ವಿದ್ಯಾಗಿರಿಯ ಆಳ್ವಾಸ್ ನ ಕ್ಯಾಂಪಸ್ ನ ಆವರಣದಲ್ಲಿ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಆರಂಭಗೊಳ್ಳಲು ಇನ್ನು ಒಂದು ದಿನವಷ್ಟೇ ಬಾಕಿಯಿದೆ. ಆದರೆ ವಿವಿಧ ಜಾತಿಯ ಬಣ್ಣ ಬಣ್ಣದ ಹೂ-ಗಿಡಗಳಿಂದ ತುಂಬಿದ ಲೋಕವೊಂದು ಈಗಾಗಲೇ ಸೃಷ್ಟಿಯಾಗುವ ಮೂಲಕ ಕಣ್ಮನ ಸೆಳೆಯುತ್ತಿದೆ. ವಿವಿಧ ರಾಷ್ಟ್ರಗಳಿಂದ ಬರುವ ವಿದ್ಯಾರ್ಥಿಗಳು ತರಬೇತುದಾರರಿದ್ದಾರೆ. ಪ್ರದರ್ಶನಗೊಳ್ಳುವ ಕಲಾ
ಮೂಡುಬಿದಿರೆ: ವಲಯ ಮುಸ್ಲಿಂ ಸೌಹಾರ್ದ ಸಮಿತಿಯ ವತಿಯಿಂದ 20 ವಾಹನಗಳಲ್ಲಿ 5 ಲಕ್ಷ ಬೆಲೆಬಾಳುವ ಹೊರೆಕಾಣಿಕೆಯನ್ನು ದಫ್ ಕುಣಿತದ ಮೂಲಕ ಹೊರೆಕಾಣಿಕೆಯೊಂದಿಗೆ ಸಲ್ಲಿಸಲಾಯಿತು. ಸಮಿತಿಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಕಾರ್ಯದರ್ಶಿ ಶಫಿ, ಜೈನುದ್ದೀನ್ ಸೇರಿದಂತೆ 1000 ಮಂದಿ ಭಾಗಿಯಾಗಿದ್ದಾರೆ.
ಮೂಡುಬಿದಿರೆ: ಅಂತಾರಾಷ್ಟ್ರೀಯ ಸ್ಕೌಟ್-ಗೈಡ್ಸ್ ಸಾಂಸ್ಕೃತಿಕ ಜಾಂಬೂರಿಗೆ ವಿದ್ಯಾಗಿರಿಯು ವಿವಿಧ ರೂಪದಲ್ಲಿ ಸಜ್ಜಾಗೊಳ್ಳುತ್ತಿದ್ದು ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ಪ್ರಕೃತಿ ಸಂರಕ್ಷಣೆಯ ಬಗ್ಗೆ ಮಹತ್ವ ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೂಡುಬಿದಿರೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಕೆ.ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಹೇಮಗಿರಿ ಅಂಗಡಿ ನೇತೃತ್ವದಲ್ಲಿ ಕಳೆದ ಮೂರು ವಾರಗಳಿಂದ 50ರಿಂದ 60 ಮಂದಿ ಕಾರ್ಮಿಕರು ಕೆಲಸ ಮಾಡುವ ಮೂಲಕ 10
ಆಳ್ವಾಸ್ ಜಾಂಬೂರಿಗೆ 50 ಅಡಿ ಗಾತ್ರದ ಬ್ರಹತ್ ಗಾಳಿಪಟ ನಿರ್ಮಾಣವು ಡಿಸೆಂಬರ್ 21ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 3ರ ತನಕ ಮಂಗಳೂರಿನ ಗೋಕುಲ್ ಸಭಾಂಗಣದಲ್ಲಿ ನೆರವೇರಲಿದೆ. 50 ಅಡಿ ಎತ್ತರದ 16 ಅಡಿ ಅಗಲದ ಈ ಗಾಳಿಪಟದಲ್ಲಿ ತುಳುನಾಡಿನ ಸಾಂಸ್ಕೃತಿಕ ವಿಚಾರಗಳ ಕಲಾಕೃತಿಗಳನ್ನು ಬಣ್ಣ ಗಳ ಮೂಲಕ ಅಭಿವ್ಯಕ್ತ ಪಡಿಸಲಾಗುವುದು. ಅಂತರಾಷ್ಟ್ರೀಯ ಖ್ಯಾತಿಯ ಟೀಮ್ ಮಂಗಳೂರು ಹವ್ಯಾಸಿ ಗಾಳಿಪಟ ತಂಡದ ಕಲಾವಿದರು ಮತ್ತು ಗಾಳಿಪಟ ವಿನ್ಯಾಸಕಾರರಾದ ದಿನೇಶ್ ಹೊಳ್ಳ ಮತ್ತು
ಮೂಡುಬಿದಿರೆ: ಎರಡು ವಾರದ ಹಿಂದೆ ಬೆಳ್ತಂಗಡಿಯಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಮಾರೂರಿನ ಗುಡ್ಡ ಪ್ರದೇಶದಲ್ಲಿ ಭಾನುವಾರ ಪತ್ತೆಯಾಗಿದೆ. ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮದ ಬರಮೇಲು ಮನೆಯ ಆನಂದ ಮೂಲ್ಯ (57) ಎಂಬವರ ಮೃತದೇಹ ಎಂದು ಗುರುತಿಸಲಾಗಿದೆ. ಆನಂದ ಮೂಲ್ಯ ಅವರು ಕುಕ್ಕೇಡಿ ಗ್ರಾಮ ಪಂಚಾಯತ್ ಬಳಿಯಲ್ಲಿರುವ ಹೊಟೇಲೊಂದರಲ್ಲಿ ಕ್ಲೀನರ್ ಆಗಿ ದುಡಿಯುತ್ತಿದ್ದರು. ಡಿ.3ರಂದು ಬೆಳಿಗ್ಗೆ
ಮೂಡುಬಿದಿರೆ: ಡಿ.21-27 ಅಂತರಾಷ್ಡ್ರೀಯ ಮಟ್ಟದ ಸ್ಕೌಟ್ಸ್ ಗೈಡ್ಸ್ ಸಾಂಸ್ಕೃತಿಕ ಹಬ್ಬ ಜಾಂಬೂರಿ ನನ್ನ ಕ್ಷೇತ್ರದ ಮೂಡುಬಿದಿರೆ ತಾಲೂಕಿನಲ್ಲಿ ನಡೆಯುತ್ತಿರುವುದಕ್ಕೆ ನನಗೆ ಖುಷಿಯೊಂದಿಗೆ ಕುತೂಹಲ ಮೂಡಿಸಿದೆ ಎಂದು ಶಾಸಕ ಉಮಾನಾಥ ಎ.ಕೋಟ್ಯಾನ್ ಹೇಳಿದ್ದಾರೆ. ವಿದ್ಯಾಗಿರಿಯ 100 ಎಕರೆ ಪ್ರದೇಶದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಅಂತರಾಷ್ಟ್ರೀಯ ಮಟ್ಟದ ಜಾಂಬೂರಿ ನಮ್ಮ ದೇಶದಲ್ಲಿ ಇದೀಗ ಮೊದಲ ಬಾರಿ ನಡೆಸಲು ಅವಕಾಶ ಸಿಕ್ಕಿದ್ದು ಇನ್ನು ಇದು 40 ಅಥವಾ 50 ವರ್ಷಗಳ
ಮೂಡುಬಿದಿರೆ : ನಮ್ಮ ಸಮಾಜದಲ್ಲಿರುವ ಎಲ್ಲಾ ಸಮಸ್ಯೆಗೂ ಪರಿಹಾರ ಗುಣಮಟ್ಟದ ಶಿಕ್ಷಣ. ರಾಷ್ಟ್ರೀಯ ಶಿಕ್ಷಣ ನೀತಿಯೊಂದಿಗೆ ಸದೃಢವಾದ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಸರಕಾರವು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲು ಬದ್ಧವಾಗಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಹೇಳಿದರು. ಅವರು ವಿವಿ ಕಾಲೇಜು ಬನ್ನಡ್ಕ ಇದರ ಉದ್ಘಾಟನೆ ಮತ್ತು ಪ್ರತಿಭೋತ್ಸವ ಸಮಾರಂಭವನ್ನು
ಮೂಡುಬಿದಿರೆ : ಮಹಿಷಮರ್ಧಿನಿ ಕಂಬಳ ಸಮಿತಿ ಇದರ ವತಿಯಿಂದ ನಡೆಯುವ ಇತಿಹಾಸ ಪ್ರಸಿದ್ಧ ಹೋಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳವು ಶನಿವಾರ ಬೆಳಿಗ್ಗೆ ಆರಂಭಗೊಂಡಿತು. ನೋಣಾಲ್ ಗುತ್ತು ರಶ್ಮಿತ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಂಬಳವನ್ನು ಶ್ರೀ ಕ್ಷೇತ್ರ ಪೂಂಜದ ಅಸ್ರಣ್ಣ ಕೃಷ್ಣ ಪ್ರಸಾದ್ ಆಚಾರ್ಯ ಕಂಬಳದ ಕರೆಯಲ್ಲಿ ದೀಪ ಬೆಳಗಿಸಿ, ತೆಂಗಿನ ಕಾಯಿ ಹೊಡೆಯುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಆಧುನಿಕ ಕಾಲದಲ್ಲಿರುವ ನಾವು ಈ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಂಯೋಜನೆಯಲ್ಲಿ ಡಿ.21ರಿಂದ ನಡೆಯುವ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ಗದಗ ಜಿಲ್ಲೆಯಿಂದ 2 ಲಕ್ಷ ಜೋಳದ ರೊಟ್ಟಿಯನ್ನು ಕಳುಹಿಸಲಾಗಿದೆ.ಉತ್ತರ ಕರ್ನಾಟಕದ ಗಟ್ಟಿ ಆಹಾರ ಎನಿಸಿಕೊಂಡಿರುವ ಜೋಳದ ರೊಟ್ಟಿ, ಶೇಂಗಾ ಚಟ್ನಿಯನ್ನು ಉಣಬಡಿಸುವ ನಿಟ್ಟಿನಲ್ಲಿ 2 ಲಕ್ಷ ಮಾಲದಂಡಿ ಜೋಳದ ರೊಟ್ಟಿಗಳನ್ನು ಕಳುಹಿಸಲಾಗುತ್ತಿರುವದು ಎಲ್ಲರ ಗಮನ ಸೆಳೆದಿದೆ. ಗದಗದಿಂದ 2 ಲಕ್ಷ ರೊಟ್ಟಿ, 2 ಕ್ವಿಂಟಲ್ ಶೇಂಗಾ ಚಟ್ನಿಯನ್ನು
ಮೂಡುಬಿದಿರೆ: ಬೆಳೆಯುತ್ತಿರುವ ನಗರ ಮೂಡುಬಿದಿರೆ ಜೈನ ಕಾಶಿಯಾಗಿ ಮಾತ್ರ ಉಳಿದಿಲ್ಲ ಇದು ಶಿಕ್ಷಣ ಕಾಶಿಯಾಗಿಯೂ ಮುಂದುವರೆದಿದೆ. ಇಲ್ಲಿ ವಾಹನಗಳ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ವಾಹನಗಳ ಪಾರ್ಕಿಂಗ್ ಗೆ ಸರಿಯಾದ ಜಾಗವಿಲ್ಲದೆ ಜನರು ಅಡ್ಡಾದಿಡ್ಡಿಯಾಗಿ ವಾಹನಗಳನ್ನು ರಸ್ತೆಗಳ ಬದಿಗಳಲ್ಲೇ ನಿಲ್ಲಿಸಿ ಹೋಗುತ್ತಾರೆ ಇದರಿಂದಾಗಿ ಟ್ರಾಫಿಕ್ ಸಮಸ್ಯೆ ಜಾಸ್ತಿಯಾಗುತ್ತಿದೆ. ಈ ಸಮಸ್ಯೆಯನ್ನು ನೀಗಿಸಲು ಮೂಡುಬಿದಿರೆಯಲ್ಲಿ ಪೆÇಲೀಸರ ಕೊರತೆ ಇದೆ ಆದ್ದರಿಂದ