ಬೈಂದೂರು : ಗಜ್ಞಾರ ಎನ್ ಕ್ಲೇವ್ ನೂತನ ಕಟ್ಟಡ ಉದ್ಘಾಟನೆ
ಬೈಂದೂರು: ಪ್ರಮೋದ್ ಶಿಪ್ಲಾ ಪೂಜಾರಿ ಅವರು ಗಜ್ಞಾರ ಮನೆತನದ ಹೆಸರಿನಲ್ಲಿ ಗಜ್ಞಾರ ಎನ್ ಕ್ಲೇವ್ ಎಂಬ ನೂತನ ಖಾಸಗಿ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವು ಬೈಂದೂರಿನಲ್ಲಿ ನಡೆಯಿತು.
ಕಟ್ಟಡದ ಉದ್ಘಾಟನೆ ಬೈಂದೂರು ಕ್ಷೇತ್ರದ ಶಾಸಕ ಬಿ ಎಂ ಸುಕುಮಾರ್ ಶೆಟ್ಟಿ ನೆರವೇರಿಸಿದರು. ಬಳಿಕ ಮಾತನಾಡಿ ಕಂಬದಕೋಣೆ ಹಾಗೂ ಕೆರ್ಗಾಲು ಗ್ರಾಮವನ್ನು ದೇಶ ವಿದೇಶಗಳಿಗೆ ಪರಿಚಯಿಸಿದ ದಿವಂಗತ ಆರ್.ಕೆ ಸಂಜುರಾಯರನ್ನು ನೆನಪಿಸಿ ಈ ಕಟ್ಟಡದಿಂದ ಬರುವಂತ ಆದಾಯವನ್ನು ಸ್ವಲ್ಪ ಮಟ್ಟಿಗೆ ನಮ್ಮ ಕ್ಷೇತ್ರದ ಜನರಿಗೆ ಪ್ರಯೋಜನವಾಗಲಿ ಎಂದು ಶುಭ ಹಾರೈಸಿದರು.
ಈ ವೇಳೆ ಮಾಜಿ ಶಾಸಕರಾದ ಗೋಪಾಲ್ ಪೂಜಾರಿಯವರು ಮಾತನಾಡಿ ಶಿಲ್ಪ ಪ್ರಮೋದ್ ಪೂಜಾರಿ ಅವರಿಗೆ ಶುಭ ಹಾರೈಸಿ ಮುಂದಿನ ದಿನದಲ್ಲಿ ಇನ್ನು ಹೆಚ್ಚಿನ ಬೈಂದೂರು ಕ್ಷೇತ್ರಕ್ಕೆ ಇಂತಹ ನೂತನ ಕಟ್ಟಡಗಳು ಹೆಚ್ಚು ಹೆಚ್ಚು ಆಗಲಿ ಎಂದು ನೆರೆದಿರುವಂತಹ ಎಲ್ಲರಿಗೂ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಟ್ಟಡ ಮಾಲೀಕರಾದ ಶಿಲ್ಪ ಪ್ರಮೋದ್ ಅವರ ತಂದೆ ನಾಗಪೂಜಾರಿ ತಂದೆ ತಾಯಿ ಚಂದು ಗಜ್ಞಾರ ಮನೆ ಹಾಗೂ ಮುಳುಗು ತಜ್ಞ ಆಪದ್ಬಾಂಧವ ಈಶ್ವರ್ ಮಲ್ಪೆಯವರನ್ನು ಗುರುತಿಸಿ ಗೌರವಿಸಿ ಬೈಂದೂರು ಭಾಗದಿಂದ ಸಾರ್ವಜನಿಕರ ಪರವಾಗಿ ಸನ್ಮಾನಿಸಲಾಯಿತು ಮತ್ತು
ಈ ಒಂದು ಕಟ್ಟಡದ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡ ಸುಬ್ರಹ್ಮಣ್ಯ ಆಚಾರ್ಯ ಬವಳಾಡಿ
ಸನ್ಮಾನಿಸಿ ಗೌರವಿಸಲಾಯಿತು.
ರವಿ ಉಪ್ಪುಂದ ಹಾಗೂ ತಂಡದವರಿಂದ ರಸಮಂಜರಿ ಕಾರ್ಯಕ್ರಮ ಜರಗಿತು. ಶ್ರೀ ಮಹಾಕಾಳಿ ಚಂಡೆ ಬಳಗ ಗಂಗೊಳ್ಳಿ ಇವರಿಂದ ಚಂಡ ವಾದನ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭದಲ್ಲಿ ಎಸ್ ಪ್ರಕಾಶ್ ಚಂದ್ರ ಶೆಟ್ಟಿ, ದೀಪಕ್ ಕುಮಾರ್ ಶೆಟ್ಟಿ ಡಾ.ಸುಬ್ರಮಣ್ಯ ಭಟ್ ,ಗೌರಿ ದೇವಾಡಿಗ, ವಿಜಯ್ ಕುಮಾರ್ ಶೆಟ್ಟಿ ,ಜಗದೀಶ್ ದೇವಾಡಿಗ, ಗಣಪ ದೇವಾಡಿಗ ,ಸುಕೇಶ್ ಶೆಟ್ಟಿ, ಶ್ರೀಮತಿ ರೇವತಿ, ನಾಗರಾಜ್ ಪೂಜಾರಿ ಉಬ್ಜೆರೀ ,ಕರುಣಾಕರ ಶೆಟ್ಟಿ ಗಣ್ಯತ ಗಣ್ಯರು ಹಾಗೂ ಗಜ್ಞಾರ ಕುಟುಂಬ ಮತ್ತು ಉಬ್ಜೆರೀ ಕುಟುಂಬಸ್ಥರು ಪೂರ ಪರ ಊರ ಗ್ರಾಮಸ್ಥರು ಉಪಸ್ಥಿತರಿದ್ದರು.ಸುಚಿಂದ್ರ ಆಚಾರ್ಯ ನಿರೂಪಿಸಿದರು , ಶಿಲ್ಪಾ ಪ್ರಮೋದ್ ಪೂಜಾರಿ ಸ್ವಾಗತಿಸಿದರು ಬಾಲಕೃಷ್ಣ ಪ್ರಭು ವಂದಿಸಿದರು.