ಅಂಗಾರ ಅವರಿಗೆ ಮತ್ತೊಮ್ಮೆ ಅವಕಾಶ ನೀಡಿ

ಸತತ ಆರು ಬಾರಿ ಸುಳ್ಯ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿರುವ ನಿಷ್ಕಳಂಕ ರಾಜಕಾರಣಿ ಮಾದರಿ ವ್ಯಕ್ತಿತ್ವ ಹೊಂದಿರುವ ಸುಳ್ಯ ಶಾಸಕ ಎಸ್.ಅಂಗಾರ ಅವರಿಗೆ ಮತ್ತೊಮ್ಮೆ ಸ್ಪರ್ಧೆಗೆ ಅವಕಾಶ ನೀಡಬೇಕು ಎಂದು ಸುಳ್ಯ ಮಂಡಲ ಬಿಜೆಪಿ ಸಮಿತಿಯ ಸದಸ್ಯ ನೆಲ್ಯಾಡಿಯ ಮಹಾಬಲ ಪಡುಬೆಟ್ಟು ಪಕ್ಷದ ಹಾಗೂ ಬಿಜೆಪಿ ಮುಖಂಡರಿಗೆ ಮನವಿ ಮಾಡಿದ್ದಾರೆ.

ಅವರು ಕಡಬದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಾವು ಮಾಡುವ ಮನವಿ ತಪ್ಪ ಸಂದೇಶವನ್ನು ಸಾರಬಾರದು, ನಮ್ಮ ಅಂಗಾರ ಸಾಹೇಬರು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುವುದರಿಂದ ನನ್ನ ಪರವಾಗಿ ಅಥವಾ ಪಕ್ಷದ ವಿರುದ್ಧವಾಗಿ ಯಾರು ಹೇಳಿಕೆ ನಿಡಬಾರದು ಎನ್ನುವ ಕಟ್ಟಪ್ಪಣೆ ನೀಡಿದ್ದಾರೆ. ಅವರಿಗೆ ಗೊತ್ತಿಲ್ಲದೆಯೇ ನಮ್ಮ ಸ್ವ ಇಚ್ಛೆಯಿಂದ ಹೇಳಿಕೆ ನೀಡುತ್ತಿದ್ದೇವೆ ನಮ್ಮ ಹೇಳಿಕೆ ಪಕ್ಷದ ವಿರುದ್ಧವೂ ಅಲ್ಲ, ಒತ್ತಡ ತಂತ್ರವು ಅಲ್ಲ. ಅಂಗಾರ ಅವರಂತಹ ಅಪರೂಪದ ಮಾದರಿ ರಾಜಕಾರಣಿ ಕರ್ನಾಟಕದಲ್ಲೇ ಸಿಗುವುದು ಕಷ್ಟ ಆದ್ದರಿಂದ ಅವರಿಗೆ ಮತ್ತೊಮ್ಮೆ ಅವಕಾಶ ನೀಡಬೇಕು ಎಂದು ಪಕ್ಷದ ವರಿಷ್ಠರಿಗೆ ಹಾಗೂ ಸಂಘ ಪರಿವಾರದ ಮುಖಂಡರಿಗ ನಾವು ಮನವಿ ಮಾಡುವ ಮೂಲಕ ನಮ್ಮ ಭಾವನೆಯನ್ನು ವ್ಯಕ್ತಪಡಿಸುತ್ತಿದ್ದೇವೆ ಎಂದರು. ಸಂಘಪರಿವಾರ ತೋರಿಸಿಕೊಟ್ಟ ಹಾದಿಯಲ್ಲಿ ಸಾಗಿ ಪಕ್ಷವನ್ನು ತಾಯಿ ಸಮಾನ ಎಂದು ಭಾವಿಸಿ ಪಕ್ಷಕ್ಕಾಗಲೀ, ಸಮಾಜಕ್ಕಾಗಲೀ ಚ್ಯುತಿ ಬರುವ ರೀತಿಯಲ್ಲಿ ಅಂಗಾರ ಅವರು ವರ್ತಿಸಿಲ್ಲ. ಇತ್ತೀಚೆಗೆ ಸುಳ್ಯ ವಿಧಾನ ಸಭಾ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರೆನ್ನುವ ಬಗ್ಗೆ ಹಲವು ಗೊಂದಲಗಳಿವೆ, ಅಂಗಾರ ಅವರನ್ನು ಹೊರತುಪಡಿಸಿ ಬೇರೆಯವರ ಹೆಸರುಗಳು ಕೇಳಿಬರುತ್ತಿವೆ, ಅವರೆಲ್ಲಾ ಅಂಗಾರ ಅವರ ಸರಿಸಮಾನ ಆಗಲಾರರು, ತಳಮಟ್ಟದ ಕಾರ್ಯಕರ್ತರಿಗೆ ಈಗ ಕೇಳಿಬರುತ್ತಿರುವ ಹೆಸರಿನ ಜನಗಳ ಬಗ್ಗೆ ಗೊತ್ತೇ ಇಲ್ಲ. ಅವರೆಲ್ಲ ಒಂದು ಗ್ರಾಮಕ್ಕೆ ಸೀಮಿತವಾಗಿದ್ದಾರೆ ಎಂದರು.

ಸುದ್ದಿಗೋಷ್ಟಿಯಲ್ಲಿ ಆಲಂಕಾರು ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣ ಗಾನಂತಿ, ರಾಮಕುಂಜ ಗ್ರಾಮ ಪಂಚಾಯಿತಿ ಸದಸ್ಯ ಕೇಶವ ಗಾಂಧಿಪೇಟೆ, ವಿವಿಧ ಸಂಘಟನೆಗಳ ಪ್ರಮುಖರಾದ ಸಂಜೀವ ಕೆ ಶಾರದಾನಗರ, ಬಾಬು ಎಂ ಮರುವಂತಿಲ, ಪ್ರೇಮನಾಥ ಮರುವಂತಿಲ, ಮೋಹನ ಉಜುರ್ಲಿ, ಸಂದೀಪ್ ಪಾಂಜೋಡಿ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.