Home Archive by category ಕರಾವಳಿ (Page 877)

ಮಂಗಳೂರು: ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು: ಆರೋಪಿಯ ಬಂಧನ

ಮಂಗಳೂರು: ನಗರದ ಮಹಿಳೆಯೋರ್ವರ ಚಿನ್ನಾಭರಣವಿದ್ದ ಬ್ಯಾಗ್ ಕಳವುಗೈದ ಆರೋಪಿಯನ್ನು ಬಂಧಿಸಿರುವ ಕದ್ರಿ ಠಾಣೆ ಪೊಲೀಸರು 2.50 ಲಕ್ಷ ರೂ. ಮೌಲ್ಯದ 53 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿದ್ದಾರೆ. ಭದ್ರಾವತಿ ಮೂಲದ ಪ್ರಸ್ತುತ ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ನಿವಾಸಿ ಪಿ.ಜ್ಞಾನರತ್ನಂ ಕೃಪಾ ರಾವ್ ಬಂಧಿತ. ನಗರದ ನವಭಾರತ ಸರ್ಕಲ್ ಬಳಿಯಿರುವ ಮೌರಿಷ್ಕ್ ಪಾರ್ಕ್ ಅಪಾರ್ಟ್‌ಮೆಂಟ್ ನಲ್ಲಿ ವಾಸವಾಗಿರುವ ವಸಂತಾ ಎಂಬವರು 2021  ಮಾರ್ಚ್ 10ರಂದು ಭದ್ರಾವತಿಯಿಂದ ಮಂಗಳೂರಿಗೆ

ಶ್ರೀನಿವಾಸ್‌ ವಿಶ್ವವಿದ್ಯಾಲಯದಲ್ಲಿ ಜೂನ್‌ 18 ಮತ್ತು 19ರಂದು ಅಂತರಾಷ್ಟ್ರೀಯ ವರ್ಚುವಲ್‌ ಕಾನ್ಫರೆನ್ಸ್‌

ಶ್ರೀನಿವಾಸ್‌ ವಿಶ್ವವಿದ್ಯಾಲಯದ ಕಾಲೇಜ್‌ ಆಫ್‌ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇನ್ಫರ್ಮೇಶನ್ ಸೈನ್ಸ್‌ನ ವತಿಯಿಂದ “ಎಮರ್ಜಿಂಗ್ ಟ್ರೆಂಡ್ಸ್ ಇನ್ ಕಂಪ್ಯೂಟರ್ ಸಯನ್ಸ್ ಮತ್ತು ಇನ್ಫರ್ಮೇಶನ್ ಸಯನ್ಸ್” ಎಂಬ ವಿಷಯದ ಕುರಿತು ಅಂತರಾಷ್ಟ್ರೀಯ ವರ್ಚುವಲ್‌ ಕಾನ್ಫರೆನ್ಸ್‌ವು ಜೂನ್‌ 18 ಮತ್ತು 19ರಂದು ನಡೆಯಲಿದೆ.  ಈ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭವು ಜೂನ್ 18ರಂದು ಆನ್‌ಲೈನ್‌ ಮುಖಾಂತರ ನಡೆಸಲಾಗುವುದು.   ಯು.ಎಸ್.ಎ.ಯ ಯುನಿವರ್ಸಿಟಿ ಆಫ್ ಸೆಂಟ್ರಲ್ ಫ್ಲೊರಿಡಾದ

ಕಡಬದಲ್ಲಿ ಕಾಡಾನೆ ಹಾವಳಿ: ಕೃಷಿ ತೋಟಗಳಿಗೆ ಹಾನಿ

ಕಡಬ: ಕೊಂಬಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿರಿಬಾಗಿಲು ಗ್ರಾಮದ ಕಾಡಂಚಿನ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಕಾಡಾನೆಗಳು ಕೃಷಿ ತೋಟಗಳಿಗೆ ದಾಳಿಮಾಡಿ ಹಾನಿಯುಂಟು ಮಾಡುತ್ತಿವೆ. ಕೃಷಿ ತೋಟಗಳಲ್ಲಿ ಕಾಡಾನೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿತು. ಪಿಲಿಕಜೆ ಎಂಬಲ್ಲಿ ಪಿ.ಸಿ.ಸುಂದರ ಗೌಡ ಎಂಬುವರ ತೋಟಕ್ಕೆ ಲಗ್ಗೆಯಿಟ್ಟ ಆನೆ ಅಡಕೆ, ತೆಂಗು, ಕೊಕ್ಕೋ, ಬಾಳೆ ಮೊದಲಾದ ಕೃಷಿಯನ್ನು ನಾಶಪಡಿಸಿದೆ. ಅರಣ್ಯ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಈ ಭಾಗದ ರೈತರು

ತೌಕ್ತೆ ಚಂಡಮಾರುತದಿಂದ ಆಗಿರುವ ಹಾನಿ ಪರಿಶೀಲನೆಗೆ ಕೇಂದ್ರದ ತಂಡ ಉಡುಪಿಗೆ ಆಗಮನ

ಕುಂದಾಪುರ: ತೌಕ್ತೆ ಚಂಡಮಾರುತದಿಂದ ಆಗಿರುವ ಅನಾಹುತಗಳ ಪರಿಶೀಲನೆಗೆ ಕೇಂದ್ರ ಸರಕಾರದ ಐಎಂಸಿ ಟಿ ತಂಡ ಉಡುಪಿ ಜಿಲ್ಲೆಯಾದ್ಯಂತ ಸರ್ವೇಕ್ಷಣೆ ಕಾರ್ಯವನ್ನು ಗುರುವಾರ ಆರಂಭಿಸಿದೆ. ತಿಂಗಳ ಹಿಂದೆ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವುಂಟಾಗಿ ತೌಕ್ತೆ ಚಂಡಮಾರುತ ಎದ್ದಿತ್ತು. ಸುಮಾರು ನಾಲ್ಕು ದಿನಗಳ ಕಾಲ ಉಡುಪಿ ಜಿಲ್ಲೆಯ ಉದ್ದಕ್ಕೂ ಭಾರಿ ಗಾಳಿ-ಮಳೆ ಉಂಟಾಗಿತ್ತು. ಸಮುದ್ರ ಕೊರೆತದ ಜೊತೆ ಅಪಾರ ಪ್ರಮಾಣದ ಆಸ್ತಿಪಾಸ್ತಿ, ರಸ್ತೆ , ಕೃಷಿ ಬೆಳೆಗಳು

ವಿಭಿನ್ನವಾಗಿ ಮಾಡಿ ಅಥವಾ ವಿಭಿನ್ನವಾದುದನ್ನು ಮಾಡಿ-ವೇಣು ಶರ್ಮ

ಬದಲಾವಣೆ ಎನ್ನುವುದು ಕಷ್ಟಕರ ಮತ್ತು ಪ್ರತಿರೋಧ ಪೂರಿತವಾಗಿದ್ದರೂ ಅದು ಪ್ರಕೃತಿ ಸಹಜ ಹಂತ. ತಿಕ್ಕಾಡುವ ಬದಲು ಅಭಿವೃದ್ಧಿಯತ್ತ ಮುಖಮಾಡಿದಾಗ ಬದಲಾವಣೆ ಸುಲಭ. ದೂರವಾಣಿ ಸಂಪರ್ಕ ಕಂಪೆನಿಗಳಿಂದ ಹಿಡಿದು ಪ್ರತೀ ಮನೆ – ಕುಟುಂಬಗಳಲ್ಲಿ ನಾವು ಮರೆತಿರುವ ದಿನಚರಿಯೂ ಕೂಡಾ ನಮಗೆ ಹೊಸತನ್ನು ನೀಡಿದೆ. ಪರಿವರ್ತನೆ ಅನ್ನುವುದು ನಮ್ಮ ಅಂತರಾತ್ಮದಿಂದ ಪ್ರಾರಂಭಗೊಂಡಾಗ ಮಾತ್ರ ಜಗತಿಗೆ ಧನಾತ್ಮಕತೆಯನ್ನು ಪಸರಿಸಲು ಸಾಧ್ಯ ಎಂಬುದಾಗಿ ಮೈ ಅಂತರಾತ್ಮ ಮತ್ತು ಆಡ್ ಐಡಿಯಾ

ಉದಯ ಗಾಣಿಗ ಕೊಲೆ ಆರೋಪಿಗಳನ್ನು ರಕ್ಷಿಸಲು ಬಿಜೆಪಿ ಮುಖಂಡರಿಂದ ಯತ್ನ:  ಗೋಪಾಲ ಪೂಜಾರಿ ಆರೋಪ

ಯಡಮೊಗೆ ಉದಯ ಗಾಣಿಗ ಅವರ ಕೊಲೆ ಪ್ರಕರಣದ ಆರೋಪಿಗಳನ್ನು ರಕ್ಷಿಸಲು ಬಿಜೆಪಿ ಮುಖಂಡರು ಪ್ರಯತ್ನಿಸುತ್ತಿದ್ದಾರೆ ಎಂದು ಬೈಂದೂರಿನ ಮಾಜಿ ಶಾಸಕ ಗೋಪಾಲ ಪೂಜಾರಿ ಆರೋಪಿಸಿದ್ದಾರೆ. ಕಾಪುವಿನಲ್ಲಿ ಅವರು ಮಾಧ್ಯಮದವರೊಂದಿಗೆ ಈ ಬಗ್ಗೆ ಮಾತನಾಡಿದರು. “ಈ ಕೊಲೆಯ ಕುರಿತು ವಿಸ್ತ್ರತ ತನಿಖೆ ನಡೆಸಿ, ಆರೋಪಿಗಳಿಗೆ ಶಿಕ್ಷೆ ನೀಡುವಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿಯವರನ್ನು ಒತ್ತಾಯಿಸಲಾಗಿದೆ ಹಾಗೂ ಮೃತರ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ನಮ್ಮ ಪ್ರಯತ್ನ

ಲಾಕ್‌ಡೌನ್ ಸಂಕಷ್ಟಕ್ಕೀಡಾದ ರೈತ ಸಮುದಾಯ: ನೆರವಿನ ಹಸ್ತ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ

ಕೋವಿಡ್ ಲಾಕ್‌ಡೌನ್‌ನಿಂದಾಗಿ ರೈತ ಸಮುದಾಯ ಸಂಕಷ್ಟಕ್ಕೀಡಾಗಿದ್ದು, ಈ ಸಂಕಷ್ಟದ ಪರಿಹಾರಕ್ಕೆ ಒತ್ತಾಯಿಸಿ ರಾಜ್ಯ ರೈತ ಸಂಘದ ಕರೆಯ ಮೇರೆಗೆ ರಾಜ್ಯಾದ್ಯಂತ ಎಲ್ಲಾ, ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ರೈತರಿಂದ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದು ಮಂಗಳೂರಿನಲ್ಲೂ ರೈತ ಮುಖಂಡರು ಅಪರ ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ ಪುಣಚ ಅವರು, ಕೊರೊನಾ ಮೊದಲ ಅಲೆಯು

ಪಚ್ಚನಾಡಿ ತ್ಯಾಜ್ಯ ಕುಸಿತ ಪುನರಾರ್ವತನೆಯಾಗದಂತೆ ನಿರ್ಣಯ :ಪಾಲನಾ ಸಭೆಯಲ್ಲಿ ಶಾಸಕ ಡಾ.ಭರತ್ ಶೆಟ್ಟಿ

ಮುಂಗಾರು ಮಳೆಯ ಅವಧಿಯಲ್ಲಿ ಪಚ್ಚನಾಡಿಯ ಘನತ್ಯಾಜ್ಯ ಲ್ಯಾಂಡ್ ಫೀಲ್ ಘಟಕದ ತ್ಯಾಜ್ಯ ಕುಸಿತ ದುರಂತ ಈ ಬಾರಿ ಪುನರಾವರ್ತನೆಗೊಳ್ಳದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಕಳೆದ ವಾರ ಈಗಾಗಲೇ ಸಭೆ ನಡೆದಿದ್ದು, ಆ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಪಾಲನೆ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಯಿತು. ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ಮೇಯರ್