ದುಬೈಯಲ್ಲಿ ನಡೆದ ಅಂತರಾಷ್ಟ್ರೀಯ ದೇಹದಾರ್ಡ್ಯ ಸ್ಪರ್ಧೆ:ಕೋಟೆಬಾಗಿಲಿನ ಅನ್ಸಾರ್ ಗೆ ಜೂನಿಯರ್ ಮಿಸ್ಟರ್ ವರ್ಲ್ಡ್ ರನ್ನರ್ ಅಪ್ ಪ್ರಶಸ್ತಿ
ದುಬೈ ವರ್ಲ್ಡ್ ನ್ಯಾಚುರಲ್ ಗೇಮ್ಸ್ ಆಶ್ರಯದಲ್ಲಿ ನಡೆದ ಐಸಿಎನ್ ನ್ಯಾಚುರಲ್ ಬಾಡಿಬಿಲ್ಡಿಂಗ್ ಕಾಂಪಿಟೀಷನ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ ಮೂಡುಬಿದಿರೆ ಕೋಡೆಬಾಗಿಲಿನ ಯುವಕ ಅನ್ಸಾರ್ ಎಂಬಾತ ಎರಡು ಚಿನ್ನದ ಪದಕಗಳೊಂದಿಗೆ ಜೂನಿಯರ್ ಮಿಸ್ಟರ್ ವರ್ಲ್ಡ್ ವಿಭಾಗದಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ದುಬೈನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಭಾರತ ,ಸ್ಪೈನ್,ಕೊರಿಯಾ,ಪೋಲಂಡ್,ನ್ಯೂಯಾರ್ಕ್, ಆಸ್ಟ್ರೇಲಿಯಾ, ಪಾಕಿಸ್ತಾನ,ಇರಾನ್, ಚೈನಾ ಹಾಗೂ ಇತರ ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದರು.
ಮೆನ್ಸ್ ಫಿಟ್ನೆಸ್ ಫರ್ಸ್ಟ್ ಟೈಮರ್ ಎಂಬ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಮೆನ್ಸ್ ಫಿಸಿಕ್ ಫರ್ಸ್ಟ್ ಟೈಮರ್ ಎಂಬ ವಿಭಾಗದಲ್ಲಿ ಚಿನ್ನದ ಪದಕ ಪಡೆದಿರುವ ಅನ್ಸಾರ್ ಜೂನಿಯರ್ ಮಿಸ್ಟರ್ ವರ್ಲ್ಡ್ ವಿಭಾಗದಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಉದ್ಯೋಗ ನಿಮಿತ್ತ ದುಬೈ ಗೆ ತೆರಳಿದ್ದ ಈ ಯುವಕ ಅಲ್ಲಿ ಉದ್ಯೋಗದ ಜೊತೆಗೆ ಈ ಸಾಧನೆ ಮಾಡಿ ಭಾರತಕ್ಕೂ ಹೆಸರು ತಂದಿದ್ದಾನೆ.
ಕೋಟೆಬಾಗಿಲಿನ ದಿ.ಅಬೂಬಕ್ಕರ್- ಝುಬೈದಾ ದಂಪತಿ ಪುತ್ರ.


















