ಮಂಗಳೂರು: “ಸೆ.12ಕ್ಕೆ ಬಹು ನಿರೀಕ್ಷಿತ ರಾನಿ ಕನ್ನಡ ಸಿನಿಮಾ ಬಿಡುಗಡೆಗೊಳ್ಳಲಿದೆ. ಆಕ್ಷನ್ ಜೊತೆಗೆ ಫ್ಯಾಮಿಲಿ ಒರಿಯೆಂಟೆಡ್ ಕಥಾನಕ ಇದರಲ್ಲಿದ್ದು ಪ್ರೇಕ್ಷಕರು ಸಿನಿಮಾ ಇಷ್ಟಪಡಲು ಬೇಕಾದ ಎಲ್ಲಾ ಅಂಶಗಳು ಸಿನಿಮಾದಲ್ಲಿ ಇರಲಿದೆ” ಎಂದು ಚಿತ್ರ ನಿರ್ದೇಶಕ ಗುರುತೇಜ್ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. “ಸಿನಿಮಾದಲ್ಲಿ ಕನ್ನಡದ ಖ್ಯಾತ ನಟರಾದ
ರಾಹುಲ್ ರಾವೆಲ್ ಅಧ್ಯಕ್ಷತೆಯ ತೀರ್ಪುಗಾರರ ಸಮಿತಿಯು 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಿಸಿದ್ದು ರಿಷಬ್ ಶೆಟ್ಟಿ ಶ್ರೇಷ್ಠ ನಟ ಮತ್ತು ನಿತ್ಯಾ ಮೆನನ್, ಮಾನಸಿ ಪಾರೇಕ್ ಜಂಟಿಯಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಮಲಯಾಳಿ ಚಿತ್ರ ಆಟ್ಟಂ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆಯಿತು. ಕಾಂತಾರ ಚಿತ್ರವು ಉತ್ತಮ ಮನೋರಂಜನಾ ಚಿತ್ರ ಎನಿಸಿತು. ಬ್ರಹ್ಮಾಸ್ತ್ರವು ಉತ್ತಮ ವಿಎಫ್‌ಎಕ್ಸ್ ಚಲನಚಿತ್ರ ಪ್ರಶಸ್ತಿಗೆ ಬಾಜನವಾಯಿತು.ಪ್ರಶಸ್ತಿ
ಮಂಗಳೂರು: ಪಿ.ಎನ್.ಆರ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ತಯಾರಾದ ಪುಷ್ಪರಾಜ್ ರೈ ಮಲಾರಬೀಡು ನಿರ್ದೇಶನದ “ಆರಾಟ” ಕನ್ನಡ ಸಿನಿಮಾ ಭಾರತ್ ಸಿನಿಮಾಸ್ ನಲ್ಲಿ ಬಿಡುಗಡೆಗೊಂಡಿತು. ಶಾಸಕ ರಾಜೇಶ್ ನಾಯ್ಕ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.ಆರಾಟ ಕನ್ನಡ ಸಿನಿಮಾ ನಮ್ಮ ಸಂಸ್ಕ್ರತಿಯನ್ನು,ನಮ್ಮ ಪರಂರೆಯನ್ನು ಬಿಂಬಿಸುವ ಸಿನಿಮಾ ಆಗಿದೆ. ಸಿನಿಮಾವನ್ನು ಎಲ್ಲರೂ ವೀಕ್ಷಿಸಿ ಪ್ರೋತ್ಸಾಹಿಸ ಬೇಕೆಂದರು. ಮುಖ್ಯ ಅತಿಥಿ ಕಟೀಲು ಯಕ್ಷಗಾನ ಮೇಳದ ಮುಖ್ಯಸ್ಥ
ಮಂಗಳೂರು : ಸತತ ಮೂರನೇ ಬಾರಿಗೆ ಸ್ಯಾಂಡಿಸ್ ಕಂಪನಿ ಅರ್ಪಿಸುವ ಸಿನಿ ಗ್ಯಾಲಕ್ಸಿ ಕೋಸ್ಟಲ್ ಫಿಲ್ಮ್ ಅವಾರ್ಡ್ 2024 ಕಾರ್ಯಕ್ರಮವು ಜೂನ್ 16 ರಂದು ಮುಲ್ಕಿಯ ಸುಂದರರಾಮ ಶೆಟ್ಟಿ ಕನ್ವೆನ್ಷನಲ್ ಸೆಂಟರ್ ಕೊಲ್ನಾಡಿನಲ್ಲಿ ನಡೆಯಲಿದೆ ಎಂದು ಸ್ಯಾಂಡೀಸ್ ಕಂಪನಿಯ ಮಾಲಕರಾದ ಸಂದೇಶ್ ರಾಜ್ ಬಂಗೇರ ತಿಳಿಸಿದರು. ಅವರು ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.ಜೂನ್ 16ರಂದು ಭಾನುವಾರ ಸಂಜೆ 3 ಗಂಟೆಗೆ ಸರಿಯಾಗಿ ನಡೆಯಲಿರುವ ಕಾರ್ಯಕ್ರಮದಲ್ಲಿ
ಕಾನೂನು ತಪ್ಪಿ ಮಗು ದತ್ತು ಪಡೆದಿದ್ದರು ಎಂಬ ಆರೋಪಕ್ಕೆ ಒಳಗಾಗಿದ್ದ ರೀಲ್ಸ್ ನಟಿ ಸೋನು ಗೌಡ ಅವರಿಗೆ ಬೆಂಗಳೂರು ಗ್ರಾಮಾಂತರ ಸಿಜೆಎಂ ಅವರು ಜಾಮೀನು ಮಂಜೂರು ಮಾಡಿದ್ದಾರೆ. ರಾಯಚೂರು ಜಿಲ್ಲೆಯ ಹೆಣ್ಣು ಮಗುವನ್ನು ದತ್ತು ಪಡೆಯುವಾಗ ಸೋನುಗೌಡ ಅವರು ಕಾನೂನು ನಿಯಮ ಪಾಲಿಸಿಲ್ಲ ಎಂದು ಅವರನ್ನು ಬಂಧಿಸಲಾಗಿತ್ತು. ವಾರದಲ್ಲಿ ವಿಚಾರಣೆ ಮುಗಿಯದೆ ಮೂರು ವಾರ ಎಳೆದಿತ್ತು. ಈಗ ಮ್ಯಾಜಿಸ್ಟ್ರೇಟ್ ಅವರು ಶರತ್ತುಬದ್ಧ ಜಾಮೀನು ನೀಡಿದ್ದಾರೆ.
ಬಿಗ್‌ಬಾಸ್ ಸೀಸನ್ 9ರ ವಿಜೇತ ನಟ ರೂಪೇಶ್ ಶೆಟ್ಟಿ ಅಭಿನಯದ ಮಂಕು ಭಾಯ್ ಫಾಕ್ಸಿ ರಾಣಿ ಕನ್ನಡ ಸಿನಿಮಾ ಇದೀಗ ಒಟಿಟಿಯಲ್ಲಿ ಲಭ್ಯವಿದೆ. ಅಮೆಜಾನ್ ಪ್ರೈಮ್‌ನಲ್ಲಿ ಸಿನಿ ಪ್ರೇಕ್ಷಕರು ಸಿನಿಮಾ ವೀಕ್ಷಿಸಲು ಅವಕಾಶ ಕಲ್ಪಿಸಿದ್ದಾರೆ. ಕಳೆದ ವರ್ಷ ಸಿನಿಮಾ ಮಂದಿರದಲ್ಲಿ ಬಿಡುಗಡೆಗೊಂಡು ಪ್ರೇಕ್ಷಕರ ಮನಗೆದ್ದಿದ್ದ ಮಂಕು ಭಾಯ್ ಫಾಕ್ಸಿ ರಾಣಿ ಸಿನಿಮಾ ಓಟಿಟಿ ಪ್ಲಾಟ್ ಪಾಮ್‌ನಲ್ಲಿ ಲಭ್ಯವಿದೆ. ಇದೀಗ ಅಮೆಜಾನ್ ಪ್ರೈಮ್‌ನಲ್ಲಿ ವೀಕ್ಷಿಸಲು ಅವಕಾಶವಿದೆ.ನಟ ರೂಪೇಶ್ ಶೆಟ್ಟಿ
ಕಳೆದ ಕೆಲ ದಿನಗಳಿಂದ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಖ್ಯಾತ ಹಿರಿಯ ನಟಿ ಲೀಲಾವತಿ ಬೆಂಗಳೂರಿನ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ನೆಲಮಂಗಲದ ಸೋಲದೇವನ ಹಳ್ಳಿಯ ನಿವಾಸದಲ್ಲೇ ಅವರಿಗೆ ಆರೈಕೆ ಮಾಡಲಾಗುತ್ತಿತ್ತು. ಪುತ್ರ ವಿನೋದ್ ರಾಜ್ ಅವರು ನೋಡಿ ಕೊಳ್ಳುತ್ತಿದ್ದರು. ದಕ್ಷಿಣ ಕನ್ನಡ ದ ಬೆಳ್ತಂಗಡಿ ಮೂಲದ ಲೀಲಾವತಿ ಅವರು, ಕನ್ನಡ, ತಮಿಳು ಮತ್ತು ತೆಲುಗು ಚಲನಚಿತ್ರಗಳಲ್ಲಿ ನಟಿಸಿದ್ದ ಹಿರಿಯ
ನಟ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾದ ಪ್ರೀಕ್ವೆಲ್ ಕಾಂತಾರ ಚಾಪ್ಟರ್ ಫಸ್ಟ್ ಲುಕ್ ಹಾಗೂ ಟೀಸರ್ ಬಿಡುಗಡೆಯಾಗಿದೆ. ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಬಂಗಾಳಿ ಭಾಷೆಯಲ್ಲಿ ಬಿಡುಗಡೆಯಾಗಿದ್ದು ಹೊಂಬಾಳೆ ಫಿಲ್ಮ್ಸ್ ತನ್ನ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿದೆ. ಯುಟ್ಯೂಬ್‍ನಲ್ಲಿ ಟೀಸರ್ ಬಿಡುಗಡೆಯಾಗಿದ್ದು ಕಾಂತಾರ ಪ್ರೀಕ್ವೆಲ್ ಕತೆ ಕದಂಬರ ಕಾಲಕ್ಕೆ ಕರೆದುಕೊಂಡು ಹೋಗಲಿದೆ ಎಂದು
ಮಂಗಳೂರು: ವಿಭಿನ್ನ ಕಥೆ, ಹೊಸ ಕಲಾವಿದರನ್ನೊಳಗೊಂಡ “ನಿಮ್ಮೆಲ್ಲರ ಆಶೀರ್ವಾದ” ಕನ್ನಡ ಚಿತ್ರದ ಪ್ರೀಮಿಯರ್ ಶೋ ಗುರುವಾರ ಸಂಜೆ ನಗರದ ಬಿಗ್ ಸಿನೆಮಾಸ್ ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತಾಡಿದ ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಆರ್. ಜೈನ್ ಅವರು, “ನಿಮ್ಮೆಲ್ಲರ ಆಶೀರ್ವಾದ ಸಿನಿಮಾ ರೊಮ್ಯಾಂಟಿಕ್ ಕಾಮಿಡಿ ಆಗಿದ್ದು ನಾಯಕ ನಟ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ.
ಡೇರ್ಡೆವಿಲ್ ಮುಸ್ತಫಾ ಸಿನಿಮಾಗೆ ರಾಜ್ಯದಲ್ಲಿ ತೆರಿಗೆ ವಿನಾಯಿತಿ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶ ಹೊರಡಿಸಿರುವ ಬಗ್ಗೆ ವರದಿಯಾಗಿದೆ. ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಕಥೆಯನ್ನು ಆಧರಿಸಿದ ಈ ಸಿನಿಮಾ ಇತ್ತೀಚೆಗೆ 25 ದಿನಗಳನ್ನು ಪೂರೈಸಿ ‘ಡೇರ್ಡೆವಿಲ್ ಮುಸ್ತಫಾ’ ಚಿತ್ರ ಈಗ 50ನೇ ದಿನದತ್ತ ಮುನ್ನುಗ್ಗುತ್ತಿದೆ. ಈ ಸಂದರ್ಭದಲ್ಲಿ ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನು ರಾಜ್ಯದಲ್ಲಿ ನೀಡಲಾಗಿದೆ. ಧರ್ಮ ಸಹಿಷ್ಣುತೆ, ಸಹಬಾಳ್ವೆ,