ಶಾಸಕ ಸುನೀಲ್ ಕುಮಾರ್ ಹಿಂದುತ್ವವೆಂದರೆ ಇದೇನಾ : ಮುತಾಲಿಕ್ ಗರಂ
ಕಾರ್ಕಳ : ಕಾರ್ಕಳದ ಇತಿಹಾಸ ಪ್ರಸಿದ್ಧ ಕೋಟೆ ಮಾರಿಯಮ್ಮ ದೇವಸ್ಥಾನದ ಒಳಗೆ ಬಾವಿಯನ್ನು ತೋಡಲು ರಫೀಕ್ ಎನ್ನುವ ಹಿಂದೂಯೇತರರಿಗೆ ಧಾರ್ಮಿಕ ದತ್ತಿ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಸಚಿವ ಸುನೀಲ್ ಕುಮಾರ್ ಅವರು ಬಾವಿ ನಿರ್ಮಾಣ ಮಾಡಿಸಲು ಅವಕಾಶ ಕಲ್ಪಿಸಿದ್ದಾರೆ ಎಂದು ಶ್ರೀ ರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ .
ಅವರು ಕಾರ್ಕಳ ಪರಪ್ಪು ಸಮೀಪದ ಪಾಂಚಜನ್ಯಾ ತಮ್ಮ ಚುನಾವಣಾ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಫೀಕ್ ಗೋ ಭಕ್ಷಕ, ಅವರನ್ನು ಯಾಕೆ ಬಾವಿ ನಿರ್ಮಿಸಲು ಗುತ್ತಿಗೆ ನೀಡಬೇಕಿತ್ತು. ಶಾಸಕ ಸುನೀಲ್ ಕುಮಾರ್ ಹಿಂದುತ್ವವೆಂದರೆ ಇದೇನಾ ! ಈ ವಿಚಾರದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವಿರುದ್ದ ದೂರನ್ನು ನೀಡಲಿದ್ದೆನೆ. ಕೋಟೆ ಮಾರಿಯಮ್ಮನ ದೇವಸ್ಥಾನದ ಸುತ್ತ ಸುಮಾರು ಹನ್ನೊಂದು ಎಕರೆಗಿಂತ ಜಾಸ್ತಿ ಭೂಕಬಳಿಕೆ ನಡೆದಿದೆ. ಅದರಲ್ಲೂ ದೊರೆತ ಮದ್ದುಗುಂಡುಗಳು ಎಲ್ಲಿಹೋಯಿತು. . ಕೋಟೆ ಮಾರಿಯಮ್ಮ ದೇವಿಯ ಜಾಗವನ್ನು ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಅವರ ಹೆಸರಲ್ಲಿ ಸುನೀಲ್ ಕುಮಾರ್ ಬೇನಾಮಿ ಆಸ್ತಿ ಮಾಡಿಸಿದ್ದಾರೆ ಎಂದರು.
ಸುನೀಲ್ ಕುಮಾರ್ ಭ್ರಷ್ಟಾಚಾರ ಮುಚ್ಚಿ ಹಾಕಲು ರಾಷ್ಟ್ರೀಯ ನಾಯಕ ಯೋಗಿ,ಯನ್ನು ಕರೆತರುತಿದ್ದಾರೆ ಈ ಬಾರಿ ಕಾರ್ಕಳ ಕ್ಷೇತ್ರದಲ್ಲಿ ಮತದಾರರು ಬದಲಾವಣೆಯನ್ನು ಬಯಸಿದ್ದಾರೆ, ಗೆಲುವು ನನ್ನದೆ ಎಂದರು.
ನಾನು ಕಾಂಗ್ರೆಸ್ ಬೆಂಬಲಿಸುವಷ್ಟು ನೀಚನಲ್ಲ ಎಂದು ಮುತಾಲಿಕ್ ಹೇಳಿದರು.ನನ್ನನ್ನು ಗಂಗೊಳ್ಳಿ ಸತ್ಯನಾರಾಯಣ ಪೂಜೆಗೆ ಹಾಗೂ ಪ್ರವೀಣ್ ನೆಟ್ಟಾರ್ ಹತ್ಯೆ ಸಮಯದಲ್ಲಿ ಮನೆಗೆ ಹೋಗಿ ಸಾಂತ್ವನ ಮಾಡಲು ಸುನೀಲ್ ಕುಮಾರ್ ಅವಕಾಶ ನೀಡದೆ ನನ್ನನ್ನು ಗಡಿಪಾರು ಮಾಡಿದರು ಎಂದರು.
ಹರೀಶ್ ಅಧಿಕಾರಿ, ಗಂಗಾಧರ ಕುಲಕರ್ಣಿ, ಸುಭಾಸ್ ಹೆಗ್ಡೆ, ವಿವೆಕಾನಂದ ಶೆಣೈ ಉಪಸ್ಥಿತರಿದ್ದರು. ಪ್ರಣಾಳಿಕೆ ಬಿಡುಗಡೆಗೊಳಿಸಲಾಯಿತು.