Home Archive by category ರಾಜಕೀಯ (Page 4)

ಅತಿ ಹೆಚ್ಚು ಜೀರಿಗೆ ಬೆಳೆಯುವ ದೇಶ

ಜೀರಿಗೆ ಬೆಳೆಯ ಹಳೆಯ ದಾಖಲೆ ಈಜಿಪ್ತಿನಲ್ಲಿ ಸಿಕ್ಕಿದ್ದರೂ ಲೋಕದಲ್ಲಿ ಈಗ ಅತಿ ಹೆಚ್ಚು ಜೀರಿಗೆ ಬೆಳೆಯುವ ಹಾಗೂ ರಫ್ತು ಮಾಡುವ ದೇಶವಾಗಿದೆ ಭಾರತ.ಭಾರತವು ಜಾಗತಿಕ ಉತ್ಪಾದನೆಯ 60 ಶೇಕಡಾ ಜೀರಿಗೆ ಬೆಳೆಯುತ್ತದೆ. ಭಾರತದ ಒಟ್ಟು ಜೀರಿಗೆ ಬೆಳೆಯಲ್ಲಿ 65 ಶೇಕಡಾ ರಾಜಸ್ತಾನದಲ್ಲಿ ಬೆಳೆಯುತ್ತದೆ. ಭಾರತವು ಬೆಳೆದ ಜೀರಿಗೆಯಲ್ಲಿ ೬೦ ಶೇಕಡಾದಷ್ಟನ್ನು ಬ್ರಿಟನ್, ಯುಎಸ್‌ಎ

ಕುತ್ತಾರು ಸಮೀಪದ ದೇವಿಪುರದಲ್ಲಿ: ನಿರ್ಮಾಣಗೊಂಡ “ಭೀಮ ಸೌಧ” ಉದ್ಘಾಟನೆ ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಹೇಳಿಕೆ

ಸಮುದಾಯ ಭವನಗಳಿಗೆ ಅಂಬೇಡ್ಕರ್ ಅವರ ಹೆಸರಿಡುವುದು ಮಾತ್ರ ಅಲ್ಲ, ಅವರ ತತ್ವ, ಆದರ್ಶಗಳನ್ನ ಯುವ ಪೀಳಿಗೆಗೂ ವರ್ಗಾಯಿಸುವ ಕಾರ್ಯ ಇಲ್ಲಿ ನಡೆಯಬೇಕು.ಅವರ ಅರ್ಧದಷ್ಟು ವ್ಯಕ್ತಿತ್ವವನ್ನಾದರೂ ನಾವು ಮೈಗೂಡಿಸಿ ಕೊಳ್ಳಬೇಕೆಂದು ಕರ್ನಾಟಕ ವಿದಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಹೇಳಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ,ದ.ಕ ಜಿಲ್ಲಾ ಪಂಚಾಯತ್ ,ಉಳ್ಳಾಲ ತಾಲೂಕು ಪಂಚಾಯತ್ ಹಾಗೂ ಮುನ್ನೂರು ಗ್ರಾಮ ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ಕುತ್ತಾರು

ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕ ವೀರೇಂದ್ರ ಮಾಲಿಕತ್ವದ ಜೂಜು ಮನೆಗಳು,ಜಾರಿ ನಿರ್ದೇಶನಾಲಯದಿಂದ ಸಮಗ್ರ ದಾಳಿ

ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ವೀರೇಂದ್ರ ಮಾಲಿಕತ್ವದ ಮನೆ, ಕಚೇರಿ, ಜೂಜು ಅಡ್ಡೆಗಳು ಸೇರಿ ಇಡಿ- ಜಾರಿ ನಿರ್ದೇಶನಾಲಯವು 30 ಕಡೆ ದಾಳಿ ನಡೆಸಿ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿತ್ತು.ಶಾಸಕ ವೀರೇಂದ್ರ ಮತ್ತು ಅವರ ಸಹೋದರ ಬೆಟ್ಟಿಂಗ್ ಜಾಲ ನಡೆಸುತ್ತಿರುವುದಾಗಿ ಹೇಳಲಾಗಿದೆ. ಗೋವಾದಲ್ಲಿ ಕ್ಯಾಸಿನೋ ಹೊಂದಿರುವುದಾಗಿಯೂ, ಕ್ಯಾಸಿನೋಗಳ ಪಾಲುದಾರಿಕೆ ಹೊಂದಿರುವುದಾಗಿಯೂ, ಜೂಜು ಅಡ್ಡೆಗಳ ಮಾಲಕತ್ವ ಹೊಂದಿರುವುದಾಗಿಯೂ ಹೇಳಲಾಗುತ್ತಿದೆ. ಜಾರಿ

ಅತಿ ಹೆಚ್ಚು ಬಣ್ಣಗಳು ಇರುವ ಬಾವುಟ ಯಾವ ದೇಶದ್ದು

ಬೆಲಿಜ್ ದೇಶದ ಬಾವುಟವು ಹನ್ನೆರಡು ಬಣ್ಣಗಳನ್ನು ಹೊಂದಿದೆ. ಭಾರತದ ಧ್ವಜದಲ್ಲಿ ನಾಲ್ಕು ಬಣ್ಣಗಳು ಇವೆ.ಸಾಮಾನ್ಯವಾಗಿ ಜಗತ್ತಿನ ಬಾವುಟಗಳು ಎರಡು ಇಲ್ಲವೇ ಮೂರು ಬಣ್ಣಗಳಲ್ಲಿ ಇರುತ್ತವೆ. ಅತಿ ಹೆಚ್ಚು ಬಣ್ಣಗಳ ವರ್ಣಮಯ ಬಾವುಟ ಬೆಲಿಜ್ ದೇಶದ್ದಾಗಿದೆ. ಇದರಲ್ಲಿ ಹನ್ನೆರಡು ಬಣ್ಣಗಳನ್ನು ಗುರುತಿಸಬಹುದು. ನೀಲಿ, ಕೆಂಪು, ಬಿಳಿ, ಕಪ್ಪು, ಕಂದು, ಹಳದಿ, ಹಸಿರು ಅಲ್ಲದೆ ಮಿಶ್ರ ಬಣ್ಣಗಳ ಧ್ವಜವಿದು.ಡೊಮಿನಿಕಾ, ಪೋರ್ಚುಗಲ್, ಸೌತ್ ಆಫ್ರಿಕಾದ ಧ್ವಜಗಳು ಆರು ಬಣ್ಣ

ಕರಾವಳಿ ಪ್ರವಾಸೋದ್ಯಮ ಕುರಿತ ಜಿಲ್ಲಾ ಜನ ಪ್ರತಿನಿಧಿಗಳ ಸಭೆ

ಕರಾವಳಿ ಪ್ರವಾಸೋದ್ಯಮ ಕುರಿತಾಗಿ ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ, ಸಭಾಧ್ಯಕ್ಷರು, ಸಚಿವರ ಉಪಸ್ಥಿತಿಯಲ್ಲಿ ನಡೆದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳ ಸಭೆಯಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದ್ದರು. ಸಭೆಯಲ್ಲಿ ಕರಾವಳಿಯ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಬಗ್ಗೆ ಮಾನ್ಯ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಉಪಮುಖ್ಯಮಂತ್ರಿ ಶ್ರೀ

ಸುಪ್ರೀಂ ಕೋರ್ಟು ತೀರ್ಪು :ಬೀದಿ ನಾಯಿಗಳು ಮತ್ತೆ ಬೀದಿಗೆ ಬರಲಿ! ಬೀದಿಯಲ್ಲಿ ತಿನಿಸು ಕೊಡುವುದು ಅಪರಾಧ

ಬೀದಿ ನಾಯಿಗಳು ಮತ್ತೆ ಬೀದಿಗೆ ಬಂದು ತಿರುಗಾಡಬಹುದು ಆದರೆ ಬೀದಿಯಲ್ಲಿ ಬೀದಿ ನಾಯಿಗಳಿಗೆ ತಿನಿಸು ಕೊಡುವುದು ಅಪರಾಧ ಎಂದು ಸುಪ್ರೀಂ ಕೋರ್ಟು ಹಿಂದಿನ ತೀರ್ಪನ್ನು ಬದಲಿಸಿ ತೀರ್ಪಿತ್ತಿದೆ.ಎಲ್ಲ ಬೀದಿ ನಾಯಿಗಳಿಗೆ ನಾಯಿ ಮನೆ ಕಟ್ಟುವುದು ಕಷ್ಟ ಎಂದು ದಿಲ್ಲಿಯ ಬಿಜೆಪಿ ಸರಕಾರವು ಹೇಳಿತ್ತು. ನಾಯಿ ಪ್ರಿಯರುಗಳು ಬೀದಿ ನಾಯಿಗಳ ಮೇಲೆ ಕಠಿಣ ಕ್ರಮ ಸರಿಯಲ್ಲ ಎಂದು ವಾದಿಸಿದ್ದವು. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ, ಎನ್. ವಿ. ಅಂಜಾರಿಯಾ

ನಟಿಗೆ ಶಾಸಕರೊಬ್ಬರಿಂದ ಕೆಟ್ಟ ಸಂದೇಶ ಮಲಯಾಳಂ ನಟಿ ರಿನಿ ಜಾರ್ಜ್ ದೂರುಕಾಂಗ್ರೆಸ್ಸನ್ನು ಗುರಿ ಮಾಡಿ ದೂರಿದ ಬಿಜೆಪಿ

ಶಾಸಕರೊಬ್ಬರು ತನಗೆ ಪೋಲಿ ಸಂದೇಶ ಕಳುಹಿಸಿದ್ದಾರೆಂದು ಮಲಯಾಳಂ ನಟಿ ರಿನಿ ಜಾರ್ಜ್ ಅವರು ಆನ್‍ಲೈನ್ ಸಂದರ್ಶನದಲ್ಲಿ ಮಾಡಿರುವ ಆರೋಪ ವೈರಲ್ ಆಗಿದೆ; ಬಿಜೆಪಿಯು ಕಾಂಗ್ರೆಸ್‍ನತ್ತ ಬೊಟ್ಟು ಮಾಡಿದೆ.ರಿನಿ ಜಾರ್ಜ್ ಅವರ ವೈರಲ್ ಆಗಿರುವ ಆನ್‍ಲೈನ್ ಇಂಟರ್‍ವ್ಯೂ ಪ್ರಕಾರ ಆ ಶಾಸಕ, ತಾರಾ ಹೋಟೆಲಿನಲ್ಲಿ ರೂಮ್ ಕಾದಿರಿಸಿ ಕಾಯುವೆ, ಬರಬೇಕು ಎಂದು ಹೇಳಿರುವುದಾಗಿಯೂ ವಿವರಿಸಲಾಗಿದೆ. ರಿನಿ ಜಾರ್ಜ್ ಆ ಶಾಸಕರ ಹೆಸರು ಇಲ್ಲವೇ ಯಾವ ಪಕ್ಷಕ್ಕೆ ಸೇರಿದವರು ಎಂದು ಹೇಳಲು

ದಿಲ್ಲಿ ಮುಖ್ಯಮಂತ್ರಿಯ ಕೆನ್ನೆಗೆ ಏಟು.ಸಭೆಯಲ್ಲಿ ರೇಖಾ ಗುಪ್ತ ಮೇಲೆ ಹಲ್ಲೆದಾಳಿಕೋರನನ್ನು ಬಂಧಿಸಿದ ಪೋಲೀಸರು

ದಿಲ್ಲಿಯ ಮಖ್ಯಮಂತ್ರಿ ಮನೆ ಕಚೇರಿ ಬಳಿ ಕೂಟವೊಂದರ ಜೊತೆಗೆ ಮುಖ್ಯಮಂತ್ರಿ ರೇಖಾ ಗುಪ್ತ ಅವರು ಮಾತನಾಡುವಾಗ ಅಪರಿಚಿತನೊಬ್ಬನು ನುಗ್ಗಿ ಬಂದು ಅವರ ಕೆನ್ನೆಗೆ ಹೊಡೆದಿದ್ದಾನೆ.ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತ ಅವರು ಜನ್ ಸುನ್‌ವಯ್ ಎಂಬ ಜನರ ಅಹವಾಲು ಸ್ವೀಕರಿಸುವಾಗ ಈ ಘಟನೆ ನಡೆದಿದೆ ಎಂದಿರುವ ದಿಲ್ಲಿ ಬಿಜೆಪಿ ಘಟಕವು ಘಟನೆಯನ್ನು ಖಂಡಿಸಿದೆ. ನುಗ್ಗಿದ ವ್ಯಕ್ತಿಯು ಮುಖ್ಯಮಂತ್ರಿಯ ಕೂದಲು ಎಳೆದು, ಕೆನ್ನೆಗೆ ಒಂದು ಬಾರಿಸಿ ತೂರಿ ಹೋದುದಾಗಿ ಹೇಳಲಾಗಿದೆ. ಈ

ಭಾರತದ ಅತಿ ಹಳೆಯ ಬ್ಯಾಂಕು ಯಾವುದು?

ಮದ್ರಾಸ್ ಬ್ಯಾಂಕ್ ಭಾರತದ ಅತಿ ಹಳೆಯ ಬ್ಯಾಂಕಾಗಿದೆ. ಅತಿ ಹಳೆಯ ಬ್ಯಾಂಕುಗಳಲ್ಲಿ ದಿವಾಳಿ ಆದುದು ಬ್ಯಾಂಕ್ ಆಫ್ ಹಿಂದೂಸ್ತಾನ್.1683ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯವರು ಬ್ರಿಟಿಷ್ ವ್ಯಾಪಾರಿಗಳಿಗಾಗಿ ಮದ್ರಾಸ್ ಬ್ಯಾಂಕ್ ಸ್ಥಾಪಿಸಿದರು. ಇದು 1843 ರಲ್ಲಿ ಬ್ಯಾಂಕ್ ಆಫ್ ಮದ್ರಾಸ್ ಆಗಿ, ಅನಂತರ ಇಂಪೀರಿಯಲ್ ಬ್ಯಾಂಕ್ ಆಗಿ, ಬ್ರಿಟಿಷರ ಬಳಿಕ ಎಸ್‌ಬಿಐ- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿತು.ಭಾರತದ ಇತರ ಹಳೆಯ ಬ್ಯಾಂಕುಗಳು. ಬ್ಯಾಂಕ್ ಆಫ್ ಬಾಂಬೆ 1720ರಲ್ಲಿ

ಕರ್ನಾಟಕದ ಕಾಂಗ್ರೆಸ್ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಸಾರ್ವತ್ರಿಕ ಆರೋಗ್ಯ ಸೇವೆ ನಿರಾಕರಣೆ:ಸಂಸದ ಕ್ಯಾ. ಚೌಟ ಕಳವಳ

ನವದೆಹಲಿ: ದೇಶದಲ್ಲಿ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ ನೀಡುವ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಆಯುಷ್ಮಾನ್‌ ಯೋಜನೆಗೆ ಕರ್ನಾಟಕ ಸರ್ಕಾರವು ತನ್ನ ಪಾಲು ನೀಡದ ಕಾರಣ ಯೋಜನೆ ಅನುಷ್ಠಾನ ಪ್ರಕ್ರಿಯೆ ಸ್ಥಗಿತಗೊಂಡಿರುವ ಬಗ್ಗೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಇಂದು ಲೋಕಸಭೆಯಲ್ಲಿ ಪ್ರಸ್ತಾಪಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಈ ಬಗ್ಗೆ ನಿಯಮ 377ರ ಅಡಿಯಲ್ಲಿ ಲೋಕಸಭೆಯಲ್ಲಿಈ ಗಂಭೀರ ವಿಷಯವನ್ನು