ಹೆಜಮಾಡಿ ಟೋಲ್‍ಗೇಟ್‍ನಲ್ಲಿ ಯುವಕರು ಹಾಗೂ ಟೋಲ್ ಸಿಬ್ಬಂದಿಗಳ ನಡುವೆ ಹೊಡೆದಾಟ
ಉಡುಪಿ ಜಿಲ್ಲೆಯ ಗಡಿಭಾಗದ ಹೆಜಮಾಡಿ ಟೋಲ್‍ಗೇಟ್‍ನಲ್ಲಿ ಕಳೆದ ರಾತ್ರಿ ಬೆಂಗಳೂರು ಯುವಕರು ಹಾಗೂ ಟೋಲ್ ಸಿಬ್ಬಂದಿಗಳ ನಡುವೆ ಹೊಡೆದಾಟ ನಡೆದಿದೆ.
ಬೆಂಗಳೂರಿನ ಐವರು ಯುವಕರ ತಂಡ ಕಾರಲ್ಲಿ ಬಂದಿದ್ದು ಪಾಸ್ಟ್ ಟ್ಯಾಗ್ ಇಲ್ಲದ ಅವರು ಗೇಟನ್ನು ಕೈಯಿಂದ ತೆರೆದು ಮುಂದೆ ಹೋದಾಗ ಟೋಲ್ ಸಿಬ್ಬಂದಿಗಳು ತಡೆದಿದ್ದು ಆಗ ಯುವಕನೊರ್ವ ಟೋಲ್ ಸಿಬ್ಬಂದಿಗೆ ಹಲ್ಲೆ ನಡೆಸಿದ್ದಾನೆ. ಇದರಿಂದ ಆಕ್ರೋಶಗೊಂಡ ಟೋಲ್ ಸಿಬ್ಬಂದಿಗಳು ಯುವಕರಿಗೆ ಚೆನ್ನಾಗಿ ಬಾರಿಸಿದ್ದಾರೆ. ಅಂತಿಮವಾಗಿ ಯುವಕರಿಗೆ ತಪ್ಪಿನ ಅರಿವಾಗಿ ಕ್ಷಮೆಯಾಚಿಸಿ ತೆರಳಿದ್ದಾರೆ.