ಸುಳ್ಯ:ಸುಳ್ಯ ಪ್ರೆಸ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಶರೀಫ್ ಜಟ್ಟಿಪಳ್ಳ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಧಾನ ಗಿರೀಶ್ ಅಡ್ಪಂಗಾಯ, ಕೋಶಾಧಿಕಾರಿಯಾಗಿ ಈಶ್ವರ ವಾರಣಾಶಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎ.10ರಂದು ಸುಳ್ಯ ಪ್ರೆಸ್ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳರ ಅಧ್ಯಕ್ಷತೆಯಲ್ಲಿ ಮಹಾಸಭೆ
ದ್ವಿತೀಯ ಪಿ ಯು ಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಸೃಜನಾ ಬಿ ಎಸ್ ರವರು ಶೇಕಡಾ 95.3 ಅಂಕಗಳನ್ನು ಪಡೆದು ಕೊಂಡಿದ್ದಾರೆ.ಇವರು ಎಕ್ಸಲೆಂಟ್ ಪಿಯು ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಮೂಡುಬಿದಿರೆಯ ವಿದ್ಯಾರ್ಥಿ. ಮಂಡೆಕೋಲಿ ನ ಬೋಳುಗಲ್ಲು ಕುಟುಂಬದ ಶುಭಕರ ಹಾಗೂ ಗೀತಾಂಜಲಿ ಟಿ. ಜಿ (ಸಂಚಾಲಕರು ಅಂಜಲಿ ಮೊಂಟೆಸ್ಸರಿ ಸ್ಕೂಲ್ ಸುಳ್ಯ)ಅವರ ಮಗಳು.
ಸುಳ್ಯದ ಡಾ. ಹರಿಕೃಷ್ಣ ರೈ ಯವರು ಬೆಂಗಳೂರಿನ ಜಿ.ಇ ಹೆಲ್ತ್ ಕೇರ್ ಸಂಸ್ಥೆಯಲ್ಲಿ ಸೀನಿಯರ್ ಪ್ರಾಡಕ್ಟ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದು, ಎ.4 ರಂದು ಅಮೇರಿಕಾದ ವಿಸ್ಕಾನ್ಸಿನ್ ರಾಜ್ಯದ ಮಿಲ್ವಾಕೀ ನಗರದಲ್ಲಿ ನಡೆದ ಜಿ ಇ ಹೆಲ್ತ್ ಕೇರ್ ವಿಶ್ವ ಸಂಶೋಧನಾ ಸ್ಪರ್ಧೆ 2025 ರಲ್ಲಿ ಭಾಗವಹಿಸಿ, ಅವರು ಪ್ರದರ್ಶಿಸಿದ ” ಎಂ.ಆರ್.ಐ ಸ್ಕ್ಯಾನರ್ ನಲ್ಲಿ ಕ್ಯಾಮರಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮೂಲಕ ರೋಗಿಗಳ ಉಸಿರಾಟದ ಹಾಗೂ ಹೃದಯದ ಇ.ಸಿ.ಜಿ ತರಂಗರೂಪ
ಮಂಡೆಕೋಲು ಗ್ರಾಮದ ಮುರೂರು ಧ್ವಾರಕಾನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಕೃಷ್ಣ ಭಜನಾ ಮಂದಿರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ರೂಪಾಯಿ ಒಂದೂವರೆ ಲಕ್ಷ ಧನಸಹಾಯ ಮಂಜೂರಾಗಿದ್ದು ಇದರ ಮಂಜೂರಾತಿ ಪತ್ರವನ್ನು ತಾಲೂಕು ಯೋಜನಾಧಿಕಾರಿಗಳಾದ ಮಾದವ ಗೌಡರವರು ವಿತರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಮಾಧವ ಗೌಡರವರು ಶ್ರೀ ಕ್ಷೇತ್ರ ಧರ್ಮಸ್ಥಳ ಚತುರ್ದಾನಗಳಿಗೆ ಹೆಸರುವಾಸಿಯಾಗಿದ್ದು ಕಳೆದ 800 ವರ್ಷಗಳಿಂದ ಕ್ಷೇತ್ರದಲ್ಲಿ ಅನ್ನದಾನ, ವಿಧ್ಯಾದಾನ,
ಕ್ರೀಡೆ ಎಂಬುದು ಆರೋಗ್ಯಕ್ಕೆ ಪೂರಕ. ಕ್ರೀಡೆಯಿಂದ ದೈಹಿಕ ಕ್ಷಮತೆಯೊಂದಿಗೆ ನಾವು ಆರೋಗ್ಯವಾಗಿ ಕ್ರಿಯಾಶೀಲವಾಗಿ ಇರಲು ಸಾಧ್ಯ ಎಂದು ರಾಷ್ಟ್ರ ಮಟ್ಟದ ಕ್ರೀಡಾಪಟು, ಫೀಲ್ಡ ಮಾರ್ಷಲ್ ಕಾರ್ಯಪ್ಪ ಪದವಿ ಕಾಲೇಜು ಮಡಿಕೇರಿ ಇಲ್ಲಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರೊ. ಎವರೆಸ್ಟ್ ರೋಡ್ರಿಗಸ್ ಹೇಳಿದರು. ಇವರು ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಮಾರ್ಚ್ 27 ಮತ್ತು 28ರಂದು ನಡೆದ ಎರಡು ದಿನಗಳ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಉತ್ತಮ ಆಹಾರ ಮತ್ತು
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಬೆಳ್ಳಾರೆ ವಲಯದ ಕಳಂಜ ಕಾರ್ಯಕ್ಷೇತ್ರದಲ್ಲಿ ಶ್ರೀ ವಿಷ್ಣಮೂರ್ತಿ ದೈವಸ್ಥಾನದ ನೂತನ ಭೋಜನಶಾಲೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ. 3 ಲಕ್ಷ ಅನುದಾನದ ಮಂಜೂರಾತಿ ಪತ್ರ ವಿತರಣೆ ಇಂದು ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ ) ಸುಳ್ಯ ಇದರ ಯೋಜನಾಧಿಕಾರಿಗಳಾದ ಶ್ರೀ ಮಾಧವ,ಗೌಡ ಇವರು ಶ್ರೀ ವಿಷ್ಣುಮೂರ್ತಿ ಸೇವಾ ಟ್ರಸ್ಟ್ (ರಿ )
ನೆಹರೂ ಮೆಮೋರಿಯಲ್ ಕಾಲೇಜಿನ ಸಂಶೋಧನಾ ಸಂಘ ಮತ್ತು ಗ್ರಂಥಾಲಯ ವಿಭಾಗ ಹಾಗೂ ಐಕ್ಯೂಎಸಿ ವತಿಯಿಂದ “ಪ್ರಾಜೆಕ್ಟ್ ಪ್ರಪೋಸಲ್ಸ್ ಆ್ಯಂಡ್ ಫಂಡಿಂಗ್ ಏಜೆನ್ಸೀಸ್'” ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವು ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯಸ್ವಾಮಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ದಿನೇಶ ಪಿ.ಟಿ ಭಾಗವಹಿಸಿದ್ದು ಯೋಜನಾ ಪ್ರಸ್ತಾವನೆಯನ್ನು ಸಿದ್ಧಪಡಿಸುವ ವಿಧಾನ, ಎದುರಾಗುವ ಸಮಸ್ಯೆಗಳು, ಕಾರ್ಯವಿಧಾನಗಳು,
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇದರ ಆಶ್ರಯದಲ್ಲಿ ಆಲೆಟ್ಟಿ ಗ್ರಾಮದ ಕುಡೆಕಲ್ಲಿನಲ್ಲಿ ಅರೆಭಾಷಿಕರ ಐನ್ ಮನೆ ಐಸಿರಿ ಕಾರ್ಯಕ್ರಮ ನಡೆಯಲಿದ್ದು, ಆಮಂತ್ರಣ ಬಿಡುಗಡೆ ಕಾರ್ಯಕ್ರಮ ಸುಳ್ಯದ ಶ್ರೀಹರಿ ಕಾಂಪ್ಲೆಕ್ಸ್ ನಲ್ಲಿರುವ ರಂಗಮಯೂರಿಯ ಕಲಾ ಶಾಲೆಯಲ್ಲಿ ಮಾ.21ರಂದು ನಡೆಯಿತು. ನಿವೃತ್ತ ಪ್ರಾಂಶುಪಾಲೆ ಡಾ.ರೇವತಿ ನಂದನ್ ರವರು ಆಮಂತ್ರಣ ಬಿಡುಗಡೆ ಮಾಡಿದರು. ಅಕಾಡೆಮಿಯ ಈ ಪ್ರಯೋಗ ಯಶಸ್ವಿಯಾಗಿ ಭಾಷೆಯ ಬೆಳವಣಿಗೆ ಇನ್ನಷ್ಟು ವಿಸ್ತರಿಸಲಿ
ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಮಹಿಳಾ ಒಕ್ಕೂಟ ಮಡಿಕೇರಿ ಎಂಬ ನೂತನ ಸಂಘಟನೆ ಅಸ್ತಿತ್ವಕ್ಕೆ ಬಂದಿದ್ದು, ಇದರ ಉಪಾಧ್ಯಕ್ಷರಾಗಿ ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ಮಹಿಳಾ ಘಟಕದ ಅಧ್ಯಕ್ಷರಾಗಿರುವ ಶ್ರೀಮತಿ ವಿನುತಾ ಹರಿಶ್ಚಂದ್ರ ಪಾತಿಕಲ್ಲು ಆಯ್ಕೆಯಾಗಿದ್ದಾರೆ. ಸಮಿತಿಯ ಅಧ್ಯಕ್ಷರಾಗಿ ಮೂಟೇರ ಪುಷ್ಪಾವತಿ ರಮೇಶರವರ ನೇತೃತ್ವದಲ್ಲಿ ತಂಡ ರಚನೆಯಾಗಿದೆ. ಶ್ರೀಮತಿ ವಿನುತಾ ಪಾತಿಕಲ್ಲುರವರು ಮಂಡೆಕೋಲು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಹಾಲಿ
ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ಕರಿಯರ್ ಗೈಡೆನ್ಸ್ ಸೆಲ್ ಮತ್ತು ಐಕ್ಯುಎಸಿ ವತಿಯಿಂದ ವಿಜ್ಞಾನ ಸಂಘ ಮತ್ತು ನೇಚರ್ ಕ್ಲಬ್ ಸಹಯೋಗದೊಂದಿಗೆ ವೃತ್ತಿ ಕೌಶಲ್ಯ ಶಿಕ್ಷಣ ಮಾಹಿತಿ ಕಾರ್ಯಕ್ರಮವು ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಟಾಟಾ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಕಿಲ್ಸ್ ಇಲ್ಲಿನ ಮ್ಯಾನೇಜರ್ ಪೂರ್ಣಚಂದ್ರ ಬಿ ಪಿ ಯವರು ಮಾತನಾಡಿ ಟಾಟಾ ಎಜುಕೇಶನ್ ಟ್ರಸ್ಟ್ ನ ಮೂಲಕ ಸ್ಕಿಲ್ ಇಂಡಿಯಾ ಯೋಜನೆಯಂತೆ ವಿಜ್ಞಾನ ಪದವಿ ಮತ್ತು ಬಿಸಿಎ ಪದವಿ



























