ಮಂಗಳೂರಿನ ಅಮೃತ ವಿದ್ಯಾಲಯಂ ಶಾಲೆಯಲ್ಲಿ ಆಷಾಢ ಏಕಾದಶಿ

ಮಂಗಳೂರಿನ ಅಮೃತ ವಿದ್ಯಾಲಯಂ ಶಾಲೆಯಲ್ಲಿ ಆಷಾಢ ಏಕಾದಶಿ ಯನ್ನು 28/6/2023 ರಂದು ಅಮೃತೇಶ್ವರಿ ಸಭಾಂಗಣದಲ್ಲಿ ಆಚರಿಸಲಾಯಿತು. ಆಷಾಢ ಏಕಾದಶಿ ಆಚರಣೆಯ ಮಹತ್ವ ದ ಬಗ್ಗೆ ದೃಶ್ಯಾವಳಿ ಯ ಮೂಲಕ ತಿಳಿಸಲಾಯಿತು.ಶಾಲಾ ಪುಟಾಣಿಗಳು ವಿಠೋಬ ಮತ್ತು ಸಂತರ ವೇಷ ಧರಿಸಿ ಎಲ್ಲರಲ್ಲೂ ಭಕ್ತಿ – ಭಾವವನ್ನು ತುಂಬಿಸಿದರು.

AMRITHA VIDYALAYAM, MANGALORE R

ನಂತರ ವಿದ್ಯಾರ್ಥಿಗಳಿಂದ ಭಜನ ಕಾರ್ಯಕ್ರಮವು ನಡೆಯಿತು. ಶಾಲಾ ಪ್ರಾಂಶುಪಾಲೆ ಶ್ರೀಮತಿ ಅಕ್ಷತಾ ಶೆಣೈ ಮಂಗಳಾರತಿ ಮಾಡಿ ಪ್ರಸಾದ ವಿತರಿಸಿದರು.ವಿದ್ಯಾರ್ಥಿನಿ ಕು. ತನಿಷ್ಕ ಕಾರ್ಯಕ್ರಮದ ನಿರೂಪಣೆ ಗೈದಳು.ಈ ಕಾರ್ಯಕ್ರಮದಲ್ಲಿ ಶಾಲಾ ಸಂಯೋಜಕಿ ಶ್ರೀಮತಿ ಗಾಯತ್ರಿ ಹೆರಳೆ, ಶಿಕ್ಷಕ – ಶಿಕ್ಷಕೇತರ ವೃಂದ, ಪೋಷಕರು ಉಪಸ್ಥಿತರಿದ್ದರು.

AMRITHA VIDYALAYAM, MANGALORE R

Related Posts

Leave a Reply

Your email address will not be published.