ದಿಲ್ಲಿ: ಮೈತ್ರಿ, ಸೀಟು ಹಂಚಿಕೆ ಬಗೆಗೆ ಸ್ಪಷ್ಟನೆ

ದಿಲ್ಲಿಯ ದಿಲ್ಲಿ ಪಶ್ಚಿಮ, ದಿಲ್ಲಿ ದಕ್ಷಿಣ, ದಿಲ್ಲಿ ಪೂರ್ವ ಮತ್ತು ನವದೆಹಲಿ ಈ ನಾಲ್ಕು ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಲಿದೆ. ಈಶಾನ್ಯ ದಿಲ್ಲಿ, ವಾಯುವ್ಯ ದಿಲ್ಲಿ ಮತ್ತು ಚಾಂದಿನಿ ಚೌಕ್ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಲಾಯಿತು.
ಎಎಪಿಯವರೂ ಇದ್ದ ಮಾಧ್ಯಮ ಮಾತುಕತೆಯಲ್ಲಿ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಮಾಹಿತಿ ನೀಡಿದರು.
ಗುಜರಾತಿನ 26ರಲ್ಲಿ 24ಕಡೆ ಕಾಂಗ್ರೆಸ್ ಸ್ಪರ್ಧಿಸಿದರೆ 2 ಎಎಪಿಗೆ ನೀಡಲಾಗಿದೆ. ಕಾಂಗ್ರೆಸ್ಸಿನ ಹಿರಿಯ ನಾಯಕ ದಿವಂಗತ ಅಹ್ಮದ್ ಪಟೇಲ್ ಸ್ಪರ್ಧಿಸುತ್ತಿದ್ದ ಭರೂಚ್ ಕ್ಷೇತ್ರವನ್ನು ಎಎಪಿಗೆ ಬಿಟ್ಟಿರುವುದು ಅಚ್ಚರಿ ಉಂಟು ಮಾಡಿದೆ.
ಹರಿಯಾಣದ ಹತ್ತು ಕ್ಷೇತ್ರಗಳಲ್ಲಿ 9ರಲ್ಲಿ ಕಾಂಗ್ರೆಸ್ ಮತ್ತೊಂದು ಎಎಪಿಗೆ ಗೊತ್ತಾಗಿದೆ. ಗೋವಾದ 2 ಮತ್ತು ಚಂಡೀಗಡದ 1 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವೇ ಸ್ಪರ್ಧಿಸುವುದಕ್ಕೆ ಎಎಪಿ ಒಪ್ಪಿದೆ ಎಂದು ಉಭಯ ಪಕ್ಷದ ನಾಯಕರೂ ತಿಳಿಸಿದರು.
