ಕಡಬ ಗ್ರಾಮದ ಶ್ರಮಜೀವಿ ಕೃಷಿಕ ಯತೀಂದ್ರ ಗೌಡ ವಿಧಿವಶ

ಕಡಬ: ಕಡಬ ಗ್ರಾಮದ ಪಿಜಕ್ಕಳ ಗೊಡಾಲು ನಿವಾಸಿ, ಯತೀಂದ್ರ ಗೌಡ(48.ವ) ಅವರು ಆ.24ರಂದು ನಿಧನ ಹೊಂದಿದ್ದಾರೆ.
ಇವರು ಆ.23ರಂದು ತನ್ನ ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಕಡಬ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ.ಆಸ್ಪತ್ರೆ ಗೆ ದಾಖಲಿಸಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು(ಆ.24) ಬೆಳಿಗ್ಗೆ ಮೃತಪಟ್ಟಿದ್ದಾರೆ.
ಮೃತರು ಪತ್ನಿ, ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. ಯತೀಂದ್ರ ಅವರು ಕೃಷಿಕರಾಗಿ ಬಹಳ ಶ್ರಮಜೀವಿಯಾಗಿದ್ದರು. ವಿವಿಧ ಬಗೆಯ ಕೃಷಿ ಉಪಕರಣ ಖರೀದಿ ಮಾಡಿ ಅದರಲ್ಲಿ ಯಶಸ್ಸು ಪಡೆದು ಕೃಷಿಯನ್ನು ಮಾಡಿ ಜನಾನುರಾಗಿಯಾಗಿದ್ದರು.