ಪುತ್ತೂರು: ಗೃಹರಕ್ಷಕದಳ ಕಛೇರಿ ಕಟ್ಟಡಕ್ಕೆ ಸರಕಾರದಿಂದ ಜಾಗ ಮಂಜೂರು

  ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಪುತ್ತೂರು ಘಟಕವು ಸುಮಾರು 50 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಹೊಸ ಕಛೇರಿ ನಿರ್ಮಿಸುವ ಸಲುವಾಗಿ ಸರಕಾರದಿಂದ 10 ಸೆಂಟ್ಸ್ ಖಾಲಿ ಜಾಗ ಕೊಟೆಚಾ ಸಭಾಂಗಣದ ಸಮೀಪದ ಶಿವನಗರದಲ್ಲಿ ಮಂಜೂರಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಪುತ್ತೂರು ಘಟಕಕ್ಕೆ ಭೇಟಿ ನೀಡಿ ಹೊಸತಾಗಿ ಮಂಜೂರಾದ ಜಾಗದ ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಪುತ್ತೂರು ಘಟಕದ ಘಟಕಾಧಿಕಾರಿ ಅಭಿಮನ್ಯು ರೈ, ಹಿರಿಯ ಗೃಹರಕ್ಷಕರಾದ ಜಗನ್ನಾಥ್, ಸುದರ್ಶನ್ ಜೈನ್ ಹಾಗೂ ಗೃಹರಕ್ಷಕ ಗೃಹರಕ್ಷಕಿಯರು ಉಪಸ್ಥಿತರಿದ್ದರು.  

Related Posts

Leave a Reply

Your email address will not be published.