ಕ್ರಿಸ್ಮಸ್ ಶಾಂತಿಯ ಸಂದೇಶದ ದ್ಯೋತಕ : ಡೆನ್ನಿಸ್ ಡಿಸಿಲ್ವಾ
ಮಂಗಳೂರು : ಕ್ರಿಸ್ಮಸ್ ಹಬ್ಬವು ಏಸುಕ್ರಿಸ್ತರ ಶಾಂತಿ ಮತ್ತು ಪ್ರೀತಿಯ ಸಂದೇಶವನ್ನು ಜಗದೆಲ್ಲಡೆ ಪಸರಿಸುವ ಆಶಯವನ್ನು ಹೊಂದಿದೆ ಎಂದು ದ.ಕ. ಜಿಲ್ಲಾ ನಗರ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಡೆನ್ನಿಸ್ ಡಿಸಿಲ್ವಾ ಅವರು ಹೇಳಿದರು.

ಮಂಗಳೂರಿನ ಕುಲಶೇಖರದ ಐಕ್ಯಂ ವಿಶೇಷ ಮಕ್ಕಳ ತರಬೇತಿ ಕೇಂದ್ರದಲ್ಲಿ ತುಳು ಪರಿಷತ್ ವತಿಯಿಂದ ಆಯೋಜಿಸಲಾದ ಕ್ರಿಸ್ಮಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಮರ್ಸಿ ಬ್ಯೂಟಿ ಅಕಾಡೆಮಿಯ ನಿರ್ದೇಶಕಿ ಮರ್ಸಿ ವೀಣಾ ಡಿಸೋಜ ಮಾತನಾಡಿ, ಕ್ರಿಸ್ಮಸ್ ಸಂದೇಶ ಎಲ್ಲರ ಬದುಕಿಗೂ ಸ್ಪೂರ್ತಿಯಾಗಲಿದೆ ಎಂದರು.

ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ಚಂದ್ರಕಲಾ ರಾವ್ ಅವರು ಮಾತನಾಡಿ, ವಿಶೇಷ ಮಕ್ಕಳ ಪೋಷಕರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ನಡೆಯಬೇಕಾಗಿದೆ ಎಂದರು.
ಐಕ್ಯಂ ಸಂಸ್ಥೆಯ ಉಪಾಧ್ಯಕ್ಷ ರಾಮಚಂದ್ರ ಕುಂದರ್ ಅವರು ಮಾತನಾಡಿ, ಸಂಸ್ಥೆ ವಿಶೇಷ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿಯಿಂದ ಕಾರ್ಯನಿರ್ವಹಿಸುತ್ತಿದೆ, ಸಂಸ್ಥೆಗೆ ಸಾರ್ವಜನಿಕರಿಂದ ಇನ್ನೂ ಹೆಚ್ಚಿನ ಪೆÇ್ರೀತ್ಸಾಹ ಲಭಿಸಲಿ ಎಂದು ಆಶಯ ವ್ಯಕ್ತಪಡಿಸಿದರು.

ತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವಾ, ತುಳು ಪರಿಷತ್ ಪ್ರಧಾನ ಕಾರ್ಯದರ್ಶಿ ಬೆನೆಟ್ ಅಮ್ಮಣ್ಣ ಶುಭ ಕೋರಿ ಮಾತನಾಡಿದರು.

ಐಕ್ಯಂ ಸಂಸ್ಥೆಯ ಗೌರವ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಪ್ರಾಸ್ತಾವಿಕ ಮಾತುಗಳಾನ್ನಾಡಿದರು. ಐಕ್ಯಂ ಸಂಸ್ಥೆಯ ಅಧ್ಯಕ್ಷೆ ಕಮಲಾಕ್ಷಿ ಕುಂದರ್ ಸ್ವಾಗತಿಸಿ, ವಂದಿಸಿದರು.


















