ಕುಂದಾಪುರ: ಕೊಲ್ಲೂರಿನಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸುವಂತೆ ಕರವೇಯಿಂದ ಅಭಿಯಾನ

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ. ಎ ನಾರಾಯಣ ಗೌಡರ ಆದೇಶದಂತೆ ಕರವೇ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿಯವರ ನೇತೃತ್ವದಲ್ಲಿ ಉಡುಪಿ ತಾಲೂಕು ಅಧ್ಯಕ್ಷ ಅ,ರಾ ಪ್ರಭಾಕರ್ ಪೂಜಾರಿ ಮುಂದಾಳತ್ವದಲ್ಲಿ ಜಿಲ್ಲಾ ಹಾಗೂ ತಾಲೂಕು ಘಟಕದ ವತಿಯಿಂದ ಕೊಲ್ಲೂರಿಗೆ ಭೇಟಿ ನೀಡಿ ಅಂಗಡಿ ಮುಂಗಟ್ಟುಗಳ ನಾಮ ಫಲಕದಲ್ಲಿ 70% ಕನ್ನಡ ಹಾಗೂ ಉಳಿದ ಭಾಷೆಗಳಿಗೆ ಶೇಕಡಾ 30/ ಕಡ್ಡಾಯಗೊಳಿಸುವಂತೆ ಅಭಿಯಾನ ಹಮ್ಮಿಕೊಳ್ಳಲಾಯಿತು.

ಅಭಿಯಾನ ಉದ್ದೇಶಿಸಿ ಮಾತನಾಡಿದ ಅ.ರಾ ಪ್ರಭಾಕರ್ ಪೂಜಾರಿಯವರು, ಕರ್ನಾಟಕದಲ್ಲಿ ಕನ್ನಡ ಮಯವಾಗ ಬೇಕು ಕರ್ನಾಟಕ ಸರ್ಕಾರ 70% ಕನ್ನಡ ಉಳಿದ 30% ಅನ್ಯ ಭಾಷೆಯ ನಾಮಫಲಕಕ್ಕೆ ಅವಕಾಶ ನೀಡಿ ಆದೇಶವನ್ನು ಮಾಡಿದೆ ಹಾಗೆಯೇ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡರ ಆದೇಶದಂತೆ 31 ಜಿಲ್ಲೆಗಳಲ್ಲೂ ಕನ್ನಡ ನಾಮಫಲಕಗಳ ಬಗ್ಗೆ ಅಭಿಯಾನ ಮಾಡಲಾಗಿದೆ ಅದರಂತೆ ಕೊಲ್ಲೂರಿನಲ್ಲಿ ಬಹುತೇಕ ನಾಮಫಲಕಗಳು ಮಲಯಾಳಂ ಭಾಷೆಯಲ್ಲಿದೆ ಅನ್ಯ ಭಾಷೆಯ ನಾಮಫಲಕವನ್ನು ತೆಗೆದು ಕನ್ನಡ ನಾಮಫಲಕ ಅಳವಡಿಸುವಂತೆ ಅಭಿಯಾನದ ಮೂಲಕ ವಿನಂತಿಸಿ ಕೊಳ್ಳುತ್ತಿದ್ದೇವೆ ಎಂದರು.

ಕೊಲ್ಲೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ನಾಗರಾಜ್ ಪೂಜಾರಿ, ಮಾಜಿ ಅಧ್ಯಕ್ಷರಾದ ಸಂತೋಷ್ ಭಟ್, ಕೊಲ್ಲೂರು ಪೆÇಲೀಸ್ ಠಾಣಾ ಠಾಣಾಧಿಕಾರಿ ಜಯಶ್ರೀರವರಿಗೆ ಕನ್ನಡ ಕಡ್ಡಾಯದ ಮಾಹಿತಿ ನೀಡಲಾಯಿತು. ಕರವೇ ಕಾರ್ಯಕರ್ತರ ವತಿಯಿಂದ ಕೊಲ್ಲೂರು ಬಸ್ ಸ್ಟಾಂಡ್ ನಿಂದ ಕೊಲ್ಲೂರು ಮುಕಾಂಬಿಕಾ ಸನ್ನಿಧಾನದವರೆಗೆ ಜಾಥಾ ನಡೆಸಿದರು. ಬಳಿಕ ಆಡಳಿತ ಕಛೇರಿಗೆ ಭೇಟಿ ನೀಡಿ ಕಾರ್ಯ ನಿರ್ವಹಣಾಧಿಕಾರಿ ಪರವಾಗಿ ಶಿಷ್ಟಾಚಾರ ವಿಭಾಗದ ಜಯ ಕುಮಾರ್ ಮತ್ತು ಸಂತೋಷ್ ಶೆಟ್ಟಿಯವರಿಗೆ ಜಿಲ್ಲಾಧಿಕಾರಿಗಳ ಆದೇಶದ ಪ್ರತಿ ನೀಡಿ ಕನ್ನಡ ನಾಮಫಲಕ ಕಡ್ಡಾಯಗೊಳಿಸುವಂತೆ ಮನವಿ ನೀಡಲಾಯಿತು.

ಈ ಸಂದರ್ಭದಲ್ಲಿ ರಮೇಶ್ ಕುಂದರ್ ಕೊಲ್ಲೂರು, ಕರವೇ ಗೌರವಾಧ್ಯಕ್ಷರಾದ ಸುಂದರ್ ಎ. ಬಂಗೇರ ಮಹಿಳಾ ಜಿಲ್ಲಾಧ್ಯಕ್ಷರಾದ ಗೀತಾ ಪಾಂಗಳ, ಜಿಲ್ಲಾ ಉಪಾಧ್ಯಕ್ಷರಾದ ಕುಶಲ್ ಅಮೀನ್ ಬೆಂಗ್ರೆ, ದೇವಕಿ ಬಾರ್ಕೂರು, ಶಾಲಿನಿ, ಜಿಲ್ಲಾ ಕಾರ್ಯದರ್ಶಿಯಾದ ಅನುಷಾ ಆಚಾರ್ ಪಳ್ಳಿ, ಸರಿತಾ, ಮೋಹಿನಿ, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷರಾದ ಜಯ ಪೂಜಾರಿ, ಉಪಾಧ್ಯಕ್ಷರಾದ ಸಿದ್ದಣ್ಣ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಲಾಲ್, ಕಾರ್ಯದರ್ಶಿ ಗಣೇಶ್, ಸಾಂಸ್ಕೃತಿಕ ಕಾರ್ಯದರ್ಶಿ ಪ್ರಮೋದ್ ಕುಲಾಲ್ ಸಂಘಟನಾ ಕಾರ್ಯದರ್ಶಿ ಜ್ಯೋತಿ ಸಹ ಸಾಂಸ್ಕೃತಿಕ ಕಾರ್ಯದರ್ಶಿ ಜ್ಯೋತಿ ಆರ್, ಸಾಂಸ್ಕೃತಿಕ ಕಾರ್ಯದರ್ಶಿ ಚಂದ್ರಕಲಾ, ಕಾಪು ತಾಲೂಕು ಅಧ್ಯಕ್ಷರಾದ ಆನಂದ ಶೆಟ್ಟಿ, ಉಡುಪಿ ತಾಲೂಕು ಅಧ್ಯಕ್ಷರಾದ ಪ್ರಭಾಕರ್ ರಾಜ್ ಪೂಜಾರಿಯವರು ತಾಲೂಕು ಮಹಿಳಾ ಅಧ್ಯಕ್ಷರಾದ ಮಮತಾ, ಉಡುಪಿ ತಾಲೂಕು ಮಹಿಳಾ ಪ್ರಧಾನ ಕಾರ್ಯದರ್ಶಿ ಅಶ್ವಿನಿ, ಜಿಲ್ಲೆ ಹಾಗೂ ತಾಲೂಕು ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.