Home Archive by category ರಾಜ್ಯ (Page 25)

ಕರ್ನಾಟಕ ಸಂಘ ಮುಂಬಯಿ 90 ರ ಸಂಭ್ರಮ ಕ್ಕೆ ಅದ್ದೂರಿಯ ಚಾಲನೆ

ಮುಂಬೈ : ಮಹಾರಾಷ್ಟ್ರದ ಮುಂಬೈಯ ನಗರದಲ್ಲಿ ಕರ್ನಾಟಕ ಸಂಘದ ಮೂಲಕ ನಾಡಿನ ಸಂಸ್ಕೃತಿಕ ವೈಭವವನ್ನು ಇಲ್ಲಿ ಮೇಲಾಯಿಸುತ್ತಿದ್ದಾರೆ, ಸಾಹಿತಿಗಳನ್ನು ಕಲಾವಿದರನ್ನು ಬೆಳೆಸುವಲ್ಲಿ ಸಂಘ 90 ವರ್ಷಗಳ ಗಳಿಂದ ಮಾಡುತ್ತಿರುವುದು ಸೇವೆ ನಿಜಕ್ಕೂ ಅಭಿನಂದನೆಯ ,ಈ ಸಂಭ್ರಮಕ್ಕೆ ಮಹಾನ್ ಸಾಧಕರನ್ನು ವೇದಿಕೆಯಲ್ಲಿ ಬರಮಾಡಿಸಿದ್ದಾರೆ ಇದು ಸಂಘದ ಸೇವಾ ಕಾರ್ಯಕ್ಕೆ ಸ್ಪೂರ್ತಿ

ಕರ್ನಾಟಕ ಸಂಘ ಮುಂಬಯಿ 90 ರ ಸಂಭ್ರಮ ಉತ್ಸವದ ಸಮಾರೋಪ

ಮುಂಬೈ : ಹೊರನಾಡಿನ ಕನ್ನಡಿಗರಿಗೆ ಕನ್ನಡದ ಭಾಷೆ ಸಂಸ್ಕೃತಿಯ ಬಗ್ಗೆ ಅಪಾರ ಅಭಿಮಾನವಿದ್ದು,ಅದು ಅವರನ್ನು ಜಾಗೃತ ಗೊಳಿಸಿ ವೈಶಿಷ್ಟ ಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.ಕನ್ನಡ ಭಾಷೆಯ ಉಳಿವಿಗಾಗಿ ನಿರಂತರವಾಗಿ ಕೆಲಸ ಕಾರ್ಯಗಳು ಮಹಾರಾಷ್ಟ್ರದಲ್ಲಿ ನಡೆಯುವಷ್ಟು ಕನ್ನಡದ ಸಾಂಸ್ಕೃತಿಕ ಕಾರ್ಯಕ್ರಮ ನಮ್ಮ ಕನ್ನಡ ನಾಡಿನಲ್ಲೂ ನಡೆಯುವುದಿಲ್ಲ.90 ವರ್ಷಗಳಿಂದ ಕರ್ನಾಟಕ ಸಂಘ ಮಾಡುತ್ತಿರುವ ಕನ್ನಡ ಪರ ಕಾರ್ಯಗಳು ತುಂಬಾ

ತಮಿಳಿನಾಡಿನ ತೆಪ್ಪಕಾಡು ಆನೆ ಶಿಬಿರಕ್ಕೆ ಪ್ರಧಾನಿ ಮೋದಿ ಭೇಟಿ

ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ಭಾನುವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ “ದಿ ಎಲಿಫೆಂಟ್ ವಿಸ್ಪರರ್ಸ್’ನ ಪ್ರಮುಖ ಪಾತ್ರಧಾರಿ ಗಳಾದ ಕಾವಾಡಿ ದಂಪತಿ ಬೊಮ್ಮನ್ ಮತ್ತು ಬೆಳ್ಳಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಮೈಸೂರಿನಲ್ಲಿ ಭಾನುವಾರ ನಡೆದ `ಪ್ರಾಜೆಕ್ಟ್ ಟೈಗರ್’ 50 ವರ್ಷಗಳನ್ನು ಪೂರೈಸಿದ ಸಮಾರಂಭದಲ್ಲಿ, ಆಸ್ಕರ್ ಪ್ರಶಸ್ತಿಯನ್ನು ಗೆದ್ದ ಎಲಿಫೆಂಟ್ ವಿಸ್ಪರರ್ಸ್

ವಸತಿ ರಹಿತರಿಗೆ ಪ್ಲಾಟ್ ಹಸ್ತಾಂತರ : ಕೇರಳ ಸರ್ಕಾರದ ಮಹತ್ವದ ಯೋಜನೆ

ನಾಳೆ ರಾಜ್ಯದ ಮುಖ್ಯಮಂತ್ರಿ ಶ್ರೀ. ಪಿಣರಾಯಿ ವಿಜಯನ್ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ನಾಳೆಯಿಂದ ಮನೆ, ಜಮೀನು ಇಲ್ಲದ 174 ಕುಟುಂಬಗಳು ಸ್ವಂತ ಮನೆ ಹೊಂದಲಿದ್ದು, ಇವರಿಗೆ ಸ್ವಂತ ಮನೆ ಕನಸಾಗಿತ್ತು. ಈ ವಸತಿ ಸಮುಚ್ಚಯಗಳು ಕಣ್ಣೂರು ಜಿಲ್ಲೆಯ ಕದಂಪುರ್, ಕೊಲ್ಲಂ ಜಿಲ್ಲೆಯ ಪುನಲೂರ್, ಕೊಟ್ಟಾಯಂ ಜಿಲ್ಲೆಯ ವಿಜಯಪುರಂ ಮತ್ತು ಇಡುಕ್ಕಿ ಜಿಲ್ಲೆಯ ಕರಿಮಣ್ಣೂರಿನಲ್ಲಿವೆ. ಪ್ರತಿ ವಸತಿ ಸಮುಚ್ಚಯ ನಿರ್ಮಿಸಲು 6.7 ಕೋಟಿಯಿಂದ 7.85 ಕೋಟಿ ವೆಚ್ಚ ಮಾಡಲಾಗಿದೆ.

ಕಲಶ ಕಟ್ಟುತ್ತಿದ್ದಾಗ ರಥದಿಂದ ಜಾರಿ ಬಿದ್ದು ವ್ಯಕ್ತಿ ಸಾವು

ವಿಜಯಪುರದ ಗೊಲ್ಲಾಳೇಶ್ವರ ರಥೋತ್ಸವದಲ್ಲಿ ರಥದ ಕಲಶ ಕಟ್ಟುತ್ತಿದ್ದಾಗ ಜಾರಿ ಬಿದ್ದು ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿದೆ. ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಗೊಲ್ಲಾಳೇಶ್ವರ ರಥೋತ್ಸವದ ಹಿನ್ನೆಲೆಯಲ್ಲಿ ಸಾಹೇಬಪಟೇಲ್ ಖಾಜಾಪಟೇಲ್ ಎಂಬವರು ರಥದ ತುತ್ತ ತುದಿಯಲ್ಲಿ ಕಲಶ ಕಟ್ಟುತ್ತಿದ್ದರು. ಈ ವೇಳೆ ಸಾಹೇಬಪಟೇಲ್ ಅವರು ಕಾಲು ಜಾರಿ ರಥದಿಂದ ಬಿದ್ದಿದ್ದಾರೆ ಎನ್ನಲಾಗಿದೆ. ಕಲಶ ಕಟ್ಟುವಾಗ ಕೈಯಲ್ಲಿದ್ದ ಹಗ್ಗ ಜಾರಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಕೂಡಲೇ

ತೇರದಾಳ ಶಾಸಕ ಸಿದ್ದು ಸವದಿ ವಿರುದ್ಧ ಬಿಜೆಪಿ ಕಾರ್ಯಕರ್ತರ ಆಕ್ರೋಶ : ಸಂಗಮೇಶ್ ನಿರಾಣಿಗೆ ಟಿಕೆಟ್ ನೀಡಲು ಆಗ್ರಹ

ತೇರದಾಳ (ಬಾಗಲಕೋಟೆ ಜಿಲ್ಲೆ) : ತೇರದಾಳ ಕ್ಷೇತ್ರದ ಬಿಜೆಪಿ ಶಾಸಕ ಸಿದ್ದು ಸವದಿ ಅವರಿಗೆ ಮತ್ತೆ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಪಕ್ಷದ ಕಾರ್ಯಕರ್ತರೇ ಹೋರಾಟಕ್ಕೆ ಇಳಿದಿದ್ದಾರೆ. ಸಿದ್ದು ಸವದಿ ಕ್ಷೇತ್ರದ ಅಭಿವೃದ್ಧಿಗೆ ಏನೂ ಮಾಡಿಲ್ಲ. ಜನರು ಅವರನ್ನು ತಿರಸ್ಕರಿಸಲು ತೀರ್ಮಾನಿಸಿದ್ದಾರೆ. ಹೀಗಾಗಿ ಮತ್ತೆ ಅಭ್ಯರ್ಥಿಯಾಗಿ ಅವರನ್ನು ಕಣಕ್ಕಿಳಿಸಿದರೆ, ತೇರದಾಳ ಕೈತಪ್ಪುತ್ತದೆ. ಇದನ್ನೇ ನಾವು ರಾಜ್ಯ ನಾಯಕತ್ವಕ್ಕೆ ತಿಳಿಸಿದ್ದೇವೆ

ಸುಳ್ಯ : ಹಿರಿಯ ಕಾರ್ಯಕರ್ತರ ಭೇಟಿ ಮಾಡಿದ ಜಿ.ಕೃಷ್ಣಪ್ಪ

ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಅವರು ಕ್ಷೇತ್ರದಾದ್ಯಂತ ಮಿಂಚಿನ ಸಂಚಲನ ಮೂಡಿಸಿದ್ದಾರೆ.ಕೃಷ್ಣಪ್ಪ ಅವರು ಸುಳ್ಯದ ವಿವಿಧ ಬೂತ್ , ಬ್ಲಾಕ್ ಗಳ ಹಿರಿಯ ನಾಯಕರನ್ನು ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಿದರು.ಕುಟ್ರಾಪ್ಪಾಡಿಯಲ್ಲಿ ಗ್ರಾಮದ ಹಿರಿಯ ಕಾಂಗ್ರೆಸ್ ಮುಖಂಡ ಸುಬ್ರಾಯ ಹೆಬ್ಬಾರ್ ಅವರನ್ನು ಭೇಟಿ ಮಾಡಿದರು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಆನಂದ ಪೂಜಾರಿ

ಪೀಲಿತಡ್ಕ ಶ್ರೀ ಗುಳಿಗ ಮತ್ತು ಶ್ರೀ ಕೊರಗ ತನಿಯ ದೈವ ಸನ್ನಿಧಿ : ತುಳು ಲಿಪಿ ನಾಮಫಲಕ ಅನಾವರಣ

ಕಾಸರಗೋಡಿನ ಬದಿಯಡ್ಕದ ವಿದ್ಯಾಗಿರಿಯ ಪೀಲಿತಡ್ಕ ಶ್ರೀ ಗುಳಿಗ ಮತ್ತು ಶ್ರೀ ಕೊರಗ ತನಿಯ ದೈವ ಸನ್ನಿಧಿಯಲ್ಲಿ ತುಳು ಲಿಪಿ ನಾಮಫಲಕವನ್ನು ಅಳವಡಿಸಲಾಯಿತು. ಕಾರ್ಯಕ್ರಮದಲ್ಲಿ ಬದಿಯಡ್ಕದ ಗ್ರಾಮ ಪಂಚಾಯತ್ ಮೆಂಬರ್ ಶ್ರೀ ಬಾಲಕೃಷ್ಣ ಶೆಟ್ಟಿ ಇವರು ಅಧ್ಯಕ್ಷತೆ ವಹಿಸಿದ್ದರು, ಇವರು ತಮ್ಮ ಭಾಷಣದಲ್ಲಿ ತುಳು ಬಾಷೆಯು ಶೀಘ್ರದಲ್ಲಿ 8ನೇ ಪರಿಚ್ಚೆದಕ್ಕೆ ಸೇರುವಂತಾಗಲಿ ಎಂದರು. ಸ್ಥಳದ ಹಿರಿಯ ದೈವ ಪಾತ್ರಿ ಶ್ರೀ ನಿಟ್ಟೋನಿ ಇವರು ತುಳು ಲಿಪಿ ನಾಮಫಲಕವನ್ನು ಉದ್ಘಾಟಿಸಿದರು.

ಮೇ. 29ರಿಂದ ಪ್ರಾಥಮಿಕ ಹಾಗೂ ಪ್ರೌಡಶಾಲೆಗಳು ಪ್ರಾರಂಭ

ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 2023-24ರ ಶೈಕ್ಷಣಿಕ ವರ್ಷ ಮೇ. 29ರಿಂದ ಪ್ರಾರಂಭಗೊಳ್ಳಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಸುತ್ತೋಲೆಯನ್ನು ಹೊರಡಿಸಿದೆ. ಮೊದಲ ಅವಧಿ ಮೇ 29ರಿಂದ ಅಕ್ಟೋಬರ್ 7ರ ತನಕ ಇರಲಿದ್ದು, ಅಕ್ಟೋಬರ್ 8ರಿಂದ ಅಕ್ಟೋಬರ್ 24ರ ತನಕ ದಸರಾ ರಜೆ ಇರಲಿದೆ.ಇನ್ನು ಎರಡನೇ ಅವಧಿ ಅಕ್ಟೋಬರ್ 25ರಿಂದ 2024ರ ಎಪ್ರಿಲ್ 10ರ ವರೆಗೆ ಇರಲಿದೆ. ಎ.11ರಿಂದ ಬೇಸಗೆ ರಜೆ ಪ್ರಾರಂಭಗೊಳ್ಳಲಿದ್ದು ಮೇ 28ರ ವರೆಗೆ ರಜೆ

ಮೇ 10ಕ್ಕೆ ಕರ್ನಾಟಕ ವಿಧಾನಸಭೆ ಚುನಾವಣೆ: ಮೇ 13ರಂದು ಫಲಿತಾಂಶ

ಭಾರತೀಯ ಚುನಾವಣಾ ಆಯೋಗ (ಇಸಿಐ) ರಾಜ್ಯ ವಿಧಾನಸಭೆ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಿದೆ. 224 ವಿಧಾನಸಭಾ ಕ್ಷೇತ್ರಗಳಿಗೆ ಮೇ 10 ರಂದು ಒಂದೇ ಹಂತದ ಮತದಾನ ಹಾಗೂ ಮೇ 13ರಂದು ಮತ ಎಣಿಕೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾಹಿತಿ ನೀಡಿದರು. ದೆಹಲಿಯ ವಿಜ್ಞಾನ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದರು. ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 10