ಕಾಂಗ್ರೆಸ್ ಯಾವತ್ತೂ ದ್ವೇಷ ರಾಜಕೀಯ ಮಾಡಿಲ್ಲ : ಮಾಜಿ ಸಚಿವ ರಮಾನಾಥ್ ರೈ

ಜಿಲ್ಲೆಯಲ್ಲಿ ಒಂದು ವರ್ಗದ ಹತ್ಯೆ ಆಗಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ತಿಂಗಳು ಆಗಿದೆ ಅಷ್ಟೇ. ಈ ಹತ್ಯೆಯಲ್ಲಿ ಭಾಗಿಯಾಗಿದವರು ಒಬ್ಬರು ಕೂಡಾ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಅವರು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ. ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದರೆ ಹತ್ಯೆಗಳು ಹೆಚ್ಚು ನಡೆಯುತ್ತಿವೆ ಎನ್ನುವ ಆರೋಪ ಮಾಡಲು ಆರಂಭಿಸಿದ್ದಾರೆ. ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯರೇ ಹತ್ಯೆ ಮಾಡಿದ್ದಾರೆ ಎಂದು ಜನಭ್ರಮಿಸುವ ರೀತಿಯಲ್ಲಿ ಆರೋಪಿಸುತ್ತಿದ್ದಾರೆ ಎಂದು ಹೇಳಿದರು.

ಈ ಹಿಂದೆ ಜಿಲ್ಲೆಯಲ್ಲಿ ನಡೆದಿರುವ ಧರ್ಮ, ಮತೀಯ ದ್ವೇಷದ ಹತ್ಯೆ ಯ ಪ್ರಕರಣದಲ್ಲಿ ಯಾವುದೇ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿಲ್ಲ ಎನ್ನುವುದು ತನಿಖೆ ಬಹಿರಂಗ ಪಡಿಸಿದೆ. ಬದಲಾಗಿ ಬಿಜೆಪಿ ಪಕ್ಷದ ಬೆಂಬಲಿತ ಮತೀಯ ಸಂಘಟನೆ ಗಳ ಸದಸ್ಯರು ಗುರುತಿಸಿಕೊಂಡಿರುವುದು ಬಹಿರಂಗ ವಾಗಿದೆ. ಹೀಗಿರುವಾಗ ಬಿಜೆಪಿ ರಾಜಾಧ್ಯಕ್ಷರು ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಪಕ್ಷ ಮತ್ತು ಮುಖಂಡರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ದ್ವೇಷ ಆರೋಪ ಹೊಂದಿರುವ ಎಲ್ಲಾ ಕೊಲೆ ಪ್ರಕರಣಗಳನ್ನು ಎಸ್‍ಐಟಿ ಮೂಲಕ ತನಿಖೆ ನಡೆಸಲು ಬಿ.ರಮಾನಾಥ ರೈ ಆಗ್ರಹಿಸಿದ್ದಾರೆ.

ಮಾಜಿ ಮೇಯರ್ ಶಶಿಧರ್ ಹೆಗ್ಡೆಕಾಂಗ್ರೆಸ್ ಪದಾಧಿಕಾರಿಗಳಾದ ಶಾಹುಲ್ ಹಮೀದ್, ಸುರೇಂದ್ರ ಕಂಬ್ಳಿ, ಬಿ ಎಲ್ ಪಿ ಪದ್ಮನಾಭ ಕೋಟ್ಯಾನ್, ಜಯಶೀಲಾ ಅಡ್ಯಂತಾಯ, ಕುಮಾರಿ ಅಪ್ಪಿ, ಗಣೇಶ್ ಪೂಜಾರಿ, ಶಬೀರ್ ಸಿದ್ಧ ಕಟ್ಟೆ, ಶುಭೋದಯ ಆಳ್ವಾ ಉಪಸ್ಥಿತರಿದ್ದರು.

Related Posts

Leave a Reply

Your email address will not be published.