Home ಕರಾವಳಿ Archive by category ಮಂಗಳೂರು (Page 234)

ಅರ್ಧ ಶತಮಾನದ ನಿರೀಕ್ಷೆಗಳ ಕಿಟಕಿಗೆ ನೀಲಿ ಪರದೆ ಮುಚ್ಚಿ ಹೋದ ದಂತ ಕಥೆ ಪಿ.ಡೀಕಯ್ಯ

ನಾಡಿನ ಹಿರಿಯ ಅಂಬೇಡ್ಕರ್ ವಾದಿ, ಬಹುಜನಪರ ಚಿಂತಕ ಪಿ.ಡೀಕಯ್ಯರವರುಬುದ್ಧನಿಗೊಂದು ‘ಶರಣು’ ಹೇಳದೆ ಬಹುಜನ ಸಮಾಜಕ್ಕೊಂದು ಬಲಗೈ ಮುಷ್ಠಿ ಬಿಗಿಮಾಡಿ ‘ಜೈಭೀಮ್’ ಹೇಳದೆ ಸಮಾಜ ಪರಿವರ್ತನೆಯ ಫಲವನ್ನು ಕಾಣುವುದಕ್ಕೂ ಮೊದಲೇ ಎಂದಿನ ಗಾಂಭೀರ್ಯದಲ್ಲೇ ಮರಳಿ ಮಣ್ಣಿಗೆ ಹೊರಟು ಹೋದರು. ಈ ಅಘೋಷಿತ ಆಘಾತದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ

ಕಾಪು ಮಾರಿಗುಡಿ ದೇವಸ್ಥಾನಕ್ಕೆ ಮಿಸ್ ಇಂಡಿಯಾ ಸಿನಿ ಶೆಟ್ಟಿ ಭೇಟಿ

ಮಿಸ್ ಇಂಡಿಯಾ ಸಿನಿ ಶೆಟ್ಟಿ ಅವರು ಮಂಗಳವಾರ ರಾತ್ರಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಕಾಪು ಶ್ರೀ ಮಾರಿಯಮ್ಮ ದೇವಿಯ ಭಕ್ತೆಯಾಗಿರುವ ಸಿನಿ ಶೆಟ್ಟಿ ಅವರು ಮಿಸ್ ಇಂಡಿಯಾ ಪ್ರಶಸ್ತಿ ವಿಜೇತರಾದ ಬಳಿಕ ಪ್ರಥಮ ಬಾರಿಗೆ ಕಾಪು ಹೊಸ ಮಾರಿಗುಡಿಗೆ ಭೇಟಿ ನೀಡಿದ್ದು ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಬಳಿಕ ದೇವಸ್ಥಾನದ ವತಿಯಿಂದ ಪ್ರಸಾದ ನೀಡಿ ಗೌರವಿಸಲಾಯಿತು. ಪ್ರಸ್ತುತ ಕಾಪು ಶ್ರೀ ಹೊಸ ಮಾರಿಗುಡಿ ಜೀರ್ಣೋದ್ಧಾರಗೊಳ್ಳುತ್ತಿದ್ದು

ಹೊಂಡ ತಪ್ಪಿಸಲು ಹೋಗಿ ಕಾರಿಗೆ ಢಿಕ್ಕಿಯಾಗಿ ಡೈವರ್ಷನ್ ಏರಿದ ಲಾರಿ

ರಾಷ್ಟ್ರೀಯ ಹೆದ್ದಾರಿ 66 ಹಾಲಿಮಾ ಸಾಬ್ಜು ಸಭಾಂಗಣದ ಮುಂಭಾಗದಲ್ಲಿ ಹೆದ್ದಾರಿಯ ಗುಂಡಿ ತಪ್ಪಿಸಲು ಹೋಗಿ ಕಂಟೇನರ್ ಕಾರ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಘಟನೆ ನಡೆದಿದೆ.ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೊಂಡಮಯವಾಗಿದ್ದು ಹೆದ್ದಾರಿ ತಪ್ಪಿಸಲು ಹೋಗಿ ಕಂಟೈನರ್ ಚಾಲಕನ ನಿಯಂತ್ರಣ ತಪ್ಪಿ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಸಂಪೂರ್ಣ ಹಿಂಭಾಗ ಜಖಂ ಗೊಂಡಿದೆ ಹಾಗೂ ಕಂಟೇನರ್ ರಾಷ್ಟ್ರೀಯ ಹೆದ್ದಾರಿಯ ಡೈವರ್ಷನ್ ಏರಿ ನಿಂತ ಘಟನೆ ನಡೆದಿದೆ.

ಅಮೃತ ಪ್ರಕಾಶ ಪತ್ರಿಕೆಯ 9ನೇ ವಾರ್ಷಿಕೋತ್ಸವ : ವಿಶೇಷ ಸಂಚಿಕೆ ಬಿಡುಗಡೆ

ಡಾ.ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶ ಪತ್ರಿಕೆಯ 9ನೇ ವಾರ್ಷಿಕೋತ್ಸವ ಅಮೃತ ಪ್ರಕಾಶ ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆಯಿತು. ಅಮೃತ ಪ್ರಕಾಶ ವಿಶೇಷ ಸಂಚಿಕೆಯನ್ನ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಾ. ಎಂ.ಪಿ.ಶ್ರೀನಾಥ ಅವರು ಬಿಡುಗಡೆಗೊಳಿಸಿದ್ರು. ಈ ವೇಳೆ ಮಾತನಾಡಿದ ಅವರು, ನಿರಂತರವಾಗಿ 8 ವರ್ಷಗಳ ಕಾಲ ಪತ್ರಿಕೆಯನ್ನ ನಡೆಸುವುದು ತುಂಬಾ ಕಷ್ಟ. ಇವ್ರು ಗುಣಮಟ್ಟದ

ಕಂಕನಾಡಿ ನಗರ ಠಾಣೆ : ಇಬ್ಬರು ರೌಡಿಗಳ ಮೇಲೆ ಗೂಂಡಾ ಕಾಯ್ದೆ

ಕಂಕನಾಡಿ ನಗರ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದು ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲಿನಲ್ಲಿರುವ ಇಬ್ಬರು ರೌಡಿಗಳ ಮೇಲೆ ಗೂಂಡಾ ಕಾಯ್ದೆ ಹಾಕಲಾಗಿದೆ.ಪಡೀಲ್ ಜಲ್ಲಿಗುಡ್ಡೆ ನಿವಾಸಿ ಪ್ರೀತಂ ಪೂಜಾರಿ (26) ಮತ್ತು ಪಡೀಲ್ ಅಳಪೆ ನಿವಾಸಿ ಧೀರಜ್ (27) ವಿರುದ್ಧ ಗೂಂಡಾ ಕಾಯ್ದೆ ಹೇರಲಾಗಿದೆ. ಪ್ರೀತಂ ಪೂಜಾರಿ ವಿರುದ್ಧ ಕಂಕನಾಡಿ ನಗರ, ಗ್ರಾಮಾಂತರ, ಕದ್ರಿ, ಬಂದರು ಠಾಣೆಗಳಲ್ಲಿ ಕೊಲೆ ಯತ್ನ, ಕೊಲೆ ಬೆದರಿಕೆ, ಹಲ್ಲೆ, ದರೋಡೆ, ಗಾಂಜಾ ಸೇವನೆ ಸೇರಿ 12

ಮಕ್ಕಳಲ್ಲಿ ಪರಿಸರ ಪ್ರಜ್ಞೆ ಅತೀ ಅಗತ್ಯ :ಡಾ|| ಚೂಂತಾರು

ಶಾಲೆಯಲ್ಲಿ ಪಾಠ ಮಾಡುವುದರ ಜೊತೆಗೆ ಶಿಕ್ಷಕರು ಮಕ್ಕಳಲ್ಲಿ ಪರಿಸರ ಪ್ರಜ್ಞೆ ಆರೋಗ್ಯ, ಕಾಳಜಿ, ಸಾಮಾಜಿಕ ಹೊಣೆಗಾರಿಕಿ ಮತ್ತು ಸಾಮಾನ್ಯ ಪ್ರಜ್ಞೆಗಳ ಬಗ್ಗೆಯೂ ಜಾಗೃತಿ ಮೂಡಿಸಬೇಕು. ಬರೀ ಪಾಠ ಹೇಳಿಕೊಡುವುದರಿಂದ ಮಕ್ಕಳ ಜ್ಞಾನ ವೃದ್ಧಿಯಾಗಬಹುದೇ ಹೊರತು ಅವರು ಪ್ರಜ್ಞಾವಂತ ನಾಗರಿಕರಾಗಲು ಸಾಧ್ಯವಿಲ್ಲ. ಮಕ್ಕಳ ಪರಿಪೂರ್ಣ ವ್ಯಕ್ತಿತ್ವದ ನಿರ್ಮಾಣವಾಗಲು ಪಠ್ಯದ ಜೊತೆಗೆ ಸಾಮಾಜಿಕ ಕಾಳಜಿ, ಸಾಮಾಜಿಕ ಬದ್ಧತೆ, ದೇಶಪ್ರೇಮ ಪರಿಸರ ಕಾಳಜಿ ಬೆಳೆಸುತ್ತದೆ. ಈಗಿನ

ಎಸ್.ಸಿ.ಎಸ್. ಕಾಲೇಜ್ ಆಫ್ ನರ್ಸಿಂಗ್ ಸೈನ್ಸ್‍ನ ಅರೋಹಣ -2022 ಕ್ರೀಡಾಕೂಟ

ಮಂಗಳೂರಿನ ಆಶೋಕನಗರದ ಎಸ್.ಸಿ.ಎಸ್. ಕಾಲೇಜ್ ಆಫ್ ನರ್ಸಿಂಗ್ ಸೈನ್ಸ್‍ನ ಅರೋಹಣ – 2022 ಕ್ರೀಡಾ ಕೂಟವನ್ನು ನಗರದ ಮಂಗಳಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಗರದ ಎಸ್.ಸಿ.ಎಸ್. ಕಾಲೇಜ್ ಆಫ್ ನರ್ಸಿಂಗ್ ಸೈನ್ಸ್‍ನ ಅರೋಹಣ – 2022 ಕ್ರೀಡಾ ಕೂಟಕ್ಕೆ ಚಾಲನೆ ಸಿಕ್ಕಿತ್ತು. ಇನ್ನು ಕ್ರೀಡಾಕೂಟಕ್ಕೆ ಎಸ್.ಸಿ.ಎಸ್.ಗ್ರೂಫ್ ಆಫ್ ಇನ್ಸ್‍ಟ್ಯೂಷನ್‍ನ ಆಡಳಿತಾಧಿಕಾರಿ

ಉತ್ತಮ ಸಂಸ್ಕಾರವೇ ಬದುಕಿನ ಶ್ರೀಮಂತಿಕೆ: ಗಣೇಶ್ ಅಮೀನ್ ಸಂಕಮಾರ್

ಉತ್ತಮ ಸಂಸ್ಕಾರವೇ ಬದುಕಿನ ಶ್ರೀಮಂತಿಕೆ ಗುರುಪೂರ್ಣಿಮೆಯ ಮೂಲತತ್ವ ಬೌದ್ಧಿಕ ವಿಕಾಸ ಎಂದು ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಕೇಂದ್ರ ಮಂಗಳೂರು ಯೂನಿವರ್ಸಿಟಿಯ ನಿರ್ದೇಶಕ ತುಳು ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್ ನುಡಿದರು.ಮಂಗಳೂರಿನ ಕೊಟ್ಟಾರದ ಭರತಾಂಜಲಿ ರಿಜಿಸ್ಟರ್ ಇದ್ರ ಶ್ರೀ ಮಹಾಗಣಪತಿ ದೇವಸ್ಥಾನ ಗಣೇಶಪುರ ಕಾಟಿಪಳ್ಳ ಇವರ ಆಶ್ರಯದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿರುವ ಗುರು ಪೂರ್ಣಿಮಾ ಉತ್ಸವ

ಪಡುಬಿದ್ರಿಯಲ್ಲಿ ರೈತ ಮಿತ್ರ ನೇಜಿ ನೆಡುವ ಪ್ರಾತ್ಯಕ್ಷಿಕೆ

ಪಡುಬಿದ್ರಿ ರೋಟರಿ ಕ್ಲಬ್ ವತಿಯಿಂದ ನಡೆದ ರೈತ ಮಿತ್ರ ಮಿತ್ರ ನೇಜಿ ನೇಡುವ ಪ್ರಾತ್ಯಕ್ಷಿಕೆ ಕಾರ್ಯಕ್ರಮಕ್ಕೆ ಮಾಜಿ ತಾ.ಪಂ.ಸದಸ್ಯ ನವೀನ್‍ಚಂದ್ರ ಜೆ. ಶೆಟ್ಟಿ ಚಾಲನೆ ನೀಡಿದರು.ಅವರು ಈ ಸಂದರ್ಭ ಮಾತನಾಡಿ ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಕೃಷಿ ಬದುಕಿನಲ್ಲಿ ಅರೋಗ್ಯ ವಂತರಾಗಿ ದೀರ್ಘ ಆಯುಷ್ಯರಾಗಿ ಬದುಕಿದವರು. ಅದರೆ, ನಾವು ಇಂದಿನ ಅಧುನಿಕ ಜೀವನ ಶ್ಯೆಲಿಯಲ್ಲಿ ಬದುಕುತ್ತಿರುವುದರಿಂದ ಮದುಮೇಹ ಮತ್ತು ಹೃದಯಾಘಾತ ದಂತಹಾ ಕಾಯಿಲೆಗಳು ಇಳಿ ವಯಸ್ಸಿನಲ್ಲಿ