ಬೈಂದೂರ: ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಾಕೆರೆಯಲ್ಲಿ ಚಿರತೆಗಳು ಕಾಣಿಸಿಕೊಂಡಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಬಡಾಕೆರೆ ಗ್ರಾಮದ ಆಚಾರಬೆಟ್ಟು ಎಂಬಲ್ಲಿ ನಿನ್ನೆ ರಾತ್ರಿ ಸುಮಾರು 8.30ರ ಹೊತ್ತಿಗೆ ಚಿರತೆ ರಸ್ತೆಯಲ್ಲಿ ಓಡಾಡುತ್ತಿರುವುದು ವಾಹನ ಸವಾರರು ಗಮನಿಸಿ ಚಿತ್ರ ಸಹಿತ ಸರೆಹಿಡಿದ್ದಾರೆ.ಕೆಲವು ದಿನಗಳಿಂದ ಆಚಾರಬೆಟ್ಟು
ಪಡುಬಿದ್ರಿ ಪಡುಹಿತ್ಲು ಜಾರಂದಾಯ ಬಂಟ ದೈವಸ್ಥಾನಕ್ಕೆ ಊರ ಪರವೂರ ಭಕ್ತಾಧಿಗಳು ನೀಡಿದ ಸುಮಾರು 60ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಖಡ್ಸಲೆ ಹಾಗೂ ಬೃಹತ್ ಕಾಲು ದೀಪವನ್ನು ಅದ್ಧೂರಿಯಾಗಿ ನೂರಾರು ಮಂದಿ ಭಕ್ತರು ಸೇರಿದ ಮೆರವಣಿಗೆಯಲ್ಲಿ ಶ್ರೀಕ್ಷೇತ್ರಕ್ಕೆ ಅರ್ಪಿಸಲಾಯಿತು. ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಧಾನದಿಂದ ಹೊರಟ ಭವ್ಯ ಮೆರವಣಿಗೆಯಲ್ಲಿ ಅವಳಿ ಕುದುರೆಗಳು, ಭಜನಾ ಕುಣಿತ, ಕುದುರೆ ರಥ, ಚೆಂಡೆ, ವಾದ್ಯ ವಾದನ ಮುಂತಾದವುಗಳು ಗಮನ ಸೆಳೆದವು. ಈ ಬಗ್ಗೆ
ಪಡುಬಿದ್ರಿಯ ಠಾಣಾ ವ್ಯಾಪ್ತಿಯ ರಾ.ಹೆದ್ದಾರಿಯಲ್ಲಿ ರಾತ್ರಿ ಹೊತ್ತು ಒಬ್ಬಂಟಿಗಳಾಗಿ ನಡೆದುಕೊಂಡು ಹೋಗುತ್ತಿದ್ದ ಆಂಧ್ರದ ನೆಲ್ಲೂರು ನಿವಾಸಿ ಹನು (29) ಎಂಬ ಯುವತಿಯನ್ನು ಸಮಾಜ ಸೇವಕ ವಿಶುಶೆಟ್ಟಿ ಅವರು ಸ್ಥಳೀಯ ಪೊಲೀಸರ ಸಹಾಯದಿಂದ ರಕ್ಷಿಸಿ ಚಿಕಿತ್ಸೆಗಾಗಿ ಉಡುಪಿಯ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಾನು ನಡೆದುಕೊಂಡೇ ತನ್ನೂರನ್ನು ಸೇರುತ್ತೇನೆ ಎಂದು ಮೊಂಡು ಹಠ ಮಾಡಿದ ಯುವತಿಯನ್ನು ಉಡುಪಿಯ ಸಖಿ ಸೆಂಟರ್‍ಗೆ ದಾಖಲಿಸಲು ಅವರು
ಸ್ವಾಮಿ ವಿವೇಕಾನಂದ ಜಯಂತಿಯ ಪ್ರಯುಕ್ತ ಜನವರಿ 12ರ ಗುರುವಾರದಂದು ಭಾರತ ಸೇವಾದಳ ಉಡುಪಿ ಜಿಲ್ಲಾ ಸಮಿತಿಯ ನೇತ್ರತ್ವದಲ್ಲಿ, ಮತ್ತು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗು ರಜತೋತ್ಸವ ಸಮಿತಿಯ ಸಹಯೋಗದೊಂದಿಗೆ ಜಿಲ್ಲೆಯ ಎಲ್ಲಾ 1096 ಸರಕಾರೀ, ಅನುದಾನಿತ ಮತ್ತು ಖಾಸಗಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಸುಮಾರು 1,60,000 ಶಾಲಾ ಮಕ್ಕಳಿಂದ ಏಕಕಾಲದಲ್ಲಿ ಆಯಾಯ ಶಾಲೆಗಳ ಅಕ್ಕ ಪಕ್ಕದ ವಠಾರದಲ್ಲಿ “ಸ್ವಚ್ಛ
ಕೋಟೇಶ್ವರದ ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನ ಬಳಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಲಕ್ಷಾಂತರ ಮೌಲ್ಯದ ಎರಡು ಫ್ಯಾನ್ಸಿ ಸ್ಟೋರ್ ಭಸ್ಮವಾಗಿದೆ. ಬಟ್ಟೆಯಂಗಡಿ, ವಾಸದ ಮನೆ ಭಾಗಶಃ ಸುಟ್ಟು ಹೋಗಿದೆ. ಕೋಟೇಶ್ವರ ಶಿವರಾಮ ಪೂಜಾರಿ ಎಂಬರಿಗೆ ಸೇರಿದ ವಾಣಿಜ್ಯ ಸಂಕೀರ್ಣದ ಕೆಳ ಅಂತಸ್ತಿನಲ್ಲಿ ಬಾಡಿಗೆಗಿದ್ದ ಸುಧಾಕರ ಜೋಗಿ ಎಂಬವರ ಮಹಾಲಕ್ಷ್ಮೀ ಕಂಗನ್ ಎರಡು ಶಾಪ್, ಸುಧಾಕರ ಜೋಗಿ ಅಂಗಡಿ ತಾಗಿಕೊಂಡಿದ್ದ ರಾಜೀವ ಶೆಟ್ಟಿ ಎಂಬವರ ರೆಡಿಮೇಡ್ ಬಟ್ಟೆ ಹಾಗೂ ಟೈಲರಿಂಗ್ ಶ್ಯಾಪ್,
ಬೈಂದೂರು ತಾಲೂಕಿನಲ್ಲಿ ಸರ್ಕಾರಿ ಆಸ್ಪತ್ರೆ ಮಂಜೂರಿಗಾಗಿ ಆಗ್ರಹಿಸಿ ಕಾರ್ಡ್ ಚಲೋ ಚಳುವಳಿಯನ್ನು ಆರಂಭಿಸಿದ್ದಾರೆ. ವಕೀಲರಾದ ಧನಂಜಯ ಶೆಟ್ಟಿ ಶಿರೂರು ಮತ್ತು ಬೈಂದೂರು ನಾಗರಿಕ ಸೇವಾ ವೇದಿಕೆಯ ಅಧ್ಯಕ್ಷರಾದ ಅಶ್ವಥ್ ನಾರಾಯಣ ಅವರು ಶೀಘ್ರದಲ್ಲೇ ಆಸ್ಪತ್ರೆ ಮಂಜೂರುಗೊಳಿಸುವಂತೆ ಒತ್ತಾಯಿಸಿದ್ದಾರೆ. ಬೈಂದೂರು ತಾಲೂಕು ಕೇಂದ್ರದಲ್ಲಿ ನೂರು ಹಾಸಿಗೆಗಳ ಆಸ್ಪತ್ರೆಯಲ್ಲಿ ಚುನಾವಣೆ ಮೊದಲೇ ಮಂಜೂರು ಮಾಡಬೇಕು ಇಲ್ಲವಾದಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ
ಮಣಿಪಾಲ, 7ನೇ ಜನವರಿ 23:2023 ರ ಜನವರಿ 7 ಮತ್ತು 8 ರಂದು ಮಣಿಪಾಲದ ಫಾರ್ಚೂನ್ ಇನ್ ವ್ಯಾಲಿ ವ್ಯೂನಲ್ಲಿ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಮಣಿಪಾಲ, ಜಾಗತಿಕ ಕ್ಯಾನ್ಸರ್ ಒಕ್ಕೂಟ ಮತ್ತು ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರಗಳು ಜಂಟಿಯಾಗಿ ಎರಡನೇ ಅಂತರರಾಷ್ಟ್ರೀಯ ಗ್ಲೋಬಲ್ ಕ್ಯಾನ್ಸರ್ ಕನ್ಸೋರ್ಟಿಯಂ ಸಮ್ಮೇಳನವನ್ನು ಆಯೋಜಿಸಿದೆ. ಸಮ್ಮೇಳನದಲ್ಲಿ 200 ಕ್ಕೂ ಹೆಚ್ಚು ದೇಶ ವಿದೇಶಗಳ ಪ್ರತಿನಿಧಿಗಳು ಮತ್ತು ಸಂಪನ್ಮೂಲ ವ್ಯಕಿಗಳು ಭಾಗವಹಿಸಿದ್ದಾರೆ.
ಬೈಂದೂರಿನ ಬಾಳಿಕೆರಿ ದೇವಲ್ಕುಂದ ಹೊಸಿ ಹೈಗುಳಿ ಚಿಕ್ಕು ಸಹಪರಿವಾರಗಳ ದೈವಸ್ಥಾನದಲ್ಲಿ ಹಾಲುಹಬ್ಬದ ಪ್ರಯುಕ್ತ ದಿ.ಅಕ್ಕಯ್ಯ ಶೆಡ್ತಿ ಮಕ್ಕಳು ಸೊಸೆ, ಮೊಮ್ಮಕ್ಕಳು ಜನ್ನಾಲ್ ಗೋಳಿಮನೆ ಕಬೈಲ್ಮನೆ ಇವರ ವತಿಯಿಂದ ಜನವರಿ 25ರಂದು ಕಾಲಮಿತಿ ಯಕ್ಷಗಾನ ಬೈಲಾಟ ನಡೆಯಲಿದೆ. ರಾತ್ರಿ 7.30ರಿಂದ ಬೆಂಕಿನಾಥೇಶ್ವರ ದಶಾವತರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಬಾಳ ಕಳವಾರು ಮಂಗಳೂರು ಇವರಿಂದ ಯಕ್ಷಗಾನ ಬಯಲಾಟ ದೈವ ಭಕ್ತಿ ಸಾರುವ ಸೂಪರ್ ಹಿಟ್ ಕಥಾನಕ ಸತ್ಯದ ಸ್ವಾಮಿ ಕೊರಗಜ್ಜ
ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ವತ್ತಿನಣಿ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿರುವ ಅರಣ್ಯ ಇಲಾಖೆ ಗೆ ಸಂಬಂಧಿಸಿದ ಪ್ಲಾಂಟೇಶನಿಗೆ ಬೆಂಕಿ ತಗುಲಿದ್ದು, ಧಗ ಧಗನೆ ಬೆಂಕಿ ಹೊತ್ತಿ ಉರಿಯಲಾರಂಭಿಸಿತು. ತಕ್ಷಣ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದು, ಅಗ್ನಿಶಾಮಕ ದಳದವರು ಮತ್ತು ಸ್ಥಳೀಯರು ಬೆಂಕಿ ನಂದಿಸುವಲ್ಲಿ ಹರಸಾಹಸ ಪಟ್ಟರು.
ಉಡುಪಿ ಜಿಲ್ಲೆ, ಕುಂದಾಪುರ ತಾಲೂಕು 76 ಹಾಲಾಡಿಯ ಹುಯ್ಯಾರುವಿನಲ್ಲಿ ಅತಿ ವಿರಳ ಎನ್ನಬಹುದಾದ ಶಾಸನ ಪತ್ತೆಯಾಗಿದೆ. ಹುಯ್ಯಾರು ಪಟೇಲ್ ದಿ.ಹಿರಿಯಣ್ಣ ಶೆಟ್ಟಿ ಕುಟುಂಬಿಕರ ಜಾಗದಲ್ಲಿ ಈ ಶಾಸನವಿದೆ. ಸುಮಾರು 10 ಅಡಿ ಎತ್ತರ, ೫ ಅಡಿ ಅಗಲ ಮತ್ತು ೩.೫ ಇಂಚು ದಪ್ಪ ಗ್ರಾನೈಟ್ ಶಿಲೆಯಲ್ಲಿ ಶಾಸನವನ್ನು ರಚಿಸಲಾಗಿದೆ. ಆಯತಾಕಾರದ ರಚನೆಯನ್ನು ಹೊಂದಿರುವ ಇದರ ಮೇಲ್ಭಾಗವನ್ನು ಕೋನಾಕೃತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಶಾಸನವನ್ನು ಎರಡು ಪಟ್ಟಿಕೆಗಳನ್ನಾಗಿ




























