ಆಗ್ರಾ, ಮಥುರಾ, ಆಲಿಗಡಗಳಲ್ಲಿ ಭಾರೀ ಮಳೆ
ದಿಲ್ಲಿ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶಗಳಲ್ಲಿ ಭಾರೀ ಮಳೆ ಬಂದಿದೆ. ಸುತ್ತಣ 12 ರಾಜ್ಯಗಳಲ್ಲಿ ತುಂತುರು ಮಳೆ ಬಂದಿದ್ದು ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಗಾಳಿ ಮಳೆ ಸುರಿಯುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಭಾರತದ ಕೆಲವೆಡೆ ಹವಾಮಾನ ಬದಲಾವಣೆ ಕಂಡಿದೆ. ಮಳೆಯೊಂದಿಗೆ 50 ಕಿಮೀ ವೇಗದಲ್ಲಿ ಗಾಳಿಯೂ ಬೀಸಲಿದೆ; ಬೀಳುತ್ತಿದೆ.
ದಿಲ್ಲಿ, ಉತ್ತರ ಪ್ರದೇಶದ ಆಲಿಗಡ, ಆಗ್ರಾ, ಮಥುರಾ, ಹಿಮಾಚಲ ಪ್ರದೇಶದ ಉದ್ದಗಲಕ್ಕೂ ಗಾಳಿ ಮಳೆ ರುದ್ರ ನರ್ತನ ಮಾಡಿದೆ. ಸರಕಾರವು ಸಕಲ ಮುನ್ನೆಚ್ಚರಿಕೆಯ ಹೆಜ್ಜೆ ಇಡುತ್ತಿದೆ.