Home Archive by category ಗಲ್ಫ್ (Page 2)

ಇಸ್ರೇಲ್: ಇಸ್ರೇಲ್-ಹಮಾಸ್ ಕದನ: ಇಸ್ರೇಲ್‍ನ 44 ಸೈನಿಕರು, 700ಕ್ಕೂ ಹೆಚ್ಚು ಜನರು ಸಾವು

ಇಸ್ರೇಲ್ ಹಾಗೂ ಉಗ್ರಗಾಮಿ ಗುಂಪು ಹಮಾಸ್ ನಡುವಿನ ಸಂಘರ್ಷ ಮುಂದುವರೆದಿದ್ದು, ಎರಡು ಕಡೆಗಳ ಸಂಘರ್ಷದಲ್ಲಿ ಮೃತರ ಸಂಖ್ಯೆ 1,100 ಕ್ಕೂ ಮೇಲ್ಪಟ್ಟಿದೆ ಎಂದು ತಿಳಿದು ಬಂದಿದೆ. ಗಾಜಾ ಪಟ್ಟಿಯ ಬಳಿ ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ಬಳಿಕ ಇಸ್ರೇಲ್ ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಹಮಾಸ್ ವಿರುದ್ಧ ಯುದ್ಧ ಘೋಷಿಸಿತು. ಮೂರು ದಿನಗಳ ಸಂಘರ್ಷವು ಈಗಾಗಲೇ

ಯುಎಇ: ಸಪ್ಟೆಂಬರ್ 24 ರಂದು ಪುಳಿಮುಂಚಿ ತುಳು ಚಿತ್ರದ ಪ್ರೀಮಿಯರ್ ಪ್ರದರ್ಶನದ ಟಿಕೆಟ್ ಬಿಡುಗಡೆ

ಬಹು ನಿರೀಕ್ಷೆಯ ಪುಳಿಮುಂಚಿ ತುಳು ಚಿತ್ರದ ಪ್ರೀಮಿಯರ್ ಪ್ರದರ್ಶನದ ಟಿಕೆಟ್ ಬಿಡುಗಡೆ ಕಾರ್ಯಕ್ರಮವು ಯುಎಇಯ ಅಜ್ಮಾನ್ ನ ಇಂಡಿಯನ್ ಅಸೋಸಿಯೇಷನ್ ಸಭಾಂಗಣದಲ್ಲಿ ಸಪ್ಟೆಂಬರ್ 24 ರಂದು ಜರಗಲಿದೆ. ಮಾರ್ಗದೀಪ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಯುಎಇಯ ವತಿಯಿಂದ ನಡೆಯುವ ಒಂಬತ್ತನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ವೇದಿಕೆಯಲ್ಲಿ ಮಧ್ಯಾಹ್ನ 12.30 ಕ್ಕೆ ಟಿಕೆಟ್ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಫೆಮಿನಾ ಮಿಸ್ ಇಂಡಿಯಾ ಗೋವಾ 2019 ಶಾಸ್ತ್ರ ಶೆಟ್ಟಿ ಇವರು

ದುಬಾಯಿ: ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಕಣ್ತುಂಬಿಕೊಂಡ ಭಕ್ತ ಸಮೂಹ

ದುಬಾಯಿಯಲ್ಲಿ ಗೀಸೈಸ್‌ನ ಮದಿನ ಹೈಪರ್ ಮಾರುಕಟ್ಟೆ ಸಮೀಪದಲ್ಲಿರುವ ಆಕ್ಸ್‌ಫರ್ಡ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಠಮಿಯನ್ನು ಸಂಭ್ರಮದಿಂದ ಆಚರಿಸಿದರು. ಬೆಳಿಗ್ಗೆ ಗಂಟೆ 9.೦೦ ಕ್ಕೆ ಪೂಜಾ ಸಂಕಲ್ಪದಿಂದ ಆರಂಭವಾಗಿ ಸಂಜೆ 5.೦೦ ಗಂಟೆಗೆ ತನಕ, ಭಜನೆ, ವಿಷ್ಣು ಸಹಸ್ರನಾಮ, ಶ್ರೀಕೃಷ್ಣ ವೇಷ ಸ್ಪರ್ಧೆ, ಜಾನಪದ ಆಟೋಟಗಳು, ಮುಂತಾದ ಅನೇಕ ವೈಶಿಷ್ಯಗಳ ಜೊತೆ ಮಹಾಮಂಗಳಾರತಿ, ವೈಭವದ ವಿಠಲ ಪಿಂಡಿ, ಮೊಸುರುಕುಡಿಕೆ, ಮೆರವಣಿಗೆ ಹೀಗೆ

ಅಬುಧಾಬಿ: ಸೆಪ್ಟಂಬರ್ 1ರಂದು ರಕ್ತದಾನ ಶಿಬಿರ-ಪೋಸ್ಟರ್ ಬಿಡುಗಡೆ

ಎಸ್‌ಕೆಎಸ್‌ಎಸ್‌ಎಫ್ ಅಬುಧಾಬಿ ಕರ್ನಾಟಕ ವತಿಯಿಂದ ಬೃಹತ್ ಕರ್ನಾಟಕ ಮೀಲಾದ್ ಕಾನ್ಪ್‌ರೆನ್ಸ್ ಇದರ ಪ್ರಚಾರದ ಭಾಗವಾಗಿ, ಸೆಪ್ಟಂಬರ್ 1 ರಂದು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ನ ಅಬುಧಾಬಿ ಖಾಲಿದಿಯ್ಯ ಬ್ಲಡ್ ಬ್ಯಾಂಕ್‌ನಲ್ಲಿ ನಡೆಯಲಿರುವ ರಕ್ತದಾನ ಶಿಬಿರ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಸಮಾರಂಭ ನಡೆಯಿತು.   ಕಾರ್ಯಕ್ರಮವು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯ ವ್ಯವಸ್ಥಾಪಕರೂ, ಎಸ್‌ಕೆಎಸ್‌ಎಸ್‌ಎಫ್

ಗಲ್ಫ್ ರಾಷ್ಟ್ರಗಳಲ್ಲಿ ಸದ್ದು ಮಾಡಲಿರುವ ರಾಪಟ ತುಳು ಸಿನಿಮಾ

ತುಳುವಿನ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ರಾಪಟ. ಅರ್ಜುನ್ ಕಾಪಿಕಾಡ್ ನಿರ್ದೇಶನದ ಚೊಚ್ಚಲ ಸಿನಿಮಾವಾಗಿದ್ದು, ಬಹರೈನ್‍ನಲ್ಲಿ ಸೆಫ್ಟರಂಬರ್ 15ರಂದು ಪ್ರೀಮಿಯರ್ ಶೋ ನಡೆಯಲಿದೆ. ಆ ಪ್ರಯುಕ್ತ ಟಿಕೆಟ್ ಬಿಡುಗಡೆ ಸಮಾರಂಭವು ಅದ್ಧೂರಿಯಾಗಿ ನಡೆಯಿತು.ಬೊಳ್ಳಿ ಮೂವೀಸ್ ಹಾಗೂ ಅವಿಕ ಪ್ರೋಡಕ್ಷನ್ ನಿರ್ಮಾಣದ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದಿರುವ ಸಿನಿಮಾ ರಾಪಟ. ಈಗಾಗಲೇ ಗಲ್ಫ್ ರಾಷ್ಟ್ರಗಳಲ್ಲಿ

ಬಿಲ್ಲವಾಸ್ ಕತಾರ್ ವತಿಯಿಂದ ಬಿಲ್ಲವೋತ್ಸವ -2023

ಬಿಲ್ಲವಾಸ್ ಕತಾರ್ ವತಿಯಿಂದ ಬಿಲ್ಲವೋತ್ಸವ -2023 ಸಮಾರಂಭವು ಅಧ್ಯಕ್ಷ ರಘುನಾಥ್ ಅಂಚನ್ ಸಾರಥ್ಯದಲ್ಲಿ ಡಿ.ಪಿ. ಎಸ್. ಅಲ್-ವಕ್ರ ಸಭಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಸರ್ವಾಲಂಕೃತ ಭೂಷಿತರಾದ ಮಂಗಳಾಂಗಿಯರಿಂದ ಆರತಿಯನ್ನೆತ್ತಿ ಸ್ವಾಗತ, ಸಮವಸ್ತ್ರಧಾರಿಗಳಾದ ಸದಸ್ಯರು, ಮಂಗಳ ವಾದ್ಯಗಳ ದನಿ, ಚೆಂಡೆ ತಾಳಗಳ ಅಬ್ಬರ, ಕೋಟಿ-ಚೆನ್ನಯ” ಪ್ರವೇಶದ್ವಾರ, ಅಣಿ, ಸಿರಿ, ತುಳಸಿಕಟ್ಟೆ ಮೊದಲಾದವುಗಳು ತುಳುನಾಡಿನ ಸಂಸ್ಕ್ರತಿಯನ್ನು ಪ್ರತಿಬಿಂಬಿಸುತ್ತಾ

ಸರ್ಕಸ್ ತುಳುಸಿನಿಮಾ – ಮಸ್ಕತ್‍ನ ಸಿನಿಪ್ರೇಕ್ಷಕರಿಂದ ಸಿನಿಮಾ ಬಗ್ಗೆ ಮೆಚ್ಚುಗೆ

ತುಳುವಿನ ಬಹುನಿರೀಕ್ಷೆಯ ಸಿನಿಮಾ ಸರ್ಕಸ್, ರೂಪೇಶ್ ಶೆಟ್ಟಿ ನಿರ್ದೇಶನದ ಸಿನಿಮಾವಾಗಿದ್ದು, ವಿದೇಶಗಳಲ್ಲಿ ಸಿನಿಮಾದ ಪ್ರೀಮಿಯರ್ ಶೋ ಆಯೋಜಿಸಿದ್ದು, ಸಿನಿ ಪ್ರೇಕ್ಷಕರು ಫುಲ್ ಮಾಕ್ರ್ಸ್ ನೀಡಿದ್ದಾರೆ. ತುಳು ಸಿನಿಮಾರಂಗದ ರಾಕ್ ಸ್ಟಾರ್ ಬಿಗ್‍ಬಾಸ್ 9ರ ವಿಜೇತ ರೂಪೇಶ್ ಶೆಟ್ಟಿ ನಿರ್ದೇಶನದ ಹೊಚ್ಚ ಹೊಸ ಮತ್ತು ಹಾಸ್ಯಮಯ ಸಿನಿಮಾ ಸರ್ಕಸ್. ಈಗಾಗಲೇ ಕರಾವಳಿಯಲ್ಲಿ ಸಿನಿಮಾ ಬಿಡುಗಡೆಗೆ ಎಲ್ಲಾ ತಯಾರಿಯನ್ನು ಚಿತ್ರತಂಡ ಮಾಡಿಕೊಂಡಿದೆ. ದುಬೈ, ಅಬುಧಾಬಿ,

ಬಹರೈನ್‍ : ಮೇ 19ರಂದು “ಗಿರಿಜಾ ಕಲ್ಯಾಣ” ಯಕ್ಷಗಾನ ಪ್ರದರ್ಶನ

ಬಹರೈನ್ ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸಂಘದ ಯಕ್ಷೋಪಾಸನ ಕೇಂದ್ರದ ಹಿರಿಯ ವಿದ್ಯಾರ್ಥಿಗಳಿಂದ “ಗಿರಿಜಾ ಕಲ್ಯಾಣ ” ಎನ್ನುವ ಯಕ್ಷಗಾನ ಪ್ರದರ್ಶನವನ್ನು ನಾಟ್ಯಗುರು ದೀಪಕ್ ರಾವ್ ಪೇಜಾವರ ಇವರ ನಿರ್ದೇಶನದಲ್ಲಿ ಕನ್ನಡ ಭವನದ ಶ್ರೀಮತಿ ಆಶಾ ಶೆಟ್ಟಿ ಸಭಾಂಗಣದಲ್ಲಿ ಇದೇ ಮೇ ತಿಂಗಳ 19ನೇ ತಾರೀಖಿನ ಶುಕ್ರವಾರದಂದು ಸಂಜೆ 5:30 ಗೆ ಸರಿಯಾಗಿ ಆಯೋಜಿಸಲಾಗಿದೆ ಬಹರೈನ್ ಕನ್ನಡ ಸಂಘಕ್ಕೂ ಯಕ್ಷಗಾನಕ್ಕೂ ಸುಮಾರು ನಾಲ್ಕು ದಶಕಗಳ ಅವಿನಾಭಾವ ಸಂಭಂದವಿದ್ದು

“ಗೋಸ್ಮರಿ ಫ್ಯಾಮಿಲಿ ” ತುಳು ಚಲನಚಿತ್ರ : ಮೇ 12. ಬಹರೈನ್‍ನಲ್ಲಿ ಪ್ರೀಮಿಯರ್ ಶೋ

ಬಹರೈನ್; ಬಿಡುಗಡೆಗೆ ಮುನ್ನವೇ ತುಳುಚಲನ ಚಿತ್ರ ರಂಗದಲ್ಲಿ ಬಹಳಷ್ಟು ನಿರೀಕ್ಷೆಯನ್ನು ಹುಟ್ಟಿಸಿರುವ “ಗೋಸ್ಮರಿ ಫ್ಯಾಮಿಲಿ ” ತುಳು ಚಲನಚಿತ್ರ ಮೇ ತಿಂಗಳ ಶುಕ್ರವಾರದಂದು ಅಪರಾಹ್ನ ಒಂದೂವರೆ ಘಂಟೆಗೆ ಜುಫೈರ್ ನಲ್ಲಿರುವ ಮುಕ್ತಾ ಸಿನೆಮಾ ಮಂದಿರದಲ್ಲಿ ಗ್ರ್ಯಾಂಡ್ ಪ್ರೀಮಿಯರ್ ಪ್ರದರ್ಶನ ಕಾಣಲಿದೆ.ತುಳು ಚಲನಚಿತ್ರ ರಂಗದ ಜನಪ್ರಿಯ ನಟರುಗಳು ಒಂದಾಗಿ ನಟಿಸಿರುವ ಈ ಚಲನಚಿತ್ರವನ್ನು ಖ್ಯಾತ ನಿರ್ದೇಶಕ ಸಾಯಿ ಕೃಷ್ಣ ಕುಡ್ಲಾ ರವರು ಬರೆದು

ಎಲಾನ್ ಮಸ್ಕ್ ಈಗ ಪ್ರಧಾನಿ ಮೋದಿ ಯ ಫಾಲೋವರ್

ಟ್ವಿಟರ್‌ ಹಾಗೂ ಟೆಸ್ಲಾ ಸಂಸ್ಥೆಯ ಮುಖ್ಯಸ್ಥ ಎಲಾನ್‌ ಮಸ್ಕ್ ತಮ್ಮ ಟ್ವಿಟರ್‌ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಫಾಲೋ ಮಾಡುತ್ತಿದ್ದು, ಈ ವಿಚಾರ “ಈಗ ಭಾರತಕ್ಕೆ ಟೆಸ್ಲಾ ಕಾಲಿಡುವ ಮುನ್ಸೂಚನೆಯೇ’ ಎಂದು ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಟ್ವಿಟರ್‌ನಲ್ಲಿ ಅತ್ಯಧಿಕ ಫಾಲೋವರ್ಸ್‌ ಹೊಂದಿರುವ ಮಸ್ಕ್ 195 ಮಂದಿಯನ್ನು ಮಾತ್ರ ಫಾಲೋ ಮಾಡುತ್ತಿದ್ದು, ಈ ಪೈಕಿ ಇತ್ತೀಚೆಗಷ್ಟೇ ಮೋದಿ ಕೂಡ ಸೇರ್ಪಡೆಗೊಂಡಿದ್ದಾರೆ. ಮೋದಿ ಅವರನ್ನು ಫಾಲೋ ಮಾಡುತ್ತಿರುವ