ಜೇಸಿಐ ಸುಳ್ಯ ಪಯಸ್ವಿನಿ ಘಟಕಕ್ಕೆ ಮೊದಲ ಮಹಿಳಾ ಅಧ್ಯಕ್ಷೆಯಾಗಿ – ಲತಾಶ್ರೀ ಸುಪ್ರೀತ್
ಜೇಸಿಐ ಸುಳ್ಯ ಪಯಸ್ವಿನಿ (ರಿ.) ಸುಳ್ಯ ಇದರ 2026ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು, 43 ವರ್ಷದ ಇತಿಹಾಸವಿರುವ ಜೇಸಿಐ ಭಾರತ ವಲಯ 15ರ ಪ್ರತಿಷ್ಠಿತ ಜೇಸಿಐ ಸುಳ್ಯ ಪಯಸ್ವಿನಿ ಘಟಕಕ್ಕೆ 2026ನೇ ಸಾಲಿನಲ್ಲಿ ಪ್ರಪ್ರಥಮ ಮಹಿಳಾ ಅಧ್ಯಕ್ಷರಾಗಿ ಸಾಹಿತಿ, ಲೇಖಕಿ, ಸಂಘಟಕಿ, ಜೇಸಿ. ಲತಾಶ್ರೀ ಸುಪ್ರೀತ್ ಮೋಂಟಡ್ಕರವರು 44ನೇ ಅಧ್ಯಕ್ಷರಾಗಿ ನಿಯೋಜನೆಗೊಂಡಿರುತ್ತಾರೆ.
ನಿಕಟಪೂರ್ವ ಅಧ್ಯಕ್ಷರಾಗಿ ಜೇಸಿ. ಹೆಚ್.ಜಿ.ಎಫ್. ಸುರೇಶ್ ಕಾಮತ್ ಜಯನಗರ, ಕಾರ್ಯದರ್ಶಿಯಾಗಿ ಜೇಸಿ. ತಾರಾ ಮಾದವ ಚೂಂತಾರು,

ಜತೆ ಕಾರ್ಯದರ್ಶಿಯಾಗಿ ಜೇಸಿ. ವಿನೋದ್ ಮೂಡಗದ್ದೆ, ಕೋಶಾಧಿಕಾರಿಯಾಗಿ ಜೇಸಿ. ಪ್ರಸನ್ನ ಎಂ. ಆರ್.,

ಸಪ್ತಾಹ ನಿರ್ದೇಶಕರಾಗಿ ಜೇಸಿ. ಶಶ್ಮಿ ಭಟ್ ಅಜ್ಜಾವರ,

ಉಪಾಧ್ಯಕ್ಷರಾಗಿ ಜೇಸಿ. ರವಿಕುಮಾರ್ ಅಕ್ಕೋಜಿಪಾಲ್, ಜೇಸಿ. ಉಮೇಶ್ ಬೊಳುಗಲ್ಲು, ಜೇಸಿ. ಗೀತಾಂಜಲಿ ಗುರುರಾಜ್ ಅಜ್ಜಾವರ, ಜೇಸಿ. ಶೋಭಾ ಅಶೋಕ್ ಚೂಂತಾರು, ಜೇಸಿ. ರಮ್ಯ ರಂಜಿತ್ ಕುಕ್ಕೆಟ್ಟಿ, ಜೇಸಿ. ಧನುಷ್ ಕುಕ್ಕೆಟ್ಟಿ ಹಾಗೂ ನಿರ್ದೇಶಕರಾಗಿ ಜೇಸಿ. ಚೇತನ್ ಚಿಲ್ಪಾರ್, ಜೇಸಿ. ಉಷಾ ನವೀನ್ ಕುಮಾರ್, ಜೇಸಿ. ಚೈತನ್ಯ ದೇವರಾಜ್ ಕುದ್ಪಾಜೆ, ಜೇಸಿ. ಸುನಿತಾ ರವಿಕುಮಾರ್ ಅಕ್ಕೋಜಿಪಾಲ್, ಜೇಸಿ. ಅಕ್ಷತ್ ಕುಮಾರ್, ಜೇಸಿ. ಯಶಿಕಾ ಚೂಂತಾರು, ಜೇಸಿ. ಪ್ರಶಾಂತ್ ಆಯ್ಕೆಗೊಂಡರು.
ಪದಾಧಿಕಾರಿಗಳ ಆಯ್ಕೆ ಪ್ರಕಿಯೆಯನ್ನು ಜೇಸಿ. ಹೆಚ್. ಜಿ. ಎಫ್ ಗುರುಪ್ರಸಾದ್ ನಾಯಕ್ ಚುನಾವಣಾ ಅಧಿಕಾರಿಯಾಗಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಪೂರ್ವಾಧ್ಯಕ್ಷರುಗಳಾದ ಜೇಸಿ. ಪಿ.ಪಿ.ಪಿ. ಅಶೋಕ್ ಚೂಂತಾರ್, ಜೇಸಿ ಜೆ.ಎಫ್.ಎಂ. ದೇವರಾಜ್ ಕುದ್ಪಾಜೆ, ಜೇಸಿ. ಹೆಚ್.ಜಿ.ಎಫ್. ಗುರುರಾಜ್ ಅಜ್ಜಾವರ, ಜೇಸಿ. ಹೆಚ್.ಜಿ.ಎಫ್. ರಂಜಿತ್ ಕುಕ್ಕೆಟ್ಟಿ, ಜೇಸಿ. ಹೆಚ್.ಜಿ.ಎಫ್. ನವೀನ್ ಕುಮಾರ್ ಉಪಸ್ಥಿತರಿದ್ದರು.

















