿ ಕೊರೊನಾ ಸೋಂಕು ಇಳಿಮುಖ ಕಾಣುತ್ತಿದ್ದು, ಈಗಾಗಲೇ ಜಾರಿಯಲ್ಲಿದ್ದ ವೀಕೆಂಡ್ ಕರ್ಫ್ಯೂ ರದ್ದುಗೊಳಿಸಿರುವುದಾಗಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ಘೋಷಣೆ ಮಾಡಿದ್ದಾರೆ.ಜಿಲ್ಲೆಯಲ್ಲಿ ಪ್ರತಿದಿನ ವಿಧಿಸಿದ್ದ ನೈಟ್ ಕರ್ಫ್ಯೂ ಮುಂದುವರೆಯಲಿದೆ. ಧಾರ್ಮಿಕ ಸ್ಥಳಗಳಲ್ಲಿ ದೇವರ ದರ್ಶನಕ್ಕೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ರದ್ದುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೊಡಗು,
ಮಂಜೇಶ್ವರ: ಕೇಂದ್ರ ಸರ್ಕಾರದ ಜನವಿರೋಧಿ ನೀತಿಗೆದುರಾಗಿ ರಾಜ್ಯ ವ್ಯಾಪಕವಾಗಿ ಕೇಂದ್ರ ಸರಕಾರದ ಕಚೇರಿಗಳ ಮುಂಭಾಗದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಭಾಗವಾಗಿ ಮಂಜೇಶ್ವರದ ಹಲವೆಡೆಗಳಲ್ಲೂ ಪ್ರತಿಭಟನಾ ಧರಣಿ ನಡೆಯಿತು. ಸಿಪಿಐಎಂ ಕುಂಜತೂರು ಲೋಕಲ್ ಸಮಿತಿ ವತಿಯಿಂದ ಕುಂಜತ್ತೂರು ಅಂಚೆ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಧರಣಿಯನ್ನು ಸಿಪಿಐಎಂ ಮಂಜೇಶ್ವರ ಏರಿಯಾ ಸೆಕ್ರಟರಿ ಕೆ ವಿ ಕುಂಞಿರಾಮನ್ ಉದ್ಘಾಟಿಸಿ ಮಾತಾಡಿದರು. ಶ್ರೀಧರ ಅಧ್ಯಕ್ಷತೆ ವಹಿಸಿದ್ದರು.
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಾದ್ರಪದ ಶುಕ್ಲ ಹಸ್ತಾ ನಕ್ಷತ್ರದ ಶುಭದಿನವಾದ ಇಂದು ಸಂಪ್ರದಾಯದಂತೆ ಕದಿರು ವಿನಿಯೋಗ ಉತ್ಸವ ನಡೆಯಿತು. ಸಾಂಪ್ರದಾಯಿಕ ಪದ್ಧತಿಯಂತೆ ಬೆಳಗ್ಗೆ ದೇವಳದ ಒಳಾಂಗಣದಲ್ಲಿ ನಿತ್ಯ ಬಲಿ ಉತ್ಸವದೊಂದಿಗೆ ಸರ್ವ ವಾದ್ಯದೊಂದಿಗೆ ಕೆರೆಯ ಬಳಿಯ ಅಶ್ವತ್ಥಕಟ್ಟೆಯ ಬಳಿಗೆ ಆಗಮಿಸಿ ಕಟ್ಟೆಯಲ್ಲಿ ತೆನೆ ಪೂಜೆ ನಡೆಯಿತು. ಬಳಿಕ ತೆನೆ ಕಟ್ಟುಗಳೊಂದಿಗೆ ದೇವಳದ ಒಳಾಂಗಣ ಪ್ರವೇಶಿಸಿ ಪೂಜೆ ನಡೆಯಿತು.
ಕುಂದಾಪುರ: ಮಗಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಶಿಕ್ಷಣ ಸಾಲ ಕೇಳಲು ಹೋದಾಗ ಮ್ಯಾನೇಜರ್ ಸಮರ್ಪಕ ಮಾಹಿತಿ ನೀಡದೇ ಉಡಾಫೆಯಾಗಿ ನಡೆದುಕೊಂಡಿದ್ದಾರೆಂದು ಆರೋಪಿಸಿ ಹಟ್ಟಿಯಂಗಡಿ ಕರ್ನಾಟಕ ಬ್ಯಾಂಕಿಗೆ ಆಗಮಿಸಿದ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು. ಹಟ್ಟಿಯಂಗಡಿ ನಿವಾಸಿ ನಾಗರಾಜ ಪೂಜಾರಿ ಎನ್ನುವವರು ತಮ್ಮ ಮಗಳ ಉನ್ನತ ವಿದ್ಯಾಭ್ಯಾಸದ ಸಲುವಾಗಿ ಎಜುಕೇಶನ್ ಲೋನ್ ಕೇಳಲು ಮಂಗಳವಾರ ಕರ್ನಾಟಕ ಬ್ಯಾಂಕ್ ಹಟ್ಟಿಯಂಗಡಿ ಶಾಖೆಗೆ ತೆರಳಿದ್ದರು. ಈ ವೇಳೆ ಬ್ಯಾಂಕ್ ಮ್ಯಾನೇಜರ್
ದಕ್ಷಿಣ ಕನ್ನಡ ಜಿಲ್ಲಾ ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷರಾಗಿ ಜಯಶೀಲ ಅಡ್ಯಂತಾಯ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜಯಶೀಲ ಅಡ್ಯಂತಾಯ ಅವರು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿದ್ದು, ವಿವಿಧ ಸಾಮಾಜಿಕ , ಧಾರ್ಮಿಕ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. ಜಯಶೀಲ ಅಡ್ಯಂತಾಯ ಅವರು ದ.ಕ.ಜಿಲ್ಲಾ ಕಾಂಗ್ರೆಸ್‌ನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಅಡ್ಯಾರ್ ಗ್ರಾ.ಪಂನ ಸದಸ್ಯರಾಗಿ ಹಗೂ ಎಪಿಎಂಸಿ ನಿರ್ದೆಶಕರಾಗಿಯೂ ಸೇವೆಸಲ್ಲಿಸಿತ್ತಾರೆ.


















