Home Archive by category ರಾಷ್ಟ್ರೀಯ

ಪ್ರಧಾನಿ ಮತ್ತು ರಾಹುಲ್‍ರಿಗೆ ಬಹಿರಂಗ ಚರ್ಚೆಗೆ ಕರೆ

ಸುಪ್ರೀಂ ಕೋರ್ಟಿನ ಮಾಜೀ ನ್ಯಾಯಾಧೀಶರಾದ ಮದನ್ ಲೋಕೂರ್, ದಿಲ್ಲಿ ಹೈಕೋರ್ಟಿನ ನಿವೃತ್ತ ಜಸ್ಟಿಸ್ ಎ. ವಿ. ಶಾ ಮತ್ತು ದ ಹಿಂದೂ ಪತ್ರಿಕೆಯ ಹಿಂದಿನ ಸಂಪಾದಕರಾದ ಎನ್. ರಾಮ್ ಅವರುಗಳು ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿಯವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ. ರಾಜಕೀಯ ವೇದಿಕೆಯ ಬದಲು ಜನತಾ ವೇದಿಕೆಯಲ್ಲಿ ಜನಪರ ಕಾರ್ಯಕ್ರಮಗಳನ್ನು ಕುರಿತು ಈ ಚರ್ಚೆ

ಶತಮಾನದ ಬಳಿಕ ಪ್ಯಾರಿಸ್ ಒಲಿಂಪಿಕ್ಸ್ || Olympic Games Paris 2024

ಒಲಿಂಪಿಕ್ಸ್ ಬೆಳಕಿನ ಪಂಜು ಗ್ರೀಸಿನ ಅಥೆನ್ಸ್‍ನಿಂz 12 ದಿನಗಳ ಸಾಗರ ಪಯಣದ ಬಳಿಕ ಫ್ರಾನ್ಸಿನ ಮಾರ್ಸೆಲ್ ಬಂದರು ತಲುಪಿದೆ. ಸಾವಿರ ದೋಣಿಗಳು ಕವಾಯತಿನ ನಡುವೆ ಒಲಿಂಪಿಕ್ಸ್ ದೊಂದಿ ತಂದ 1896ರ ಬೆಲೆಮ್ ವ್ಯಾಪಾರಿ ಹಡಗನ್ನು ಮಾರ್ಸೆಲ್‍ನಲ್ಲಿ ಸ್ವಾಗತಿಸಲಾಯಿತು. ಕಳೆದ ಮೂರು ಒಲಿಂಪಿಕ್ಸ್‍ಗಳಲ್ಲಿ ಮಾರ್ಸೆಲ್‍ನವರೇ ಇದ್ದ ಫ್ರಾನ್ಸಿನ ಹುಟ್ಟು ಹಾಕು ತಂಡವು ಚಿನ್ನ ಗೆದ್ದಿತ್ತು. ಮಾಜೀ ಒಲಿಂಪಿಕ್ಸ್ ಆಟಗಾರ ಟೋನಿ ವಿಸ್ಟಾಂ ಸಕಲ ಸೇನಾ, ಪೋಲೀಸು, ನಾಗರಿಕ

ಬಾಹ್ಯಾಕಾಶಕ್ಕೆ ಮೂರನೆಯ ದಾಪುಗಾಲು

ಭಾರತದ ಬಾಹ್ಯಾಕಾಶದ ಕನಸನ್ನು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಸಾಕಾರಪಡಿಸಿಕೊಂಡ ಮಹಿಳೆಯರು ಎಂದರೆ ಕಲ್ಪನಾ ಚಾವ್ಲಾ ಮತ್ತು ಸುನಿತಾ ವಿಲಿಯಮ್ಸ್. ಭಾರತೀಯ ಮೂಲದ ಅಮೆರಿಕದ ಪ್ರಜೆಗಳು ಇವರು. ಈಗ ಸುನಿತಾ ವಿಲಿಯಮ್ಸ್ ಅವರು ಮೂರನೆಯ ಬಾರಿಗೆ ಬಾಹ್ಯಾಕಾಶಕ್ಕೆ ನೆಗೆದಿದ್ದಾರೆ. ಕಲ್ಪನಾ ಬದುಕು ಅರ್ಧದಲ್ಲೇ ಉರಿದು ಗಗನದ ತಾರೆಯಾಯಿತು. ಇಲ್ಲದಿದ್ದರೆ ಅವರು ಕೂಡ ಮತ್ತಷ್ಟು ಬಾಹ್ಯಾಕಾಶ ಸಾಧನೆಗಳನ್ನು ಮಾಡುತ್ತಿದ್ದರು. ಕಲ್ಪನಾ ಚಾವ್ಲಾ ಭಾರತ ಮೂಲದ ಮೊದಲ ಮಹಿಳಾ

ಭಾರತದಲ್ಲಿ ಕೋವಿಶೀಲ್ಡನ್ನೇ ಮುಖ್ಯವಾಗಿಸಿದ್ದೇಕೆ?

ಕೋವಿಡ್ ಕಾಲದಲ್ಲಿ ಬಾಬಾ ರಾಮದೇವ್ ಕಂಪೆನಿಗೆ ಮತ್ತು ಕೋವಿಶೀಲ್ಡ್ ಲಸಿಕೆ ಕಂಪೆನಿಗೆ ಅನುಕೂಲವಾಗುವಂತೆ ಮೋದಿಯವರ ಸರಕಾರ ನಡೆದುಕೊಂಡಿತು ಎಂಬ ವಿಷಯ ಸುಪ್ರೀಂ ಕೋರ್ಟಿನಲ್ಲೇ ಪ್ರಕಟಗೊಂಡಿದೆ. ಈ ಬಗೆಗೆ ಸರ್ವೋಚ್ಚ ನ್ಯಾಯಾಲಯವು ಜನರ ಒಳಿತಿಗಿಂತ ಲಸಿಕೆ ಕಂಪೆನಿಗಳ ಲಾಭ ಮುಖ್ಯವಾಯಿತೇ ಎಂದು ಬಿಜೆಪಿ ಒಕ್ಕೂಟ ಸರಕಾರವನ್ನು ಹಿಂದೆಯೇ ಪ್ರಶ್ನಿಸಿದ್ದೂ ಆಗಿದೆ. ಸುಪ್ರೀಂ ಕೋರ್ಟ್ ಖಂಡನೆಯ ಬಳಿಕ ಉತ್ತರಾಖಂಡ ಸರಕಾರವು ಬಾಬಾ ರಾಮದೇವ್ ಮತ್ತು ಬಾಲಕೃಷ್ಣ ಸಹೋದರರ ಕಂಪೆನಿಯ

ಪತಂಜಲಿಯ 14 ಉತ್ಪನ್ನಗಳ ಲೈಸೆನ್ಸ್ ರದ್ದು : ಸುಪ್ರೀಂ ಕೋರ್ಟಿಗೆ ಪ್ರಮಾಣಪತ್ರ ಸಲ್ಲಿಕೆ

ಉತ್ತರಾಖಂಡ ಸರಕಾರವು ರಾಮದೇವ್ ಅವರ ಆಯುರ್ವೇದ ಸಂಸ್ಥೆಯ 14 ಉತ್ಪನ್ನಗಳ ಪರವಾನಗಿ ರದ್ದು ಪಡಿಸಿದೆ. ಆ ಬಗೆಗೆ ಸಂಪೂರ್ಣ ಮಾಹಿತಿಯನ್ನು ಇಂದು ಬೆಳಿಗ್ಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದೆ. ದಿವ್ಯಾ ಫಾರ್ಮಸಿಯ ದೃಷ್ಟಿ ಐ ಡ್ರಾಪ್, ಸ್ವಸರಿ ಗೋಲ್ಡ್, ಸ್ವಸರಿ ವಟಿ, ಬ್ರಾಂಕೋಮ್, ಸ್ವಸರಿ ಪ್ರವಾಹಿ, ಸ್ವಸರಿ ಅವಲೇಹ್, ಮುಕ್ತಾ ವಟಿ ಎಕ್ಸ್ಟ್ರಾ ಪವರ್, ಲಿಪಿಡಮ್, ಬಿಪಿ ಗ್ರಿಟ್, ಮಧುಗ್ರಿಟ್, ಮಧುನಾಶಿನಿ ವಟಿ, ಲಿವಾಮೃತ್ ಅಡ್ವಾನ್ಸ್, ಲಿವೋ ಗ್ರಿಟ್ ಈ ಎಲ್ಲ

ದಕ್ಷಿಣ ಚೀನಾದ ಗೌಂಗ್‌ಝೋ ನಗರಕ್ಕೆ ಅಪ್ಪಳಿಸಿದ ಸುಂಟರಗಾಳಿ: ಐವರ ಸಾವು: 33ಮಂದಿಗೆ ಗಾಯ

ದಕ್ಷಿಣ ಚೀನಾದ ಗೌಂಗ್‌ಝೋ ನಗರಕ್ಕೆ ಸುಂಟರಗಾಳಿ ಅಪ್ಪಳಿಸಿದೆ. ಘಟನೆಯಲ್ಲಿ ಐವರು ಮೃತಪಟ್ಟು, 33 ಮಂದಿ ಗಾಯಗೊಂಡಿದ್ದಾರೆ. ಶನಿವಾರ ಮಧ್ಯಾಹ್ನ ನಗರದ ಬೈಯುನ್ ಜಿಲ್ಲೆಯಲ್ಲಿ ಪ್ರಬಲವಾದ ಸುಂಟರಗಾಳಿ ಬೀಸಿದೆ. ಪರಿಣಾಮ 141 ಕಾರ್ಖಾನೆ ಕಟ್ಟಡಗಳು ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೈಯುನ್ ಜಿಲ್ಲೆಯ ಲಿಯಾಂಗ್ಟಿಯಾನ್ ಹಳ್ಳಿಯಲ್ಲಿರುವ ಹವಾಮಾನ ಕೇಂದ್ರದಲ್ಲಿ ಸೆಕೆಂಡಿಗೆ ಗರಿಷ್ಠ 20.6 ಮೀಟರ್ ಗಾಳಿ ದಾಖಲಾಗಿದೆ. ಸುಂಟರಗಾಳಿ ಬಳಿಕ ದಕ್ಷಿಣ

ಪ್ರಧಾನಿ ಮೋದಿಯವರ ಖಾತರಿಗಳು ಸುಳ್ಳುಗಳ ಖಾತರಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕೆ

ಲೋಕಸಭೆ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ‘ಸುಳ್ಳಿನ ಪತ್ರ’ ಎಂದಿರುವ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿಯವರ ಖಾತರಿಗಳು ‘ಸುಳ್ಳುಗಳ ಖಾತರಿಗಳಾಗಿವೆ’ ಎಂದು ಟೀಕಿಸಿದ್ದಾರೆ. ಮೋದಿ ಅವರು, ಉದ್ಯೋಗ ಸೃಷ್ಟಿ, ರೈತರ ಆದಾಯ ದ್ವಿಗುಣಗೊಳಿಸುವುದು, ಬೆಲೆ ಏರಿಕೆ ಹಾಗೂ ಹಣದುಬ್ಬರ ನಿಯಂತ್ರಣ ಸೇರಿದಂತೆ, ಈ ಹಿಂದೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾರಾಗಿದ್ದಾರೆ.

ದೇಶದ ವಿವಿಧೆಡೆ ಅಂಬೇಡ್ಕರ್ ಜಯಂತಿ ಆಚರಣೆ

ಭಾರತದ ಸಂವಿಧಾನ ಶಿಲ್ಪಿ, ಸಮಾಜ ಸುಧಾರಕ ಹಾಗೂ ಅರ್ಥಶಾಸ್ತ್ರಜ್ಞರಾದ ಬಿ.ಆರ್. ಅಂಬೇಡ್ಕರ್ ಅವರ 133ನೇ ಜನ್ಮದಿನವಾಗಿದ್ದು, ದೇಶದ ವಿವಿಧೆಡೆ ಅಂಬೇಡ್ಕರ್ ಜಯಂತಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗ್‌ದೀಪ್‌ ಧನಕರ್‌, ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್‌ ಭವನದ ಆವರಣದಲ್ಲಿರುವ ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.  ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನೊಳಗೊಂಡು ದೇಶದ ಹಲವು

ನಾಮಪತ್ರ ಸಲ್ಲಿಕೆಗೆ ಮುನ್ನ ಕ್ಯಾ. ಬೃಜೇಶ್ ಚೌಟರಿಗೆ ಹರಸಿದ ‘ನಾರೀಶಕ್ತಿ’

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್‌ ಬೃಜೇಶ್ ಚೌಟ ಅವರು ನಾಮಪತ್ರ ಸಲ್ಲಿಸಲಿರುವ ಹಿನ್ನೆಲೆಯಲ್ಲಿ ಮಹಿಳೆಯರು, ತಾಯಂದಿರ ಬೆಂಬಲದ ಸಂಕೇತವಾಗಿ ಚುನಾವಣಾ ಠೇವಣಿಯ ಮೊತ್ತಕ್ಕೆ ಕಿರು ದೇಣಿಗೆಗಳನ್ನು ಸಲ್ಲಿಸಲಾಯಿತು. ಪಕ್ಷದ ಚುನಾವಣಾ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭ್ಯರ್ಥಿ ಕ್ಯಾ. ಚೌಟರಿಗೆ ಮಹಿಳೆಯರು ಆರತಿ ಎತ್ತಿ, ತಿಲಕವಿಟ್ಟು, ದೇಣಿಗೆ ನೀಡಿ ಗೆದ್ದು ಬರುವಂತೆ ಹರಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕ್ಯಾ. ಚೌಟ ಅವರು,

ಎಲ್‌.ಕೆ.ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ಪ್ರದಾನ

ದೆಹಲಿ: ಹಿರಿಯ ರಾಜಕಾರಣಿ ಎಲ್‌.ಕೆ.ಅಡ್ವಾಣಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ‘ಭಾರತ ರತ್ನ’ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಅವರ ನಿವಾಸದಲ್ಲಿ ಪ್ರದಾನ ಮಾಡಿದರು. ಮಾಜಿ ಪ್ರಧಾನಿಗಳಾದ ಚೌಧರಿ ಚರಣ್‌ ಸಿಂಗ್‌, ಪಿ.ವಿ. ನರಸಿಂಹ ರಾವ್‌, ಕೃಷಿ ವಿಜ್ಞಾನಿ ಎಂ.ಎಸ್‌. ಸ್ವಾಮಿನಾಥನ್‌ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್‌ ಅವರಿಗೆ ಮರಣೋತ್ತರವಾಗಿ ‘ಭಾರತ ರತ್ನ’ ಪ್ರಶಸ್ತಿಗಳನ್ನು ಶನಿವಾರ ಪ್ರದಾನ