Home ಕರಾವಳಿ Archive by category ಮಂಗಳೂರು (Page 148)

ದಾಮಸ್ ಕಟ್ಟೆಯ ಪೊಂಪೈ ಹಿರಿಯ ಪ್ರಾರ್ಥಮಿಕ ಶಾಲೆಯ ಹಿಂಭಾಗ ಇಳಿಜಾರು ಪ್ರದೇಶಕ್ಕೆ ಆಕಸ್ಮಿಕ ಬೆಂಕಿ

ಕಿನ್ನಿಗೋಳಿ: ಕಿನ್ನಿಗೋಳಿಸಮೀಪದ ದಮಸ್ ಕಟ್ಟೆ ಪೊಂಪೈ ಹಿರಿಯ ಪ್ರಾರ್ಥಮಿಕ ಶಾಲೆಯ ಹಿಂಭಾಗ ಇಳಿಜಾರು ಪ್ರದೇಶಕ್ಕೆ ಇಂದು ಮಧ್ಯಾಹ್ನದ ಹೊತ್ತಿಗೆ ಆಕಸ್ಮಿಕ ಬೆಂಕಿ ತಗುಲಿ ನಂದಿಸಲು ಸ್ಥಳೀಯರು ಹರಸಾಹಸ ಪಡೆಯಬೇಕಾಯಿತು.ಬೆಂಕಿಯ ಕೆನ್ನಾಲಿಗೆಯಿಂದ ಮರ ಗಿಡಗಳು ಬೆಂಕಿಗಾಹುತಿಯಾಗಿದ್ದು , ಕೂಡಲೇ ಕಾರ್ಯಪ್ರವೃತ್ತರದ ದಾಮಸ್ ಕಟ್ಟೆಯ ರೆಮೆದಿ ಅಮ್ಮ ನವರ ಇಗರ್ಜಿಯ

ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಚಂದ್ರ ಪೂಜಾರಿ : ನಿಸ್ವಾರ್ಥ ಹಾಗೂ ಪ್ರಾಮಾಣಿಕತೆಯ ಸೇವೆಗೆ ಅಭಿನಂದನೆ

ಮುಲ್ಕಿ: ಸರಕಾರಿ ಅಧಿಕಾರಿಯಾಗಿ ಮುಲ್ಕಿ ನಗರ ಪಂಚಾಯತ್ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಜನರ ಕುಂದು ಕೊರತೆ ಹಾಗೂ ಸ್ವಚ್ಛತೆ ಬಗ್ಗೆ ತಿಳುವಳಿಕೆ ಮೂಡಿಸಿ ಉತ್ತಮ ಕಾರ್ಯಗಳನ್ನು ನಡೆಸಿ ನಿಸ್ವಾರ್ಥ ಸೇವೆ ಹಾಗೂ ಪ್ರಾಮಾಣಿಕತೆ ಮೆರೆದ ಮುಖ್ಯಾಧಿಕಾರಿ ಚಂದ್ರ ಪೂಜಾರಿಯವರ ಜನಸೇವೆ ಅಭಿನಂದನೀಯ ಎಂದು ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತುತಜ್ಞ ಹಾಗೂ ವೈಜ್ಞಾನಿಕ ಜ್ಯೋತಿಷಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.ಅವರು ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿಯಾಗಿ

ಕೊಂಕಣಿ ಲೇಖಕ ಸಂಘದಿಂದ ಶ್ರೀಮತಿ ಐರಿನ್ ಪಿಂಟೊರವರಿಗೆ ಪ್ರಶಸ್ತಿ ಪ್ರದಾನ

ಖ್ಯಾತ ಲೇಖಕಿ ಶ್ರೀಮತಿ ಐರಿನ್ ಪಿಂಟೊ ಅವರಿಗೆ ಕೊಂಕಣಿ ಲೇಖಕ ಸಂಘ (ಕೆಎಲ್‌ಎಸ್) ಕೊಂಕಿಣಿ ಸಾಹಿತ್ಯ ಪ್ರಶಸ್ತಿ-೨೦೨೩ ನೀಡಿ ಗೌರವಿಸಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಫೆ. ೨೫ರ ಶನಿವಾರದಂದು ನಂತೂರು ಬಜ್ಜೋಡಿ ಸಂದೇಶ ಪ್ರತಿಷ್ಠಾನದ ಸಂದೇಶದಲ್ಲಿ ನಡೆಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ’ರಾಕ್ಣೊ’ ವಾರಪತ್ರಿಕೆಯ ಮಾಜಿ ಸಂಪಾದಕ ರೆ| ಫ್ರಾನ್ಸಿಸ್ ರೊಡ್ರಿಗಸ್ ಹಾಗೂ ಗೌರವ ಅತಿಥಿಯಾಗಿ ಕಾಸರಗೋಡು ಸರಕಾರಿ ಕಾಲೇಜು ಪ್ರೊ. ರಾಧಾಕೃಷ್ಣ ಬೆಳ್ಳೂರು

ಎರಡು ತಂಡಗಳ ಮಧ್ಯೆ ಹೊಡೆದಾಟ ದೂರು ಪ್ರತಿದೂರು

ಎರಡು ಯುವಕರ ತಂಡಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ನಡೆದ ಹೊಡೆದಾಟ ಮುಂದುವರಿದು ಒಂದು ತಂಡದಿಂದ ಜಾತಿ ನಿಂದನೆ ಪ್ರಕರಣ ದಾಖಲಾದರೆ ಮತ್ತೊಂದು ತಂಡ ಜೀವ ಬೆದರಿಕೆ ಪ್ರಕರಣ ದಾಖಲಿಸಿದೆ. ಸುಜ್ಲಾನ್ ಆರ್.ಆರ್. ಕಾಲೋನಿ ನಿವಾಸಿ ಉಮಾನಾಥ್ ಕೆ.ಆರ್. ಎಂಬವರ ಪುತ್ರ ಶಿವಪ್ರಕಾಶ್(19) ಎಂಬವರು ನೀಡಿದ ದೂರಿನಂತೆ ಆರೋಪಿಗಳಾದ ವಸಂತ್, ಬಾಲಕೃಷ್ಣ, ದಿವಾಕರ ಹಾಗೂ ರಾಕೇಶ್ ಎಂಬವರು, ಪರಿಶಿಷ್ಟ ಜಾತಿಗೆ ಸೇರಿದ ನಾನು ಪಡುಬಿದ್ರಿ ಬ್ರಹ್ಮಸ್ಥಾನದಲ್ಲಿ ನಡೆದ ಢಕ್ಕೆ ಬಲಿಗೆ

TRUE ಲವ್ NEVER END “ಇದರ ಮೊದಲ ಪೊಸ್ಟರ್ ಬಿಡುಗಡೆ

ನವೀನ್ ನೆರೋಳ್ತಡಿ ನಿರ್ದೇಶನದಲ್ಲಿ ಸಂತೋಷ್ ಮತ್ತು ನಯನ ಸಾಲ್ಯಾನ್ ಅಭಿನಯದಲ್ಲಿ ಮೂಡಿ ಬರಲಿರುವ ತುಳು ಆಲ್ಬಮ್ ಹಾಡು” True ಲವ್ never end “ಇದರ ಮೊದಲ ಪೊಸ್ಟರ್ ಶ್ರೀ ಶ್ರೀ ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿ ಶ್ರೀ ಕ್ಷೇತ್ರ ಕೇಮಾರು ಇವರಿಂದ ಎಲ್ಲಾ ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.

ಮೂಡುಬಿದಿರೆ: ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆ

ಡಿಸಿ ಮನ್ನಾ ಜಾಗಗಳು ಇತರರ ಪಾಲಾಗುತ್ತಿದೆ. ಆದರೆ ಎಸ್. ಸಿ, ಎಸ್. ಟಿ ಸಮುದಾಯದ ಜನರು ಡಿಸಿ ಮನ್ನಾ ಜಾಗದಲ್ಲಿ ಬಿಡಾರ ಹೂಡಿದರೆ ಕೂಡಲೇ ಅಲ್ಲಿಂದ ಎತ್ತಂಗಡಿ ಮಾಡಲು ಇಲಾಖೆಯಿಂದ ಅಧಿಕಾರಿಗಳು ಬರುತ್ತಾರೆ. ಇನ್ನು ಮುಂದೆ ಡಿಸಿ ಮನ್ನಾ ಜಮೀನಿನಲ್ಲಿ ಎಸ್.ಸಿ, ಎಸ್.ಟಿ ಸಮುದಾಯದ ಜನರು ಸಣ್ಣ ಗುಡಿಸಲು ಮಾಡಿ ಮನೆ ಮಾಡಿಕೊಂಡಿದ್ದಾರೆ. ಅವರನ್ನು ಅಲ್ಲಿಂದ ಓಡಿಸದೇ ಅಸಹಾಯಕ ಜನರಿಗೆ ವಾಸ ಮಾಡಲು ಅವಕಾಶ ಮಾಡಿಕೊಡಬೇಕೆಂದು ರಾಮಚಂದ್ರ ಕೆಂಬಾರೆ ಆಗ್ರಹಿಸಿದರು ಅವರು ಎಸ್

ಮಂಗಳೂರಿನ ಟೆಂಪೋ ಚಾಲಕ ಮತ್ತು ಮಾಲಕರ ಸಂಘದ ಉದ್ಘಾಟನಾ ಕಾರ್ಯಕ್ರಮ

ಮಂಗಳೂರಿನ ಬಂದರಿನಲ್ಲಿರುವ ಟೆಂಪೋ ಚಾಲಕ ಮತ್ತು ಮಾಲಕರ ಸಂಘದ ಉದ್ಘಾಟನಾ ಕಾರ್ಯಕ್ರಮವು ನಗರದ ಪೋಲಿಸ್ ಲೈನ್‍ನ ನಾಸಿಕ್ ಬಿ. ಎಚ್ ಬಂಗೇರ ಸಭಾ ಭವನದಲ್ಲಿ ನಡೆಯಿತು. ಸಂಘದ ಲೋಗೋ ಅನವರಣಗೊಳಿಸಿ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತಾಡಿದ ಮಂಗಳೂರು ಖ್ಯಾತ ವಕೀಲರಾದ ದಿನೇಶ್ ಹೆಗ್ಡೆ ಉಳೆಪ್ಪಾಡಿ ಅವರು.ಸರ್ಕಾರದ ವತಿಯಿಂದ ಇತರ ಚಾಲಕರಿಗೆ ಹಾಗೂ ಕಾರ್ಮಿಕರಿಗೆ ಸಿಗುವಂತಹ ಸೌಲಭ್ಯಗಳು ಟೆಂಪೋ ಚಾಲಕರಿಗೆ ಸಿಗಬೇಕು ಟೆಂಪೋ ಚಾಲಕರನ್ನು ಯಾಕೆ ಕಡೆಗಣಿಸಲಾಗುವುದು

ಬಂಟರ ನಿಗಮ ಸ್ಥಾಪನೆ, 2ಎ ವರ್ಗಕ್ಕೆ ಸೇರ್ಪಡೆ ಮಾಡದ ಸರ್ಕಾರ : ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ : ಬಂಟರ ಸಂಘಗಳ ಒಕ್ಕೂಟದಿಂದ ಎಚ್ಚರಿಕೆ

ಬಂಟರ ಯಾನೆ ನಾಡವರ ಅಭಿವೃದ್ಧಿ ನಿಗಮ ಸ್ಥಾಪನೆ, ಸಮುದಾಯವನ್ನು 3ಬಿ ಯಿಂದ 2ಎಗೆ ವರ್ಗಾಯಿಸುವ ಭರವಸೆ ಈಡೇರಿಸದ ರಾಜ್ಯ ಸರಕಾರಕ್ಕೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಾಗುವುದು ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟ ತಿಳಿಸಿದೆ. ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು, ಬಂಟರ ನಿಗಮ ಸ್ಥಾಪನೆ ಮಾಡಬೇಕು, ಬಂಟ ಸಮುದಾಯವನ್ನು 2ಎ ವರ್ಗಕ್ಕೆ ವರ್ಗಾಯಿಸಬೇಕು ಮೊದಲಾದ ಬೇಡಿಕೆಗಳ ಈಡೇರಿಕೆಗೆ ಹಲವು ವರ್ಷಗಳಿಂದ ಮನವಿ

ಪಡುಬಿದ್ರಿ : ಮಹಿಳೆ ನೇಣು ಬಿಗಿದು ಆತ್ಮಹತ್ಯೆ : ಗಂಡನಿಗೆ ಮಾ.10ರ ವರಗೆ ನ್ಯಾಯಾಂಗ ಬಂಧನ

ಗೃಹಿಣಿಯೊರ್ವರು ತನ್ನ ವಾಸದ ಮನೆಯ ಅಡುಗೆ ಕೋಣೆಯಲ್ಲಿ ಶಾಲಿನಿಂದ ನೇಣು ಹಾಕಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ನ್ಯಾಯಾಲಯ ಆರೋಪಿ ಗಂಡನಿಗೆ ಮಾ.10ರ ವರಗೆ ನ್ಯಾಯಾಂಗ ಬಂಧನ ವಿಧಿಸಿದೆ.ಆತ್ಮಹತ್ಯೆಗೆ ಶರಣಾದ ಗೃಹಿಣಿ ಪಡುಬಿದ್ರಿ ಕೆಳಗಿನ ಪೇಟೆ ನಿವಾಸಿ ಚೇತನ್ ಎಂಬಾತನ ಪತ್ನಿ ಮಮತ(43), ಎಂಟು ವರ್ಷದ ಒಂದು ಹೆಣ್ಣು ಮಗು ಹಾಗೂ ಹನ್ನೆರಡು ವರ್ಷದ ಗಂಡು ಮಗನನ್ನು ಹೊಂದಿದ್ದ ಮಹಿಳೆ ನೇಣು ಬಿಗಿದ ಸ್ಥಿತಿಯಲ್ಲಿ ಅಡುಗೆ ಕೋಣೆಯಲ್ಲಿ ಪತ್ತೆಯಾಗಿದ್ದು, ಬಳಿಕ ಪೊಲೀಸ್

ಮಂಗಳೂರು : ನೂತನ ಪೊಲೀಸ್ ಆಯುಕ್ತರಾಗಿ ಕುಲದೀಪ್ ಕುಮಾರ್ ಜೈನ್

ಮಂಗಳೂರು ನಗರದ ನೂತನ ಪೊಲೀಸ್ ಆಯುಕ್ತರಾಗಿ ಕುಲದೀಪ್ ಕುಮಾರ್ ಜೈನ್ ಅಧಿಕಾರ ಸ್ವೀಕರಿಸಿದರು.ನಿರ್ಗಮನ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ನೂತನ ಪೊಲೀಸ್ ಆಯುಕ್ತರಿಗೆ ಅಧಿಕಾರ ಹಸ್ತಾಂತರಿಸಿದರು. ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಕುಲದೀಪ್ ಕುಮಾರ್ ಜೈನ್, ಭ್ರಷ್ಟಾಚಾರ ಸಹಿಸುವುದಿಲ್ಲ. ಎಲ್ಲ ರೀತಿಯ ಅಕ್ರಮ ಚಟುವಟಿಕೆಗಳನ್ನು ಹತ್ತಿಕ್ಕಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಎಲ್ಲರ ಸಹಕಾರದಿಂದ ಜನರಿಗೆ ಅನುಕೂಲವಾಗುವಂತೆ