ಕಾಪು : ಕಡಲು ಕೊರೆತ ಪ್ರದೇಶಕ್ಕೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ

ಕಾಪು ಕ್ಷೇತ್ರದ ಮೂಳೂರು, ಪೊಲಿಪು, ಉದ್ಯಾವರದ ಕಡಲು ಕೊರೆತ ಪ್ರದೇಶಕ್ಕೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು, ಕಾಪು ಪುರಸಭಾ ಅಧಿಕಾರಿಗಳು ಹಾಗೂ ಕಾರ್ಯಕರ್ತರೊಂದಿಗೆ ತೆರಳಿ ಪರಿಶೀಲನೆ ನಡೆಸಿದರು.

ಪ್ರತಿ ಬಾರಿಯೂ ಮಳೆಗಾಲ ಆರಂಭವಾದಾಗ ಜನಪ್ರತಿನಿಧಿಗಳು ಆಗಮಿಸಿ ಭರವಸೆ ನೀಡುವುದು, ಒಂದಿಷ್ಟು ಬಂಡೆಕಲ್ಲುಗಳನ್ನು ತಂದು ಕಡಲಿಗೆ ಹಾಕುವುದು ಮಾಮೂಲು. ನಮ್ಮ ಈ ಭಾಗದ ಸಮಸ್ಯೆ ಜೀವಂತ ಎಂಬುದಾಗಿ ಸ್ಥಳೀಯರು ಅಸಮಾದಾನ ವ್ಯಕ್ತ ಪಡಿಸಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು, ಪ್ರಕೃತಿಯ ಎದುರು ಮಾನವ ಏನೂ ಅಲ್ಲ ಎಂಬುದನ್ನು ಪದೇ ಪದೇ ಪ್ರಕೃತಿ ತೋರ್ಪಡಿಸುತ್ತಿದೆ. ಆದರೆ ಮನುಷ್ಯರಾದ ನಾವು ನಮ್ಮ ಪ್ರಯತ್ನ ಮಾಡಲೇ ಬೇಕಾಗಿದ್ದು ಆ ನಿಟ್ಟಿನಲ್ಲಿ ಇದೀಗ ಕಾಪು ಕ್ಷೇತ್ರದ ಮೂಳೂರು, ಪೊಲಿಪು, ಉದ್ಯಾವರ ಪ್ರದೇಶದಲ್ಲಿ ಪರಿಶೀಲಿಸಿದ್ದು, ಇಲ್ಲಿನ ಪ್ರದೇಶಗಳಿಗೆ ಸಮಸ್ಯೆ ಆಗದ ರೀತಿಯಲ್ಲಿ ತುರ್ತು ಕಾಮಗಾರಿ ನಡೆಸಲಾಗುವುದು.

ಈ ಬಗ್ಗೆ ಮೀನುಗಾರಿಕಾ ಸಚಿವರು ಉಡುಪಿಗೆ ಆಗಮಿಸಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಭೆ ನಡೆಸಲಿದ್ದಾರೆ. ನಾನೂ ಕೂಡಾ ಆ ಸಭೆಯಲ್ಲಿ ಪಾಲ್ಗೊಂಡು ಜಠಿಲ ಸಮಸ್ಯೆಯ ಬಗ್ಗೆ ಅವರಿಗೆ ಮನವರಿಕೆ ಮಾಡಿ ತುರ್ತು ಕಾಮಗಾರಿ ನಡೆಸಲು ಅವರಲ್ಲಿ ಬೇಡಿಕೆ ಇರಿಸಲಾಗುವುದು ಎಂದರು. ಈ ಸಂದರ್ಭ ಕಾಪು ಪುರಸಭಾ ಅಧಿಕಾರಿಗಳು, ಸಹಿತ ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯ ಸಂತ್ರಸ್ತರು ಹಾಜರಿದ್ದರು.

Related Posts

Leave a Reply

Your email address will not be published.