ಪುತ್ತೂರು ತಾಲ್ಲೂಕು ಕುಂಬ್ರದ ಒಳಮೊಗ್ರು ಗ್ರಾಮದ ಉರ್ವದಲ್ಲಿ ತಲೆಬುರುಡೆ ಮತ್ತು ಎಲುಬುಗಳು ಪತ್ತೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಶಂಕೆ. ಪುತ್ತೂರು: ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ತಲೆ ಬುರುಡೆ ಹಾಗೂ ಎಲುಬುಗಳು ಒಳಮೊಗ್ರು ಗ್ರಾಮದ ಉರ್ವದಲ್ಲಿ ನ.3ರಂದು ಪತ್ತೆಯಾಗಿದೆ. ಉರ್ವ ನಿವಾಸಿ ಸಂಜೀವ ಎಂಬವರ ಪತ್ನಿ ನಳಿನಿ ಎಂಬಾಕೆ ತನ್ನ ಮನೆಯ ಎದುರಿನ
ರಾಷ್ಟೀಯ ಹೆದ್ದಾರಿ 66ರ ಇಕ್ಕೆಲಲ್ಲಿ ನಿಂತಿದ್ದ ಲಾರಿಗೆ ಟೂರಿಸ್ಟ್ ವಾಹನ ಡಿಕ್ಕಿ ಹೊಡೆದು ಪ್ರವಾಸಿಗರು ಗಾಯಗೊಂಡ ದುರ್ಘಟನೆ ಇಂದು ಮುಂಜಾನೆ ಉದ್ಯಾವರ ಪೆಟ್ರೋಲ್ ಬಂಕ್ ಬಳಿ ಸಂಭವಿಸಿದೆ. ಕೊಲ್ಲೂರಿನತ್ತ ತೆರಳುತ್ತಿದ್ದ ಹೊರ ರಾಜ್ಯದ ಟೂರಿಸ್ಟ ವಾಹನವು ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದ್ದು, ಮಹಿಳೆಯರೂ ಸೇರಿದಂತೆ ಪ್ರವಾಸಿಗರು ಗಂಭೀರ ಗಾಯಗೊಂಡಿದ್ದಾರೆ. ಸ್ಥಳೀಯರ ಸಹಕಾರದಿಂದ ಗಾಯಾಳುಗಳನ್ನು
ಕಿನ್ನಿಗೋಳಿ ಸಮೀಪದ ಎಳತ್ತೂರು ದೇವಸ್ಧಾನದ ದೇವರ ಗುಂಡಿ ಸಂಕದ ಬಳಿ ಚಿರತೆಯೊಂದು ಹುಲ್ಲು ಕತ್ತರಿಸುತ್ತಿದ್ದ ವ್ಯಕ್ತಿಯೋರ್ವರ ಮೇಲೆ ದಾಳಿ ನಡೆಸಿದ್ದು ಗಂಭೀರ ಗಾಯಗೊಂಡ ವ್ಯಕ್ತಿ ಕಟೀಲು ಆಸ್ಪತ್ರೆಗೆ ದಾಖಲಾಗಿದ್ದಾರೆ.ಗಾಯಗೊಂಡವರನ್ನು ಸ್ಧಳೀಯ ನಿವಾಸಿ ಲಿಗೋರಿ (58) ಎಂದು ಗುರುತಿಸಲಾಗಿದೆ.ಗಾಯಾಳು ಲಿಗೋರಿ ಹೈನುಗಾರರಾಗಿದ್ದು ದನಗಳಿಗೆ ಮೇವು ತರಲು ಹೋದಾಗ ಈ ಘಟನೆ ನಡೆದಿದ್ದು ಲಿಗೋರಿ ಅವರು ಧೈರ್ಯದಿಂದ ಚಿರತೆಯನ್ನು ಎದುರಿಸಿದ್ದು ಕೂಡಲೇ ಚಿರತೆ ಸ್ಧಳದಿಂದ
ನಾಟೆಕಲ್ : ಬಸ್ -ಕಾರು ನಡುವೆ ಮುಖಾಮುಖಿ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿರುವ ಘಟನೆ ಕಲ್ಕಟ್ಟ ಸಮೀಪದ ತಿರುವಿನಲ್ಲಿ ಇಂದು ಸಂಜೆ ವೇಳೆ ಸಂಭವಿಸಿದೆ. ಆಸೀಫ್ ಕಲ್ಕಟ್ಟ ಇವರ ಬಲಗೈ, ಭುಜದ ಮೂಲೆಗಳು ಮುರಿತಕ್ಕೊಳಗಾಗಿದ್ದರೆ, ಅರಾಫತ್ ಇನೋಳಿ ಎಂಬವರ ಕಾಲಿನ ಮೂಳೆಗಳು ಮುರಿತಕ್ಕೊಳಗಾಗಿದೆ. ಉಳಿದಂತೆ ಚಾಲಕ ಅಝ್ಮಾನ್, ಹ್ಯಾರೀಸ್ ಕಲ್ಕಟ್ಟ ಗಾಯಗೊಂಡಿದ್ದಾರೆ. ಮುಡಿಪುವಿನಿಂದ ಮಂಗಳೂರಿಗೆ ತೆರಳುವ ಎನ್ .ಎಸ್ ಟ್ರಾವೆಲ್ಸ್ ಬಸ್ಸು ವಿರುದ್ಧ
ಮಂಗಳೂರಿನ ಪ್ರಖ್ಯಾತ ಬಿಲ್ಡರ್, ಬಿಜೆಪಿ ಮುಖಂಡ ಜಿತೇಂದ್ರ ಕೊಟ್ಟಾರಿ ಅವರ ಮನೆಗೆ ಇಬ್ಬರು ಯುವಕರು ನುಗ್ಗಿ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ. ಮಾಹಿತಿ ಪಡೆದ ಬರ್ಕೆ ಪೊಲೀಸರು ಕಾರ್ಯಾಚರಣೆ ನಡೆಸಿ ಯುವಕರನ್ನು ಬಂಧಿಸಿದ್ದಾರೆ. ಖ್ಯಾತ ಬಿಲ್ಡರ್ ಲೋಟಸ್ ಪ್ರಾಪರ್ಟೀಸ್ ಪಾಲುದಾರ ಹಾಗೂ ಬಿಜೆಪಿ ಮುಖಂಡ ಜಿತೇಂದ್ರ ಕೊಟ್ಟಾರಿ ಏರ್ಪೋರ್ಟಿನಿಂದ ಕಾರಿನಲ್ಲಿ ಬರುತ್ತಿರುವಾಗ ಈ ಯುವಕರ ಕಾರನ್ನು ಓವರ್ ಟೇಕ್ ಮಾಡಿ ಬಂದಿದ್ದರು. ಇದೇ ಕಾರಣಕ್ಕೆ ಕೋಪದಿಂದ ಕೊಟ್ಟಾರಿ ಅವರ
ಕೊಪ್ಪಳ:ತುಂಗಭದ್ರಾ ಅಣೆಕಟ್ಟೆಯ 19ನೇ ಗೇಟ್ ಲಿಂಕ್ ಮುರಿದು ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಹೋಗುತ್ತಿರುವ ಕಾರಣ ಜಲಾಶಯಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ ವಿಧಿಸಲಾಗಿದೆ. ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ಸಂಖ್ಯೆ 19ರಲ್ಲಿ ಚೈನ್ ಲಿಂಕ್ ತುಂಡಾಗಿರುವ ಕಾರಣ ನದಿಗೆ ಅಪಾರ ಪ್ರಮಾಣದ ನೀರು ಹರಿಸಲಾಗುತ್ತಿದೆ. ನೀರಿನ ರಭಸಕ್ಕೆ ತುಂಡಾಗಿರುವ ಭಾಗವೂ ಕಾಣುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿಯಿರುವ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿ ಮಳೆಯಾಗುತ್ತಿದ್ದು ಅಪಾರ ಪ್ರಮಾಣದ ಸೊತ್ತು ನಷ್ಟ ಉಂಟಾಗಿದೆ. ಜಿಲ್ಲೆಯ ಜನತೆ ಮತ್ತೆ ಬದುಕು ಕಟ್ಟಿಕೊಳ್ಳಲು ಅನುವಾಗುವಂತೆ ರಾಜ್ಯ ಸರಕಾರ 300 ಕೋಟಿ ರೂ. ವಿಶೇಷ ಪರಿಹಾರ ಘೋಷಣೆ ಮಾಡಬೇಕೆಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಸುದ್ದಿಗೋಷ್ಟಿಯಲ್ಲಿ ಒತ್ತಾಯಿಸಿದರು.ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿರಂತರ ಮಳೆಯಿಂದಾಗಿ ಹಲವು ಮನೆಗಳು ಕುಸಿದಿದ್ದು ಮನೆಗಳ ಮೇಲೆ
ಉಳ್ಳಾಲ : ಮದನಿನಗರ ಬಳಿ ಕಂಪೌಂಡ್ ವಾಲ್ ಬಿದ್ದು ನಾಲ್ವರು ಮೃತಪಟ್ಟ ಬೆನ್ನಲ್ಲೇ ಉಳ್ಳಾಲ ನಗರಸಭಗೆ ಕೌನ್ಸಿಲರ್ ಓರ್ವರು ಅಪಾಯದಂಚಿನಲ್ಲಿರುವ ಮನೆಮಂದಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮನವಿ ಮಾಡಿದ್ದು, ಮನವಿಗೆ ಸ್ಪಂಧಿಸದ ಹಿನ್ನೆಲೆಯಲ್ಲಿ ಇಂದು ಮನೆ ಮಹಡಿ ಕುಸಿದು ಮನೆಯೊಳಗಿದ್ದ ಬಾಲಕಿ ಸೇರಿದಂತೆ ತಂದೆ ಗಾಯಗೊಂಡ ಘಟನೆ ಉಳ್ಳಾಲ ನಗರಸಭೆ ವ್ಯಾಪ್ತಿಯ ಮೇಲಂಗಡಿ ಮಸೀದಿ ಸಮೀಪ ನಡೆದಿದೆ. ಮನೆಯೊಳಗಿದ್ದ ಅಬ್ಬಾಸ್ ಹಾಗೂ ಅವರ ಪುತ್ರಿ ಮನೆ ಕುಸಿತದ ಸಂದರ್ಭ
ಮೂಡುಬಿದಿರೆ: ಬುಧವಾರ ರಾತ್ರಿ ಸುರಿದ ವಿಪರೀತ ಮಳೆಗೆ ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಡೆಂಜಾರುವಿನ ಪ್ರಕಾಶ್ ಎಂಬವರ ಮನೆಯ ಕೊಟ್ಟಿಗೆಯಲ್ಲಿದ್ದ 5 ದನಗಳು ನೀರಿನಲ್ಲಿ ಕೊಚ್ಚಿಹೋಗಿದ್ದು ಅದರಲ್ಲಿ 1 ದನ ಅಸುನೀಗಿದೆ.2 ದನಗಳು ವಾಪಾಸು ಬಂದಿದ್ದು ಇನ್ನೆರಡು ದನಗಳು ಕಾಣೆಯಾಗಿರುತ್ತದೆ.ಸ್ಥಳಕ್ಕೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಲೊಕೇಶ್ ಬಿ., ಸಹಾಯಕ ನಿರ್ದೇಶಕರು(ಗ್ರಾ.ಉ), ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ ಪೂಜಾರಿ, ಉಪಾಧ್ಯಕ್ಷೆ ಸುಶೀಲಾ
ಬೈಂದೂರು: ವೈಶಾಖದಲ್ಲಿ ನದಿಯಾಚೆಗಿನ ಮನೆಗೆ ತೆರಳಲು ದೋಣಿಯಲ್ಲಾದರೂ ಪ್ರಯಾಣಿಸ ಬಹುದಿತ್ತು. ಆದರೆ ಈಗ ಮಳೆಯಬ್ಬರ ಜೋರಿದೆ ಸೌಪರ್ಣಿಕ ನದಿಯಲ್ಲಿ ನೀರಿನ ಮಟ್ಟವು ಹೆಚ್ಚಿದೆ. ಕುದ್ರುವಿನಿಂದ ನಾವುಂದಕ್ಕೆ ಅಥವಾ ನಾವುಂದದಿಂದ ಕುದ್ರುವಿಗೆ ಹೋಗುವುದಾದರೂ ಹೇಗೆ ಎಂಬುದೇ ಯಕ್ಷಪ್ರಶ್ನೆ. ಬೇಸಗೆಯಿರಲಿ ಅಥವಾ ಮಳೆಗಾಲವಿರಲಿ ಅನೇಕ ವರ್ಷಗಳಿಂದ ಈ ಕುದ್ರುವಿನ ನಿವಾಸಿಗಳಿಗೆ ದೋಣಿಯೊಂದೇ ಆಧಾರ. ನಾವುಂದ ಕುದ್ರುವಿನಲ್ಲಿ 7 ಮನೆಗಳಿದ್ದು, ಒಟ್ಟು ಸುಮಾರು 20 ಮಂದಿ



























