Home Archive by category Fresh News (Page 500)

ಪುತ್ತೂರಿನ ಹೊರವಲಯದ ಪೋಳ್ಯ ಬಸ್ ತಂಗುದಾಣದಲ್ಲಿ ಗಾಂಜಾ ನಶೆಯಲ್ಲಿ ಅನುಚಿತ ವರ್ತನೆ.ಆರೋಪಿಯ ಬಂಧನ.

ಪುತ್ತೂರು: ಮಾದಕ ದ್ರವ್ಯ ಗಾಂಜಾ ನಶೆಯಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬರನ್ನು ಪುತ್ತೂರು ನಗರ ಪೊಲೀಸ್ ಠಾಣೆ ಎಸ್.ಐ ಶ್ರೀಕಾಂತ್ ರಾಥೋಡ್ ಅವರು ಬಂಧಿಸಿದ ಘಟನೆ ನಡೆದಿದೆ. ಕಬಕ ಗ್ರಾಮದ ಕಲ್ಲಂದಡ್ಕ ನಿವಾಸಿ ಉಮ್ಮರ್ ಫಾರೂಖ್ (36ವ) ಬಂಧಿತ ಆರೋಪಿ. ಎಸ್.ಐ ಶ್ರೀಕಾಂತ್ ರಾಥೋಡ್ ಮತ್ತು ಸಿಬ್ಬಂದಿಗಳು ರೌಂಡ್ಸ್ ಕರ್ತವ್ಯದಲ್ಲಿರುವಾಗ ಕಬಕ ಗ್ರಾಮದ

ಉಪ್ಪಿನಂಗಡಿಯ ಪೊಲೀಸ್ ಠಾಣೆಯ ಎದುರಿನಲ್ಲೇ ಕಳ್ಳರ ಕೈಚಳಕ

ಪುತ್ತೂರು ತಾಲೂಕಿನ ಉಪ್ಪಿನಂಗಡಿ ಪೊಲೀಸ್ ಠಾಣೆಯ ಮುಂಭಾಗದಲ್ಲಿರುವ ಅಂಗಡಿಯೊಂದಕ್ಕೆ ಕಳ್ಳರು ನುಗ್ಗಿದ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.ಉಪ್ಪಿನಂಗಡಿಯ ಲಕ್ಷ್ಮೀ ಸ್ಟೋರ್ ನ ಷಟರ್ ಮುರಿದು ಒಳನುಗ್ಗಿರುವ ಕಳ್ಳರು ಸುಮಾರು 40 ಸಾವಿರ ರೂಪಾಯಿ ನಗದು ಹಾಗೂ ಸೊತ್ತುಗಳನ್ನು ದೋಚಿದ್ದಾರೆ. ಬಸ್ ನಿಲ್ದಾಣ ಬಳಿಯ ಸೆಲ್ ಸೈಟ್ ಮೊಬೈಲ್ ಶಾಪ್ ಗೆ ನುಗ್ಗಿದ ಕಳ್ಳರು 5 ಸಾವಿರ ರೂಪಾಯಿ ನಗದು ದೋಚಿದ್ದಾರೆ. ಬ್ಯಾಂಕ್ ರಸ್ತೆಯಲ್ಲಿರುವ ಕಾಮತ್ ಕೋಲ್ಡ್ ಹೌಸ್ ಗೆ

ಅ.16ರಂದು ರಾಜ್ಯ ಮಟ್ಟದ ಜೈನ್ ಮಿಲನ್ ವಲಯ ಸಮ್ಮೇಳನ

ಮೂಡುಬಿದಿರೆ: ಭಾರತೀಯ ಜೈನ್ ಮಿಲನ್ ವಲಯ-8 ಆಯೋಜಿಸಿರುವ ಬದುಕು ಹಾಗೂ ಬದುಕಲು ಬಿಡು ಎಂಬ ಘೋಷಣೆಯೊಂದಿಗೆ ರಾಜ್ಯ ಮಟ್ಟದ ಜೈನ್ ಮಿಲನ್ ವಲಯ, ಸಮ್ಮೇಳನವು ಅಕ್ಟೋಬರ್ 16 ರವಿವಾರದಂದು ಕಲ್ಲಬೆಟ್ಟು ಎಕ್ಸಲೆಂಟ್ ಕಾಲೇಜಿನ ನೂತನ ಸಭಾಂಗಣದಲ್ಲಿ ನಡೆಯಲಿದೆ. ಎಂದು ವಲಯಾಧ್ಯಕ್ಷ ವೀರ ಪುಷ್ಪರಾಜ್ ಜೈನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅಂದು ಬೆಳಿಗ್ಗೆ 9:15ಕ್ಕೆ ಸಾಂಪ್ರದಾಯಿಕ ಮೆರವಣಿಗೆಯೊಂದಿಗೆ ಆರಂಭವಾಗುವ ಈ ಸಮ್ಮೇಳನವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ|

ಕೊಟ್ಟ ಮಾತಿನಂತೆ ಅಶಕ್ತರಿಗೆ ನೆರವಾದ ದೇವದಾಸ್.!

ಬಂಟ್ವಾಳ: ಕಿಡ್ನಿ ಸಮಸ್ಯೆಯಲ್ಲಿರುವ ಇಬ್ಬರು ಮಕ್ಕಳ ಚಿಕಿತ್ಸೆ ಹಾಗೂ ಬಡ ಕುಟುಂಬದ ಯುವತಿಯೊಬ್ಬಳ ಮದುವೆಗೆ ನೆರವು ನೀಡುವ ಉದ್ದೇಶದಿಂದ 20 ಸಾವಿರ ರೂ.ಗಳ ಗುರಿಯೊಂದಿಗೆ ನವರಾತ್ರಿಯ ಸಂದರ್ಭದಲ್ಲಿ ಪ್ರೇತದ ವೇಷ ಹಾಕಿ ಊರೂರು ಸಂಚರಿಸಿದ್ದ ಸರಪಾಡಿಯ ದೇವದಾಸ್ ನಾಯ್ಕ್ ಅವರಿಗೆ ಸಂಗ್ರಹಗೊಂಡದ್ದು ಬರೋಬ್ಬರಿ 57 ಸಾವಿರ ರೂ.ಅ.12ರಂದು ಅವರು ಮೊತ್ತವನ್ನು ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲಿ ಸಂಬಂಧಪಟ್ಟ ಕುಟುಂಬಗಳಿಗೆ ಹಸ್ತಾಂತರಿಸಿದರು. ಕ್ಷೇತ್ರದ ಪ್ರಧಾನ

ವಿಟ್ಲದ ದೀಪಕ್ ವಾಚ್‌ವರ್ಕ್ಸ್ ಶಟರ್‌ನಲ್ಲಿ Name jihad ಬರಹ : ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು

ವಿಟ್ಲ: ಅಂಗಡಿಯೊಂದರ ಶಟರ್ ನಲ್ಲಿ ಯಾರೋ ಕಿಡಿಗೇಡಿಗಳು Name jihad ಬರಹ ಎಂದು ಬರೆದ ಘಟನೆ ವಿಟ್ಲ ಪೇಟೆಯ ಹೃದಯ ಭಾಗದಲ್ಲಿರುವ ದೀಪಕ್ ವಾಚ್ ವರ್ಕ್ಸ್‌ನಲ್ಲಿ ನಡೆದಿದೆ. ಅ.11 ರಂದು ರಾತ್ರಿ ವೇಳೆ ಘಟನೆ ನಡೆದಿದ್ದು, ಅ12 ರಂದು ಮುಂಜಾನೆ ಅಂಗಡಿ ಮಾಲೀಕರು ಬಾಗಿಲು ತೆಗೆಯಲು ಬಂದು ನೋಡಿದಾಗ ಬೆಳಕಿಗೆ ಬಂದಿದೆ ಎನ್ನಲಾಗಿದೆ.ಈ ಬಗ್ಗೆ ಅಂಗಡಿ ಮಾಲೀಕ ಅಬ್ದುಲ್ ವಿಟ್ಲ ಠಾಣೆಗೆ ದೂರು ನೀಡಿದ್ದು, ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಯಾರೋ ಇಬ್ಬರು ಬರುತ್ತಿರುವುದು

ನೂತನವಾಗಿ ನಿರ್ಮಾಣಗೊಂಡ ಉಳ್ಳಾಲ ತಾಲೂಕು ಕಚೇರಿ

ಉಳ್ಳಾಲ: ನೂತನವಾಗಿ ನಿರ್ಮಾಣಗೊಂಡ ಉಳ್ಳಾಲ ತಾಲೂಕು ಕಚೇರಿಯ ವಿವಿಧ ಇಲಾಖೆಗಳಿಗೆ ಸರಕಾರಿ ಕಟ್ಟಡಗಳನ್ನು ಒದಗಿಸುವ ಕುರಿತಾಗಿ ಅಧಿಕಾರಿಗಳ ಜತೆಗೆ ಚರ್ಚಿಸಲಾಗಿದೆ. ನವೆಂಬರ್ ಮೊದಲ ವಾರದಲ್ಲಿ ಶಾಸಕರ ಸಮ್ಮುಖದಲ್ಲಿ ಸಭೆ ನಡೆಸಿ ತಾಲೂಕಿನಾದ್ಯಂತ ಇರುವ ಸಮಸ್ಯೆಗಳ ಚರ್ಚೆ ಹಾಗೂ ಅದರ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಹೇಳಿದ್ದಾರೆ. ಅವರು ಕಂದಾಯ ಇಲಾಖೆಯ ಮಹತ್ವಾಕಾಂಕ್ಷಿಗಳ ಯೋಜನೆಯಲ್ಲಿ ಒಂದಾದ ಜಿಲ್ಲಾಧಿಕಾರಿಗಳ

ಸಮುದ್ರಕ್ಕೆ ಬಿದ್ದ ವ್ಯಕ್ತಿ : ರಕ್ಷಿಸಿದ ಸ್ವೀಡನ್ ಪ್ರಜೆ

ಉಳ್ಳಾಲ: ಸೋಮೇಶ್ವರ ಸಮುದ್ರ ತೀರದ ರುದ್ರಪಾದೆಯಿಂದ ಸಮುದ್ರಕ್ಕೆ ಬಿದ್ದ ವ್ಯಕ್ತಿಯನ್ನು ವಿದೇಶಿ ಪ್ರವಾಸಿಗ ರಕ್ಷಿಸಿ ಮಾನವೀಯತೆ ಮೆರೆದಿರುವ ಘಟನೆ ನಡೆದಿದೆ.ಸೋಮೇಶ್ವರ ರೈಲ್ವೇ ನಿಲ್ದಾಣದ ಬಳಿಯ ಬಾಡಿಗೆ ಮನೆ ನಿವಾಸಿ ಪ್ರವೀಣ್ ಚೆಟ್ಟಿಯಾರ್(41) ರಕ್ಷಿಸಲ್ಪಟ್ಟ ವ್ಯಕ್ತಿ.ಸ್ವೀಡನ್ ದೇಶದ ಪ್ರವಾಸಿಗ ಆಡಮ್ ರಕ್ಷಿಸಿದವರು. ಇಂದು ಮಧ್ಯಾಹ್ನದ ವೇಳೆ ಪ್ರವೀಣ್ ಅವರು ಸೋಮೇಶ್ವರ ಕಡಲ ತೀರದ ರುದ್ರ ಪಾದೆಯಲ್ಲಿ ವಿಹರಿಸುತ್ತಿದ್ದ ವೇಳೆ ಆಯಯತಪ್ಪಿ ಸಮುದ್ರಕ್ಕೆ

ಮಂಗಳೂರಿನಲ್ಲಿ ಮತ್ತೆ ಪಿಎಫ್‍ಐ ಮುಖಂಡರ ಮನೆಗಳಿಗೆ ಪೊಲೀಸ್ ದಾಳಿ

ಮಂಗಳೂರು: ಮಂಗಳೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆ ನಿಷೇಧಿತ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ (PಈI) ಹಾಗೂ ಎಸ್ ಡಿಪಿಐ ಮುಖಂಡರ ಮನೆಗಳ ಮೇಲೆ ಪೊಲೀಸರು ಮತ್ತೆ ದಾಳಿ ನಡೆಸಿದ್ದಾರೆ. ಇಂದು ಬೆಳಗ್ಗೆ ಪೊಲೀಸರು ಪಿಎಫ್ ಐ ಹಾಗೂ ಎಸ್ ಡಿಪಿಐ ಮುಖಂಡರ ಮೇಲೆ ಕಮಿಷನರ್ ಎನ್ ಶಶಿಕುಮಾರ್ ನೇತೃತ್ವದಲ್ಲಿ ಪೊಲೀಸರು ದಾಳಿ ಮಾಡಿದ್ದು, ಐವರು ಪಿಎಫ್ ಐ ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ.ಎನ್.ಶಶಿಕುಮಾರ್ ನೇತೃತ್ವದಲ್ಲಿ ಪಣಂಬೂರು, ಸುರತ್ಕಲ್ ಹಾಗೂ ಮಂಗಳೂರು ಗ್ರಾಮಾಂತರ

ಅ.25 ರ ದೀಪಾವಳಿಯಂದೇ ಸೂರ್ಯಗ್ರಹಣ

ಈ ವರ್ಷದ ಕೊನೆಯ ಭಾಗಶಃ ಸೂರ್ಯಗ್ರಹಣವು ಅಕ್ಟೋಬರ್ 25ರಂದು ಗೋಚರವಾಗಲಿದೆ. ದೀಪಾವಳಿಯಂದೇ ಈ ಸೂರ್ಯಗ್ರಹಣ ಉಂಟಾಗಲಿದ್ದು, ಯುರೋಪ್, ಪಶ್ಚಿಮ ಸೈಬೀರಿಯಾ, ಮಧ್ಯ ಏಷ್ಯಾ, ಪಶ್ಚಿಮ ಏಷ್ಯಾ ಮತ್ತು ಆಫ್ರಿಕಾದ ಈಶಾನ್ಯ ಭಾಗದಲ್ಲಿ ಗೋಚರಿಸುತ್ತದೆ. ಈ ಸೂರ್ಯಗ್ರಹಣವು ಭಾರತದ ಬಹುತೇಕ ಪ್ರದೇಶಗಳಲ್ಲಿ ಗೋಚರಿಸಲಿದೆ ಎಂದು ಹೇಳಲಾಗುತ್ತಿದೆ. ಅಕ್ಟೋಬರ್‌ 25ರ ಪಾರ್ಶ್ವ ಸೂರ್ಯ ಗ್ರಹಣವು ಸಂಜೆ ಗಂಟೆ 5.08ಕ್ಕೆ ಪ್ರಾರಂಭವಾಗಿ 6.29ಕ್ಕೆ ಅಂತ್ಯವಾಗಲಿದ್ದು, ಸೂರ್ಯ ಗ್ರಹಣವನ್ನು

ಅ.16ರಂದು ಅಡ್ಕಾರು ಗೋದಾಮು ಕಟ್ಟಡದ ಉದ್ಘಾಟನೆ

ಶತಮಾನ ಸಂವತ್ಸರಗಳನ್ನು ದಾಟಿ ಮುನ್ನಡೆಯುತ್ತಿರುವ ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಮಾರಂಭ ಹಾಗೂ ಅಡ್ಕಾರಿನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಗೋದಾಮು ಕಟ್ಟಡದ ಉದ್ಘಾಟನೆಯು ಅ.16ರಂದು ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ ಜರುಗಲಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ಡಾ. ಗೋಪಾಲಕೃಷ್ಣ ಭಟ್ ಅವರು ತಿಳಿಸಿದರು. ಅವರು ಸುಳ್ಯದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಕನಕಮಜಲು ಪ್ರಾ.ಕೃ. ಪ.ಸ.ಸಂಘವು