ಪೊಲೀಸರ ಮೇಲೆ ಲೋಕಾಯುಕ್ತಕ್ಕೆ ದೂರು ನೀಡಿ ಭ್ರಷ್ಟಾಚಾರ ಆರೋಪ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆ ಮತ್ತು ನಿಖರ, ಪ್ರಾಮಾಣಿಕ ಮಾಹಿತಿಯೊಂದಿಗೆ ದೂರು ನೀಡಿದಲ್ಲಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆಲೋಕ್ ಕುಮಾರ್ ಹೇಳಿದ್ದಾರೆ.ಮಂಗಳೂರು ಪೊಲೀಸ್ ಆಯುಕ್ತರ ವಿರುದ್ಧ
ಇಕ್ಕಟ್ಟಾದ ಕಟಪಾಡಿ ಪೇಟೆಭಾಗದಲ್ಲಿ ಹೆದ್ದಾರಿ ದುರಸ್ಥಿ ಕಾರ್ಯ ಹಗಲಲ್ಲೇ ನಡೆಸಿದ್ದರ ಪರಿಣಾಮ ಮೈಲುದ್ಧ ವಾಹನಗಳು ಬ್ಲಾಕ್ ಆಗಿ ಪ್ರಯಾಣಿಕರು ಸಂಕಷ್ಟ ಅನುಭವಿಸುವಂತ್ತಾಗಿದೆ. ಬ್ಲಾಕ್‍ನಲ್ಲಿ ಅಗ್ನಿಶಾಮಕ ವಾಹನ ಕೂಡಾ ಸಿಲುಕಿಕೊಂಡಿತ್ತು. ಈ ದಿನ ಬಹಳಷ್ಟು ಕಾರ್ಯಕ್ರಮಗಳು ಇದ್ದು ವಾಹನ ದಟ್ಟಣೆ ಅತಿಯಾಗಿದ್ದು ಹೆದ್ದಾರಿ ಇಲಾಖಾ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ. ಕಟಪಾಡಿ ಪೇಟೆಯಲ್ಲಿ ಅಂಡರ್ ಪಾಸ್ ಬೇಡಿಕೆ ಇದ್ದರೂ ಜನಪ್ರತಿನಿಧಿಗಳ
ಹಿಮಾಲಯದಲ್ಲಿ ವಾಸಿಸುತ್ತಿರುವ ನಾಥ ಸಂಪ್ರದಾಯದ ಅವಧೂತ ಮಹಾಸಭಾದ ಬಾಬಾ ಶ್ರೀ ಸೋಮರನಾಥ ಬಾಬಜಿ ಇವರು ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗದ ಪೂರ್ವ ತಯಾರಿಯನ್ನು ನೋಡಿ ಈ ಮಹಾಕಾರ್ಯ ಆ ಶಿವನ ಪ್ರೇರಣೆ ಮತ್ತು ಅನುಗ್ರಹದಿಂದ ನೆರವೇರುತ್ತಿದೆ. ಶಿವನನ್ನು ಇಲ್ಲಿ ಭಜಿಸುವುದರಿಂದ ಈ ಪ್ರದೇಶ ಪಾವನ ತಾಣವಾಗಿ ಪರಿವರ್ತಿತವಾಗುತ್ತದೆ. ಅತಿರುದ್ರ ಮಹಾಯಾಗ ಯಶಸ್ವಿಯಾಗಲಿ, ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತಿರುವ ಈ
ಉಡುಪಿ: ನಿವೃತ್ತ ಪ್ರಾಂಶುಪಾಲ ಜಾನಪದ ವಿದ್ವಾಂಸ ಡಾ. ಗಣನಾಥ ಎಕ್ಕಾರು ಅವರಿಗೆ ಕರ್ನಾಟಕ ರಾಜ್ಯ ಯುವ ಸಂಘಟನೆಗಳ ಒಕ್ಕೂಟ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಜಯಪುರ ಇವರ ವತಿಯಿಂದ ರಾಜ್ಯ ಮಟ್ಟದ ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಜಯಪುರದ ಮುದ್ದೇಬಿಹಾಳದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಜಿ ಸಚಿವ ಸಿ.ಎಸ್. ನಾಡಗೌಡ ಅಪ್ಪಾಜಿಯವರು ಪ್ರಶಸ್ತಿ ಪ್ರದಾನ ಮಾಡಿದರು. ಕಾಲಜ್ಞಾನ ಮಠದ ಶ್ರೀ ಅಪ್ಪಯ್ಯ
ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22, 2023 ರಿಂದ ಮಾರ್ಚ್ 05, 2023 ರವರೆಗೆ ನಡೆಯಲಿರುವ ಅತಿರುದ್ರ ಮಹಾಯಾಗ ಪ್ರಯುಕ್ತ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಮತ್ತು ಅತಿರುದ್ರ ಮಹಾಯಾಗ ಸಮಿತಿ ವತಿಯಿಂದ ಫೆಬ್ರವರಿ 12, 2023 ರ ಭಾನುವಾರದಂದು ಮಣಿಪಾಲ ಸರಳೇಬೆಟ್ಟುವಿನ ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇಗುಲದ ಸನಿಹದಲ್ಲಿರುವ ಯಾಗ ಮಂಟಪದ ಬಳಿ “ಸಮರ್ಪಣಾ ದಿವಸ” ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಪುರುಷರ ಮತ್ತು ಮಹಿಳೆಯರ ಪವರ್ ಲಿಫ್ಟಿಂಗ್ ಸ್ಪರ್ಧೆಯು ಫೆಬ್ರವರಿ 11 ಮತ್ತು 12ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಮಿನಿ ಪುರಭವನದಲ್ಲಿ ಜರುಗಲಿದೆ ಎಂದು ದ.ಕ.ಜಿಲ್ಲಾ ಪವರ್ ಲಿಫ್ಟಿಂಗ್ ಎಸೋಸಿಯೇಶನ್ ಕಾರ್ಯದರ್ಶಿ ಮಧುಚಂದ್ರ ತಿಳಿಸಿದರು. ಅವರು ನಗರದ ಪ್ರೆಸ್ ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಮಂಗಳೂರು ಮಹಾನಗರಪಾಲಿಕೆ ಸಹಯೋಗದೊಂದಿಗೆ ಮೇಯರ್ ಕಪ್ ಪ್ರಶಸ್ತಿ ಸ್ಪರ್ಧೆ ಮಂಗಳೂರು ಬಾಲಾಂಜನೇಯ
ಮಣಿಪಾಲ ಸರಳೆಬೆಟ್ಟುವಿನ ಶಿವಪಾಡಿಯಲ್ಲಿರುವ ಶ್ರೀ ಉಮಾಮಹೇಶ್ವರ ದೇಗುಲದಲ್ಲಿ ಫೆಬ್ರವರಿ 22, 2023 ರಿಂದ ಮಾರ್ಚ್ 05, 2023 ರವರೆಗೆ ಲೋಕಕಲ್ಯಾಣಕ್ಕಾಗಿ ನಡೆಯಲಿರುವ “ಅತಿರುದ್ರ ಮಹಾಯಾಗ” ಪ್ರಯುಕ್ತ ದೇವಸ್ಥಾನದಲ್ಲಿ ಹಲವಾರು ಕಾರ್ಯಕ್ರಮಗಳೊಂದಿಗೆ ಅತಿರುದ್ರ ಮಹಾಯಾಗಕ್ಕೆ ಸಾಕಷ್ಟು ತಯಾರಿಗಳು ಬಿಡುವಿಲ್ಲದೆ ನಡೆಯುತ್ತಿವೆ. ಈಗಾಗಲೇ ಉಡುಪಿ ತಾಲೂಕು ಮಟ್ಟದ ಪುಟಾಣಿಗಳ ಚಿತ್ರಕಲಾ ಪ್ರತಿಭೆಯನ್ನು ಗುರುತಿಸಲು “ಶಿವ ಚಿತ್ತಾರ”
ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್, ಶಿವಪಾಡಿ ಮತ್ತು ಅತಿರುದ್ರ ಮಹಾಯಾಗ ಸಮಿತಿ ವತಿಯಿಂದ ಶಿವಪಾಡಿಯಲ್ಲಿ ಶಿವೋತ್ಸವ. ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಅತಿರುದ್ರ ಮಹಾಯಾಗದ ಪ್ರಯುಕ್ತ ಉಡುಪಿ ಜಿಲ್ಲಾ ಮಟ್ಟದ ಪುಟಾಣಿಗಳಿಗಾಗಿ “ಶಿವೋತ್ಸವ ಬಾಲಶಿವ” ಎಂಬ ವೇಷಭೂಷಣ ಸ್ಪರ್ಧೆಯನ್ನು ಫೆಬ್ರವರಿ 12, 2023 ರ ಭಾನುವಾರದಂದು ಮಣಿಪಾಲದ ಸರಳೇಬೆಟ್ಟುವಿನ ಶಿವಪಾಡಿಯಲ್ಲಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ
ಶಿವಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಫೆಬ್ರವರಿ 22, ಬುಧವಾರದಿಂದ ಆರಂಭಿಸಿ ಮಾರ್ಚ್ 05 ರವಿವಾರ ಪರ್ಯಂತವಾಗಿ ಸಂಪನ್ನಗೊಳ್ಳಲಿರುವ ಅತಿರುದ್ರ ಮಹಾಯಾಗದ ಆಮಂತ್ರಣ ಪತ್ರಿಕೆಯನ್ನು ಫೆಬ್ರವರಿ 6, 2023 ರ ಸೋಮವಾರದಂದು ಶ್ರೀ ಶೃಂಗೇರಿ ಶಾರದಾಪೀಠದಲ್ಲಿ ಶ್ರೀಮಜ್ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ಅಮೃತ ಹಸ್ತದಿಂದ ಬಿಡುಗಡೆಗೊಳಿಸಲಾಯಿತು. ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದ ಶ್ರೀಪಾದಂಗಳವರು, ಲೋಕ ಕಲ್ಯಾಣಾರ್ಥವಾಗಿ
ಉಡುಪಿ : ದೇವರನ್ನು ಯಾವುದೇ ರೂಪದಲ್ಲಿಯೂ ಭಕ್ತಿಯನ್ನು ಮಾಡಬಹುದು. ನಿಷ್ಕಲ್ಮಶ ಮನಸ್ಸಿನಿಂದ ಪರಿಶುದ್ಧವಾದ ಪ್ರೀತಿಯಿಂದ ಆ ಪರಶಿವನಿಗೆ ಏನೇ ಅರ್ಪಿಸಿದರೂ ಅದು ಭಕ್ತಿ ಎಂದಾಗುತ್ತದೆ ಎಂಬುದಕ್ಕೆ ಸಾಕ್ಷಿಯಾಯಿತು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆದ “ಶಿವ ಚಿತ್ತಾರ”. ಶಾಲಾ ಮಕ್ಕಳಲ್ಲಿ ಅಡಗಿರುವ ಕಲೆಯನ್ನು, ಸಕಲ ಕಲೆಗೆ ಮೂಲವಾಗಿರುವ ಶಿವನ ಮೂಲಕವೇ ಹೊರತರುವ ಒಂದೊಳ್ಳೆ ಕಲ್ಪನೆಯೇ “ಶಿವ ಚಿತ್ತಾರ”. ಪರಶಿವನ ಚಿತ್ರವನ್ನು



























