ಬಿಲ್ಲವಾಸ್ ಕತಾರ್ ವತಿಯಿಂದ ಬಿಲ್ಲವೋತ್ಸವ -2023 ಸಮಾರಂಭವು ಅಧ್ಯಕ್ಷ ರಘುನಾಥ್ ಅಂಚನ್ ಸಾರಥ್ಯದಲ್ಲಿ ಡಿ.ಪಿ. ಎಸ್. ಅಲ್-ವಕ್ರ ಸಭಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಸರ್ವಾಲಂಕೃತ ಭೂಷಿತರಾದ ಮಂಗಳಾಂಗಿಯರಿಂದ ಆರತಿಯನ್ನೆತ್ತಿ ಸ್ವಾಗತ, ಸಮವಸ್ತ್ರಧಾರಿಗಳಾದ ಸದಸ್ಯರು, ಮಂಗಳ ವಾದ್ಯಗಳ ದನಿ, ಚೆಂಡೆ ತಾಳಗಳ ಅಬ್ಬರ, ಕೋಟಿ-ಚೆನ್ನಯ”
ತುಳುವಿನ ಬಹುನಿರೀಕ್ಷೆಯ ಸಿನಿಮಾ ಸರ್ಕಸ್, ರೂಪೇಶ್ ಶೆಟ್ಟಿ ನಿರ್ದೇಶನದ ಸಿನಿಮಾವಾಗಿದ್ದು, ವಿದೇಶಗಳಲ್ಲಿ ಸಿನಿಮಾದ ಪ್ರೀಮಿಯರ್ ಶೋ ಆಯೋಜಿಸಿದ್ದು, ಸಿನಿ ಪ್ರೇಕ್ಷಕರು ಫುಲ್ ಮಾಕ್ರ್ಸ್ ನೀಡಿದ್ದಾರೆ. ತುಳು ಸಿನಿಮಾರಂಗದ ರಾಕ್ ಸ್ಟಾರ್ ಬಿಗ್‍ಬಾಸ್ 9ರ ವಿಜೇತ ರೂಪೇಶ್ ಶೆಟ್ಟಿ ನಿರ್ದೇಶನದ ಹೊಚ್ಚ ಹೊಸ ಮತ್ತು ಹಾಸ್ಯಮಯ ಸಿನಿಮಾ ಸರ್ಕಸ್. ಈಗಾಗಲೇ ಕರಾವಳಿಯಲ್ಲಿ ಸಿನಿಮಾ ಬಿಡುಗಡೆಗೆ ಎಲ್ಲಾ ತಯಾರಿಯನ್ನು ಚಿತ್ರತಂಡ ಮಾಡಿಕೊಂಡಿದೆ. ದುಬೈ, ಅಬುಧಾಬಿ,
ಬಹರೈನ್ ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸಂಘದ ಯಕ್ಷೋಪಾಸನ ಕೇಂದ್ರದ ಹಿರಿಯ ವಿದ್ಯಾರ್ಥಿಗಳಿಂದ “ಗಿರಿಜಾ ಕಲ್ಯಾಣ ” ಎನ್ನುವ ಯಕ್ಷಗಾನ ಪ್ರದರ್ಶನವನ್ನು ನಾಟ್ಯಗುರು ದೀಪಕ್ ರಾವ್ ಪೇಜಾವರ ಇವರ ನಿರ್ದೇಶನದಲ್ಲಿ ಕನ್ನಡ ಭವನದ ಶ್ರೀಮತಿ ಆಶಾ ಶೆಟ್ಟಿ ಸಭಾಂಗಣದಲ್ಲಿ ಇದೇ ಮೇ ತಿಂಗಳ 19ನೇ ತಾರೀಖಿನ ಶುಕ್ರವಾರದಂದು ಸಂಜೆ 5:30 ಗೆ ಸರಿಯಾಗಿ ಆಯೋಜಿಸಲಾಗಿದೆ ಬಹರೈನ್ ಕನ್ನಡ ಸಂಘಕ್ಕೂ ಯಕ್ಷಗಾನಕ್ಕೂ ಸುಮಾರು ನಾಲ್ಕು ದಶಕಗಳ ಅವಿನಾಭಾವ ಸಂಭಂದವಿದ್ದು
ಬಹರೈನ್; ಬಿಡುಗಡೆಗೆ ಮುನ್ನವೇ ತುಳುಚಲನ ಚಿತ್ರ ರಂಗದಲ್ಲಿ ಬಹಳಷ್ಟು ನಿರೀಕ್ಷೆಯನ್ನು ಹುಟ್ಟಿಸಿರುವ “ಗೋಸ್ಮರಿ ಫ್ಯಾಮಿಲಿ ” ತುಳು ಚಲನಚಿತ್ರ ಮೇ ತಿಂಗಳ ಶುಕ್ರವಾರದಂದು ಅಪರಾಹ್ನ ಒಂದೂವರೆ ಘಂಟೆಗೆ ಜುಫೈರ್ ನಲ್ಲಿರುವ ಮುಕ್ತಾ ಸಿನೆಮಾ ಮಂದಿರದಲ್ಲಿ ಗ್ರ್ಯಾಂಡ್ ಪ್ರೀಮಿಯರ್ ಪ್ರದರ್ಶನ ಕಾಣಲಿದೆ.ತುಳು ಚಲನಚಿತ್ರ ರಂಗದ ಜನಪ್ರಿಯ ನಟರುಗಳು ಒಂದಾಗಿ ನಟಿಸಿರುವ ಈ ಚಲನಚಿತ್ರವನ್ನು ಖ್ಯಾತ ನಿರ್ದೇಶಕ ಸಾಯಿ ಕೃಷ್ಣ ಕುಡ್ಲಾ ರವರು ಬರೆದು
ಟ್ವಿಟರ್ ಹಾಗೂ ಟೆಸ್ಲಾ ಸಂಸ್ಥೆಯ ಮುಖ್ಯಸ್ಥ ಎಲಾನ್ ಮಸ್ಕ್ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಫಾಲೋ ಮಾಡುತ್ತಿದ್ದು, ಈ ವಿಚಾರ “ಈಗ ಭಾರತಕ್ಕೆ ಟೆಸ್ಲಾ ಕಾಲಿಡುವ ಮುನ್ಸೂಚನೆಯೇ’ ಎಂದು ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಟ್ವಿಟರ್‌ನಲ್ಲಿ ಅತ್ಯಧಿಕ ಫಾಲೋವರ್ಸ್ ಹೊಂದಿರುವ ಮಸ್ಕ್ 195 ಮಂದಿಯನ್ನು ಮಾತ್ರ ಫಾಲೋ ಮಾಡುತ್ತಿದ್ದು, ಈ ಪೈಕಿ ಇತ್ತೀಚೆಗಷ್ಟೇ ಮೋದಿ ಕೂಡ ಸೇರ್ಪಡೆಗೊಂಡಿದ್ದಾರೆ. ಮೋದಿ ಅವರನ್ನು ಫಾಲೋ ಮಾಡುತ್ತಿರುವ
ಬಹರೈನ್; ಕಳೆದ ಸುಮಾರು ಎರಡೂವರೆ ದಶಕಗಳಿಂದ ಬಹರೈನ್ ನ ಸಾಂಸ್ಕ್ರತಿಕ ರಂಗಕ್ಕೆ ಅಪಾರ ಕೊಡುಗೆ ನೀಡುತ್ತಾ ಬಂದು ಇತ್ತೀಚಿಗೆ ಅಲ್ಪ ಕಾಲದ ಅನಾರೋಗ್ಯದಿಂದ ತಾಯ್ನಾಡಿನಲ್ಲಿ ಮರಣ ಹೊಂದಿದ ಶ್ರೀಮತಿ ಅಸ್ತಿಕಾ ಸುನಿಲ್ ಶೆಟ್ಟಿ ಯವರಿಗೆ ಇಲ್ಲಿನ “ಕನ್ನಡ ಭವನ”ದ ಸಭಾಂಗಣದಲ್ಲಿ ನುಡಿ ನಮನ ಕಾರ್ಯಕ್ರಮವನ್ನು ಕನ್ನಡ ಸಂಘ ಹಾಗು ಬಂಟ್ಸ್ ಬಹರೈನ್ ಸಂಘಟನೆಯು ಜಂಟಿಯಾಗಿ ಆಯೋಜಿಸಿತ್ತು. ಮೃತರ ಬಂಧು ಮಿತ್ರರು, ಶಿಷ್ಯರ ಬಳಗ, ವಿವಿಧ ಸಂಘಟನೆಗಳ ಪಧಾದಿಕಾರಿಗಳು
ಕನ್ನಡ ಮಿತ್ರರು ಯು ಎ ಯಿ ದುಬೈನಲ್ಲಿ ನಡಸುತ್ತಿರುವ ಕನ್ನಡ ಪಾಠ ಶಾಲೆ ದುಬೈನ ಮಹಾ ಪೋಷಕರಾದ ಶ್ರೀಯುತ ಪ್ರವೀಣ್ ಕುಮಾರ್ ಶೆಟ್ಟಿ, ಅಧ್ಯಕ್ಷರಾದ ಶ್ರೀಯುತ ಶಶಿಧರ್ ನಾಗರಾಜಪ್ಪ, ಉಪಾದ್ಯಕ್ಷ ಶ್ರೀಯುತ ಸಿದ್ದಲಿಂಗೇಶ್, ಕಾರ್ಯದರ್ಶಿ ಶ್ರೀಯುತ ಗವಸ್ಕರ್, ಖಜಾಂಚಿ ನಾಗರಾಜ್ ರಾವ್ ಸಂಸ್ಥಾಪಕ ಸದಸ್ಯ, ಚಂದ್ರಶೇಖರ್ ಸಂಕೋಲೆ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಯುತ ಮಹೇಶ್ ಜೋಷಿ ಅವರನ್ನು ಬೆಂಗಳೂರಿನ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಪತ್ರ
ಮಸ್ಕತ್: ವಿಜಯ ಕುಮಾರ್ ಕೊಡಿಯಾಲಬೈಲ್ ರವರ ನಿರ್ದೇಶನದ ವಿಭಿನ್ನ ಶೈಲಿಯ ತುಳು ಮತ್ತು ಕನ್ನಡ ನಾಟಕ ದಾಖಲೆ ಸಂಖ್ಯೆಯಲ್ಲಿ ಪ್ರೇಕ್ಷಕರು ನೋಡಿ ಆನಂದಿಸಿದ “ಶಿವದೂತೆ ಗುಳಿಗೆ” ನಾಟಕವು ಮೇ 12 ರಂದು ಮಸ್ಕತ್ ನ ರೂವಿಯ ಅಲ್ ಫಲಾಜ್ ಹೋಟೆಲ್ ನ ಗ್ರಾಂಡ್ ಹಾಲ್ ಅಡಿಟೋರಿಯಂನಲ್ಲಿ ಪ್ರದರ್ಶನಗೊಳ್ಳಲಿದೆ ವಿಶ್ವ ಪರ್ಯಾಯ ಸಂಚಾರದಲ್ಲಿರುವ ಭಾವಿ ಪರ್ಯಾಯ ಪೂಜ್ಯ ಪುತ್ತಿಗೆ ಮಠಾದೀಶರಾದ ಶ್ರೀ ಶ್ರೀ ಸುಗುನೇಂದ್ರ ತೀರ್ಥ ಸ್ವಾಮೀಜಿಯವರು ಮಸ್ಕತ್ ಗೆ ಆಗಮಿಸಿದ್ದ
ಬಹರೈನ್; ರಕ್ತ ದಾನ ಜಗತ್ತಿನಲ್ಲಿಯೇ ಶ್ರೇಷ್ಠ ದಾನ . ನಾವು ನೀಡುವ ಪ್ರತಿ ಹನಿ ರಕ್ತ ಕೂಡ ಅದೆಷ್ಟೋ ಜೀವಗಳ ಮರುಹುಟ್ಟಿಗೆ ಕಾರಣವಾಗಬಲ್ಲುದು ಈ ರಕ್ತದಾನದ ಮಹತ್ವವನ್ನು ಅರಿತಿರುವ ಪಟ್ಲಾ ಪೌಂಡೇಶನ್ ನ ಬಹರೈನ್ ಸೌದಿ ಘಟಕವು ಇದೆ ಫೆಬ್ರವರಿ 17ರಂದು ಸಲ್ಮಾನಿಯ ಆಸ್ಪತ್ರೆಯ ರಕ್ತ ಕೇಂದ್ರದಲ್ಲಿ ಸಾಮೂಹಿಕ ರಕ್ತ ದಾನ ಶಿಬಿರವನ್ನು ಆಯೋಜಿಸಿದೆ . ಖ್ಯಾತ ಭಾಗವತರಾದ ಯಕ್ಷ ಧ್ರುವ ಪಟ್ಲಾ ಸತೀಶ್ ರವರ ಸಾರಥ್ಯದಲ್ಲಿ ಅಶಕ್ತ ಕಲಾವಿದರ ನೆರವಿಗಾಗಿ ಅಸ್ತಿತ್ವಕ್ಕೆ
ಇಸ್ತಾಂಬುಲ್ : ಟರ್ಕಿ ಮತ್ತು ಸಿರಿಯಾದಲ್ಲಿ, ಪ್ರಬಲ ಭೂಕಂಪ ಸಂಭವಿಸಿದಾಗ ಜನರು ಮಲಗಿದ್ದರು ಮತ್ತು ಕಟ್ಟಡಗಳು ಕುಸಿದವು. ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಜನ ಅವಶೇಷಗಳಡಿ ಸಿಲುಕಿಕೊಂಡರು. ಸೋಮವಾರ ಮುಂಜಾನೆ 4.17 ರ ಸುಮಾರಿಗೆ ಉಭಯ ದೇಶಗಳಲ್ಲಿ ಮೊದಲ ಭೂಕಂಪನವು ರಿಕ್ಟರ್ ಮಾಪಕದಲ್ಲಿ 7.8 ರಷ್ಟಿತ್ತು. ತಕ್ಷಣವೇ ಹದಿನೆಂಟು ಭೂಕಂಪಗಳು ಸಂಭವಿಸಿದವು. ಎರಡೂ ದೇಶಗಳಲ್ಲಿ ಸಾವಿರಾರು ಜನರು ಮೃತಪಟ್ಟರು. ಇನ್ನೂ ಹಲವು ಮಂದಿ ಕಟ್ಟಡಗಳ ನಡುವೆ