ಇರಾದಲ್ಲಿ ವಿ4 ನ್ಯೂಸ್ ಕಾಮಿಡಿ ಪ್ರೀಮಿಯರ್ ಲೀಗ್‍ಗೆ ಅದ್ಧೂರಿ ಚಾಲನೆ-ಇರಾ ಯುವಕ ಮಂಡಲದ ಸುವರ್ಣ ಮಹೋತ್ಸವ ಸಮಿತಿ ಸಹಭಾಗಿತ್ವದೊಂದಿಗೆ ಅರ್ಥಪೂರ್ಣ ಸಮಾರಂಭ

ಕರಾವಳಿಯ ಪ್ರತಿಷ್ಠಿತ ಸುದ್ದಿ ವಾಹಿನಿ ವಿ4 ನ್ಯೂಸ್ ಮತ್ತು ಇರಾ ಯುವಕ ಮಂಡಲದ ಸುವರ್ಣ ಮಹೋತ್ಸವ ಸಮಿತಿ ಸಹಯೋಗದಲ್ಲಿ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬಯಲು ರಂಗಮಂದಿರದಲ್ಲಿ ವಿ4 ನ್ಯೂಸ್‍ನ ಕಾಮಿಡಿ ಪ್ರೀಮಿಯರ್ ಲೀಗ್‍ಗೆ ಅದ್ಧೂರಿ ಚಾಲನೆ ದೊರೆಯಿತು. ಸಭಾ ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು.

ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಬ್ಯಾಂಕ್‍ನ ಪ್ರಬಂಧಕರಾದ ಶಿವಪ್ರಸಾದ್ ರೈ ಶಿಬರೂರು ಅವರು, ಇರಾ ಯುವಕ ಮಂಡಲ 50ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ. ಅನೇಕ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮ, ರಕ್ತದಾನ ಶಿಬಿರ, ಕ್ರೀಡೆ ಆಯೋಜಿಸುವ ಮೂಲಕ ಜನಮನ್ನಣೆಯನ್ನು ಗಳಿಸಿದ್ದಾರೆ. ಇರಾ ಯುವಕ ಮಂಡಲ ಸಮಾಜಕ್ಕೆ ಇನ್ನಷ್ಟು ಕೊಡುಗೆ ನೀಡುವಂತಾಗಲಿ ಎಂದರು.

ಉದ್ಯಮಿಗಳಾದ ರಮೇಶ್ ಶೆಟ್ಟಿ ಕಲ್ಕಾರ್ ಪಾವಳ ಅವರು ಮಾತನಾಡಿ, ಇರಾ ಯುವಕ ಮಂಡಲ ವಿನೂತನ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿದೆ ಎಂದರು

ಚಿಣ್ಣರ ಲೋಕ ಸಹಕಾರಿ ಸಂಘದ ಅಧ್ಯಕ್ಷರಾದ ಬಾಲಾಜಿಬೈಲು ಚಂದ್ರಹಾಸ ರೈ ಅವರು, ಇರಾ ಯುವಕ ಮಂಡಲದವರು ಹಾಸ್ಯ ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸುತ್ತಿದ್ದಾರೆ. ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು. ಉದ್ಯಮಿಗಳಾದ ರಮಾನಾಥ ಅಶ್ವತ್ಥಡಿ ಹಾಗು ರಮಿತ್ ಬಂಗೇರ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ವಿ4 ನ್ಯೂಸ್‍ನ ಆಡಳಿತ ನಿರ್ದೇಶಕರಾದ ಲಕ್ಚ್ಮಣ್ ಕುಂದರ್, ಉಪಾಧ್ಯಕ್ಷರಾದ ರೋಸ್ಲಿನ್ ಡಿಲೀಮಾ, ಮಾರ್ಕೇಟಿಂಗ್ ಮ್ಯಾನೇಜರ್ ಮಣಿಕ್, ಸಿಪಿಎಲ್ ತೀರ್ಪುಗಾರರಾದ ಮೈಮ್ ರಾಮ್‍ದಾಸ್, ಶಶಿರಾಜ್ ರಾವ್ ಕಾವೂರು, ನಟಿ ಚೈತ್ರಾ ಶೆಟ್ಟಿ, ನಿರೂಪಕ ನಟ ವಿನೀತ್ ಅವರನ್ನು ಇರಾ ಯುವಕ ಮಂಡಲದ ವತಿಯಿಂದ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಇರಾ ಯುವಕ ಮಂಡಲ ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಪಿ.ಎಂ. ಕೊಡಂಗೆ, ಅಧ್ಯಕ್ಷರಾದ ಜಯರಾಮ ಪೂಜಾರಿ ಸೂತ್ರಬೈಲು, ಕಾರ್ಯದರ್ಶಿ ಸುರೇಶ್ ರೈ ಪರ್ಲಡ್ಕ, ಪ್ರಧಾನ ಸಂಚಾಲಕರಾದ ಜಗದೀಶ್ ಶೆಟ್ಟಿ ಇರಾಗುತ್ತು, ಯುವಕ ಮಂಡಲದ ಅಧ್ಯಕ್ಷರಾದ ಗಣೇಶ್ ಕೊಟ್ಟಾರಿ ಸಂಪಿಲ, ಕಾರ್ಯದರ್ಶಿಗಳಾದ ಜಯರಾಜ್ ಶೆಟ್ಟಿ ಕುಂಡಾವು ಹಾಗೂ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಸನ್ ಪ್ರಿಮಿಯಮ್ ವಿ4 ನ್ಯೂಸ್‍ನ ಕಾಮಿಡಿ ಪ್ರೀಮಿಯರ್ ಲೀಗ್‍ನ ಕಾಮಿಡಿ ಪರ್ಪಾಮೆನ್ಸ್ ಅದ್ಧೂರಿಯಾಗಿ ನಡೆಯಿತು.

Related Posts

Leave a Reply

Your email address will not be published.