ಕರ್ನಾಟಕ ಸಂಘ ಮುಂಬಯಿ 90 ರ ಸಂಭ್ರಮ ಉತ್ಸವದ ಸಮಾರೋಪ

ಮುಂಬೈ : ಹೊರನಾಡಿನ ಕನ್ನಡಿಗರಿಗೆ ಕನ್ನಡದ ಭಾಷೆ ಸಂಸ್ಕೃತಿಯ ಬಗ್ಗೆ ಅಪಾರ ಅಭಿಮಾನವಿದ್ದು,ಅದು ಅವರನ್ನು ಜಾಗೃತ ಗೊಳಿಸಿ ವೈಶಿಷ್ಟ ಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.ಕನ್ನಡ ಭಾಷೆಯ ಉಳಿವಿಗಾಗಿ ನಿರಂತರವಾಗಿ ಕೆಲಸ ಕಾರ್ಯಗಳು ಮಹಾರಾಷ್ಟ್ರದಲ್ಲಿ ನಡೆಯುವಷ್ಟು ಕನ್ನಡದ ಸಾಂಸ್ಕೃತಿಕ ಕಾರ್ಯಕ್ರಮ ನಮ್ಮ ಕನ್ನಡ ನಾಡಿನಲ್ಲೂ ನಡೆಯುವುದಿಲ್ಲ.90 ವರ್ಷಗಳಿಂದ ಕರ್ನಾಟಕ ಸಂಘ ಮಾಡುತ್ತಿರುವ ಕನ್ನಡ ಪರ ಕಾರ್ಯಗಳು ತುಂಬಾ ಪ್ರಸಿದ್ದಿಯನ್ನು ಪಡೆದಿದ್ದು, ಸರಕಾರವು ಇಂತಹ ಮೇರು ಸಂಸ್ಥೆಗಳ ತ್ತ ಗಮನ ಹರಿಸಬೇಕು. ನಮ್ಮ ನಾಡಿನ ಮೇಲೆ, ಭಾಷೆಯ ಮೇಲೆ ಅಭಿಮಾನ ಇದ್ದವರು ಮಾತ್ರ ಇಂಥ ಕಾರ್ಯದಲ್ಲಿ ಪಾಲ್ಗೊಳ್ಳಲು ಸಾಧ್ಯ ಸಂಸ್ಕೃತಿ ಉಳಿದರೆ ಧರ್ಮವು ಉಳಿಯುವುದಕ್ಕೆ ಸಾಧ್ಯ ಧರ್ಮದಿಂದ ದೇಶ ಉಳಿದಾಗೆ, ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ಮುಂಬೈಯಲ್ಲಿ ಮತ್ತೆ ಅದ್ಬುತವಾಗಿ ಮಾಡ ಬೇಕಾದರೆ ಕರ್ನಾಟಕ ಸಂಘದ ಭವ್ಯ ಭವನ ಎ ದ್ದು ನಿಲ್ಲಬೇಕಾಗಿದೆ.ಅಂತಹ ಜನ ಕಲ್ಯಾಣದ ಮಹಾ ಕಾರ್ಯಕ್ಕೆ ನಾವೆಲ್ಲರೂ ಒಳ್ಳೆ ಮನಸ್ಸಿನಿಂದ ಸಹಕಾರ ನೀಡಬೇಕಾಗಿದೆ ಎಂದು ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ಆಡಳಿತ ನಿರ್ದೇಶಕ. ಪ್ರವೀಣ್ ಶೆಟ್ಟಿ ವಕ್ವಾಡಿ ದುಬೈ ನುಡಿದರು. ಕರ್ನಾಟಕ ಸಂಘದ 90 ರ ಸಂಭ್ರಮದ ಆಚರಣೆಯ ಏಪ್ರಿಲ್ 8 ರಂದು ಮಧ್ಯಾಹ್ನ ಮುಲುಂಡ್ ಕಾಳಿದಾಸ್ ಸಭಾಗೃಹದಲ್ಲಿ ಸಂಸ್ಕೃತಿ ಸಂಭ್ರಮ- ಸಮೂಹ ನೃತ್ಯ ಸ್ಪರ್ಧೆ,ಜಾನಪದ ಗಾಯನ – ವಾದನ,ಸನ್ಮಾನ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತಾನಾಡಿದರು,

ಅಧ್ಯಕ್ಷತೆಯನ್ನು ಕರ್ನಾಟಕ ಸಂಘದ ಅಧ್ಯಕ್ಷರಾದ ಎಂ. ಎಂ.ಕೋರಿ ಯವರು ವಹಿಸಿದ್ದರು .
ಗೌರವ ಅತಿಥಿಗಳಾಗಿಪುಣೆ ಬಂಟರ ಸಂಘದ ಅಧ್ಯಕ್ಷ ಇನ್ನ ಕುರ್ಕಿಲ ಬೆಟ್ಟು ಸಂತೋಷ್ ಶೆಟ್ಟಿ ಮಾತನಾಡುತ್ತಾ ಕಳೆದ 90 ವರ್ಷಗಳಿಂದ ಬಹಳ ಅರ್ಥಪೂರ್ಣವಾಗಿ ನಾಡಿನ ಸಾಂಸ್ಕೃತಿಕ ವಿಚಾರಧಾರೆಗಳನ್ನು ಮಾಡುತ್ತಿರುವ ಈ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ, ಸಂಘ ಕಟ್ಟುವುದು ಸುಲಭದ ಕೆಲಸ ಸಂಘವನ್ನು ಮುನ್ನಡೆಸುವುದು ಅದು ಕಷ್ಟದ ಕೆಲಸಗಳು ಅದನ್ನು ಬಹಳ ಹತ್ತಿರದಿಂದ ನನ್ನ ಬದುಕಿನಲ್ಲಿ ಕಂಡಿದ್ದೇನೆ ಆದರೆ ಕರ್ನಾಟಕ ಸಂಘ ಸುದೀರ್ಘಕಾಲದಿಂದ ಸಾಹಿತಿಗಳಿಗೆ ಕಲಾವಿದರಿಗೆ ವಿದ್ಯಾರ್ಥಿಗಳಿಗೆ ವಿವಿಧ ರೀತಿಗಳ ಸಹಕಾರವನ್ನು ನೀಡುತ್ತಾ ಬಂದಿರುವುದು ಸಂತಸ ತಂದಿದೆ, ಸಂಘದ ಬೃಹತ್ ಯೋಜನೆ ಇದು ನಮ್ಮ ನಿಮ್ಮೆಲ್ಲರ ಯೋಜನೆಯಾಗಿದೆ, ಕರ್ನಾಟಕದಿಂದ ಬಂದ ನಾವೆಲ್ಲರೂ ನಮ್ಮ ಸಂಸ್ಕೃತಿ ಸಂಸ್ಕಾರವನ್ನು ಮರೆತಿಲ್ಲ ಈ ಸಾಂಸ್ಕೃತಿಕ ಸಂಸ್ಕಾರದ ಪ್ರತೀಕವಾಗಿ ಈ ವೇದಿಕೆಯಲ್ಲಿ ನೃತ್ಯ ಉತ್ಸವವೇ ಸಾಕ್ಷಿಯಾಗಿದೆ, ನಮ್ಮೂರಿನ ಜನರಲ್ಲಿ ಬೇಡುವ ಕೈಗಳಿಗಿಂತ ನೀಡುವ ಕೈಗಳೇ ಹೆಚ್ಚು ಆದ್ದರಿಂದ ಪುಣೆ ನಗರದಲ್ಲಿ ಬಹುಕೋಟಿ ಬಂಟರ ಭವನ ನನ್ನ ನಾಯಕತ್ವದಲ್ಲಿ ಸಮಸ್ತ ತುಳು ಕನ್ನಡಿಗರ ಸಹಕಾರದಿಂದ ನಿರ್ಮಾಣವಾಗಿದೆ, ಈ ಭವನ ಕರ್ನಾಟಕ ಭವನ ತುಳು ಭವನವಾಗಿ ಜನರಿಗೆ ಉಪಯೋಗವಾಗುತಿದೆ,ಇದು ನಮ್ಮೂರಿಗೆ ಸಂದ ಗೌರವವಾಗಿದೆ, ಇಂದು ನನ್ನನ್ನು ಗೌರವಿಸಿದ್ದೀರಿ ಅದು ಸಾಧನೆಗೆ ಸಂದ ಗೌರವವಾಗಿದೆ, ಮುಂಬೈ ನಗರದಲ್ಲಿ ಕರ್ನಾಟಕ ಸಂಘ ನಿರ್ಮಿಸುವ ಈ ಯೋಜನೆಗೆ ಯಾರೆಲ್ಲ ದೇಣಿಗೆ ನೀಡಲಿಲ್ಲವೇ ಅವರೆಲ್ಲರೂ ನೀಡುವಂತಾಗಲಿ, ಅವರೆಲ್ಲರಿಗೂ ದೇವರು ಕೊಡುವಂತ ಮನಸ್ಸು ಮಾಡಲಿ ಈ ಸಂಘದ ಭವ್ಯ ಭವನ ನಮ್ಮೆಲ್ಲರ ಭವನವಾಗಿದೆ, ಕರ್ನಾಟಕದ ಜನರ ಮತ್ತು ಕನ್ನಡಿಗರ ಅಭಿವೃದ್ಧಿಯ ಮುಖ್ಯ ಕೇಂದ್ರವಾಗಲಿ ಎಂದುನುಡಿದರು

ಮುಖ್ಯ ಅತಿಥಿ ಪತ್ರಿಕೆಯ ಸಂಪಾದಕ ಚಂದ್ರಶೇಖರ್ ಪಾಲುತ್ತಾಡಿ ಮಾತನಾಡುತ್ತಾ ಮುಂಬೈಯ ಪ್ರತಿನಿತ್ಯ ಸಂಸ್ಥೆಯಾಗಿರುವ ಕರ್ನಾಟಕ ಸಂಘ 90ರ ಸಂಭ್ರಮದಲ್ಲಿ 40 ಕೋಟಿ ರೂಪಾಯಿಯ ಭವ್ಯ ಭವನದ ಯೋಜನೆಯನ್ನು ನಮ್ಮ ಮುಂದೆ ಇಟ್ಟಿದ್ದಾರೆ, ಈ ಯೋಜನೆ ಪೂರ್ಣಗೊಂಡಾಗ ಮುಂಬೈಯ ಕನ್ನಡಿಗರನ್ನು ಬಲಿಷ್ಟಗೊಳ್ಳುವಲ್ಲಿ ಸಹಕಾರಿ ಆಗಬಹುದು, ಸಂಘದ ಹಿಂದಿನ ಭವ್ಯ ಭವನ ದ ಮೂಲಕ ಕನ್ನಡಿಗರು ಅಲ್ಲಿ ಒಗ್ಗೂಡಿಸಿದ್ದು, ಅಂತಹ ಒಗ್ಗಟ್ಟಿನ ಭವ್ಯ ಕಾರ್ಯಕ್ರಮಗಳು ಮತ್ತೊಮ್ಮೆ ಈ ನಗರದಲ್ಲಿ ಆಗಬೇಕಾದರೆ ಕರ್ನಾಟಕ ಸಂಘದ ಬಹು ಕೋಟಿ ವೆಚ್ಚದ ನಿರ್ಮಾಣವಾಗಬೇಕಾಗಿದೆ, ಇದಕ್ಕೆ ಕರ್ನಾಟಕ ಸರಕಾರ ಅನುದಾನ ದೊಡ್ಡಮಟ್ಟದು ನೀಡಬೇಕು ಏಕೆಂದರೆ ಕರ್ನಾಟಕದಿಂದ ಬರುವ ಎಲ್ಲರನ್ನು ಕೂಡ ನಾವು ಬಹಳ ಅಭಿಮಾನ ಗೌರವದಿಂದ ಗೌರವಿಸಿ ಅಭಿನಂದಿಸುವ ಪರಿಪಾಠವನ್ನು ಬೆಳೆಸಿಕೊಂಡಿದ್ದೇವೆ , ಹೊರನಾಡಿನವರು ನಮ್ಮ ಕನ್ನಡ ನಾಡಿನ ಬಗ್ಗೆ ಬಾಳ ಅಭಿಮಾನವಿಟ್ಟುವರು ಮುಂಬೈಯ ಕನ್ನಡಿಗರಿಗೆ ಕನ್ನಡದ ಮೇಲೆ ಬಹಳಷ್ಟು ಅಭಿಮಾನದಿಂದ ಇಲ್ಲಿ ಕನ್ನಡದ ಸಂಘ ಸಂಸ್ಥೆಗಳು ಕನ್ನಡದ ಉಳಿವಿಗಾಗಿ ಅವಿರತ ಸೇವೆ ಮಾಡುತ್ತಿದೆ ಎಂದುನುಡಿದರು,
ಅತಿಥಿ ಬಾಲಕೃಷ್ಣ ಭಂಡಾರಿ ಮಾತನಾಡುತ್ತಾ ತುಂಬಾ ಸೊಗಸಾದ ಮತ್ತು ಕನ್ನಡಿಗರ ಕನಸಾದ ಈ ಭವ್ಯ ಭವನದ ಉದ್ಘಾಟನೆಗೆ ದೇಶದ ಪ್ರಧಾನ ಮಂತ್ರಿಗಳು ಬರುವಂತಾಗಲಿ ಎಂದು ಶುಭ ಹಾರೈಸಿದರು

ಸಂಜೆ ಸಮಾರೋಪ ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ.ಸೋಮಶೇಖರ್ ಐ. ಎ. ಎಸ್ಪ್ರ ವೀಣ್ ಶೆಟ್ಟಿ ದುಬೈ ( ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್)ಪ್ರಕಾಶ್ ಮತ್ತೀ ಹಳ್ಳಿ(ಕಾರ್ಯದರ್ಶಿಗಳು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರಕಾರ)ಚಂದ್ರಶೇಖರ್ ಪಾಲೆತ್ತಾಡಿ(ಸಂಪಾದಕರು ಕರ್ನಾಟಕ ಮಲ್ಲ ದಿನ ಪತ್ರಿಕೆ) ಕೆ. ಸಿ.ಶೆಟ್ಟಿ(ಕಾರ್ಯಾಧ್ಯಕ್ಷರು ಮತ್ತು ಆಡಳಿತ ನಿರ್ದೇಶಕರು ಲ್ಯೂಮೆನ್ಸ್ ಗ್ರೂಪ್ ಆಫ್ ಇಂಡ ಸ್ಟ್ರೀಸ್)ಸದಾಶಿವ ಭಂಡಾರಿ ಸಕಲೇಶಪುರ(ಅಧ್ಯಕ್ಷರು ಭಂಡಾರಿ ಮಹಾಮಂಡಲ) , ಬಾಲಕೃಷ್ಣ ಭಂಡಾರಿ ಕುಂಬ್ಳೆ( ಆಡಳಿತ ನಿರ್ದೇಶಕರು ಭಗೀರಥ ಕೆಮಿಕಲ್ಸ್)ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ ಬೆಟ್ಟು(ಅಧ್ಯಕ್ಷರು ಬಂಟರ ಸಂಘ ಪುಣೆ) ನಿಲೇಶ್ ಶರದ್ ಪರೇಖ್ (ನಿರ್ದೇಶಕರು ಶ್ರೀಜಿ ವುಡ್ ಕ್ರಾಫ್ಟ್ ಫ್ರೈ ಲಿ) ಕರ್ನಾಟಕ ಸಂಘದ ಗೌರವ ಕಾರ್ಯದರ್ಶಿ ವಿಶ್ವೇಶ್ವರ್ ಎನ್. ಮೇಟಿ , ಗೌ ಕೋಶಾಧಿಕಾರಿ ಓಂದಾಸ್ ಕಣ್ಣಂಗಾರ್ . ಉಪಸ್ಥರಿದ್ದರು ,

ಸಂಘದ ಗೌರವ ಕೋಶಾ ಧಿಕಾರಿ ಓಂ ದಾಸ್ ಕಣ್ಣಂಗರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು,
ಆಧುನಿಕ ತಂತ್ರಜ್ಞಾನದ ಮೂಲಕ ಹೊಸ ವಿನ್ಯಾಸದಲ್ಲಿ ಅದ್ದೂರಿಯವಾಗಿ ನಡೆದ ಕಾರ್ಯಕ್ರಮದ ನಿರೂಪಣೆ ಮತ್ತು ಕಂಠದಾನ ಕಲಾವಿದರಾಗಿ ಅಹಲ್ಯಾ ಬಲ್ಲಾಳ್, ಅವಿನಾಶ್ ಕಾಮತ್,ಸುರೇಂದ್ರ ಕುಮಾರ್ ಮಾರ್ನಾಡ್, ನಳಿನಾ ಪ್ರಸಾದ್,ಮಾಲತಿ ಚಂದ್ರಕಾಂತ್ ಮತ್ತು ತಾಂತ್ರಿಕ ವಿಭಾಗವನ್ನು ಲತೇಶ್ ಪೂಜಾರಿ ನಿರ್ವಹಿಸಿದರು.
ಕಾರ್ಯಕ್ರಮವು ಸಂಘದ ಮಾಜಿ ಉಪಾಧ್ಯಕ್ಷ ರಂಗತಜ್ಞ ಡಾ ಭರತ್ ಕುಮಾರ್ ಪೊಲಿಪು,ಅವರ ಸಮರ್ಥ ಸಂಯೋಜನೆಯಲ್ಲಿ ಮತ್ತು ಸಂಗೀತ ನಿರ್ದೇಶಕ ಪದ್ಮನಾಭ್ ಸಸಿಹಿತ್ಲು ಹಾಗೂ ಸಮಿತಿ ಸದಸ್ಯರ ಸಹಕಾರದಿಂದ ಯಶಸ್ವಿಯಾಗಿ ಜರಗಿತು. ಹೆಸರಾಂತ ಸಂಘಟಕ ಸಂಘದ ಕೋಶಾಧಿಕಾರಿ, ಓಂದಾಸ್ ಕಣ್ಣಂಗಾರ್ ಅದ್ಬುತವಾಗಿ ಕಾರ್ಯಕ್ರಮವನ್ನು ಸಂಘಟಿಸಿದ್ದರು., ಸ್ಪರ್ಧೆಯ ತೀರ್ಪುಗಾರರಾಗಿ ಶ್ರೀಮತಿ ಶೈಲಜಾ ದೇಸಾಯಿ,ಶ್ರೀಮತಿ ಸಹನಾ ಭಾರದ್ವಾಜ್, ವ್ರಜೇಶ್ ಆನಂದ್ ಭಾಗವಹಿಸಿದರು

.ಇದೇ ಸಂದರ್ಭದಲ್ಲಿ ಕನ್ನಡ ನಾಡಿನ ಖ್ಯಾತ ಸಂಘಟಕರು,ಕೇಂದ್ರ ಸಂಗೀತ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶ್ರೀನಿವಾಸ ಜಿ.ಕಪ್ಪಣ್ಣ ದಂಪತಿ ಅವರನ್ನು ಸನ್ಮಾನಿಸಲಾಯಿತು.

.ಇದೇಸಂದರ್ಭದಲ್ಲಿ .ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಮುಂಬಯಿ ಕನ್ನಡಿಗರ ಕನ್ನಡ ಸಂಘ ಸಂಸ್ಥೆಗಳಿಗಾಗಿ ಸಮೂಹ ನೃತ್ಯ ಸ್ಪರ್ಧೆ ಆಯೋಜಿಸುತ್ತಿದ್ದು 15 ತಂಡಗಳು ಪಾಲ್ಗೊಂಡಿದ್ದು, ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕಿ ಸವಿತಾ ಗಣೇಶ್ ಪ್ರಸಾದ್ ಮತ್ತು ತಂಡದವರಿಂದ ಸವಿತಕ್ಕನ ಅಳ್ಳೀ ಬ್ಯಾಂಡ್ ಜಾನಪದ ಗಾಯನ – ವಾದನ ವೈವಿದ್ಯ ಕಾರ್ಯಕ್ರಮ ಕಿಕ್ಕಿರಿದ ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸಂಘದ ಅಧ್ಯಕ್ಷ ಎಂಎಂ ಕೋರಿ ಯವರು ಮಾತನಾಡುತ್ತಾ ನಮ್ಮ ಯೋಜನೆ ರೂಪಗೊಳ್ಳುತ್ತಿದ್ದಂತೆ ಕನ್ನಡಿಗರು ವಿವಿಧ ರೀತಿಯಲ್ಲಿ ಸಹಕಾರವನ್ನು ನೀಡುತ್ತಾ ಬಂದಿದ್ದಾರೆ ಇಂದು ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮಹನೀಯರೆಲ್ಲರೂ ನಮ್ಮ ಯೋಜನೆಗೆ ಸಹಕಾರ ನೀಡುತ್ತಾರೆ ಎಂಬ ಭರವಸೆಗಳನ್ನು ನೀಡಿದ್ದಾರೆ ,ಸಂಘದ ಬಹುಕೋಟಿ ವೆಚ್ಚದ ಭವನ ನಿರ್ಮಾಣ ಕಾರ್ಯ ವೇಗದಲ್ಲಿ ನಡೆಯುತ್ತಿದ್ದು ಇದು ಲೋಕಾರ್ಪಣೆಯಾಗಲು ಇನ್ನು ಬಹಳಷ್ಟು ದೇಣಿಗೆ ಗಳು ಹರಿದು ಬರಬೇಕು. ಅದಕ್ಕೆ ಕನ್ನಡಿಗರಾದ ತಾವೆಲ್ಲರೂ ತುಂಬು ಹೃದಯದಿಂದ ಸಹಕಾರವನ್ನು ನೀಡಬೇಕು ಎಂದು ವಿನಂತಿಸಿದರು.

ಸಂಘದ ಗೌರವ ಕೋಶಾಧಿಕಾರಿ ಓಂದಾಸ್ ಕಣ್ಣಂಗಾರ್ ಪ್ರಸ್ತಾ ವಿಕವಾಗಿ ಮಾತನಾಡುತ್ತಾ, ಮುಂಬಯಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ, ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘವು ತನ್ನ 90 ರ ಸಂಭ್ರಮವನ್ನು ಆಚರಿಸುವಂತಾಗಲು ತುಂಬಾ ಜನ ಹಿರಿಯರ ಯೋಗದಾನವಿದೆ. ಆ ಎಲ್ಲಾ ಮಹನೀಯರನ್ನು ಈ ಸಂದರ್ಭದಲ್ಲಿ ಅತ್ಯಂತ ವಿನೀತನಾಗಿ ನೆನಪಿಸುತ್ತಿದ್ದೇನೆ. ಸಂಘವು 90 ವರುಷಗಳಿಂದ ನಿರಂತರವಾಗಿ ಕನ್ನಡ ನಾಡು ನುಡಿ, ಕಲೆ,ಸಂಸ್ಕೃತಿ,ನೃತ್ಯ,ಸಂಗೀತ,ಸಾಹಿತ್ಯ,ನಾಟಕ,ಯಕ್ಷಗಾನ,ಶಿಕ್ಷಣ,ಆರೋಗ್ಯ ಮುಂತಾದವುಗಳ ಬಗ್ಗೆ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕ್ರಿಯಾಶೀಲವಾಗಿದೆ.ಕೋಟ್ಯಂತರ ಜನರ ಮತ್ತು ಕಲಾವಿದರ ಒಡಲ ಪ್ರೀತಿಯನ್ನು ತನ್ನ ಮಡಿಲಲ್ಲಿಟ್ಟು ಕೊಂಡು,ತಾನು ಬೆಳೆ ಯುದರೊಟ್ಟಿಗೆ ಕಲಾವಿದರನ್ನು ಬೆಳೆಸಿದ ಹಾಗೂ ಸಲುಹಿದ ಪ್ರೀತಿಗೆ ಪಾತ್ರವಾಗಿದೆ. ಸಂಘದ ವೇದಿಕೆಯು ಭಾರತ ರತ್ನ ಪಂಡಿತ್ ಭೀಮಸೇನ್ ಜೋಶಿ, ಪದ್ಮವಿಭೂಷಣ ಗಂಗೂಬಾಯಿ ಹಾನಗಲ್,ಮುಂತಾದ ಮೇರು ಕಲಾವಿದರ ಪಾದ ಸ್ಪರ್ಶದಿಂದ ಪಾವಿತ್ರ್ಯತೆ ಯನ್ನು ಹೊಂದಿದ್ದು,ತುಂಬಾ ಪ್ರತಿಷ್ಠೆಯನ್ನು ಪಡೆದಿದೆ. ಸಂಘವು ವಿಭಿನ್ನ ನೆಲೆಗಳಲ್ಲಿ ಮಾಡಿದ ಸಾಧನೆಯು ಗುರುತರವಾಗಿದ್ದು ಅಪಾರ ಜನ ಮನ್ನಣೆಯನ್ನು ಗಳಿಸಿದೆ. ಸಂಘದ ನೂತನ ಸಾಂಸ್ಕೃತಿಕ ಸಮುಚ್ಚಯದಲ್ಲಿ ಕರ್ನಾಟಕ ಮತ್ತು ಭಾರತೀಯ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಹಲವಾರು ಯೋಜನೆಗಳು ಒಳಗೊಂಡಿದೆ. ಇದನ್ನು ಆದಷ್ಟು ಬೇಗ ಪೂರ್ಣ ಗೊಳಿಸುವ ನಿಟ್ಟಿನಲ್ಲಿ ಸಮಿತಿಯು ಕಾರ್ಯ ನಿರತವಾಗಿದ್ದು ಕನ್ನಡದ ಮನಸ್ಸುಗಳು ಮುಕ್ತ ಮನಸ್ಸಿನಿಂದ ಸ್ಪಂದಿಸಿಬೇಕು ಎಂದು ವಿನಂತಿಸಿ ಕೊಂಡರು.

Related Posts

Leave a Reply

Your email address will not be published.