ರಾಷ್ಟ್ರೀಯ ಹೆದ್ದಾರಿ 66 ರ ಜಪ್ಪಿನಮೊಗರಿನ ಗ್ಯಾರೇಜ್‍ವೊಂದರಲ್ಲಿ ಶುಕ್ರವಾರ ರಾತ್ರಿ ಬೆಂಕಿ ಅವಘಡ ಸಂಭವಿಸಿದೆ. ಗ್ಯಾರೇಜ್‍ನ ಮುಂದೆ ದುರಸ್ತಿಗಾಗಿ ನಿಲ್ಲಿಸಲಾಗಿದ್ದ ಹಳೆಯ ಬಸ್ ಮತ್ತಿತರ ಕೆಲವು ವಾಹನಗಳು ಸಂಪೂರ್ಣ ಬೆಂಕಿಯ ರಭಸಕ್ಕೆ ಸುಟ್ಟು ಭಸ್ಮ ಆಗಿವೆ.ರಾತ್ರಿ 10.45 ರ ವೇಳೆಗೆ ಈ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿ ಅವಘಡಕ್ಕೆ ಕಾರಣ
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಪತ್ರಕರ್ತರು ಮತ್ತು ಜನಸಾಮಾನ್ಯರ ಮೇಲೆ ಹಲ್ಲೆ, ದೌರ್ಜನ್ಯ ನಡೆಯುತ್ತಿರುವುದನ್ನು ಖಂಡಿಸಿ, ಪತ್ರಕರ್ತರಿಗೆ ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಲು ಸೂಕ್ತ ರಕ್ಷಣೆ ನೀಡುವಂತೆ ಆಗ್ರಹಿಸಿ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರಿಗೆ ಪತ್ರಕರ್ತರ ನಿಯೋಗ ಮನವಿ ಸಲ್ಲಿಸಿತು. ಟೋಲ್‍ಗೇಟ್‍ಗಳಲ್ಲಿ ಸಿಬ್ಬಂದಿಗಳು ಪತ್ರಕರ್ತರು ಸಹಿತ ಸಾರ್ವಜನಿಕರ ಮೇಲೆ ಹಲ್ಲೆ ನಡೆಸುತ್ತಿರುವ ಕೃತ್ಯಗಳು ಹೆಚ್ಚಿವೆ.
ಕಿನ್ನಿಗೋಳಿ: ಸಾವಿರಾರು ಕಿಲೋಮೀಟರ್ ಸೈಕಲ್ ನಿಂದ ಇಡೀ ದೇಶದ ಗಡಿಭಾಗ ಮತ್ತು ಕರಾವಳಿ ಕರ್ನಾಟಕದ ಕಡಲು ತೀರ ಹಾಗೂ ಅನೇಕ ಭಾಗಗಳಲ್ಲಿ ತಿರುಗಾಟ ಮಾಡಲಿದ್ದಾರೆ, ಪ್ರಸ್ತುತ ಕಿನ್ನಿಗೋಳಿ ಸಮೀಪದ ಐಕಳಕ್ಕೆ ತಲುಪಿದ್ದು ಹಾಗಾದರೆ ನೀವು ಯಾರು ಅಂತ ಕೇಳುತ್ತೀರಾ ಅವರೇ ಪಂಜಾಬ್ ಮೂಲದ ಇಬ್ಬರು ಯೂಟ್ಯೂಬರ್ ಆಗಿರುವಂತಹ ಗುರುವಂದರ್ ಮತ್ತು ವಿಕಾಸ್.ಅವರು ಪಂಜಾಬಿನಿಂದ ಸಪ್ಟೆಂಬರ್ 24ರಂದು 2022 ಪ್ರಾರಂಭಿಸಿದು ಈಗಾಗಲೇ 4 ತಿಂಗಳು ಕಳೆದಿದೆ ತಮ್ಮ ಪ್ರಯಾಣ ಮೂರು
ಕರಾವಳಿ ಭಾಗದಲ್ಲಿ ಫೆ.5ರಿಂದ 9ರವರೆಗೆ ಪ್ರಜಾಧ್ವನಿ ಯಾತ್ರೆ ಕೈಗೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತ ವೈಫಲ್ಯದ ಬಗ್ಗೆ ಜನ ಜಾಗೃತಿ ಮೂಡಿಸಲಾಗುವುದು ಎಂದು ಮಾಜಿ ಸಚಿವ ಹಾಲಿ ಶಾಸಕ ಹಾಗೂ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಧ್ವನಿ ಯಾತ್ರೆ ಫೆ.5ರಂದು ಸುಳ್ಯದಿಂದ ಆರಂಭಗೊಂಡು ಫೆ.6ರಂದು ಮೂಡಬಿದಿರೆ, ಫೆ.7ರಂದು ಕಾಪು, ಫೆ.8ರಂದು ಕುಂದಾಪುರ, ಫೆ.9ರಂದು ಶೃಂಗೇರಿ ತಲುಪಲಿದೆ ಎಂದರು.
ವ್ಯಕ್ತಿಯೊಬ್ಬರನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ ಘಟನೆ ನಗರದ ಬಲ್ಮಠದಲ್ಲಿ ನಡೆದಿದೆ. ನಗರದಲ್ಲಿರುವ ಮಂಗಳೂರು ಜುವೆಲ್ಲರಿಗೆ ನುಗ್ಗಿದ ಮುಸುಕುಧಾರಿ ವ್ಯಕ್ತಿಯೊಬ್ಬ ಅಲ್ಲಿನ ಸಿಬ್ಬಂದಿಯನ್ನು ಚೂರಿಯಿಂದ ಇರಿದು ಹತ್ಯೆ ನಡೆಸಿದ್ದಾನೆ. ಜುವೆಲ್ಲರಿ ಉದ್ಯೋಗಿ, ಅತ್ತಾವರ ನಿವಾಸಿ ರಾಘವ (52) ಕೊಲೆಯಾದ ವ್ಯಕ್ತಿ. ಮಧ್ಯಾಹ್ನ ಮುಸುಕು ಹಾಕಿಕೊಂಡು ಬಂದಿದ್ದ ವ್ಯಕ್ತಿ ಕೃತ್ಯ ಎಸಗಿದ್ದಾನೆ. ಜುವೆಲ್ಲರಿ ಮಾಲಕ ಊಟಕ್ಕೆಂದು ತೆರಳಿದ್ದಾಗ ಆಗಂತುಕ ಒಳಗೆ ಬಂದಿದ್ದ.
ಮುಲ್ಕಿ: ಮುಲ್ಕಿ ಸಮೀಪದ ಬೆಳ್ಳಾಯರು ಶ್ರೀ ಚಂದ್ರ ಮೌಳೀಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು ಶ್ರೀ ದೇವರಿಗೆ ಪೂರ್ವಾಹ್ನ ಗಂಟೆ 10:25ರ ಮೀನ ಲಗ್ನ ಸುಮುಹೂರ್ತದಲ್ಲಿ ದೇವಸ್ಥಾನದ ತಂತ್ರಿಗಳಾದ ಶಿವಪ್ರಸಾದ ತಂತ್ರಿ ,ವೇ.ಮೂ ಪಂಜ ಭಾಸ್ಕರ ಭಟ್ ಹಾಗೂ ಅರ್ಚಕ ಗೋಪಾಲ ಭಟ್ ಪೌರೋಹಿತ್ಯದಲ್ಲಿ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನಡೆಯಿತು. ಬಳಿಕ ಮಹಾಪೂಜೆ, ಅವಸ್ಕೃತ ಬಲಿ ನಡೆಯಿತು. ಮಧ್ಯಾಹ್ನ ಪಲ್ಲಪೂಜೆ ಮಹಾ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭ
ಹಳೆಯಂಗಡಿ: ಗ್ರಾಮದ ಜನತೆಯ ಸಮಸ್ಯೆಗಳನ್ನು ಒಂದೇ ಸೂರಿನಡಿ ಪರಿಹರಿಸುವ ಉದ್ದೇಶದಿಂದ ಜನಸ್ಪಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಸಾಕಷ್ಟು ಮಂದಿ ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ ಹಾಗೂ ಪಡೆದುಕೊಳ್ಳಬೇಕು ಎಂದು ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೊಟ್ಯಾನ್ ಹೇಳಿದರು. ಅವರು ಹಳೆಯಂಗಡಿ ಪಂಚಾಯತ್ ವತಿಯಿಂದ ಕೆಮ್ರಾಲ್, ಪಡುಪನಂಬೂರು, ಮತ್ತು ಹಳೆಯಂಗಡಿ ಗ್ರಾಮ ಪಂಚಾಯತ್ ನಲ್ಲಿ ಬರುವ ಎಲ್ಲಾ ಗ್ರಾಮದವರಿಗೆ ವಿದ್ಯಾ ವಿನಾಯಕ ಯುವಕ ಮಂಡಲ ಸಭಾಭವನ
ಫೆಬ್ರವರಿ 6 ರಿಂದ 11ರವರೆಗೆ ಶ್ರೀ ಸಹಸ್ರ ನೃಸಿಂಹ ಯಾಗ ನಡೆಯಲಿದೆ ಎಂದು ಯಾಗಾಧ್ಯಕ್ಷ ಸುಬ್ರಹ್ಮಣ್ಯ ಶೆಣೈ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಯಾಗದ ಕಾರ್ಯಾಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ಕೊಡೆತ್ತೂರು ಮಾತನಾಡಿ ವೇ.ಮೂ.ಸುಧೀರ್ ಭಟ್. ನೇತೃತ್ವದಲ್ಲಿ ವೇ.ಮೂ. ಕಾಶಿನಾಥ ಆಚಾರ್ಯ ಮಾರ್ಗದರ್ಶನದಲ್ಲಿ 50 ಮಂದಿ ಖುತ್ವಿಜರಿಂದ ಬೃಹತ್ ಕುಂಡದಲ್ಲಿ ಶ್ರೀ ಸಹಸ್ರ ನೃಸಿಂಹ ಯಾಗ ನಡೆಯಲಿದೆ. ದಿನಂಪ್ರತಿ 5000ದಷ್ಟು ಮಂದಿ ಅನ್ನ ಪ್ರಸಾದ ಸ್ವೀಕರಿಸಲಿದ್ದು
ಮಂಗಳೂರಿನ ಅದ್ಯಪಾಡಿ ಬೀಬಿಲಚ್ಚಿಲ್‍ನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಅಷ್ಟಪವಿತ್ರ ನಾಗಬ್ರಹ್ಮ ಮಂಡಲೋತ್ಸವದ ಪ್ರಯುಕ್ತ ವಿ4 ನ್ಯೂಸ್‍ನ ಸಿಪಿಎಲ್ ಖ್ಯಾತಿಯ ವಿಧಾತ್ರೀ ಕಲಾವಿದೆರ್ ಕೈಕಂಬ-ಕುಡ್ಲ ಇವರು ಅಭಿನಯಿಸುವ ಭಕ್ತಿ ಪ್ರಧಾನ ತುಳು ನಾಟಕ ದೈವರಾಜೆ ಶ್ರೀ ಬಬ್ಬುಸ್ವಾಮಿ ಇಂದು (ಶುಕ್ರವಾರ) ರಾತ್ರಿ 9 ಗಂಟೆಗೆ ಪ್ರದರ್ಶನಗೊಳ್ಳಲಿದೆ. ನಟ, ನಿರ್ದೇಶಕರಾದ ವಿಜಯ್ ಕುಮಾರ್ ಕೊಡಿಯಾಲ್‍ಬೈಲ್
ಸಮುದ್ರ ಮಾರ್ಗವಾಗಿ ನುಸುಳಲು ಯತ್ನಿಸಿದ ಶತ್ರು ದೇಶದ ನುಸುಳುಕೋರರನ್ನು ಹಿಮ್ಮೆಟ್ಟಿಸಲಾಯಿತು. ನೀರಲ್ಲಿದ್ದವರಿಗೂ ಮಿಷನ್ ಗನ್ ನಲ್ಲಿ ಫಯರ್ ಮಾಡೋ ಮೂಲಕ ಓಡಿಸಲಾಯಿತು. ಬೆಂಕಿ ಹತ್ತಿಕೊಂಡ ಸೇನಾ ಬೋಟ್‍ಗೆ ತಕ್ಷಣ ನೀರು ಹಾಯಿಸಿ ನಂದಿಸಲಾಯಿತು. ಈ ವೇಳೆ ಸಮುದ್ರಕ್ಕೆ ಬಿದ್ದ ಸೇನಾನಿಯನ್ನು ಹೆಲಿಕಾಪ್ಟರ್ ಮೂಲಕ ಸುರಕ್ಷಿತವಾಗಿ ರಕ್ಷಿಸಲಾಯಿತು.ಇದೆಲ್ಲಾ ನಮ್ಮ ಕರಾವಳಿಯ ಮಂಗಳೂರಿನ ಅರಬ್ಬಿ ಸಮುದ್ರದಲ್ಲಿ ನಡೆದ ಕಾರ್ಯಾಚರಣೆ.ಹಾಗಾದ್ರೆ ಅಲ್ಲಿ ಏನಾಯ್ತು




























