ಕರ್ನಾಟಕ ಸಂಘ ಮುಂಬಯಿ 90 ರ ಸಂಭ್ರಮ ಕ್ಕೆ ಅದ್ದೂರಿಯ ಚಾಲನೆ

ಮುಂಬೈ : ಮಹಾರಾಷ್ಟ್ರದ ಮುಂಬೈಯ ನಗರದಲ್ಲಿ ಕರ್ನಾಟಕ ಸಂಘದ ಮೂಲಕ ನಾಡಿನ ಸಂಸ್ಕೃತಿಕ ವೈಭವವನ್ನು ಇಲ್ಲಿ ಮೇಲಾಯಿಸುತ್ತಿದ್ದಾರೆ, ಸಾಹಿತಿಗಳನ್ನು ಕಲಾವಿದರನ್ನು ಬೆಳೆಸುವಲ್ಲಿ ಸಂಘ 90 ವರ್ಷಗಳ ಗಳಿಂದ ಮಾಡುತ್ತಿರುವುದು ಸೇವೆ ನಿಜಕ್ಕೂ ಅಭಿನಂದನೆಯ ,ಈ ಸಂಭ್ರಮಕ್ಕೆ ಮಹಾನ್ ಸಾಧಕರನ್ನು ವೇದಿಕೆಯಲ್ಲಿ ಬರಮಾಡಿಸಿದ್ದಾರೆ ಇದು ಸಂಘದ ಸೇವಾ ಕಾರ್ಯಕ್ಕೆ ಸ್ಪೂರ್ತಿ ತುಂಬಿದೆ, ಯುವ ಜನಾಂಗಕ್ಕೆ ಇಂಥ ಸಾಧಕರು ಗುರುತಿಸುವುದು ಅಗತ್ಯವಿದೆ ,ಕನ್ನಡದ ದೀಪವನ್ನು ಈ ನಗರದಲ್ಲಿ ಬಹಳಷ್ಟು ಕನ್ನಡ ಸಂಘಗಳು ಹಚ್ಚುತ್ತಿದೆ, , ಕನ್ನಡಿಗರಲ್ಲಿ ಪ್ರೀತಿಯ ಭಾವೈಕ್ಯತೆ ಬೆಳೆಸಿದೆ, ಕನ್ನಡಿಗರು ಎಲ್ಲಿದ್ದರೂ ಕೂಡ ಅಪ್ಪಟ ಕನ್ನಡಿಗರಾಗಿದ್ದೀರಿ ಹೃದಯವಂತರಾಗಿರುತ್ತಾರೆ, ಇದು ನಮ್ಮವರಲ್ಲಿ ಸದಾಕಾಲ ಇರಲಿ ಎಂದು ಇಚ್ಛೆ ಪಡುತ್ತೇನೆ, ಕನ್ನಡವೆಂದರೆ ಸಂಸ್ಕೃತಿ, ಅದೊಂದು ವಿಚಾರಧಾರೆ ಯಾಗಿದೆ ,ಬಾವಿಯಕ್ಯತೆಯ ಒಂದಿಗೆ ರಾಷ್ಟ್ರೀಯತೆಯ ಪ್ರಜ್ಞೆಯನ್ನು ಮೂಡಿಸುವ ಕನ್ನಡ ಭಾಷೆಯಾಗಿದೆ, ನಮ್ಮ ಮಕ್ಕಳಿಗೆ ಜಾನಪದ ಸಾಹಿತ್ಯವನ್ನು, ಕಲಾ ಪ್ರಕಾರಗಳನ್ನು ಹೇಗೆ ಕೊಡಬೇಕು ಎನ್ನುವುದನ್ನು ಅತ್ಯಂತ ಸರಳವಾದ ಭಾಷೆಯಲ್ಲಿ, ನೀಡುತ್ತಾ ಬಂದವರು ನಮ್ಮ ಹಿರಿಯರು, ಕನ್ನಡಿಗರದು ಸಾಮರಸ್ಯದ ಬದುಕು ಸಂಘರ್ಷದ ಬದುಕ 40 ಕೋಟಿಯ ಭವ್ಯವೇ ಯೋಜನೆಗೆ ಕರ್ನಾಟಕ ಸರಕಾರ ಬೆಂಬಲವಿದೆ ಶತಮಾನೋತ್ಸವದ ಸಂಭ್ರಮವನ್ನು ನಮ್ಮೆಲ್ಲರಿಗೂ ನೋಡುವ ಪಾಲ್ಗೊಳ್ಳುವ ಸೌಭಾಗ್ಯ ದೊರೆಯಲ್ಲಿಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ.ಸೋಮಶೇಖರ್ ಐ. ಎ. ಎಸ್ ನುಡಿದರು.

ಹೊರನಾಡಿನಲ್ಲಿ ಸದಾ ಕಾಲ ಜಾಗ್ರತವಾಗಿರುವಂತಹ ಬಹುದೊಡ್ಡ ಜವಾಬ್ದಾರಿಯನ್ನು ಕರ್ನಾಟಕ ಸಂಘ ಸುಮಾರು 9 ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ, ಈ ನಗರದ ಕರ್ನಾಟಕ ಸಂಘಗಳಿಗೆ ಒಂದು ಕಳಶಪ್ರಾಯವಾದಂತ ಸಂಘವಾಗಿರುವಂತದ್ದು ಬಹಳ ಸಂತೋಷದ ವಿಷಯ, ಸುದೀರ್ಘ ಕಾಲದ ಮಂಚ ಈ ಸಂಘದ ಹಿರಿಯ ಕನ್ನಡದ ಮಹಾನ್ ಕನ್ನಡ ಚೇತನಗಳಿಗೆ ನನ್ನ ಅನಂತ ಸಾಷ್ಟಾಂಗ ಪ್ರಣಾಮಗಳು,ಎಂದರು

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಲ್ಲಿಕಾರ್ಜುನ ಉತ್ತುರೆ ಐ.ಅರ್.ಎಸ್( ಆಯುಕ್ತರು ಆದಾಯ ತೆರಿಗೆ ಇಲಾಖೆ ಪುಣೆ) ಮಾತನಾಡುತ್ತಾ ಭಾಷೆ ಒಂದು ಮಾಧ್ಯಮವಾಗಿದೆ , ಕನ್ನಡ ಎಂದರೆ ಸಂಸ್ಕೃತಿ ಯು ಹೌದು ಒಂದು ಪರಂಪರ ಕೂಡವಾಗಿದೆ ,ಕನ್ನಡದ ಭಾಷೆಗಾಗಿ ಕನ್ನಡದ ಜನರಿಗಾಗಿ ಕರ್ನಾಟಕ ಸಂಘ 9 ದಶಕಗಳ ಕಾಲ ಸೇವೆ ಮಾಡಿರೋದು ಸಾಮಾನ್ಯ ಸೇವೆಯಲ್ಲ ಇದು ಮಹಾರಾಷ್ಟ್ರದ ಜನರಿಗೆ ಕೂಡ ಗೌರವವಾಗಿದೆ ಈ ನಗರದಲ್ಲಿರುವ ಕನ್ನಡಿಗರು ಈ ಸಂಘದಲ್ಲಿ ಇನ್ನು ಹೆಚ್ಚು ಸದಸ್ಯರಾಗಿ ಭೌ ಕೋಟಿ ವೆಚ್ಚದ ಸಂಕೀರ್ಣ ಪೂರ್ಣಗೊಳ್ಳುವಲ್ಲಿ ಸಹಕಾರವನ್ನು ನೀಡಬೇಕು ನನ್ನಿಂದ ಕೂಡ ಇದಕ್ಕೆ ಸಹಕಾರವಿದೆ ಎಂದು ನುಡಿದರು,

ಮತ್ತೋರ್ವ ಅತಿಥಿ ಶ್ರೀನಿವಾಸ್ ಸಿರಿಗೆರೆ ( ಆಡಳಿತ ನಿರ್ದೇಶಕರು ಶಕ್ತಿ ಇಂಟರ್ ನ್ಯಾಶನಲ್ ಫ್ರೈ. ಲಿ) ಮಾತನಾಡುತ್ತಾ ನಮ್ಮ ಪ್ರಾಮಾಣಿಕತೆ ನಿಷ್ಠೆಯ ಸೇವಾ ಕಾರ್ಯಕ್ಕೆ ನಮ್ಮನ್ನು ರಕ್ಷಿಸುವ ದೇವರು ಕೂಡ ಬೆಂಬಲಿಸುತ್ತಾರೆ, ಈ ಮಹಾನಗರದಲ್ಲಿ ಬೃಹತ್ ಯೋಜನೆಯನ್ನು ಕರ್ನಾಟಕ ಸಂಘ ರೂಪಿಸಿದೆ ಅವರ ಜೊತೆಗೆ ನಾವೆಲ್ಲರೂ ಕೈಜೋಡಿಸಬೇಕಾಗಿದೆ ಆ ಮೂಲಕ ಕನ್ನಡ ಭಾಷೆ ಸಂಸ್ಕೃತಿ ಸಂಸ್ಕಾರಗಳು ಹೊಸ ಸಂಕಿರಣದಲ್ಲಿ ಇನ್ನು ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ನೋಡಿದರು,,

ಮುಖ್ಯ ಅತಿಥಿ ವೈ. ಎಂ.ಶೆಟ್ಟಿ ( ಅಡಳಿತ ನಿರ್ದೇಶಕರು ಡೈಕೆಮ್ ಪ್ರಾಡಕ್ಟ್ ಫ್ರೈ ಲಿ.) ಮಾತನಾಡುತ್ತಾ ಕನ್ನಡ ದಲ್ಲಿ ಶಿಕ್ಷಣ ಪಡೆದ ನಮ್ಮವರು ಸಾಧನೆಗಳು ಸಾಮಾನ್ಯವಲ್ಲ ಈ ನಗರದಲ್ಲಿ ಕನ್ನಡಿಗರು ಬಹಳಷ್ಟು ಅಸಮಾನ್ಯ ಸಾಧನೆಯನ್ನು ಮಾಡಿದ್ದಾರೆ, ಕರ್ನಾಟಕ ಸಂಘ 40 ಕೋಟಿ ರೂಪಾಯಿ ವೆಚ್ಚದಲ್ಲಿ ಭವ್ಯ ಸಂಕಿರಣವನ್ನು ಮಾಡುವ ಯೋಚನೆಯನ್ನು ಸಿದ್ಧಪಡಿಸಿ ಅದನ್ನು ಶೀಘ್ರಗತಿಯಲ್ಲಿ ಕಾರ್ಯನಿರ್ವಹಿಸುತಿದ್ದಾರೆ ಇದು ನಮ್ಮ ಕನ್ನಡಿಗರಿಗೆ ಗೌರವ ಮತ್ತು ಹೆಮ್ಮೆಯಾಗಿದೆ ಎಂದು ನುಡಿದರು,
ಡಾ.ಸುರೇಶ್ ರಾವ್( ಅಧ್ಯಕ್ಷರು ಬಿ. ಎಸ್. ಕೆ. ಬಿ ಅಸೋಸಿಯೇಶನ್) ಮಾಡುತ್ತಾ ಸಂಸ್ಥೆಯ ಕೋಶ ಧಿಕಾರಿ ಓಂ ದಾಸ ಕಣ್ಣಂಗರ್ ರವರು ಬಹಳ ಧೈರ್ಯದಿಂದ ಬಹು ಕೋಟಿ ವೆಚ್ಚದ ಸಂಘದ ಸಂಕಿರಣ ಮುಂದಿನ ವರ್ಷದಲ್ಲಿ ಲೋಕರ್ಪಣೆ ಗೊಳ್ಳುತ್ತದೆ ಎನ್ನುವ ಮಾತುಗಳು ನನ್ನನ್ನು ಸಂತೋಷಪಡಿಸಿದೆ, ಕರ್ನಾಟಕ ಸಂಘದ ಈ ಕಟ್ಟಡ ಅದೊಂದು ದೇವಸ್ಥಾನದ ಹಾಗೆ ಯಾಕೆಂದರೆ ಅಲ್ಲಿ ಜ್ಞಾನ, ಕರ್ಮ ಭಕ್ತಿ ಯೋಗ ಬೇಕು ಅದೆಲ್ಲವನ್ನು ಈ ಸಂಘ ಮಾಡುತ್ತಾ ಬಂದಿದೆ ಶಿಕ್ಷಣ ಸಾಹಿತ್ಯ ಸಾಮಾಜಿಕ ಸೇವೆ ಹೀಗೆ ಎಲ್ಲಾ ರೀತಿಯಲ್ಲೂ 9 ದಶಕಗಳ ಕಾಲ ಕನ್ನಡಿಗರನ್ನು ಈ ನಗರದಲ್ಲಿ ಒಗ್ಗಟ್ಟು ಮಾಡಿದೆ ನಾವೆಲ್ಲರೂ ಈ ಬೃಹತ್ ಯೋಜನೆಗೆ ಸಹಕಾರ ನೀಡಬೇಕು ಎಂದು ನುಡಿದರು,,

ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದ ಸಾಫಲ್ಯ ಸೇವಾ ಸಂಘ ಮುಂಬಯಿ ಅಧ್ಯಕ್ಷರು ಶ್ರೀನಿವಾಸ ಸಾಫಲ್ಯ ಕನ್ನಡಿಗರ ಹಿರಿಮೆ ಗರಿಮೆ ಈ ಸಂಘದಲ್ಲಿ ಅಡಕವಾಗಿದೆ,150 ವರ್ಷಗಳ ಹಿಂದೆ ನಮ್ಮ ತುಳು ಕನ್ನಡಿಗರು ಈ ನಗರಕ್ಕೆ ಬಂದವರು ಬರುವಾಗ ನಮ್ಮ ನಾಡಿನ ಕಂಪನ್ನು ಅಲ್ಲಿಯ ಆಚಾರ ವಿಚಾರಗಳನ್ನು ಸಂಸ್ಕೃತಿಯ ತಂದವರು, ಇಲ್ಲಿ ಸಂಘರ್ಷದ ಬದುಕಿನೊಂದಿಗೆ ಜೀವನವನ್ನು ಕಟ್ಟಿದವರು ಕರ್ನಾಟಕದ ಸಂಸ್ಕೃತಿಯನ್ನು ಉಳಿಸಬೇಕೆನ್ನುವ ನಿಟ್ಟಿನಿಂದ ನಮ್ಮವರು ಈ ನಗರದಲ್ಲಿ ಕಟ್ಟಿಕೊಂಡಿದ್ದಾರೆ ಕನ್ನಡ ಸಂಘ ಸಂಸ್ಥೆಗಳು, ಹಾಗೂ ಅವರ ಬದುಕಿಗೆ ಕೂಡ ಭದ್ರಬುನಾದಿಯನ್ನು ಹಾಕಿಕೊಂಡಿದ್ದಾರೆ, ಈಗ ಈ ನಗರದಲ್ಲಿ ಕನ್ನಡದ ವಿಶೇಷತೆಯನ್ನು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದನ್ನು ಕಂಡಿದ್ದೇವೆ, 90 ವರ್ಷಗಳಿಂದ ಕರ್ನಾಟಕ ಸಂಘದ ವೇದಿಕೆಯಲ್ಲಿ ಬಹಳಷ್ಟು ವಿವಿಧ ರೀತಿಯ ಸೇವೆಗಳು ನಡೆದಿದೆ ಅಂತ ಭವ್ಯ ಪರಂಪರೆ ಸಂಘ ಇದೀಗ ಭವ್ಯ ಸಂಕಿರಣವನ್ನು ನಿರ್ಮಾಣ ಮಾಡುವುದಕ್ಕೆ ನಮ್ಮೆಲ್ಲರ ಸಹಕಾರ ಅಗತ್ಯವೆಂದು ನೋಡಿದರು

ಸಂಘದ ಗೌರವ ಕೋಶ ಧಿಕಾರಿ ಓಂ ದಾಸ್ ಕಣ್ಣಂಗರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಸಿ.ಸೋಮಶೇಖರ್ ಐ. ಎ. ಎಸ್ (ನಿ) ಮಾಡಿದರು, ಅಧ್ಯಕ್ಷತೆಯನ್ನು ಕರ್ನಾಟಕ ಸಂಘದ ಅಧ್ಯಕ್ಷರಾದ ಎಂ. ಎಂ.ಕೋರಿ ಯವರು ವಹಿಸಿದ್ದರು . ಗೌರವ ಅತಿಥಿಗಳಾಗಿ,ಮಲ್ಲಿಕಾರ್ಜುನ ಉತ್ತುರೆ ಐ.ಅರ್.ಎಸ್( ಆಯುಕ್ತರು ಆದಾಯ ತೆರಿಗೆ ಇಲಾಖೆ ಪುಣೆ)ವೈ. ಎಂ.ಶೆಟ್ಟಿ ( ಅಡಳಿತ ನಿರ್ದೇಶಕರು ಡೈಕೆಮ್ ಪ್ರಾಡಕ್ಟ್ ಫ್ರೈ ಲಿ.) ಶ್ರೀನಿವಾಸ್ ಸಿರಿಗೆರೆ ( ಆಡಳಿತ ನಿರ್ದೇಶಕರು ಶಕ್ತಿ ಇಂಟರ್ ನ್ಯಾಶನಲ್ ಫ್ರೈ. ಲಿ) ಶ್ರೀನಿವಾಸ ಸಾಫಲ್ಯ (ಅಧ್ಯಕ್ಷರು ಸಾಫಲ್ಯ ಸೇವಾ ಸಂಘ ಮುಂಬಯಿ) ಡಾ.ಸುರೇಶ್ ರಾವ್( ಅಧ್ಯಕ್ಷರು ಬಿ. ಎಸ್. ಕೆ. ಬಿ ಅಸೋಸಿಯೇಶನ್) ಕರ್ನಾಟಕ ಸಂಘದ ಗೌರವ ಕಾರ್ಯದರ್ಶಿ ವಿಶ್ವೇಶ್ವರ್ ಎನ್. ಮೇಟಿ ,ಖಜಾಂಚಿ ಓಂದಾಸ್ ಕಣ್ಣಂಗಾರ್ .ಕಾರ್ಯದರ್ಶಿ ಪ್ರಕಾಶ್ ಮಟ್ಟಿಹಳ್ಳಿ ಉಪಸ್ಥರಿದ್ದರು , ಇದೇ ಸಂದರ್ಭದಲ್ಲಿ .ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಮುಂಬಯಿ ಕನ್ನಡಿಗರ ಕನ್ನಡ ಸಂಘ ಸಂಸ್ಥೆಗಳಿಗಾಗಿ ಸಮೂಹ ನೃತ್ಯ ಸ್ಪರ್ಧೆ ಆಯೋಜಿಸುತ್ತಿದ್ದು 15 ತಂಡಗಳು ಪಾಲ್ಗೊಂಡಿದ್ದು, ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕಿ ಸವಿತಾ ಗಣೇಶ್ ಪ್ರಸಾದ್ ಮತ್ತು ತಂಡದವರಿಂದ ಸವಿತಕ್ಕನ ಅಳ್ಳೀ ಬ್ಯಾಂಡ್ ಜಾನಪದ ಗಾಯನ – ವಾದನ ವೈವಿದ್ಯ ಕಾರ್ಯಕ್ರಮ ನಡೆದವು

Related Posts

Leave a Reply

Your email address will not be published.