ಬಡವರ ಸಂಕಷ್ಟಗಳ ಮುಂದೆ ಗಿಮಿಕ್ ಮಾಡಿದ ಬಿಜೆಪಿಗೆ ಹೊಡೆತ : ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ
ಮಂಜೇಶ್ವರ : ಕರ್ನಾಟಕದ ವಿಧಾನಸಭಾ ಚುನಾವಣೆ ಫಲಿತಾಂಶ ಬಡವರ ಸಂಕಷ್ಟಗಳ ಮುಂದೆ ಗಿಮಿಕ್ ಮಾಡಿದ ಬಿಜೆಪಿಗೆ ಮರೆಯಲಾಗದ ಹೊಡೆತ ನೀಡಿದೆ ಎಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀ ಮುಹಮ್ಮದ್ ಡಿಎಂಕೆ ಹೇಳಿದ್ದಾರೆ. ಜನರ ದೈನಂದಿನ ಸಮಸ್ಯೆಗಳಿಗೆ ಕಿವಿಗೊಡದೆ, ಚುನಾವಣಾ ಸಮಯದಲ್ಲಿ ಕರ್ನಾಟಕದ ಮಣ್ಣಿಗೆ ವಕ್ಕರಿಸಿ ವಿವಿಧ ಗಿಮಿಕ್ ಮಾಡಿ, ಜನರ ಭಾವನೆಗಳೊಂದಿಗೆ ಆಟವಾಡುವ ಮೋದಿ,ಅಮಿತ್ ಶಾ, ಯೋಗಿ ಎಂಬ ದ್ವೇಷದ ಮಾರಾಟಗಾರರಿಗೆ ಜನರು ಸರಿಯಾದ ಉತ್ತರ ನೀಡಿದ್ದಾರೆ.
ಕರ್ನಾಟಕದ ಗೆಲುವು ಒಗ್ಗಟ್ಟಿನ ಹೋರಾಟದ ಫಲ, ಚುನಾವಣೆಯಲ್ಲಿ ವಿಜೇತರಾದ ಅಭ್ಯರ್ಥಿಗಳು, ಪರಾಜಿತರಾದವರು ಹಾಗೂ ಬೆವರಿಳಿಸಿ ಹೋರಾಡಿದ ಕಾರ್ಯಕರ್ತರು ಅಭಿನಂದನಾರ್ಹರು ಎಂದು ಅವರು ಹೇಳಿದರು. ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಗಳಿಸಿದ ಅಭೂತಪೂರ್ವ ಗೆಲುವಿನಲ್ಲಿ ವರ್ಕಾಡಿ ಪಂಚಾಯತ್ ಯುಡಿಎಫ್ ಸಮಿತಿ ಆಯೋಜಿಸಿದ್ದ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಯತ್ ಯುಡಿಎಫ್ ಚೆಯರ್ ಮ್ಯಾನ್ ಶ್ರೀ ಮುಹಮ್ಮದ್ ಮಜಾಲ್ ವಹಿಸಿದ್ದರು. ನೇತಾರರಾದ ದಿವಾಕರ್ ಎಸ್.ಜೆ,ಇಕ್ಬಾಲ್ ಕಳಿಯೂರು,ಶೀನ ಕೆದುಂಬಾಡಿ, ಬಿ.ಕೆ.ಮುಹಮ್ಮದ್, ಹಮೀದ್ ಕಣಿಯೂರು,ಎ.ಕೆ. ಉಮರಬ್ಬ,ರಜತ್ ವೇಗಸ್,ಸಿದ್ದಿಕ್ ಕೋಟೆಮಾರ್,ಮೂಸಾ ಧರ್ಮನಗರ, ಯಾಕೂಬ್ ಕೋಡಿ,ಅಬೂಬಕ್ಕರ್ ಬೋರ್ಕಳ,ಸಲೀಂ,ಅನ್ಸಾರ್ ಮುಂತಾದವರು ಉಪಸ್ಥಿತರಿದ್ದರು.