ಬೈಂದೂರು ತಾಲೂಕುಗುಡ್ಡೆ ಹೋಟೆಲ್ ಅಯ್ಯಪ್ಪ ಸ್ವಾಮಿ ಮಂದಿರದ ಗುರು ಸ್ವಾಮಿ ಕಾಮೇಶ್ ಹಾಗೂ ಭಕ್ತವೃಂದದವರು ಹೆಮ್ಮುಂಜೆಯಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಸಿಹಿ ತಿಂಡಿ ಹಂಚಿ ರೂಪಾಯಿ ಹತ್ತು ಸಾವಿರದ ನೂರನ್ನು ಶಾಲೆಯ ಕಂಪ್ಯೂಟರ್ ಕ್ಯಾಬಿನ್ ರಚನೆಗೆ ದೇಣಿಗೆಯಾಗಿ ನೀಡಿದರು. ಶಾಲೆಯ ಬಗ್ಗೆ ಇರುವ ಕಾಳಜಿ, ಅಭಿಮಾನ ಹಾಗೂ ಪ್ರೋತ್ಸಾಹವನ್ನು ಶಾಲಾ
ಮೂಡುಬಿದಿರೆಯ ಆರಕ್ಷಕರ ಠಾಣೆಯು ಸುಸಜ್ಜಿತವಾಗಿಲ್ಲ, ಪೊಲೀಸರಿಗೆ ಬೇಕಾಗುವ ಮೂಲಭೂತವಾದ ವ್ಯವಸ್ಥೆ ಸರಿಯಾಗಿಲ್ಲ, 60 ಸಿಬಂದಿಗಳ ಅವಶ್ಯಕತೆ ಇರುವ ಠಾಣೆಯಲ್ಲಿ ಕೇವಲ 40 ಸಿಬಂದಿಗಳಷ್ಟೇ ಇದ್ದಾರೆ, ಇದರಿಂದಾಗಿ ಸೂಕ್ತ ರೀತಿಯಲ್ಲಿ ಕರ್ತವ್ಯ ನಿರ್ವಹಿಸಲು ತೊಂದರೆಯಾಗುತ್ತಿದೆ ಎಂದು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ಅವರು ಶಾಸಕರ ಗಮನಕ್ಕೆ ತಂದರು. ಶಾಸಕ ಉಮನಾಥ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ತಾಲೂಕು ಆಡಳಿತ ಸೌಧದಲ್ಲಿ ನಡೆದ ಮೊದಲ ತಾಲೂಕು ಕೆಡಿಪಿ
ಮೂಡುಬಿದಿರೆ: ಯಕ್ಷಗಾನವನ್ನು ಒಂದು ಪರಿಪೂರ್ಣ ಕಲೆಯನ್ನಾಗಿ ಮಾಡುವ ಮಹತ್ಕಾರ್ಯವನ್ನು ಕಲಾವಿದರು, ಭಾಗವತರು, ವೇಷಧಾರಿಗಳು ಮಾಡುತ್ತಿದ್ದಾರೆ. ಇವರ ಕೊಡುಗೆಯಿಂದ ಯಕ್ಷಗಾನ ಅತ್ಯುನ್ನತ ಸ್ಥಾನಕ್ಕೇರಿದೆ. ಸಂಗೀತ, ಭಾಗವತಿಗೆ, ಹಿಮ್ಮೇಳ, ವೇಷಭೂಷಣ, ನೃತ್ಯಗಳನ್ನು ಒಳಗೊಂಡ ಸರ್ವ ಗುಣ ಸಂಪನ್ನವಾದAತ ಕಲೆ ಯಕ್ಷಗಾನ. ಪಟ್ಲ ಸತೀಶ್ ಶೆಟ್ಟಿ ಕೇವಲ ಕಲಾವಿದ ಮಾತ್ರವಲ್ಲ. ಪಟ್ಲ ಫೌಂಡೇಶನ್ ಸ್ಥಾಪಿಸಿ ಅನೇಕ ಕಲಾವಿದರಿಗೆ ಬದುಕು ಕೊಡುತ್ತಿದ್ದಾರೆ ಎಂದು ಯಕ್ಷಧ್ರುವ ಪಟ್ಲ
ಉಡುಪಿಯ ಬೈಂದೂರು ತಾಲೂಕಿನ ಕೊಲ್ಲೂರು ವ್ಯಾಪ್ತಿಯ ಹಲವೆಡೆ ನಕ್ಸಲೀಯರು ಓಡಾಟ ನಡೆಸಿದ ಶಂಕೆ ವ್ಯಕ್ತವಾಗಿದೆ. ಬೈಂದೂರು ತಾಲೂಕಿನ ಮುದೂರು, ಜಡ್ಕಲ್, ಬೆಳ್ಕಲ್ ಪರಿಸರದಲ್ಲಿ ಓಡಾಟ ನಡೆಸಿದ್ದು, ಹಲವು ಮನೆಗಳಿಗೆ ಭೇಟಿ ನೀಡಿ ನಾಲ್ವರ ತಂಡ ತೆರಳುತ್ತಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಹಸಿರು ಬಣ್ಣದ ಡ್ರೆಸ್ ಕೋಡ್, ಇಬ್ಬರಲ್ಲಿ ಶಸ್ತ್ರಾಸ್ತ್ರ ಇರುವ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಕಾರ್ಯಪ್ರವೃತ್ತರಾದ ಪೊಲೀಸ್
ಮೂಡುಬಿದಿರೆ: ಸಂವಿಧಾನ ಪೀಠಿಕೆ, ಜವಾಬ್ದಾರಿ ಮತ್ತು ಅದರ ಮಹತ್ವ ಸಾರುವ ಅಂಬೇಡ್ಕರ್ ಪ್ರತಿಮೆಯ ಸ್ತಬ್ಧ ಚಿತ್ರವನ್ನೊಳಗೊಂಡ ಸಂವಿಧಾನ ಜಾಗೃತಿ ಜಾಥಾ ರಥವು ಮೂಡುಬಿದಿರೆ ಪುರಸಭಾ ವ್ಯಾಪ್ತಿಗೆ ಆಗಮಿಸಿದ್ದು ತಾಲೂಕು ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಮತ್ತು ಪುರಸಭಾ ಮುಖ್ಯಾಧಿಕಾರಿ ಇಂದು ಎಂ.ಅವರು ತಾಲೂಕು ಆಡಳಿತ ಸೌಧದ ಮುಂಭಾಗ ಬರಮಾಡಿಕೊಂಡರು. ನಂತರ ತಹಶೀಲ್ದಾರ್ ಅವರು ಅಂಬೇಡ್ಕರ್ ಅವರ ಸ್ತಬ್ಧ ಚಿತ್ರಕ್ಕೆ ಹಾರಾರ್ಪಣೆಗೈದರು.ಪುರಸಭಾ ಸದಸ್ಯರಾದ
ಮೂಡುಬಿದಿರೆ: ಸಂವಿಧಾನ ಪೀಠಿಕೆ, ಜವಾಬ್ದಾರಿ ಮತ್ತು ಅದರ ಮಹತ್ವ ಸಾರುವ ಅಂಬೇಡ್ಕರ್ ಪ್ರತಿಮೆಯ ಸ್ತಬ್ಧ ಚಿತ್ರವನ್ನೊಳಗೊಂಡ ಸಂವಿಧಾನ ಜಾಗೃತಿ ಜಾಥಾ ರಥವು ಮೂಡುಬಿದಿರೆಯಲ್ಲಿ ಸಂಚಾರ ಆರಂಭಿಸಿದ್ದು ಮಧ್ಯಾಹ್ನದ ವೇಳೆಗೆ ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಆಗಮಿಸಿದ್ದು ಇದನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಧ, ಸರ್ವ ಸದಸ್ಯರು ಮತ್ತು ಪಿಡಿಒ ಭೀಮ ನಾಯಕ್ ಅವರು ಪಂಚಾಯತ್ ಮುಂಭಾಗದಲ್ಲಿ ಬರಮಾಡಿಕೊಂಡರು. ಅಧ್ಯಕ್ಷೆ ರಾಧಾ ಅವರು ಅಂಬೇಡ್ಕರ್ ಅವರ
ಸಾರ್ವಜನಿಕ ವಿತರಣಾ ಪದ್ಧತಿಯಡಿ ಸರಕಾರದಿಂದ ಆಹಾರ ಧಾನ್ಯಗಳನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಪ್ರತೀ ತಿಂಗಳು ವಿತರಿಸಲಾಗುತ್ತಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಹಸಿವು ಮುಕ್ತ ಕರ್ನಾಟಕದ ಪರಿಕಲ್ಪನೆಯೊಂದಿಗೆ ಅನ್ನಭಾಗ್ಯ ಯೋಜನೆಯಡಿ ಪ್ರತೀ ತಿಂಗಳು ಅರ್ಹ ಫಲಾನುಭವಿಗಳಿಗೆ ಪಡಿತರ ನೀಡಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 460 ನ್ಯಾಯಬೆಲೆ ಅಂಗಡಿಗಳಿದ್ದು ಒಟ್ಟು 451593 ಪಡಿತರ ಚೀಟಿಗಳಿವೆ.ಅಂತ್ಯೋದಯ ಅನ್ನಯೋಜನೆಯಡಿ ಜಿಲ್ಲೆಯಲ್ಲಿ ಬಡತನ
ರಾಷ್ಟ್ರೀಯ ಬಿಲ್ಲವರ ಮಹಾಮಂಡಲ (ರಿ.) ಮುಲ್ಕಿ ಇದರ ಅರ್ಧ ವಾರ್ಷಿಕ ಪ್ರಾದೇಶಿಕ ಮಹಾಸಭೆಯು ಮೂಡಬಿದ್ರೆ ತಾಲೂಕಿನ ಇರುವೈಲಿನ ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾದ ಡಾ। ರಾಜಶೇಖರ್ ಕೋಟ್ಯಾನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಇರುವೈಲು ಸಂಘದ ಅಧ್ಯಕ್ಷರಾದ ಕುಮಾರ್ ಪೂಜಾರಿ,ಕರ್ನಾಟಕ ಉಚ್ಚ ನ್ಯಾಯಾಲಯದ ನಿರ್ದೇಶಿತ ಹಿರಿಯ ನ್ಯಾಯಾವಾದಿ ತಾರಾನಾಥ ಪೂಜಾರಿ, ಮಹಾಮಂಡಲದ ಕಾರ್ಯದರ್ಶಿ ಗಂಗಾಧರ ಪೂಜಾರಿ
ಮೂಡುಬಿದಿರೆ: ಆಳ್ವಾಸ್ ಸೆಂಟ್ರಲ್ ಸ್ಕೂಲ್‌ನ 9ನೇ ತರಗತಿಯ ವಿದ್ಯಾರ್ಥಿ ಅಮೋಘ್ ಎ.ಹೆಬ್ಬಾರ್ ಮಾರ್ಚ್ ತಿಂಗಳಲ್ಲಿ ಉತ್ತರ ಆಫ್ರಿಕಾದ ಟ್ಯುನೀಶಿಯಾದಲ್ಲಿ ನಡೆಯುವ ಅಂತರರಾಷ್ಟ್ರೀಯ ವಾರ್ಷಿಕ ಮೆಗಾ ಸೈನ್ಸ್ ಫೆಸ್ಟಿವಲ್, `ಕೀಟ ಮತ್ತು ಕಳೆಗಳನ್ನು ನಿಯಂತ್ರಿಸಲು ನೈಸರ್ಗಿಕ ವಿಧಾನ’ ಶೀರ್ಷಿಕೆಯ ಸಂಶೋಧನಾ ಯೋಜನೆಯನ್ನು ಪ್ರಸ್ತುತಪಡಿಸಲು ಅರ್ಹತೆ ಪಡೆದಿದ್ದಾರೆ.ಗುಜರಾತ್‌ನ ರಾಜಕೋಟ್‌ನಲ್ಲಿ ನಡೆದ ರಾಷ್ಟೀಯ ಮಟ್ಟದ ಭಾರತೀಯ ವಿಜ್ಞಾನ ಮತ್ತು ಇಂಜಿನಿಯರಿಂಗ್
ಮೂಡುಬಿದಿರೆ: ಇಂಟರ್‌ನ್ಯಾಷನಲ್ ಫ್ಲೋರ್ ಬಾಲ್ ಫೆಡರೇಶನ್ ಹಾಗೂ ಫ್ಲೋರ್ ಬಾಲ್ ಅಸೋಸಿಯೇಷನ್ ತಮಿಳುನಾಡು ಮತ್ತು ಫಿಟ್ ಇಂಡಿಯಾ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಜ.25-28 ವರೆಗೆ ನಡೆದ 17ನೇ ರಾಷ್ಟ್ರೀಯ ಫ್ಲೋರ್ ಬಾಲ್ ಚಾಂಪಿಯನ್ ಶಿಫ್ 2023-24ರಲ್ಲಿ ಕರ್ನಾಟಕ ತಂಡವು ಜಯಗಳಿಸಿದ್ದು, ಈ ತಂಡದಲ್ಲಿ ಎಡಪದವು ಸ್ವಾಮಿ ವಿವೇಕಾನಂದ ಪ.ಪೂ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಆಟವಾಡಿದ್ದು ಅವರನ್ನು ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಿ




























