ಹಲವು ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡದ ಹಿರಿಯ ನಟ ಸತ್ಯಜಿತ್ ಅವರು ತಡರಾತ್ರಿ ಎರಡು ಗಂಟೆ ಸಮಯದಲ್ಲಿ ನಿಧನರಾಗಿದ್ದಾರೆ. ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸತ್ಯಜಿತ್ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ನಟಿಸಿದ್ದ ಸತ್ಯಜಿತ್ ಆ ಮೂಲಕ ಚಿತ್ರರಂಗದಲ್ಲಿ ಹೆಸರು ಮಾಡಿದ್ದರು.
ಬಾಲಿವುಡ್ ಖಾನ್‍ಗಳ ವಿರುದ್ಧ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ಹೇಳಿಕೆ ನೀಡಿರುವ ಯತ್ನಾಳ ಶಾರುಖಾನ್ ಪುತ್ರ ಡ್ರಗ್ಸ್ ಕೇಸ್ ಲ್ಲಿ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿ ದೇಶ ಸುರಕ್ಷಿತ ಅಲ್ಲ ಎಂದ ಖಾನ್ ಗಳು ದೇಶ ಬಿಡಲಿ ಎಂದರು. ಆ ಮಕ್ಕಳೆಲ್ಲ ನೇರವಾಗಿ ಅಪಘಾನಿಸ್ತಾನಕ್ಕೆ ಹೋಗಲಿ, ಅಲ್ಲಿಯೇ ಸುರಕ್ಷಿತವಾಗಿ ತಾಲಿಬಾನ್ ಕೆಳಗೆ ನಟನೆ ಮಾಡಿಕೊಂಡಲು ಇರಲಿ ಎಂದು ವ್ಯಂಗವಾಡಿದ್ದಾರೆ.
ಬೆಂಗಳೂರು: 2023ರ ವಿಧಾನಸಭೆ ಚುನಾವಣೆಯಲ್ಲಿ ಮಹಿಳೆಯರಿಗೆ 30-35 ಸೀಟುಗಳನ್ನು ನೀಡುವುದಾಗಿ ಪ್ರಕಟಿಸಿದ್ದ ಜೆಡಿಎಸ್ ವರಿಷ್ಠ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಅದಕ್ಕೆ ಮುನ್ನುಡಿ ಎಂಬಂತೆ ಸಿಂಧಗಿ ಕ್ಷೇತ್ರದ ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿಯನ್ನಾಗಿ ಶ್ರೀಮತಿ ನಾಜಿಯಾ ಶಕೀಲಾ ಅಂಗಡಿ ಅವರನ್ನು ಆಯ್ಕೆ ಮಾಡಿದ್ದಾರೆ. ಶ್ರೀಮತಿ ನಾಜಿಯಾ ಶಕೀಲಾ ಅಂಗಡಿ ಅವರು MA, B.ed ಪದವೀಧರರಾಗಿದ್ದು, ಜೆಡಿಎಸ್ ಪಕ್ಷದಲ್ಲಿ ಸಕ್ರಿಯರಾಗಿ
ಹಾಸನ ತಾಲೂಕು ಕಾನೂನು ಸೇವಾ ಸಮಿತಿ ಆಲೂರು, ವಕೀಲರ ಸಂಘ ಆಲೂರು ಮತ್ತು ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಲೂರು ತಾಲೂಕು ಜೆಎಂಎಫ್ಸಿ ನ್ಯಾಯಾಧೀಶರಾದ ಪ್ರತಿಮಾ ನೇತೃತ್ವದಲ್ಲಿ ಹಮ್ಮಿಕೊಂಡಿದ್ದರು. ಆಲೂರು ತಾಲೂಕಿನ ಅಂಬೇಡ್ಕರ್ ಭವನದಲ್ಲಿ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮವನ್ನು ತಾಲೂಕು ಜೆಎಂಎಫ್ಸಿ ನ್ಯಾಯಾಧೀಶರಾದ ಪ್ರತಿಮಾ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಾ ಕಾನೂನಿನ ಅರಿವಿನ
ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಅರಸೀಕೆರೆ ನಗರ ರೈಲು ನಿಲ್ದಾಣದಲ್ಲಿ ಸ್ವಚ್ಛತೆಗೆ ನಿಲ್ಲಿಸಿದ್ದ ನಿಜಮುದ್ದಿನ್ ಮೈಸೂರು ಚೆನ್ನೈ ಎಕ್ಸ್ಪ್ರೆಸ್ ರೈಲು ಗಾಡಿಯ ಒಂದೇ ಭೋಗಿಯ ಎರಡು ಕಂಪಾರ್ಟ್‍ಮೆಂಟ್‍ಗಳಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು. ಅದೃಷ್ಟವಶಾತ್ ಬೋಗಿಯಲ್ಲಿ ಪ್ರಯಾಣಿಕರು ಇಲ್ಲದ ಕಾರಣ ಯಾವುದೇ ಪ್ರಾಣಹಾನಿಯಾಗಿಲ್ಲ, ಇದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಸುದ್ದಿ ತಿಳಿದ ಕೂಡಲೇ ರೈಲ್ವೆ ಅಧಿಕಾರಿಗಳ ತಂಡ
ಕ್ಷೇತ್ರದ ಜನರಿಗೆ ಭರವಸೆ ನೀಡಿದ ನಂತರ ಆ ಕೆಲಸ ಮಾಡಿ ಗ್ರಾಮಗಳಿಗೆ ತೆರಳುತ್ತೇನೆ. ಇಲ್ಲವಾದರೇ ಆ ಗ್ರಾಮಕ್ಕೆ ನಾನು ಮರಳುವುದಿಲ್ಲ. ಆಶ್ವಾಸನೆ ನೀಡುವ ಬೇರೆ ರಾಜಕೀಯ ಮುಖಂಡರ ಹಾಗೆ ಗೊಡ್ಡು ಮಾತುಗಳನ್ನು ಹೇಳುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಶಾಸಕರಾದ ಶ್ರೀಮಂತ ಪಾಟೀಲ ವಿನಾಕಾರಣ ಆಡಿಕೊಳ್ಳುವವರಿಗೆ ಟಾಂಗ್ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕು ಸಂಬರಗಿ ಗ್ರಾಮದಲ್ಲಿ ವಿವಿಧ ಅಭೀವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಪೂರ್ಣಗೊಂಡಿರುವ ಕಾಮಗಾರಿ
ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್‌ಗೆ ದೇಶಾದಂತ್ಯ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬೆಳಗ್ಗೆ 6 ಗಂಟೆಗೆ ಜನ ಬೀದಿಗಿಳಿದು ರೈತರಿಗೆ ಬೆಂಬಲ ನೀಡಿದ್ದಾರೆ. ದೆಹಲಿಯ ಗಡಿ ಭಾಗಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ವಿವಾದಿತ ಕೃಷಿ ಕಾನೂನುಗಳ ಜಾರಿಗೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ, ರೈತ ಸಂಘಟನೆಗಳು “ಭಾರತ್ ಬಂದ್” ಗೆ ಕರೆ ನೀಡಿವೆ. ಬೆಳಗ್ಗೆ 6 ಗಂಟೆಗೆ ಬಂದ್ ಆರಂಭವಾಗಿದ್ದು, ಇಂದು ಸಂಜೆ 4 ಗಂಟೆಯವರೆಗೂ ಮುಂದುವರಿಯಲಿದೆ.ಪಂಜಾಬ್
ಬೆಂಗಳೂರಿನ ಬಸವನಗುಡಿಯ ಅಕ್ವಾಟಿಕ್ ಸೆಂಟರ್ ನಲ್ಲಿ ರಾಜ್ಯ ಸಬ್ ಜೂನಿಯರ್ ಮತ್ತು ಜೂನಿಯರ್ ಅಕ್ವಾಟಿಕ್ ಚಾಂಪಿಯನ್ ಶಿಪ್ ಸ್ಮಿಮ್ಮಿಂಗ್ ಸ್ಪರ್ಧೆ ನಡೆಯುತ್ತಿದ್ದು ಮಂಗಳೂರಿನ ವಿ ವನ್ ಅಕ್ವಾ ಸೆಂಟರ್‌ನ ಈಜು ಪಟುಗಳು ಅದ್ವಿತೀಯ ಸಾಧನೆ ಮಾಡಿದ್ದಾರೆ.ಇನ್ನು ಈ ಈಜುಪಟುಗಳು ಬೆಂಗಳೂರಿನ ಡಾಲ್ಪಿನ್ ಅಕ್ವಾಟಿಕ್ ಸೆಂಟರನ್ನು ಪ್ರತಿನಿಧಿಸುತ್ತಿದ್ದಾರೆ. ಮಂಗಳೂರಿನ ಸೈಂಟ್ ಅಲೋಶಿಯಸ್ ವಿ ವನ್ ಅಕ್ವಾ ಸೆಂಟರ್‌ನ ಈಜುಪಟುಗಳು ರಾಜ್ಯಮಟ್ಟದಲ್ಲಿ ಅದ್ವಿತೀಯ ಸಾಧನೆಯನ್ನು
ಸ್ವಾತಂತ್ರ್ಯ ಪೂರ್ವದ ಕನಸಾದ ಪ್ರತಿ ಮನೆಯಲ್ಲೂ ವಿದ್ಯುಚ್ಛಕ್ತಿ ಒದಗಿಸಬೇಕು ಎಂಬ ಯೋಜನೆಯಿಂದ ಇಂದು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ನಮ್ಮ ನಾಯಕರೇ ಹೇಳುವಂತೆ 2 ಸಾವಿರದ ಇಪ್ಪತ್ತ ಐದರ ಒಳಗೆ ಪ್ರತಿ ಮನೆಯಲ್ಲೂ ಸಹ ವಿದ್ಯುತ್ ಇರಬೇಕು ಯಾವುದೇ ಮನೆ ಕತ್ತಲೆಯಲ್ಲಿ ಇರಬಾರದು ಎಂದು ಹೇಳುತ್ತಾರೆ ಆದರೆ ಇಲ್ಲಿರುವ ದಾರಿಯೇ ಬೇರೆಯಾಗಿದೆ ಕೆಲವು ಕೆಇಬಿ ಸಿಬ್ಬಂದಿಗಳು ಮತ್ತು ಅಧಿಕಾರಿಗಳ ಲಂಚಾವತಾರ ದಿಂದಾಗಿ ಕೆಲವೊಂದು ಮನೆಗಳು ಇಂದೂ ಕೂಡ
ಮೀರಾರೋಡ್ : ಬಂಟರ ಸಂಘ ಮುಂಬಯಿ ಇದರ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಸೆ. 14ರಂದು ಮೀರಾ ರೋಡ್ ಪೂರ್ವದ ಸಿನೆಮೆಕ್ಸ್ ಥಿಯೇಟರ್ ಎದುರಗಡೆ ಹೋಟೆಲ್ ಕೃಷ್ಣಾ ಪ್ಯಾಲೇಸನ ಸಭಾಂಗಣದಲ್ಲಿ ಹಳದಿ – ಕುಂಕುಮ , ಭಜನೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸ್ಥಳೀಯ ಬಂಟ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮ ಬಂಟರ ಸಂಘದ ಅಧ್ಯಕ್ಷರಾದ ಚಂದ್ರಹಾಸ್ ಕೆ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರುಗಿತ್ತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ



















