Home Archive by category ರಾಜ್ಯ (Page 35)

ಬೇಲೂರು : ಮತದಾನದ ನಂತರ ವ್ಯಕ್ತಿಗೆ ಹೃದಯಘಾತ

ಬೇಲೂರು ತಾಲೂಕಿನ ಕೋಗಿಲೆ ಮನೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಚಿಕ್ಕೋಲೆ ಗ್ರಾಮದ ಮತಗಟ್ಟೆ ಸಂಖ್ಯೆ 211 ರಲ್ಲಿ ಮತದಾನ ಮಾಡಿದ ಜಯಣ್ಣ ಎಂಬುವ 48 ವರ್ಷದ ವ್ಯಕ್ತಿ ಮತದಾನದ ನಂತರ ಮತದಾನ ಕೇಂದ್ರದ ಹೊರಗಡೆ ಹೃದಯಘಾತದಿಂದ ಮೃತಪಟ್ಟಿದ್ದಾರೆ

ಮತದಾನ ಮಾಡದವರಿಗೆ ರಾಜ್ಯದ ಕೆಲವು ಪ್ರವಾಸಿ ತಾಣಗಳ ಪ್ರವೇಶ ನಿರ್ಬಂಧ

ಮತದಾನ ಮಾಡದವರಿಗೆ ರಾಜ್ಯದ ಕೆಲವು ಪ್ರವಾಸಿ ತಾಣಗಳಲ್ಲಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಮತದಾನ ದಿನದ ಮೊದಲೇ ಕೆಲವು ಸ್ಥಳಗಳಲ್ಲಿ ಮೇ 10ರಂದು ಪ್ರವೇಶವಿಲ್ಲ ಎಂಬ ಬೋರ್ಡ್‌ ಲಗತ್ತಿಸಲಾಗಿದ್ದು, ಪ್ರಮುಖವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಬೆಳಗ್ಗೆಯಿಂದಲೇ ಇಲ್ಲಿ ಪ್ರವೇಶಕ್ಕೆ ಅವಕಾಶವಿರುವುದಿಲ್ಲ.ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತ, ಕುಪ್ಪಳ್ಳಿ ಯಲ್ಲಿರುವ ಕವಿಮನೆ, ಕುವೆಂಪು ಜನ್ಮಸ್ಥಳ,

ಮತ ಚಲಾಯಿಸಿದ ಬೆಳ್ತಂಗಡಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ

ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಅವರು ಗರ್ಡಾಡಿಯ ಸೈಂಟ್ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 123 ರಲ್ಲಿ ಮತ ಚಲಾಯಿಸಿದರು. ಪ್ರಜಾಪ್ರಭುತ್ವದ ಅತ್ಯಂತ ಪವಿತ್ರ ಹಬ್ಬ ಎಂದು ಕರೆಸಿಕೊಳ್ಳುವ ಮತದಾನ ಸಂಭ್ರಮದಲ್ಲಿ ಕ್ಷೇತ್ರದ ಎಲ್ಲಾ ಮತದಾರರು ಭಾಗಿಯಾಗಬೇಕೆಂದು ಮನವಿ ಮಾಡಿದರು.

ಮತ ಚಲಾಯಿಸಿದ ಗುರುರಾಜ ಗಂಟಿಹೊಳೆ

ಬೈಂದೂರು: ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಅವರು ಬುಧವಾರ ಬೆಳಗ್ಗೆ ಕಂಚಿಕಾನ್ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ತಮ್ಮ ಮತ ಚಲಾಯಿಸಿದರು.ಚುನಾವಣೆಗೆ ಟಿಕೆಟ್ ಘೋಷಣೆಯಾದ ದಿನದಿಂದಲೂ ಪ್ರಚಾರ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿದ್ದ ಗುರುರಾಜ್ ಗಂಟಿಹೊಳೆಯವರು ಬುಧವಾರ ಬೆಳಗ್ಗೆ ಮತಗಟ್ಟೆಗೆ ಆಗಮಿಸಿ ತಮ್ಮ ಮತ ಚಲಾಯಿಸುವ ಮೂಲಕ ಪ್ರಾಥಮಿಕ ಕರ್ತವ್ಯವನ್ನು ನೆರವೇರಿಸಿದರು.ಸಾಮಾನ್ಯರಲ್ಲಿ ಸಾಮಾನ್ಯರಂತೆ ಬಂದು ಮತ ಚಲಾಯಿಸಿ, ಅನಂತರ ಕೈ ಬೆರಳಿನ

ಉಡುಪಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಮತದಾನ 

ಉಡುಪಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಅವರು ಬೆಳ್ಳಗ್ಗೆ ತನ್ನ ಪತ್ನಿ ಹಾಗೂ ಸಹೋದರಿ ಜೊತೆಗೆ ಅಗಮಿಸಿ ಬಡಾನಿಡಿಯೂರು ಸನ್ಯಾಸಿ ಮಠದ ಬಳಿಯಿರುವ ಬೂತ್ ನಂಬರ್ 97 ರಲ್ಲಿ ಮತ ಚಾಲಾಯಿಸಿದ್ದಾರೆ.

ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳಿಂದ ಮತದಾನ

ಉಡುಪಿ ಜಿಲ್ಲೆಯ ಐದು ವಿಧಾನ ಸಭಾ ಕ್ಷೇತ್ರಗಳಲ್ಲಿ ಇಂದು ಬೆಳಗ್ಗೆಯಿಂದ ಮತದಾನ ಆರಂಭಗೊಂಡಿತು. ಮತದಾರರು ಬೆಳಗ್ಗೆಯೇ ಮತಗಟ್ಟೆಗಳಿಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಹೆಚ್ಚಿನ ಮತಗಟ್ಟೆಗಳ ಮುಂದೆ ಮತದಾರರ ಸಾಲುಗಟ್ಟಿ ನಿಂತಿರುವುದು ಕಂಡುಬಂತು. ಯಾವುದೇ ಆಹಿತಕರ ಘಟನೆ ನಡೆಯದಂತೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಕಾಪು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯಕುಮಾರ್ ಸೊರಕೆ ಉಡುಪಿಯ ಬಾಲಕಿಯರ ಪದವಿ ಪೂರ್ವ

ರಾಜ್ಯಾದ್ಯಂತ ಮತದಾನ ಪ್ರಾರಂಭ

 ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳ ಚುನಾವಣೆಗೆ ರಾಜ್ಯಾದ್ಯಂತ ಮತದಾನ ಪ್ರಾರಂಭವಾಗಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6ಗಂಟೆಯ ವರೆಗೆ 37,777 ಸ್ಥಳಗಳಲ್ಲಿ ಒಟ್ಟು 58,545 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, ಈಗಾಗಲೇ ಮತಗಟ್ಟೆಗಳಲ್ಲಿ ಮತದಾನ ಆರಂಭವಾಗಿದೆ. ಕೆಲವು ಮತಗಟ್ಟೆಗಳ ಮುಂದೆ ಬೆಳಗ್ಗೆಯೇ ಮತದಾರರು ಸಾಲುಗಟ್ಟಿರುವುದು ಕಂಡು ಬಂದಿದ್ದು, ಈ ಬಾರಿಯ ಮಾದರಿ ಮತಗಟ್ಟೆಗಳು ಮತದಾರರನ್ನು ಕೈಬೀಸಿ ಸೆಳೆಯುವಂತಿದೆ. ಇನ್ನು ರಾಜ್ಯದ ಒಟ್ಟು

ಬಂಟ್ವಾಳ : ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಮತಯಾಚನೆ

ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಬಂಟ್ವಾಳ ಬೈಪಾಸ್ ಜಂಕ್ಷನ್ ನಿಂದ ಕಾಲ್ನಡಿಗೆಯಲ್ಲಿ ಬಂಟ್ವಾಳ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬಂಟ್ವಾಳ ಪೇಟೆಯಲ್ಲಿ ಅಂಗಡಿಗಳಿಗೆ ತೆರಳಿ ಮತಯಾಚನೆ ನಡೆಸಿದರು. ಬಳಿಕ ಮಾತನಾಡಿದ ಅವರು ಗೌರವಯುತವಾದ ಮತ್ತು ಶಾಂತಿಯುತ ಬದುಕಿಗಾಗಿ ಬಂಟ್ವಾಳದಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಬಂಟ್ವಾಳ ಕ್ಷೇತ್ರದಲ್ಲಿ 2 ಸಾವಿರಕ್ಕಿಂತಲೂ ಅಧಿಕ ಅನುದಾನದ ಮೂಲಕ ಸರ್ವ ವ್ಯಾಪಿ ಮತ್ತು

ಸುಳ್ಳು ಭರವಸೆಯನ್ನು ಕೊಡುವುದಿಲ್ಲ, ಕೊಟ್ಟ ಮಾತಿಗೆ ತಪ್ಪಲಾರೆ : ಅಶೋಕ್ ಕುಮಾರ್ ರೈ

ಪುತ್ತೂರು: ಚುನಾವಣೆಗೆ ಸ್ಪರ್ದಿಸುತ್ತಿದ್ದೇನೆ ವೋಟು ಸಿಗಬೇಕು ಎಂದು ಜನತೆಗೆ ಸುಳ್ಳು ಭರವಸೆಯನ್ನು ಕೊಡುವುದಿಲ್ಲ ಮತ್ತು ಮಾತು ಕೊಟ್ಟಿದ್ದರೆ ಅದಕ್ಕೆ ತಪ್ಪಿ ನಡೆಯಲಾರೆ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈಯವರು ಹೇಳಿದರು. ಮಾಣಿಲ ಗ್ರಾಮದ ವಿವಿಧ ದಲಿತ ಕಾಲೊನಿಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಕಾಲನಿಯ ನಿವಾಸಿಗಳು ತಮ್ಮ ಸಮಸ್ಯೆಗಳನ್ನು ಅಶೋಕ್ ರೈ ಬಳಿ ಹೇಳಿಕೊಂಡರು. ಕಳೆದ ಹಲವು ವರ್ಷಗಳಿಂದ ನಾವು ಮನೆ ಮಾಡಿಕೊಂಡಿದ್ದು