ಮೂಡುಬಿದಿರೆ: ಭಾರತ ಚುನಾವಣಾ ಆಯೋಗ, ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್‌ಸಮಿತಿ ಹಾಗೂ ಸಾರ್ವತ್ರಿಕ ಲೋಕಸಭಾ ಚುನಾವಣೆ -2024 ಮೂಡುಬಿದಿರೆ ಸ್ವೀಪ್ ಸಮಿತಿ ವತಿಯಿಂದ ಮೂಡುಬಿದಿರೆ ತಾಲೂಕಿನ ಮಹಾವೀರ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಮತದಾನದ ಮಹತ್ವ ಹಾಗೂ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮವು ಸೋಮವಾರ ಕಾಲೇಜು ಸಭಾಂಗಣದಲ್ಲಿ ನಡೆಯಿತು. ತಾಲೂಕು ಪಂಚಾಯತ್
ಮೂಡುಬಿದಿರೆ: ಏ. 26 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆ- 2024 ರ ಪ್ರಯುಕ್ತ ಮತದಾರರಿಗೆ ಜಾಗೃತಿ ಮೂಡಿಸುವ ಸಲುವಾಗಿ ಮತದಾನ ಜಾಗೃತಿ ಜಾಥಾ ರಥವು ಶನಿವಾರ ಮೂಡುಬಿದಿರೆ ತಾಲೂಕು ಪಂಚಾಯತ್ ಗೆ ಆಗಮಿಸಿತು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯವರಾದ ಎಸ್. ವೆಂಕಟಚಲಪತಿ ಜಾಗೃತಿ ರಥವನ್ನು ಸ್ವಾಗತಿಸಿದರು.ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸಿಬ್ಬಂದಿ ವರ್ಗ ಹಾಗೂ ಸ್ಥಳೀಯ ಶಾಲೆಯ ಮುಖ್ಯೋಪಾಧ್ಯರು, ಶಿಕ್ಷಕರು ಹಾಜರಿದ್ದರು.ನಂತರ ಮತದಾನ
ಮೂಡುಬಿದಿರೆ: ಕಾಂಗ್ರೆಸ್ ಯಾವತ್ತಿಗೂ ಹರಿಯುವ ನದಿ. ಕರ್ನಾಟಕದಲ್ಲಿ ಕಾಂಗ್ರೆಸನ್ನು ನಿರ್ನಾಮ ಮಾಡುವುದಾಗಿ ಹೇಳಿದ್ದ ಬಿಜೆಪಿ ಇಂದು ಅಧಿಕಾರವನ್ನು ಕಳೆದುಕೊಂಡಿದೆ. ಜನಸಾಮಾನ್ಯರಿಗೆ ಸದಾ ಸ್ಪಂದಿಸುವ ಗುಣ ಹೊಂದಿರುವ ಕಾಂಗ್ರೆಸನ್ನು ನಿರ್ನಾಮ ಮಾಡಲು ಸಾಧ್ಯವೇ ಇಲ್ಲ. ಈ ಬಾರಿ ಸಂಸತ್ ಚುನಾವಣೆಯಲ್ಲಿ ರಾಜ್ಯದಲ್ಲಿ ಅತೀ ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ. ಈ ಮೂಲಕ ಕರಾವಳಿ ಭಾಗದಲ್ಲೂ ಕಾಂಗ್ರೆಸ್ ಗೆಲುವು ಪಡೆದುಕೊಳ್ಳಲಿದೆ ಎಂದು ಮಾಜಿ ಸಚಿವ
ಮೂಡುಬಿದಿರೆ : ಇಲ್ಲಿನ ತಾಲೂಕು ಪಂಚಾಯತ್ ನಲ್ಲಿ ಇದೀಗ ಇಬ್ಬರು ಕಾರ್ಯನಿರ್ವಾಹಕ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದು ಅಧಿಕೃತ ಕಾರ್ಯನಿರ್ವಾಹಕ ಅಧಿಕಾರಿ ಯಾರೆಂಬುದು ಸಾರ್ವಜನಿಕರಲ್ಲಿ ಗೊಂದಲ ಮೂಡಿದೆ.ಶಿಕ್ಷಣ ಇಲಾಖೆಯಿಂದ ಕಳೆದ ಏಳು ತಿಂಗಳ ಹಿಂದೆ ಮೂಡುಬಿದಿರೆ ತಾ.ಪಂ.ಗೆ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದ ಲೊಕೇಶ್ ಸಿ.ಅವರನ್ನು ಚುನಾವಣಾ ಆದೇಶದ ಹಿನ್ನಲೆಯಲ್ಲಿ ವರ್ಗಾವಣೆ ಮಾಡಲಾಗಿದೆ. ಇಲ್ಲಿಗೆ ಕೋಲಾರದ ವೆಂಕಟಾಚಲಪತಿ ರಾಜ್
ಮೂಡುಬಿದಿರೆ : ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿ ಮಾಜಿ ಅಧ್ಯಕ್ಷೆ, ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಪುತ್ತಿಗೆಮನೆ ಎಂ. ಗೋಪಾಲ ಆಚಾರ್ಯರ ಪತ್ನಿ ಪ್ರಭಾವತಿ ಜಿ. ಆಚಾರ್ಯ (75) ಅವರು ಬುಧವಾರ ಮುಂಜಾನೆ ನಿಧನ ಹೊಂದಿದರು.ಮೂಡುಬಿದಿರೆ ಇನ್ನರ್ ವೀಲ್ ಕ್ಲಬ್ ನಲ್ಲಿ ಸಕ್ರಿಯರಾಗಿದ್ದಾಗ ಪಲ್ಸ್ ಪೋಲಿಯೋ ಕುರಿತಾದ ಪ್ರಹಸನ ಸಹಿತ ಮನೆ ಮನೆಗೆ ಮಾಹಿತಿ ನೀಡುವ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.ಆನೆಗುಡ್ಡೆ ಚರ್ಚ್ ನಲ್ಲಿ ನಡೆದ
ಸಾರ್ವಜನಿಕ ಶ್ರೀ ಶನಿಪೂಜಾ ಸಮಿತಿ ದೊಡ್ಡಮನೆ ರಸ್ತೆ ಮೂಡಬಿದಿರೆ ಇದರ ಆಶ್ರಯದಲ್ಲಿ 39ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆಯು ಮಾರ್ಚ್ 23ರಂದು ದೊಡ್ಡಮನೆ ರಸ್ತೆಯ ಅಶ್ವತ್ಥಕಟ್ಟೆಯಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಮಾರೂರು ಖಂಡಿಗ ಶ್ರೀಯುತ ರಾಮದಾಸ ಅಸ್ರಣ್ಣ ಅವರ ನೇತೃತ್ವದಲ್ಲಿ ಶನಿಪೂಜೆಯು ನಡೆಯಲಿದ್ದು, ಬೆಳಿಗ್ಗೆ 9 ಗಂಟೆಗೆ ಕಟ್ಟೆಯಲ್ಲಿ ನಾಗಬನಕ್ಕೆ ನಾಗತಂಬಿಲ, ಸಂಜೆ 6 ಗಂಟೆಗೆ ಕಲಶ ಪ್ರತಿಷ್ಠೆ, ಸಂಜೆ 6.30ಕ್ಕೆ ಶನಿಪೂಜೆ ಪ್ರಾರಂಭ, ರಾತ್ರಿ
ಕರ್ನಾಟಕದ ಕರಾವಳಿ ಮತ್ತು ಮಲೆನಾಡು, ತೆಂಕಣ ಒಳನಾಡಿನಲ್ಲಿ ಮಾರ್ಚ್ 21ರಿಂದ ಮೂರು ದಿನಗಳ ಕಾಲ ಮಳೆ ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈಗಾಗಲೇ ಕರಾವಳಿಯಲ್ಲಿ ಮೋಡ ಮುಚ್ಚಿದ ವಾತಾವರಣ ಮುಂದುವರಿಯಲಿದೆ. ಗಾಳಿ ಕೂಡ ಬಲವಾಗಿ ಬೀಸಲಿದೆ ಎನ್ನಲಾಗಿದೆ. ಕರ್ನಾಟಕದ ಬಡಗಣ ಭಾಗದಲ್ಲಿ ಒಣ ಹವೆ ಮುಂದುವರಿಯಲಿದೆ. ಕೊಪ್ಪಳದಲ್ಲಿ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಅದು ಆ ಸುತ್ತ ಕೆಲ ದಿನಗಳ ಕಾಲ ಮುಂದುವರಿಯುತ್ತದೆ ಎಂದೂ ತಿಳಿಸಲಾಗಿದೆ.
ಮೂಡುಬಿದಿರೆ: ಶ್ರೀ ಮಹಿಷಮರ್ಧಿನಿ ಕಂಬಳ ಸಮಿತಿ ಹೊಕ್ಕಾಡಿಗೋಳಿ ಇದರ ವತಿಯಿಂದ ನಡೆಯುವ ಶ್ರೀ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳವನ್ನು ಶ್ರೀ ಕ್ಷೇತ್ರ ಪೂಂಜದ ಅಸ್ರಣ್ಣರಾದ ಕೃಷ್ಣ ಪ್ರಸಾದ್ ಆಚಾರ್ಯ ಅವರು ಕಂಬಳದ ಕರೆಗೆ ಪ್ರಸಾದ್ ಅರ್ಪಿಸಿ, ದೀಪ ಬೆಳಗಿಸುವ ಮೂಲಕ ಚಾಲನೆಯನ್ನು ನೀಡಿದರು.ನಂತರ ಮಾತನಾಡಿದ ಅವರು ಈ ಹಿಂದೆ ನಡೆಯುತ್ತಿದ್ದ ಕಂಬಳಗಳ ಸಂದರ್ಭದಲ್ಲಿ ಎಲ್ಲರೂ ಕಂಬಳಕ್ಕಾಗಿ ಕಾಯುತ್ತಿದ್ದ ಸಂದರ್ಭವಿತ್ತು ಆದರೆ ಈ ಬಾರಿಯ ಕಂಬಳವು ಎರಡೆರಡು ಕಡೆಗಳಲ್ಲಿ
ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆ, ಯುವವಾಹಿನಿ (ರಿ) ಮೂಡುಬಿದಿರೆ ಘಟಕ, ಮಂಗಳೂರಿನ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ನೇತ್ರಾ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ( ಅಂದತ್ವ ವಿಭಾಗ) ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ವಿದ್ಯಾಗಿರಿ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆ ಆವರಣದಲ್ಲಿ ನಡೆಯಿತು. ಯುವ ವಾಹಿನಿ (ರಿ)
ಮೂಡುಬಿದಿರೆ: ತೆಂಕಮಿಜಾರು ಗ್ರಾ.ಪಂಚಾಯತ್ ನಲ್ಲಿ ಮಂಗಳವಾರ 2023-24ನೇ ಸಾಲಿನ ವಿಶೇಷ ಚೇತನರ ಸಮನ್ವಯ ಗ್ರಾಮಸಭೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.ಗ್ರಾ.ಪಂ.ಅಧ್ಯಕ್ಷೆ ಶಾಲಿನಿ ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ 49 ಮಂದಿ ವಿಶೇಷಚೇತನರಿಗೆ ತಲಾ 2000ದಂತೆ ರೂ 98000 ಚೆಕ್ಕನ್ನು ವಿತರಿಸಲಾಯಿತು.ವೆನ್ ಲಾಕ್ ಆಸ್ಪತ್ರೆಯ ಎಂಆರ್ ಡಬ್ಲ್ಯೂ ಜಯಪ್ರಕಾಶ್ ವಿಶೇಷ ಚೇತನರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.ಪಂಚಾಯತ್




























