ಕೋವಿಡ್ ನಿಂದ ಆರಂಭವಾದ ಹಾಡು ನೀ ಹಾಡು ಪಯಣ

ಕೋವಿಡ್, ಜಗತ್ತನ್ನೇ ತನ್ನ ಕಪಿ ಮುಷ್ಟಿಯಲ್ಲಿ ಕಟ್ಟಿ ಹಾಕಿದ್ದ ಸಂದರ್ಭ ಅದು. ಆ ಸಂದರ್ಭದಲ್ಲಿ ಒಂದು ಹೊಸ ಚಿಂತನೆಯೊಂದಿಗೆ ನಮ್ಮ ಊರಿನ ಗಾನ ಕೋಗಿಲೆಗಳಿಗೆ ಚೈತನ್ಯವಾಗಿ ರೂಪುಗೊಂಡದ್ದೇ ಉಡುಪಿ ಶೈನಿಂಗ್ ಸ್ಟಾರ್ ವೇದಿಕೆ. ಅಂದು ಮಣಿಪಾಲ ಮಹಿಳಾ ಸಮಾಜ ಎಂಬ ಮಹಾನ್ ಶಕ್ತಿಗಳಿಂದ ನಿರ್ಮಾಣ ಗೊಂಡ ಉಡುಪಿ ಶೈನಿಂಗ್ ಸ್ಟಾರ್ ಎಂಬ ವೇದಿಕೆ ಮುಂದೊಂದು ದಿನ ಇಡೀ ಕರಾವಳಿಯೇ ಮೆಚ್ಚುವಂಥ ತುಳುನಾಡಿನಾದ್ಯಂತ ಸದ್ದನ್ನ ಮಾಡುತ್ತಿರುವ ಹಾಡು ನೀ ಹಾಡು ಕಾರ್ಯಕ್ರಮಕ್ಕೆ ಪ್ರೇರಣೆ ಆಗಬಹುದು ಎಂದು ಯಾರೂ ಊಹಿಸಿರಲಿಲ್ಲ. ಕೋವಿಡ್ ಸಂಧರ್ಭದಲ್ಲಿ ಆನ್ಲೈನ್ ಸಿಂಗಿಂಗ್ ಕಾಂಪಿಟಿಷನ್ ಆಗಿ ಹೊರಹೊಮ್ಮಿದ ಉಡುಪಿ ಶೈನಿಂಗ್ ಸ್ಟಾರ್ ಇತರೆ ಕಾರ್ಯಕ್ರಮಗಳಿಗಿಂತ ಬಹಳ ವಿಭಿನ್ನವಾಗಿತ್ತು. ತನ್ನದೇ ಆದ ರೀತಿಯಲ್ಲಿ ಕಾರ್ಯಕ್ರಮಕ್ಕೆ ಅಸ್ತಿತ್ವವನ್ನ ನೀಡಿ, ಆನ್ಲೈನ್ ಮೆಂಟೋರಿಂಗ್ ಸೆಶನ್ ಗಳ ಮೂಲಕ ಸಂಗೀತ, ಶಿಸ್ತು, ಮಾನಸಿಕ ನೆಮ್ಮದಿ, ಯೋಗ, ಭಾಷಾ ಶುದ್ಧತೆ ಮುಂತಾದ ವಿಚಾರಗಳ ಕುರಿತು ಮಕ್ಕಳಿಗೆ ಕಲಿಕೆಯನ್ನ ಒದಗಿಸಿಕೊಡುವುದಲ್ಲದೆ, ಪಾಲಕರ, ವೀಕ್ಷಕರ ಮನಸ್ಸನ್ನ ಗೆಲ್ಲುವಲ್ಲಿಯೂ ಈ ಕಾರ್ಯಕ್ರಮ ಯಶಸ್ಸನ್ನ ಖಂಡಿತ್ತು.

ಆ ಯಶಸ್ಸು, ಬೆಂಬಲ ಹಾಗು ಋಣಾತ್ಮಕ ಪ್ರತಿಕ್ರಿಯೆಯೇ ಸಹಾಯ ಹಸ್ತ ಮಣಿಪಾಲ ಲಯನ್ಸ್ ಕ್ಲಬ್ ಆಯೋಜಕತ್ವದ, ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯ ಮಕ್ಕಳಿಗಾಗಿ ಏರ್ಪಟ್ಟ ” ಹಾಡು ನೀ ಹಾಡು” ಎಂಬ ಅದ್ಬುತ ಕಾರ್ಯಕ್ರಮಕ್ಕೆ ಪ್ರೇರಣೆಯಾಯ್ತು. ಈಗಾಗಲೇ ಸಾಕಷ್ಟು ಸದ್ದನ್ನ ಮಾಡುತ್ತಿರುವ ಈ ಕಾರ್ಯಕ್ರಮ ಕರಾವಳಿಯ ಪ್ರಸಿದ್ಧ ಸುದ್ದಿ ವಾಹಿನಿ v4 ನ್ಯೂಸ್ ಮುಖಾಂತರ ಪ್ರತಿ ಶನಿವಾರ ಭಾನುವಾರ ರಾತ್ರಿ ಎಂಟು ಗಂಟೆಗೆ ಪ್ರಸಾರವಾಗ್ತಿದೆ ತಪ್ಪದೇ ಎಲ್ಲರು ವೀಕ್ಷಿಸಿ, ಕರಾವಳಿಯ ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹವನ್ನ ನೀಡಬೇಕು ಎಂಬುದು ಸಂಘಟಕರ ಆಶಯ. ಜೊತೆಗೆ v4 ನ್ಯೂಸ್ ಕರ್ನಾಟಕ ಎಂಬ ಯೌಟ್ಯೂಬ್ ಚಾನೆಲ್ ಮೂಲಕ ಜಗತ್ತಿನ ಯಾವುದೇ ಸ್ಥಳದಲ್ಲಿ ಕೂತು ಕಾರ್ಯಕ್ರಮವನ್ನ ಸಂಗೀತ ಪ್ರಿಯರು ವೀಕ್ಷಿಸಬಹುದ

Related Posts

Leave a Reply

Your email address will not be published.