ಬೈಂದೂರು: ವಿದ್ಯುತ್ ಟ್ರಾನ್ಸ್‌ಫಾರ್ಮರ್ ರಿಪೇರಿ ಮಾಡುವ ವೇಳೆ ವಿದ್ಯುತ್ ಶಾಕ್ ತಗುಲಿ ಲೈನ್‌ಮ್ಯಾನ್ ಮೃತಪಟ್ಟ ಘಟನೆ ಸೋಮವಾರ ಬೈಂದೂರಿನಲ್ಲಿ ನಡೆದಿದೆ. ಸೋಮವಾರ ಮದ್ಯಾಹ್ನ ತಗ್ಗರ್ಸೆ ಗ್ರಾಮದ ಹೆಗ್ಗೇರಿಯಲ್ಲಿ ಟ್ರಾನ್ಸ್‌ಫಾರ್ಮರ್ ಬಳಿ ವಿದ್ಯುತ್ ಸಂಪರ್ಕ ರಿಪೇರಿ ಮಾಡುವ ವೇಳೆ ಈ ದುರ್ಘಟನೆ ನಡೆದಿದೆ. ಸಲೀಂ (38) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರು
ಕರ್ನಾಟಕ ವಿಧಾನ ಪರಿಷತ್ ನ ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನ ಇಂದು ನಡೆಯುತ್ತಿದೆ. ಖ್ಯಾತ ವೈದ್ಯರಾದ ಡಾ. ನರೇಶ್ಚಂದ್ ಹೆಗ್ಡೆ ಹೆಬ್ರಿಬೀಡು ಅವರು ಸ್ಪರ್ಧಿಸುತ್ತಿದ್ದು, ಉತ್ತಮ ಪ್ರಚಾರವನ್ನು ಮಾಡಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಡಾ. ನರೇಶ್ಚಂದ್ ಹೆಗ್ಡೆ ಹೆಬ್ರಿಬೀಡು ಅವರು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ, ಅಲ್ಲಿನ ಶಿಕ್ಷಕರನ್ನು ಭೇಟಿಯಾಗಿ ಅವರೊಂದಿಗೆ ಚರ್ಚಿಸಿ,
ದರೋಡೆಗೆ ಹೊಂಚು ಹಾಕಿ, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸ್ಕಾರ್ಫಿಯೋ ಕಾರಿನಲ್ಲಿ ಸಂಚರಿಸುತ್ತಿದ್ದ ತಂಡವೊಂದನ್ನು ಕಾಪು ಪೊಲೀಸರು ಶನಿವಾರ ರಾತ್ರಿ ಬಂದಿಸಿದ್ದಾರೆ. ರಾ.ಹೆ.66ರ ಕೋತಲಕಟ್ಟೆ ಬಳಿ ಸ್ಕಾರ್ಪಿಯೋ ಕಾರಿಗೆ ತಡೆಯೊಡ್ಡಿದ ಪೊಲೀಸರು ಆರೋಪಿಗಳಾದ ಅಮಿತ್ ರಾಜ್, ಪ್ರಕಾಶ್ ಸುರತ್ಕಲ್, ವರುಣ್ ನೀರುಮಾರ್ಗ, ಕಾರ್ತಿಕ್ ಶೆಟ್ಟಿ ಸುರತ್ಕಲ್, ಅಭಿಷೇಕ್, ಶ್ರೀಕಾಂತ್ ಶ್ರೀಪತಿ ಪರಂಗಿಪೇಟೆ ಎಂಬವರನ್ನು ಬಂದಿಸಿದ್ದಾರೆ. ಇವರಲ್ಲಿ ಕೆಲವರು ಬೇರೆ ಬೇರೆ
ಬ್ರಹ್ಮಾವರ: ಬ್ರಹ್ಮಾವರ ರೋಟರಿ ಕ್ಲಬ್, ಕೃಷಿ ವಿಜ್ಞಾನ ಕೇಂದ್ರ ಮತ್ತು ನಾನಾ ಸಂಘ ಸಂಸ್ಥೆಯವರ ಸಹಕಾರದಲ್ಲಿ ಎಸ್‌ಎಂಎಸ್ ಸಮುದಾಯ ಭವನದಲ್ಲಿ ಹಲಸು ಮತ್ತು ಹಣ್ಣು ಮೇಳಕ್ಕೆ ಚಾಲನೆ ನೀಡಲಾಯಿತು. ಹಲಸು ಮತ್ತು ಹಣ್ಣು ಮೇಳ 2024 ಕಾರ್ಯಕ್ರಮವನ್ನು ನಿಯೋಜಿತ ರೋಟರಿ ಜಿಲ್ಲಾ ಗವರ್ನರ್ ಬಿ ಎಂ ಭಟ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ನಿಸರ್ಗದತ್ತ ಆಹಾರವಾದ ಹಲಸು ಮಾತ್ರ ರಾಸಾಯನಿಕ ರಹಿತವಾಗಿರುವ ಹಣ್ಣು. ಗ್ರಾಮೀಣ ಭಾಗದ ಹಲವಾರು ಹಣ್ಣುಗಳಿಗೆ ಸೂಕ್ತ
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸುತ್ತಿಲ್ಲ. ಅಲ್ಟ್ರಾ ಎಕ್ಸ್ಟ್ರೀಮ್ ಎಡಪಂಥೀಯರು ಆಡಳಿತ ನಡೆಸುತ್ತಿದ್ದಾರೆ. ರಾಜ್ಯ ಶಿಕ್ಷಣ ನೀತಿ ಅನುಷ್ಠಾನ ಸಮಿತಿಯಲ್ಲಿ ಹಿಂದು ವಿರೋಧಿಗಳನ್ನೇ ತುಂಬಿಸಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಆರೋಪಿಸಿದ್ದಾರೆ. ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಉಡುಪಿಯ ಹೋಟೆಲ್ ಕಿದಿಯೂರಿನ ಮಾಧವ ಕೃಷ್ಣ ಸಭಾಂಗಣದಲ್ಲಿ ನೈರುತ್ಯ ಪದವೀಧರ ಕ್ಷೇತ್ರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದ
ಕೆಲ ಸಮಯದ ವಿರಾಮದ ಬಳಿಕ ಮತ್ತೆ ತಂಡಗಳ ಮಧ್ಯೆ ವಾಗ್ವಾದ ನಡೆದು ಚೂರಿಯಿಂದ ಇರಿದ ಘಟನೆ ತಡರಾತ್ರಿ ಪಡುಬಿದ್ರಿ ಪೇಟೆ ಸಮೀಪದ ದುರ್ಗಾ ಜುವ್ಯೆಲ್ಲರಿ ಬಳಿ ಸರ್ವಿಸ್ ರಸ್ತೆಯಲ್ಲಿ ನಡೆದಿದೆ.ಸೂರಜ್, ಶರತ್, ತನುಜ್, ಅನೀಷ್ ಆರೋಪಿಗಳು.ಚೂರಿ ಇರಿತಕ್ಕೊಳಗಾದವರು ಸುಜಿತ್, ಗಾಯಾಳುವಿನ ಸಹೋದರ ಅಜಿತ್ ಹಾಗೂ ಸ್ನೇಹಿತ ಕರಣ್ ರೊಂದಿಗೆ ಪಕ್ಕದ ಪ್ರಣವ್ ಎಂಬವರ ಹೋಟೆಲ್ ಗೆ ಬಂದಿದ್ದು, ರಸ್ತೆಯಂಚಿನಲ್ಲಿ ಕಾರು ಇಲ್ಲಿಸಿದ್ದು , ಇನೋವ ಕಾರಿನಲ್ಲಿ ಸ್ಥಳಕ್ಕೆ ಬಂದ ಆರೋಪಿಗಳು
ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಡಾ. ನರೇಶ್ಚಂದ್ ಹೆಗ್ಡೆ ಅವರು ಸ್ಪರ್ಧಿಸುತ್ತಿದ್ದು ಅವರ ಪರವಾಗಿ ಉಡುಪಿಯಲ್ಲಿ ನಟ ಅರವಿಂದ ಬೋಳಾರ್ ಅವರು ಮತಪ್ರಚಾರ ಮಾಡಿದರು. ಶಿಕ್ಷಕರ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಲೆಂದು ವೈದ್ಯರಾದ ಡಾ. ನರೇಶ್ಚಂದ್ ಹೆಗ್ಡೆ ಅವರು ಸ್ಪರ್ಧಿಸುತ್ತಿದ್ದಾರೆ. ಅವರನ್ನು ಈ ಬಾರಿಯ ಪರಿಷತ್ ಚುನಾವಣೆಯಲ್ಲಿ ಗೆಲ್ಲಿಸಬೇಕೆಂದು ಹಲವಾರು ಮಂದಿ ಪಣತೊಟ್ಟಿದ್ದಾರೆ. ಡಾ.
ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಎಷ್ಟು ಅಕ್ರಮ ಕಟ್ಟಡಗಳಿವೆ, ಅಕ್ರಮ ಮಳಿಗೆಗಳಿವೆ ಎಂಬುದನ್ನು ಪಟ್ಟಿ ಮಾಡಿ ಕೊಡುತ್ತೇವೆ. ಇದನ್ನೇಲ್ಲಾ ಕೆಡವಲು ಒತ್ತಾಯಿಸಿ ಪ್ರತಿಭಟನೆ ನಡೆಸಲು ಯಶ್‌ಪಾಲ್ ಸುವರ್ಣ ಅವರು ತಯಾರಿದ್ದಾರೆಯೇ. ಈ ಬಗ್ಗೆ ಅವರು ಬಹಿರಂಗ ಚರ್ಚೆಗೆ ಸಿದ್ಧರಿದ್ದಾರೆಯೇ ಎಂದು ಎಸ್.ಡಿ.ಪಿ.ಐ ವಕ್ತಾರ ರಿಯಾಝ್ ಕಡಂಬು ಅವರು ಸವಾಲು ಹಾಕಿದ್ದಾರೆ. ಈ ಬಗ್ಗೆ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕ ಯಶ್ ಪಾಲ್ ಸುವರ್ಣ ಅವರು ಶಾಂತವಾಗಿರುವ
ಕಾಪುವಿನ ಕ್ರೆಸೆಂಟ್ ಇಂಟರ್ನಾ್ಯಷನಲ್ ಸ್ಕೂಲ್ ಎನ್‌ಎನ್‌ಒ ಪರ್ಯಾವರಣ ಸಂರಕ್ಷಣಾ ಸಮಿತಿ ವತಿಯಿಂದ ಪರಿಸರ ಉಳಿಸಿ – ಬೆಳೆಸುವ ಅಭಿಯಾನ ಪ್ರಯುಕ್ತ ಪರಿಸರ ಪ್ರಜ್ಞೆ ಬೆಳೆಸುವುದರ ಜತೆಗೆ ಪ್ರಕೃತಿ ಸಮತೋಲನ ಕಾಯ್ದುಕೊಂಡು ಉತ್ತಮ ಮಳೆ ಬೆಳೆ ಬರಲು ಸಹಾಯವಾಗುವಂತೆ ರಾಜ್ಯಾಧ್ಯಕ್ಷರಾದ ಶೈಖ್ ಅಬ್ದುಲ್ ವಾಹಿದ್ ಉಡುಪಿಯವರ ನೇತೃತ್ವದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸಂಘಟನಾ ಕಾರ್ಯದರ್ಶಿ ಹುಸೇನ್ ಹೈಕಾಡಿ ಸ್ವಾಗತಿಸಿದರು. ಕೇಂದ್ರ
ಇಂದು ನಸುಕಿನ ವೇಳೆ ಅತೀ ವೇಗವಾಗಿ ಬಂದ ಕಾರೊಂದು ಹೆದ್ದಾರಿ ಪಕ್ಕದ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಪರಿಣಾಮ ಕಾರು ತೀವೃ ಜಖಂ ಗೊಂಡಿದ್ದು ಕಾರಿನಲ್ಲಿದ್ದ ಇಬ್ಬರ ಸ್ಥಿತಿ ಗಂಭೀರವಾದರೆ ಮತ್ತಿಬ್ಬರಿಗೆ ತೀವೃ ಸ್ವರೂಪದ ಗಾಯಗಳಾಗಿದೆ. ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ನಾಲ್ವರು ಯುವಕರು ಪ್ರಯಾಣಿಸುತ್ತಿದ್ದ ಕಾರು ಕಾಪುವಿನ ಕೊಪ್ಪಲಂಗಡಿಯಲ್ಲಿ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯೊಡೆದಿದೆ. ಅಪಘಾತದ ತೀವ್ರತೆಗೆ ಕಾರು ಬಹುತೇಕ




























