ಆಲೂರು ಸಕಲೇಶಪುರ ವಿಧಾನ ಸಭಾ ವ್ಯಾಪ್ತಿಗೆ ಬರುವ ಹಾಸನ ಜಿಲ್ಲೆ ಕಟ್ಟಾಯ ವ್ಯಾಪ್ತಿಯ ಮುಕುಂದೂರು ಮಲ್ಲೇನಹಳ್ಳಿ ಗ್ರಾಮದಲ್ಲಿ ಹೇಮಾವತಿ ಎಂಬುವವರ ಮನೆ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದಿದ್ದು ಸಂಪೂರ್ಣ ಕರಕಲಾಗಿರುವ ಘಟನೆ ನಡೆದಿದೆ. ಮನೆಗೆ ಬೆಂಕಿ ತಗುಲಿ ಉರಿಯುತ್ತಿದ್ದಂತೆ ಗ್ರಾಮ ಜನರು ತಕ್ಷಣ ನೀರು ಹಾಕಿ ಬೆಂಕಿಯ ಕೆನ್ನಾಲಿಗೆ ತಿಳಿಗೊಳಿಸಲು
ಮೂಲ ಮಾಲೀಕರ ಹೆಸರಿನಲ್ಲಿ ಭೂಮಿಯ ಪಹಣಿ ಇನ್ನಿತರ ದಾಖಲೆಗಳಿದ್ದರೂ, ಸರಕಾರದಿಂದ ನನಗೆ ಭೂಮಿ ಮಂಜೂರಾಗಿದೆ ಎಂದು ಹೇಳಿ ಮೂಲ ಭೂ ಮಾಲೀಕ ಬೆಳೆದಿದ್ದ ಜೋಳದ ಬೆಳೆಯನ್ನು ಟ್ರಾಕ್ಟರ್‍ನಿಂದ ಉಳುಮೆ ಮಾಡಿ ಹಾನಿ ಮಾಡಿರುವ ಘಟನೆ ಬೇಲೂರು ತಾಲ್ಲೂಕಿನ ಸನ್ಯಾಸಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ಭೂ ಮಾಲೀಕ ಮಂಜುನಾಥ್ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ದರಖಾಸ್ತಿನ ಮೂಲಕ ಜವರಮ್ಮ ಎಂಬುವರಿಗೆ ಮಂಜೂರಾಗಿದ್ದ ಸರ್ವೆ ನಂಬರ್
ಆಕಸ್ಮಿಕ ಬೆಂಕಿ ತಗುಲಿ ಮನೆಯೊಂದು ಸಂಪೂರ್ಣ ನಾಶವಾಗಿರುವ ಘಟನೆ ಹಾಸನ ತಾಲೂಕು ಕಾರ್ಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಕುಂದೂರು ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹೇಮಾವತಿ ಎಂಬುವರಿಗೆ ಸೇರಿದ ಮನೆ ಬೆಂಕಿಗೆ ಸಂಪೂರ್ಣವಾಗಿ ಸುಟ್ಟುಹೋಗಿದ್ದು , ಕುಟುಂಬಸ್ಥರು ದಿಕ್ಕಿಲ್ಲದೆ ನರಳುವಂತಾಗಿದೆ. ಮನೆಯಲ್ಲಿ ವಾಸವಾಗಿದ್ದ ಹೇಮವತಿ ಮತ್ತು ಅವರ ಇಬ್ಬರು ಮಕ್ಕಳು ಭರತ್ ಮತ್ತು ಶ್ರಾವಣಿ . ಮನೆಯಲ್ಲಿದ್ದ ದವಸ ಧಾನ್ಯ ಬಟ್ಟೆ ಸಂಪೂರ್ಣ ನಾಶವಾಗಿದೆ. ಘಟನೆ
ವಿಧಾನಸಭೆ ಸಭಾಪತಿ ಸ್ಥಾನಕ್ಕೆ ಮಾಜಿ ಸಚಿವ, ಮಂಗಳೂರಿನ ಶಾಸಕ ಯು.ಟಿ ಖಾದರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಂಗಳವಾರ ಬೆಳಗ್ಗೆ ಯು.ಟಿ ಖಾದರ್ ಅವರು ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿಗೆ ಅವರಿಗೆ ನಾಮಪತ್ರ ಸಲ್ಲಿಸಿದ್ದರು. ಖಾದರ್ ಅವರನ್ನು ಹೊರತುಪಡಿಸಿ ಮತ್ತ್ಯಾರೂ ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೊದಲಿಗೆ ಯು.ಟಿ ಖಾದರ್ ಅವರ ಹೆಸರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು
ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಹಿರಿಯ ಐಪಿಎಸ್ ಅಧಿಕಾರಿ ಆಲೋಕ್ ಮೋಹನ್ ಸೋಮವಾರ ಅಧಿಕಾರ ಸ್ವೀಕರಿಸಿದರು. ಸಿಬಿಐ ನಿರ್ದೇಶಕರಾಗಿ ನೇಮಕಗೊಂಡ ಪ್ರವೀಣ್ ಸೂದ್ ಅವರು ಆಲೋಕ್ ಮೋಹನ್ ಅವರಿಗೆ ಬ್ಯಾಟನ್ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.
ಕರ್ನಾಟಕ ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ಮಂಗಳೂರು ಕ್ಷೇತ್ರದ ಶಾಸಕ ಯು.ಟಿ.ಖಾದರ್ ಅವರ ಹೆಸರು ಅಂತಿಮವಾಗಿದೆ.
ರಾಜ್ಯದ 16 ನೇ ವಿಧಾನಸಭೆ ನೂತನ ಚುನಾಯಿತರ ಅಧಿವೇಶನ ನಡೆಯುತ್ತಿದ್ದು, ಮೂರು ದಿನಗಳ ಕಾಲ ಅಧಿವೇಶನ ನಡೆಯಲಿದೆ. ಹಂಗಾಮಿ ಸಭಾಧ್ಯಕ್ಷರಾಗಿ ಆಯ್ಕೆಯಾಗಿರುವ ಕಾಂಗ್ರೆಸ್‍ನ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಅವರು ನೂತನ ಶಾಸಕರಿಗೆ ಪ್ರಮಾಣವಚನ ಭೋದಿಸಿದರು. ಕರಾವಳಿಯ ಶಾಸಕರಾದ ಯು.ಟಿ. ಖಾದರ್, ಡಾ. ವೈ ಭರತ್ ಶೆಟ್ಟಿ, ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕಾಪು ಶಾಸಕ ಗುರ್ಮೆ
ಇಂದಿನಿಂದ 16ನೇ ವಿಧಾನಸಭೆಯ ಮೊದಲ ಅಧಿವೇಶನ ಆರಂಭಗೊಂಡಿದೆ. ಹಂಗಾಮಿ ಸ್ವೀಕರ್ ಆಗಿ ಆರ್ ವಿ ದೇಶಪಾಂಡೆಯವರು ನೇಮಕಗೊಂಡಿದ್ದಾರೆ. ಕಾಂಗ್ರೆಸ್ ನೇತೃತ್ವದ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತ್ರ, ಶಾಸಕರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕಾಗಿ ವಿಶೇಷ ಅಧಿವೇಶನವನ್ನು ಕರೆಯಲಾಗಿತ್ತು. ಇಂದಿನಿಂದ ಮೂರು ದಿನಗಳ ಕಾಲ ವಿಶೇಷ ಅಧಿವೇಶನ ನಡಯಲಿದ್ದು, ಅದಕ್ಕೂ ಮುನ್ನಾ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಹಂಗಾಮಿ ಸ್ವೀಕರ್ ಆರ್ ವಿ ದೇಶಪಾಂಡೆ ಅವರಿಗೆ
ಸಕಲೇಶಪುರ : ಕೊಲ್ಲಹಳ್ಳಿಯ ಬಿಎಮ್ ರಸ್ತೆಯಲ್ಲಿ ಮುಂಜಾನೆ ಕಾಡಾನೆಯೊಂದು ರಾಜಾರೋಷವಾಗಿ ತಿರುಗಾಡುತ್ತಿರುವುದು ಕಂಡುಬಂತು. ಕಳೆದ ಎರಡು ದಿನಗಳ ಹಿಂದಷ್ಟೇ ಕಾಡಾನೆಗಳಿಗೆ ವಿಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ನಡೆಸಲಾಗಿತ್ತು. ರಾತ್ರಿ ಸಮಯದಲ್ಲಿ ಹೊರಗೆ ಬರಲು ಜನತೆ ಭಯ ಪಡುತ್ತಿದ್ದಾರೆ. ಕಳೆದ ವಾರವಷ್ಟೇ ಇದೇ ಪ್ರದೇಶದಲ್ಲಿ ಎರಡು ಜನರ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ನಡೆದಿದೆ. ಕಾಫಿ ತೋಟಗಳಿಗೆ ಕೆಲಸಕ್ಕೆ ಹೋಗಲು ಕೆಲಸಗಾರರು ಭಯ ಪಡುವಂತಾಗಿದೆ.
ಜನರು ತಮ್ಮ ಅದೃಷ್ಟ ಪರೀಕ್ಷೆಗೆ ವಿವಿಧ ಕಸರತುಗಳನ್ನು ಮಾಡುವುದು ಸಹಜ. ಕೆಲವರು ಅದೃಷ್ಟದಾಟದಲ್ಲಿ ತೊಡಗಿಸಿಕೊಂಡು ಹಣ ಕಳೆದುಕೊಂಡವರೂ ಇದ್ದಾರೆ. ಲಕ್ಷಾಂತರ ಜನರು ದಿಡೀರ್ ಶ್ರೀಮಂತರಾಗಬೇಕು ಎಂದು ಲಾಟರಿ ತೆಗೆದು ತಮ್ಮ ಅದೃಷ್ಟ ಸಂಖ್ಯೆಗೆ ಬಂಪರ್ ಬಹುಮಾನ ಬಂದಿದೆಯಾ ಎಂದು ಜಾತಕಪಕ್ಷಿಯಂತೆ ಕಾಯುತ್ತಾರೆ. ಆದರೆ ಇಲ್ಲೊಂದು ಕಡೆ ಲಾಟರಿಯಲ್ಲಿ ಬಂಪರ್ ಬಹುಮಾನ ಬಂದರೂ, ವಿಜೇತ ಅದೃಷ್ಟವಂತ ಈವರೆಗೂ ಬಂಪರ್ ಬಹುಮಾನ ಬಂದ ಲಾಟರಿ ಏಜೆನ್ಸಿಯನ್ನು ಸಂಪರ್ಕಿಸಿಲ್ಲ. ಈ




























