ಬಿಜೆಪಿ ಟಿಕೆಟ್ ಸಿಕ್ಕಿದೆ ಆದರೆ ಸ್ಪರ್ಧಿಸುವುದಿಲ್ಲ : ಭೋಜಪುರಿ ನಟ, ಗಾಯಕ ಪವನ್ ಸಿಂಗ್
ಬಿಜೆಪಿಯವರ ನಂಬಿಕೆಗೆ ಅಭಾರಿ. ಆದರೆ ಅವರು ಟಿಕೆಟ್ ನೀಡಿದ್ದರೂ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಖ್ಯಾತ ಭೋಜಪುರಿ ನಟ, ಗಾಯಕ ಪವನ್ ಸಿಂಗ್ ಹೇಳಿದ್ದಾರೆ.
ಬಿಜೆಪಿಯ ಲೋಕಸಭಾ ಸ್ಪರ್ಧಿಗಳ ಮೊದಲ ಪಟ್ಟಿಯಲ್ಲಿ ಪವನ್ ಸಿಂಗ್‌ರಿಗೆ ಅಸನ್ಸೋಲ್ ಟಿಕೆಟ್ ನೀಡಲಾಗಿದೆ. ಆದರೆ ಅವರು ನೇರ ರಾಜಕೀಯ ಪ್ರವೇಶ ಇಲ್ಲ ಎಂದಿದ್ದಾರೆ.
ಬಿಜೆಪಿಯ ಮೊದಲ ಪಟ್ಟಿಯಲ್ಲಿ ಹೇಮಾಮಾಲಿನಿ ಸಹಿತ ಹಲವು ನಟ ನಟಿಯರು ಸ್ಪರ್ಧಿಸಲು ಕ್ಷೇತ್ರ ಪಡೆದಿದ್ದಾರೆ. ಭೋಜಪುರಿ ಭಾಷೆಯ ನಾಲ್ವರು ನಟರಿಗೆ ಟಿಕೆಟ್ ಸಿಕ್ಕಿದೆ. ಇನ್ನು ಮೂವರು ಮನೋಜ್ ತಿವಾರಿ, ರವಿ ಕಿಶನ್ ಮತ್ತು ದಿನೇಶ್ ಲಾಲ್. ದಿಲ್ಲಿ ಮತ್ತು ಉತ್ತರ ಪ್ರದೇಶಗಳಿಂದ ಟಿಕೆಟ್ ಪಡೆದಿದ್ದಾರೆ.