ಸುಳ್ಯ: ಪಶ್ಚಿಮ ವಲಯ ಪೆÇಲೀಸ್ ಮಹಾ ನಿರೀಕ್ಷಕ ಚಂದ್ರಗುಪ್ತ ಅವರು ಬೆಳ್ಳಾರೆ ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಚುನಾವಣೆ ಹಿನ್ನಲೆಯಲ್ಲಿ ವಿಟ್ಲ, ಪುತ್ತೂರು ಪೊಲೀಸ್ ಠಾಣೆಗೆ ಭೇಟಿ ನೀಡಿದ ಚಂದ್ರಗುಪ್ತ ಅವರು ಬಳಿಕ ಬೆಳ್ಳಾರೆ ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಈ ವೇಳೆ ಪೊಲೀಸರಿಂದ ಗೌರವ ವಂದನೆ ಸಲ್ಲಿಸಲಾಯಿತು. ಬಳಿಕ ಠಾಣೆಯಲ್ಲಿ ಸಾರ್ವಜನಿಕ ಸಭೆ ನಡೆಸಿದ ಅವರು
ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಅವರು ಕ್ಷೇತ್ರದಾದ್ಯಂತ ಮಿಂಚಿನ ಸಂಚಲನ ಮೂಡಿಸಿದ್ದಾರೆ.ಕೃಷ್ಣಪ್ಪ ಅವರು ಸುಳ್ಯದ ವಿವಿಧ ಬೂತ್ , ಬ್ಲಾಕ್ ಗಳ ಹಿರಿಯ ನಾಯಕರನ್ನು ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಿದರು.ಕುಟ್ರಾಪ್ಪಾಡಿಯಲ್ಲಿ ಗ್ರಾಮದ ಹಿರಿಯ ಕಾಂಗ್ರೆಸ್ ಮುಖಂಡ ಸುಬ್ರಾಯ ಹೆಬ್ಬಾರ್ ಅವರನ್ನು ಭೇಟಿ ಮಾಡಿದರು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಆನಂದ ಪೂಜಾರಿ
ಗುಂಡ್ಯ: ರಾಷ್ಟ್ರೀಯ ಹೆದ್ದಾರಿ ಬೆಂಗಳೂರು-ಮಂಗಳೂರು ಮಧ್ಯೆ ಗುಂಡ್ಯ ಎಂಬಲ್ಲಿ ಎ.2ರ ಬೆಳಗ್ಗೆ ರಸ್ತೆಯ ಬದಿಯಲ್ಲಿ ಮಲಗಿದ ವ್ಯಕ್ತಿಯ ಮೇಲೆ ಲಾರಿಯೊಂದು ಚಲಾಯಿಸಿ ಸಾರಿ ಸಮೇತ ಚಾಲಕ ಪರಾರಿಯಾದ ಕೆಲವೇ ಕ್ಷಣದಲ್ಲಿ ಚಾಲಕ ಹಾಗೂ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.ಘಟನೆಯಲ್ಲಿ ವ್ಯಕ್ತಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ಕೇರಳದ ಪೊನ್ನಪ್ಪನ್(ವ.50) ಎಂದು ಗುರುತಿಸಲಾಗಿದೆ.ಮೃತ ವ್ಯಕ್ತಿಯು ಮೂಲತಃ ಕೇರಳದವನಾಗಿದ್ದು, ಕಳೆದ 15 ವರ್ಷದಿಂದ
ಪುತ್ತೂರು: ಪುತ್ತೂರು ನಗರ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಪರಮೇಶ್ವರ ಗೌಡ ಅವರು 2022ನೇ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿದ್ದಾರೆ. ವಾರಂಟ್ ಕರ್ತವ್ಯ ನಿರ್ವಹಿಸುತ್ತಿರುವ ಪರಮೇಶ್ ಅವರು ಕಳೆದ ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿ ವಿಚಾರಣೆಗೆ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಮಾಡಿದ ಸಾಧನೆ ಮತ್ತು ಕರ್ತವ್ಯ ನಿಷ್ಠೆಗೆ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ
ಕಡಬ: ಹೃದಯಾಘಾತದಿಂದ ಕೊಯಂಬತ್ತೂರಿನಲ್ಲಿ ನಿಧನರಾದ ಕಡಬ ತಾಲೂಕಿನ ರೆಂಜಿಲಾಡಿಯ ಯೋಧನಿಗೆ ಸಕಲ ಸರಕಾರಿ ಗೌರವಗಳೊಂದಿಗೆ ಮಂಗಳವಾರ ಅಂತಿಮ ಗೌರವ ಸಲ್ಲಿಸಿ ಅಂತಿಮ ಕಾರ್ಯ ನೆರವೇರಿಸಲಾಯಿತು. ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ತರಪ್ಪೇಳ್ ನಿವಾಸಿ ಮಾಜಿ ಯೋಧ ಜೋನಿ ಟಿ.ಕೆ. ಅವರ ಪುತ್ರ ಚೆನೈ ರಿಜಿಮೆಂಮಟ್ನ ಕೊಲ್ಕತ್ತಾ ಘಟಕದಲ್ಲಿ ಯೋಧರಾಗಿದ್ದ ಲಿಜೇಶ್ ಕುರಿಯನ್ (30) ಮಾ.26 ರಂದು ಚೆನೈನ ಕೊಯಂಬತ್ತೂರುನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ತಂದೆ, ತಾಯಿ,
ಸುಳ್ಯ: ನಿರ್ಮಾಣ ಕಾಮಗಾರಿ ವೇಳೆ ಮಣ್ಣು ಕುಸಿದು ಮೂವರು ಕಾರ್ಮಿಕರು ಮಣ್ಣಿನಡಿ ಸಿಲುಕಿ ಮೃತಪಟ್ಟ ಘಟನೆ ಸುಳ್ಯದಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ.ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಸುಳ್ಯದ ಪೇಟೆ ಸಮೀಪದ ಆಲೆಟ್ಟಿ ರಸ್ತೆಯ ಗುರುಂಪು ಎಂಬಲ್ಲಿ ಘಟನೆ ನಡೆದಿದೆ. ಖಾಸಗಿ ವ್ಯಕ್ತಿಯೋರ್ವರು ತಮ್ಮ ಮನೆ ಹಿಂಭಾಗದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಪಿಲ್ಲರ್ ಕಾಮಗಾರಿ ನಡೆಸುವ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದರು. ಕಾರ್ಮಿಕರು ಇಂದು ಕೆಲ ನಿರ್ವಹಿಸುವ ವೇಳೆ ಒಮ್ಮೆಲೇ
ಕಡಬದ ನೂತನ ತಾಲೂಕು ಪಂಚಾಯತ್ ಕಟ್ಟಡ, ಮಿನಿ ವಿಧಾನ ಸೌಧ ಕಟ್ಟಡ, ಕೊಯಿಲ ಪಶು ವೈದ್ಯಕೀಯ ಕಾಲೇಜಿನ ಉದ್ಘಾಟನೆ ಮತ್ತು ಸುಬ್ರಹ್ಮಣ್ಯ ದೇವಸ್ಥಾನದ ಮಾಸ್ಟರ್ ಪ್ಲಾನ್ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ, ಫಲಾನುಭವಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮಗಳು ಮಾ.24ರಂದು ನಡೆಯಲಿದ್ದು ಈ ಬಗ್ಗೆ ಕಡಬ ಅಂಬೇಡ್ಕರ್ ಭವನದಲ್ಲಿ ಪೂರ್ವಭಾವಿಯಾಗಿ ಸಚಿವ ಎಸ್.ಅಂಗಾರ ಅವರು ಅಧಿಕಾರಿಗಳ ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಸಚಿವ ಎಸ್.ಅಂಗಾರ ಅವರು, ಕಡಬ ತಾಲೂಕಿಗೆ
ಸುಳ್ಯ. ಮೀನುಗಾರಿಕೆ ಇಲಾಖೆಯ ವತಿಯಿಂದ 5 ಸಾವಿರ ಮೀನು ಮರಿಗಳ ವಿತರಣೆ ಕಾರ್ಯಕ್ರಮ ನಡೆಯಿತು. ಸಚಿವ ಎಸ್. ಅಂಗಾರ ಅವರು ಸುಮಾರು 80 ಫಲಾನುಭವಿಗಳಿಗೆ ಉಚಿತವಾಗಿ ಮೀನುಗಾರಿಕೆ ಇಲಾಖೆಯಿಂದ ಮೀನು ಮರಿಗಳನ್ನು ವಿತರಿಸಿ ಮತನಾಡಿದರು. ಈ ಸಂದರ್ಭದಲ್ಲಿ ಮೀನುಗಾರಿಕಾ ನಿಗಮದ ಅಧ್ಯಕ್ಷರಾದ ಎ ವಿ ತೀರ್ಥರಾಮ , ಬಿಜೆಪಿ ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ , ರಾಧಾಕೃಷ್ಣ ಬೋಳ್ಳೂರ್, ಹಾಗೂ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುಳಾ ಶ್ರೀ ಶೆಣೈ, ಮೀನುಗಾರಿಕಾ
ಮಂಗಳೂರು.ಫೆ.20. ಭಾರತ ಕಮ್ಯೂನಿಸ್ಟ್ ಪಕ್ಷದ ಕಡಬ ತಾಲೂಕಿನ ಉಪ ಕಾರ್ಯದರ್ಶಿ, ಪುತ್ತೂರು ತಾಲೂಕು ಬೀಡಿ ಲೇಬರ್ ಯೂನಿಯನ್(ಎಐಟಿಯುಸಿ) ನ ಜತೆ ಕಾರ್ಯದರ್ಶಿ ಸುಮಾರು 55 ವರ್ಷ ಪ್ರಾಯದ ರಮೇಶ್ ರೈ ಅವರು ಇಂದು ಮುಂಜಾನೆ ಆನೆ ದಾಳಿಯಿಂದ ಸ್ಥಳೀಯ ಯುವತಿ ರಂಜಿತಳನ್ನು ರಕ್ಷಿಸುವ ಸಲುವಾಗಿ ತಾವೇ ಸ್ವತಃ ಆನೆ ದಾಳಿಗೆ ತುತ್ತಾಗಿ ಗಂಭೀರ ಸ್ವರೂಪದ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು. ರಮೇಶ್ ರೈ ಹಾಗೂ 21 ವರ್ಷ ಪ್ರಾಯದ ಕುಮಾರಿ ರಂಜಿತ ಇವರುಗಳ ಅಕಾಲಿಕ ಮರಣಕ್ಕೆ ಸಿಪಿಐ
ಬೆಳ್ಳಂಬೆಳಗ್ಗೆ ಕಾಡಾನೆ ದಾಳಿಗೆ ಯುವತಿ ಸಹಿತ ಇಬ್ಬರು ಬಲಿಯಾದ ಘಟನೆ ಕಡಬ ಸಮೀಪದ ಮೀನಾಡಿ ಎಂಬಲ್ಲಿ ಇಂದು ನಡೆದಿದೆ. ಹಾಲಿನ ಡೈರಿಗೆ ಕೆಲಸಕ್ಕೆ ಹೋಗುತ್ತಿದ್ದ ಸಿಬ್ಬಂದಿ ರಂಜಿತಾ ಹಾಗೂ ರಮೇಶ್ ರೈ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಸ್ಥಳದಲ್ಲಿ ಆಕ್ರೋಶಿತ ಸಾರ್ವಜನಿಕರು ಗಲಾಟೆ ಮಾಡಿದ್ದು ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ವಾರದ ಹಿಂದೆ ಮರ್ದಾಳದ ಯುವಕನೊಬ್ಬ ಫೇಸ್ಬುಕ್ ನಲ್ಲಿ ಕಾಡಾನೆ ದಾಳಿ ಬಗ್ಗೆ ವಿಡಿಯೋ