ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ – ಮೂಡುಬಿದರೆಯಲ್ಲಿ ಜಾಗೃತಿ ಜಾಥಾ
ಮೂಡುಬಿದಿರೆ: ಜಿಲ್ಲಾ ಪಂಚಾಯತ್ ದ.ಕ.ಜಿಲ್ಲೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಶ್ರಿತ ರೋಗವಾಹಕ ನಿಯಂತ್ರಣಾಧಿಕಾರಿಗಳ ಕಛೇರಿ ಮಂಗಳೂರು, ಸಮುದಾಯ ಆರೋಗ್ಯ ಕೇಂದ್ರ ಮೂಡುಬಿದಿರೆ, ಪುರಸಭೆ, ನೇತಾಜಿ ಬ್ರಿಗೇಡ್ ಹಾಗೂ ಜವನೆರ್ ಬೆದ್ರ ಇವುಗಳ ಸಹಯೋಗದಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನವನ್ನು ಸಮಾಜ ಮಂದಿರದಲ್ಲಿ ಆಚರಿಸಲಾಯಿತು.
ಉದ್ಯಮಿ ಸತ್ಯಪ್ರಕಾಶ್ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಜಿಲ್ಲಾ ಆಶಿತಾ ರೋಗವಾಹಕ ನಿಯಂತ್ರಣಾಧಿಕಾರಿಗಳ ಕಛೇರಿಯ ಮಂಜುಳಾ ಅವರು ಡೆಂಗ್ಯೂ, ಮಲೇರಿಯಾ ಬಗ್ಗೆ ಮಾಹಿತಿ ನೀಡಿ ಮಾತನಾಡಿ ಮಳೆಗಾಲದಲ್ಲಿ ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳಿಂದ ಡೆಂಗ್ಯೂ ಅಥವಾ ಮಲೇರಿಯಾ ಹಾಗೂ ಚಿಕೂನ್ ಗೂನ್ಯದಂತಹ ರೋಗಗಳು ಕಂಡು ಬರುತ್ತವೆ. ಆದ್ದರಿಂದ ಸಿಯಾಳ, ಟಯರ್ ತೆರೆದ ನೀರಿ ಟ್ಯಾಂಕ್ ಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಜಾಗೃತರಾಗಬೇಕು ಹಾಗೂ ಈ ಬಗ್ಗೆ ಜನರಿಗೆ ಮಾಹಿತಿಗಳನ್ನು ನೀಡುವಂತ್ತಾಗಬೇಕು ಎಂದು ಹೇಳಿದರು. ರೋಗಗಳ ಬಗ್ಗೆ ಬಿತ್ತಿಪತ್ರದ ಮೂಲಕ ಜಾಗೃತಿ ಮೂಡಿಸಲಾಯಿತು.
ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ನಾಗೇಶ್, ಜಿಲ್ಲಾ ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪ್ರದೀಪ್ ಕುಮಾರ್, ಹಿರಿಯ ಆರೋಗ್ಯ ಸುರಕ್ಷಾಧಿಕಾರಿ ಶಾಂತಮ್ಮ ಅತಿಥಿಗಳಾಗಿ ಉಪಸ್ಥಿತರಿದ್ದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲಾ ಸ್ವಾಗತಿಸಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮೊದಲು ಸಮುದಾಯ ಆರೋಗ್ಯದಿಂದ ನಡೆದ ಜಾಗೃತಿ ಅಭಿಯಾನವನ್ನು ಆರೋಗ್ಯಾಧಿಕಾರಿ ಡಾ. ಚಿತ್ರಾ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿದರು. ಬಹುಮಾನ : ಡೆಂಗ್ಯೂ ಕುರಿತಾದ ಮುಂಜಾಗೃತ ಕ್ರಮವಾಗಿ ಏರ್ಪಡಿಸಿದ್ದ ಚಿತ್ರಕಲೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಾದ ಪ್ರತಿಜ್ಞಾ, ಕೀರ್ತಿ, ಅನ್ನಾ ಥಾಮಸ್, ಅಜ್ಮೋಳ್, ಪ್ರಸನ್ನ ಕುಮಾರ್ ಬರ್ಕಿ, ಸ್ಟೆಫಿ, ಅಮೋಘ ಆರ್, ರಿಚಾ ಅನ್ನಾ ಸಾಬು ಅವರಿಗೆ ಬಹುಮಾನಗಳನ್ನು ವಿತರಿಸಲಾಯಿತು.