ಮಧ್ಯ ಪೋಲೆಂಡಿನ ರಾಡೊಮ್ನಲ್ಲಿ ಏರ್ ಶೋ ನಡೆಸಲು ಮುನ್ ತಾಲೀಮು ನಡೆಸುತ್ತಿದ್ದ ವೇಳೆ ಎಫ್- 16 ಫೈಟರ್ ಜೆಟ್ ವಿಮಾನವು ನೆಲಕ್ಕುರುಳಿದ ಪರಿಣಾಮವಾಗಿ ಪೈಲಟ್ ಸಾವು ಕಂಡರು. ಪೋಲೆಂಡ್ ಸೇನೆಯು ಪ್ರತಿ ವರುಷದಂತೆ ಏರ್ ಶೋ ನಡೆಸಲು ಪೋಲೆಂಡಿನ ರಾಡೊಮ್ ನಗರದಲ್ಲಿ ತಾಲೀಮು ನಡೆಸಿತ್ತು. ಏರ್ ಫೋರ್ಸಿನ ಎಫ್- 16 ಫೈಟರ್ ಜೆಟ್ ವಿಮಾನವು ಹಾರಾಟದ ನಡುವೆ ಕೆಳಕ್ಕುರುಳಿ ಸೇನಾ
ಭಾರತದ ನೀರಜ್ ಚೋಪ್ರಾ ಅವರು ಸ್ವಿಜರ್ಲ್ಯಾಂಡಿನ ಜ್ಯೂರಿಚ್ನಲ್ಲಿ ನಡೆದ ಡೈಮಂಡ್ ಲೀಗ್ ಜಾವೆಲಿನ್ ಎಸೆತದಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟರು.ಇದು ಡೈಮಂಡ್ ಲೀಗ್ ಪಂದ್ಯಾವಳಿಯಲ್ಲಿ ನೀರಜ್ ಚೋಪ್ರಾರಿಗೆ ದಕ್ಕಿರುವ ನಾಲ್ಕನೆಯ ಪದಕವಾಗಿದೆ. ಕೊನೆಯ ಮೂರರಲ್ಲಿ ಬೆಳ್ಳಿ ಹಿಡಿದ ಅವರು ರಜತ ಹ್ಯಾಟ್ರಿಕ್ ಗಳಿಸಿದರು. 2022 ರ ಡೈಮಂಡ್ ಲೀಗ್ನಲ್ಲಿ ಮಾತ್ರ ಅವರು ಚಿನ್ನ ಗೆದ್ದಿದ್ದರು. 2023, 2024 ಹಾಗೂ ಈ ವರುಷದ ಡೈಮಂಡ್ ಲೀಗ್ನಲ್ಲಿ ಅವರು ಈಟಿ ಎಸೆತz ಮೂಲಕ
ಸನಾತನ ಧರ್ಮ ಆಚರಣೆಯ ಪೂಜೆ ಉತ್ಸವಗಳು ಪರೋಕ್ಷವಾಗಿ ನೂರಾರು ಕೈಗಳಿಗೆ ಉದ್ಯೋಗ ಆರ್ಥಿಕ ಸ್ವಾವಲಂಭನೆಯಾಗಿದೆ. ಬ್ರಹ್ಮಾವರ ಬಳಿಯ ಸಾಲಿಕೇರಿಯ ಯುವಕರ ಒಂದು ತಂಡ ಫ್ರೇಂಡ್ಸ್ ಕ್ಲಬ್ ಹೆಸರಿನಲ್ಲಿ ಗಣೇಶ ಚೌತಿಯ ಸಂದರ್ಬದಲ್ಲಿ ನಾನಾ ವೇಷ ಧರಿಸಿ ಬಂದ ಹಣದಿಂದ ಮಹತ್ತರ ಕಾರ್ಯಕ್ಕೆ ಮುಂದಾಗಿದೆ. 1.5 ತಿಂಗಳ ಮುದ್ದು ಶಿಶುವಿಗೆ ತುರ್ತು ಹೃದಯಚಿಕಿತ್ಸೆಗೆ ಹಣ ಸಂಗ್ರಹ ಮಾಡಿ ತೀರಾ ಬಡಕುಟುಂಬದ ಮಗುವಿನ ಪೋಷಕರೀಗೆ ನೀಡುವ ಘನ ಉದ್ದೇಶದಿಂದ ಗುರುವಾರ ಬೆಳಿಗ್ಗೆ ಯುವಕರ ತಂಡ
ಉತ್ತರ ಪ್ರದೇಶವು ಅತಿ ಹೆಚ್ಚು 75 ಜಿಲ್ಲೆಗಳನ್ನು ಹೊಂದಿದೆ. ಜನಸಂಖ್ಯೆ ಪ್ರಮಾಣದಲ್ಲಿ ಕಡಿಮೆ ಜಿಲ್ಲೆಗಳು ಇರುವ ರಾಜ್ಯ ಮಹಾರಾಷ್ಟ.ಹೆಚ್ಚು ಜಿಲ್ಲೆಗಳಿರುವ ಹತ್ತು ರಾಜ್ಯಗಳು ಹೀಗಿವೆ.ಉತ್ತರ ಪ್ರದೇಶ 75, ಮಧ್ಯ ಪ್ರದೇಶ 55, ರಾಜಸ್ತಾನ 41, ಬಿಹಾರ 38, ತಮಿಳುನಾಡು38, ಮಹಾರಾಷ್ಟ 36, ಅಸ್ಸಾಂ 35. ಛತ್ತೀಸಗಡ, ತೆಲಂಗಾಣ, ಗುಜರಾತ್ ರಾಜ್ಯಗಳು ತಲಾ ೩೩ ಜಿಲ್ಲೆಗಳನ್ನು ಹೊಂದಿವೆ.
ಉಜ್ಬೆಕಿಸ್ತಾನದ ಓಬಿ ರಕ್ಮತ್ ಉತ್ಖನನದಲ್ಲಿ ದೊರೆತ ಕಲ್ಲುಗಳು ಪುರಾತತ್ವಜ್ಞರ ಬಾಣದ ಕಲ್ಪನೆಯನ್ನು ಗರಿಗೆದರುವಂತೆ ಮಾಡಿವೆ.ಫ್ರಾನ್ಸಿನ ಬೋರ್ಡೆಕ್ ವಿಶ್ವವಿದ್ಯಾನಿಲಯದ ತಂಡವು ಉಜ್ಬೆಕಿಸ್ತಾನದ ಈ ಕಲ್ಲುಗಳ ಬಗೆಗೆ ಹ್ಯೂಗ್ಸ್ ಪ್ಲಿಸನ್ ನೇತೃತ್ವದಲ್ಲಿ ಅಧ್ಯಯನ ಮಾಡಿ ಫಲಿತ ಪ್ರಕಟಿಸಿದೆ.ಓಬಿ ರಕ್ಮತ್ ಉತ್ಖನನದಲ್ಲಿ ಕಲ್ಲನ್ನು ತೆಳ್ಳಗೆ ಕತ್ತಿಯಂತೆ ಬಳಸಲು ಮಾಡಿದ್ದು ಹಾಗೂ ಇತರ ಕಲ್ಲಿನ ಆಯುಧಗಳು ಸಿಕ್ಕಿವೆ. ಅವುಗಳಲ್ಲಿ ಬಹು ಸಂಖ್ಯೆಯಲ್ಲಿ ಸಿಕ್ಕ ಮುಕ್ಕೋಣ
ಲಿಟ್ಲ್ ಫ್ಲವರ್ ಶಾಲೆ ದರ್ಬೆ ಪುತ್ತೂರು ಇಲ್ಲಿನ ಶಾಲಾ ಶೈಕ್ಷಣಿಕ ಸಂಘಗಳ ಉದ್ಘಾಟನೆ ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ಅಧ್ಯಕ್ಷತೆಯಲ್ಲಿ ನೆರವೇರಿತು. ರಕ್ಷಕ ಶಿಕ್ಷಕ ಸಂಘದ ಸದಸ್ಯರಾದ ಗ್ರಾಫಿಕ್ ಡಿಸೈನರ್ ಶ್ರೀ ಮಂಜುನಾಥ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಜೀವನ ಅನ್ನೋದು ಸದಾ ಗೆಲುವು ಅಲ್ಲ ಸತತ ಹೋರಾಟ. ಏನೇ ಕೆಲಸ ಮಾಡಿ ಅದರಲ್ಲಿ ಶ್ರದ್ದೆ ಇರಲಿ.ಸಾಮಾಜಿಕ ಜಾಲತಾಣ ವನ್ನು ಒಳಿತಿಗೆ ಬಳಸಿದ್ರೆ ಅದ್ಬುತ ಯಶಸ್ಸು ನಿಮ್ಮದಾಗತ್ತೆ ಎಂದರು.
ಇಲ್ಲಿನ ಸಾವ೯ಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ ವತಿಯಿಂದ ಆ.27ರಿಂದ 31ರವರೆಗೆ ಸಮಾಜ ಮಂದಿರದಲ್ಲಿ ನಡೆಯಲಿರುವ 62ನೇ ವರ್ಷದ ಗಣೇಶೋತ್ಸವಕ್ಕೆ ಪೂರಕವಾಗಿ ಮಂಗಳವಾರ ಹೊರೆಕಾಣಿಕೆ ಮೆರವಣಿಗೆ ನಡೆಯಿತು.ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅವರು ಎಂಸಿಎಸ್ ಸೊಸೈಟಿ ಎದುರು ಹೊರೆ ಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.ಟ್ರಸ್ಟ್ ನ ಅಧ್ಯಕ್ಷ ನಾರಾಯಣ ಪಿ.ಎಂ., ಪುರಸಭಾ ಸದಸ್ಯರಾದ ರಾಜೇಶ್ ನಾಯ್ಕ್, ಸುರೇಶ್ ಪ್ರಭು, ಟ್ರಸ್ಟ್ ನ ಪ್ರಧಾನ ಕಾಯ೯ದಶಿ೯ ಸುದಶ೯ನ್
ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್ಗೆ 42 ಪದಕ . ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ(ರಿ.) ವತಿಯಿಂದ ನಡೆದ ಕರ್ನಾಟಕ ರಾಜ್ಯ ಅಂತರ್ ಜಿಲ್ಲಾ ಕಿರಿಯರ ಹಾಗೂ 23 ವಯೋಮಿತಿಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಸ್ಪೋಟ್ಸ್ ಕ್ಲಬ್ನ ಕ್ರೀಡಾಪಟುಗಳಿಗೆ 19 ಚಿನ್ನ, 15 ಬೆಳ್ಳಿ, 8 ಕಂಚು ಒಟ್ಟು 42 ಪದಕಗಳು, 3 ನೂತನ ಕೂಟ ದಾಖಲೆ ಹಾಗೂ 1 ವಿಭಾಗ ಕ್ರೀಡಾಕೂಟದ ವೈಯಕ್ತಿಕ ಪ್ರಶಸ್ತಿಯೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು.
ಮಣಿಪಾಲ ಟೈಗರ್ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಉಡುಪಿ ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳು ತೆಗೆಯುವುದು ಮತ್ತು ಸಾಗಾಣಿಕೆಗೆ ನಿರ್ಬಂಧ ಹೇರಿರುವ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಘಟಕದ ಅ ರಾ ಪ್ರಭಾಕರ ಪೂಜಾರಿ ಮುಂದಾಳತ್ವದಲ್ಲಿ ಇಂದು ಜಾಥಾ ಕಾರ್ಯಕ್ರಮ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಘಟಕದ ಜಿಲ್ಲಾಧ್ಯಕ್ಷರಾದ ಅ ರಾ ಪ್ರಭಾಕರ ಪೂಜಾರಿ ಜಾಥಾ ಕಾರ್ಯಕ್ರಮದಲ್ಲಿ




























