ಮಂಗಳೂರು: ಮೆ. ಕೆ ಕಮಲಾಕ್ಷ ಪೈ ಆಂಡ್ ಸನ್ಸ್ ಸಂಸ್ಥೆಯ ಮಾಲಕ ನಿಧನ

ಕೆ ಕಮಲಾಕ್ಷ ಪೈ (91 ವ) ನಗರದ ಮಣ್ಣಗುಡ್ಡೆಯಲ್ಲಿರುವ ತಮ್ಮ ನಿವಾಸದಲ್ಲಿ ಅಲ್ಪಕಾಲದ ಅಸೌಖ್ಯದಿಂದ ಶನಿವಾರ (ಮಾ 25)ನಿಧನ ಹೊಂದಿದರು.
ಎಳವೆಯಿಂದಲೇ ವ್ಯವಹಾರಿಕವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು ಏಳುವರೆ ದಶಕಗಳ ಕಾಲ ತಮ್ಮ ವ್ಯವಹಾರ ಸಂಸ್ಥೆಯನ್ನು ಮುನ್ನಡೆಸಿಕೊಂಡು ಬಂದಿದ್ದರು. ಅವರು ನಾಲ್ವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.