ಪಡುಬಿದ್ರಿ: ಮಾನಸಿಕವಾಗಿ ನೊಂದ ವ್ಯಕ್ತಿ ನೇಣಿಗೆ ಶರಣಪತ್ನಿಯನ್ನು ಕಳೆದುಕೊಂಡ ಬಳಿಕ ಕಿನ್ನತೆ ಅನುಭವಿಸುತ್ತಿದ್ದ ವ್ಯಕ್ತಿಯೊರ್ವರು ತನ್ನ ವಾಸದ ಮನೆಯಲ್ಲೇ ನೇಣಿಗೆ ಶರಣಾದ ಘಟನೆ ಅವರಾಲು ಮಟ್ಟುವಿನಲ್ಲಿ ಘಟಿಸಿದೆ.ಮೃತ ವ್ಯಕ್ತಿ ಅವರಾಲು ಮಟ್ಟು ಕರಿಯ ಹೌಸ್ ನಿವಾಸಿ ಅಶೋಕ್ ಪೂಜಾರಿ (48), ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು ಇವರಿಗೆ ಇಬ್ಬರು ಮಕ್ಕಳು,
ಕರಾವಳಿಯ ಮುಂಚೂಣಿ ಸಹಕಾರಿ ಲಿಮಿಟೆಡ್ ಬ್ಯಾಂಕ್ಗಳಲ್ಲಿ ಒಂದಾದ ಎಂಸಿಸಿ ಬ್ಯಾಂಕ್ ಮಂಗಳೂರು ಇದ್ರ ಶತಮಾನೋತ್ತರ ದಶಮಾನೋತ್ಸವ ಕಾರ್ಯಕ್ರಮವು ನಗರದ ಮಿಲಾಗ್ರಿಸ್ ಕಾಲೇಜಿನ ಮೈದಾನದಲ್ಲಿ ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮವನ್ನು ಮಂಗಳೂರು ಬಿಷಪ್ ರೆವರೆಂಡ್ ಡಾ. ಪೀಟರ್ ಪಾವ್ಲ್ ಸಲ್ಡಾನಾ ಮತ್ತು ಉಡುಪಿ ಬಿಷಪ್ ಡಾ. ಜೆರಾಲ್ಡ್ ಐಸಾಕ್ ಲೋಬೋ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಇದೇ ವೇಳೆ ಮಾತನಾಡಿದ ಡಾ. ಪೀಟರ್ ಪಾವ್ಲ್ ಸಲ್ಡಾನಾ ಅವರು, ಸಮಾಜಕ್ಕೆ
ಪತ್ನಿಯನ್ನು ಆರೋಪಿ ಪತಿ ರೀಪಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಕ ಎಕ್ಕಾರು ಗ್ರಾಮದಲ್ಲಿ ರವಿವಾರ ರಾತ್ರಿ ನಡೆದಿರುವುದು ವರದಿಯಾಗಿದೆ. ಆರೋಪಿ ಪತಿಯ ಬಂಧನವಾಗಿದೆ. ತೆಂಕ ಎಕ್ಕಾರು ಗ್ರಾಮದ ಪಲ್ಲದಕೋಡಿ ನಿವಾಸಿ ಸರಿತಾ(35) ಕೊಲೆಯಾದ ಮಹಿಳೆ. ಆರೋಪಿ ಪತಿ ದುರ್ಗೇಶ ಎಂಬಾತ ಕಳೆದ ರಾತ್ರಿ ಕುಡಿದ ಮತ್ತಿನಲ್ಲಿ ಪತ್ನಿ ಸರಿತಾ ಜತೆ ಜಗಳವಾಡಿದ್ದನೆನ್ನಲಾಗಿದೆ. ಈ ವೇಳೆ ಮರದ ರೀಪಿನಿಂದ ಹೊಡೆದು ಮಾರಣಾಂತಿಕವಾಗಿ ಹಲ್ಲೆ
ಮಂಗಳೂರಿನ ಹೊರವಲಯದ ಅಡ್ಯಾರ್‌ನ ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ರಾಜ್ಯಮಟ್ಟದ, ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್-೨೦೨೨ ನಡೆಯಿತು. ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ರಾಜ್ಯ ಹಾಗೂ ಜಿಲ್ಲೆಯ ವಿವಿಧ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ವೈಜ್ಞಾನಿಕ ಪ್ರದರ್ಶನ ಹಾಗೂ ವಿವರಣೆಗಳ ಮೂಲಕ ಗಮನ ಸೆಳೆದರು. ಅಡುಗೆ ಅನಿಲ ಸಿಲಿಂಡರ್‌ನಿಂದ ಲೀಕೇಜ್ ಆಗಿ ಆಗುವ ಸಂಭಾವ್ಯ ಅನಾಹುತ ತಪ್ಪಿಸುವ ಸಾಧನ, ದೃಷ್ಟಿ ದೋಷ ಇರುವವರಿಗೆ
ನರರೋಗ ಮತ್ತು ಕಿವಿಮೂಗು ಗಂಟಲು ರೋಗ ಚಿಕಿತ್ಸೆಗಾಗಿ ಅತ್ಯಂತ ಸುಧಾರಿತ ಮೆಡ್ ಟ್ರೋನಿಕ್ ಸ್ಟೆಲ್ತ್ ಎಸ್-೮ ನಿರ್ಮಿತ ನ್ಯೂರೊ ಇಎನ್‌ಟಿ ನ್ಯಾವಿಗೇಶನ್ ಸಿಸ್ಟಂ ಉಪಕರಣವನ್ನು ನಗರದ ಮಂಗಳಾ ಆಸ್ಪತ್ರೆ ಮತ್ತು ಮಂಗಳಾ ಕಿಡ್ನಿ ಫೌಂಡೇಶನ್‌ನಲ್ಲಿ ಉದ್ಘಾಟಿಸಲಾಯಿತು. ಖ್ಯಾತ ವೈದ್ಯರಾದ ಡಾ. ರಾಜ, ಡಾ. ಶಂಕರ್ ಅತ್ಯಾಧುನಿಕ ಉಪಕರಣವನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಂಗಳ ಆಸ್ಪತ್ರೆ ಮತ್ತು ಕಿಡ್ನಿ ಫೌಂಡೇಶನ್‌ನ ನಿರ್ದೇಶಕರ ಡಾ. ಗಣಪತಿ
ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಗ್ರಾಮದ ಬೆಂದ್ರಾಳ ಅರಣ್ಯ ಪ್ರದೇಶದಿಂದ ಸ್ಯಾಟ್ ಲೈಟ್ ಕರೆ ಹೋಗಿದೆ ಎಂಬ ವಿಚಾರವಾಗಿ ಧರ್ಮಸ್ಥಳ ಪೊಲೀಸರು ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿ ದೃಢೀಕರಿಸಲ್ಪಟ್ಟಿಲ್ಲ ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಭಗವಾನ್ ಸೋನಾವಣೆ ತಿಳಿಸಿದ್ದಾರೆ. ಬೆಂದ್ರಾಳ ಅರಣ್ಯ ಪ್ರದೇಶದಿಂದ ಸ್ಯಾಟ್ ಲೈಟ್ ಕರೆ ಹೋಗಿದೆ, ಭಾರೀ ಸ್ಫೋಟದ ಸದ್ದು ಕೇಳಿಸಿದೆ ಎನ್ನುವ ವದಂತಿ ಹರಡಿದ ಹಿನ್ನೆಲೆಯಲ್ಲಿ
ಎ.ಎಸ್. ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ಆಶೀಕಾ ಸುವರ್ಣ ನಿರ್ಮಾಣದಲ್ಲಿ ಪ್ರಧಾನ್ ಎಂಪಿ ನಿರ್ದೇಶನದಲ್ಲಿ ತಯಾರಾದ ವಿಐಪೀಸ್ ಲಾಸ್ಟ್ ಬೆಂಚ್ ತುಳು-ಕನ್ನಡ ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ತೆರೆಕಾಣಲಿದ್ದು, ಸಿನಿಮಾದ ಆಂಥಮ್ ಸಾಂಗ್ ನವೆಂಬರ್ 27ರ ಭಾನುವಾರದಂದು ಬೆಳಿಗ್ಗೆ 11.11 ನಿಮಿಷಕ್ಕೆ ಬಿಡುಗಡೆಗೊಳ್ಳಲಿದೆ. ಡಿ ಬೀಟ್ಸ್ ಯೂಟ್ಯೂಬ್ ಚಾನೆಲ್‍ನಲ್ಲಿ ಸಿನಿಮಾದ ಆಂಥಮ್ ಸಾಂಗ್ ಬಿಡುಗಡೆಗೊಳ್ಳಲಿದೆ. ನಟ ಬೋಜರಾಜ ವಾಮಂಜೂರು ಈ
ಮಂಗಳೂರು: ಕಾರೊಂದು ಹೊತ್ತಿ ಉರಿದ ಘಟನೆ ನಗರದ ಜ್ಯೋತಿ ಬಳಿ ನಡೆದಿದೆ. ಇಂದು ಮಧ್ಯಾಹ್ನ ಜ್ಯೋತಿ ಬಳಿಯ ಜ್ಯೂಸ್ ಜಂಕ್ಷನ್ ಬಳಿ ಈ ಘಟನೆ ನಡೆದಿದ್ದು, ಸ್ಥಳೀಯರು ಬೆಂಕಿ ನಂದಿಸಿದ್ದಾರೆ. ಬೆಂಕಿ ಯಾವ ಕಾರಣಕ್ಕೆ ತಗುಲಿತ್ತು ಎಂದು ಇನ್ನಷ್ಟೇ ತಿಳಿದು ಬರಬೇಕಿದೆ.
ಮಂಗಳೂರು: ನಗರದಲ್ಲಿ ಕೆಲ ದಿನಗಳ ಹಿಂದೆ ಸಂಭವಿಸಿದ್ದ ಕುಕ್ಕರ್ ಬಾಂಬ್ ಸ್ಪೋಟದ ಆರೋಪಿಗೆ ಕದ್ರಿ ದೇವಸ್ಥಾನದಲ್ಲಿ ಸ್ಪೋಟಿಸುವ ಗುರಿ ಇತ್ತು ಎಂಬ ವಿಚಾರ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಇತಿಹಾಸ ಪ್ರಸಿದ್ದ ಕದ್ರಿ ಮಂಜುನಾಥ ದೇವಳದ ಆಡಳಿತ ಪೊಲೀಸ್ ಇಲಾಖೆಗೆ ಭದ್ರತೆಗಾಗಿ ಮನವಿ ಮಾಡಿದೆ. ಕದ್ರಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಜಯಮ್ಮ ಅವರು ತನ್ನ ವ್ಯಾಪ್ತಿಯ ಕದ್ರಿ ಪೊಲೀಸ್ ಠಾಣೆಗೆ ಲಿಖಿತ ದೂರೊಂದನ್ನು ನೀಡಿದ್ದಾರೆ ಜೊತೆಗೆ ಭದ್ರತೆ ಒದಗಿಸಲು ಮನವಿ
ಬಂಟ ಸಮಾಜದ ಸಂಘಟನೆಯ ಮೂಲಕ ಇತರ ಸಮಾಜದ ವರ್ಗಕ್ಕೂ ಮುಕ್ತ ನೆರವು ನೀಡುವ ಮೂಲಕ ಸಮಾಜದಲ್ಲಿ ಮೇಲ್ಪಂಕ್ತಿಗೆ ಕಾರಣವಾಗಿರುವ ಒಕ್ಕೂಟಕ್ಕೆ ಸಮಾಜ ಬಾಂಧವರಿಂದ ನೀಡುತ್ತಿರುವ ಸ್ಪಂದನೆಯೇ ಮೂಲ ಕಾರಣವಾಗಿದೆ. ಸಮಾಜದಲ್ಲಿ ಎಲ್ಲಾ ಸಮಾಜದ ಸಂಘಟನೆಯೂ ಇದೇ ರೀತಿಯ ಯೋಚನೆಯಲ್ಲಿ ಯೋಜನೆ ರೂಪಿಸಬೇಕು ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು. ಅವರು ಮೂಲ್ಕಿಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪಡುಬೈಲ್ ನಲ್ಲಿ ಜಾಗತಿಕ ಬಂಟರ ಸಂಘಗಳ




























